Corona 3rd Wave: ಪಶ್ಚಿಮ ರಾಷ್ಟ್ರಗಳಲ್ಲಿ ಕೋವಿಡ್​-19 ಹೊಸ ಅಲೆ: ಭಾರತದಲ್ಲೂ ಮತ್ತೆ ಆರ್ಭಟಿಸುತ್ತಾ ಕೊರೋನಾ?

Corona New Wave: ಅಮೆರಿಕ, ಬ್ರಿಟನ್‌, ರಷ್ಯಾ, ಉಕ್ರೇನ್‌, ಟರ್ಕಿ , ಜರ್ಮನಿ, ಬ್ರೆಜಿಲ್‌ ಸೇರಿದಂತೆ ಹಲವು ದೇಶಗಳಲ್ಲಿ ಕಳೆದ 2 ತಿಂಗಳ ಬಳಿಕ ಮತ್ತೆ ಹೊಸ ಕೊರೋನಾ ಪ್ರಕರಣ ಮತ್ತು ಸಾವಿನ ಸಂಖ್ಯೆ ಸ್ಫೋಟಗೊಂಡಿದ್ದು, ಭಾರತ ಸೇರಿದಂತೆ ಇತರೆ ದೇಶಗಳಿಗೆ 3ನೇ ಅಲೆಯ ಭೀತಿ ಶುರುವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Corona New Wave: ಇಡೀ ವಿಶ್ವವೇ  ಕೊರೋನಾ(Corona) ಕಪಿ ಮುಷ್ಠಿಯಲ್ಲಿ ಸಿಲುಕಿ ನಲುಗಿಹೋಗಿತ್ತು. ಆದರೆ ಕೆಲ ದಿನಗಳಿಂದ ಹಲವು ದೇಶಗಳಲ್ಲಿ ಕೊರೋನಾ ಆರ್ಭಟ ಕಡಿಮೆಯಾಗಿತ್ತು. ಎಲ್ಲವೂ ನಾರ್ಮಲ್(Normal)​ ಹಂತಕ್ಕೆ ಬಂದಿತ್ತು. ಕೊರೋನಾ ಇನ್ನೂ ನಮ್ಮನ್ನು ಭಾದಿಸಲ್ಲ ಎಂದೇ ಎಲ್ಲರೂ ತಿಳಿದಿದ್ದರು. ಎಲ್ಲವು ಮುಗೀತು, 3ನೇ ಅಲೆ(3rd Wave) ಬರುವುದೆಲ್ಲ ಸುಳ್ಳು ಎಂದು ಅಂದುಕೊಂಡಿದ್ದರು. ಆದರೆ ಈಗ ಆಗಿರುವುದೇ ಬೇರೆ. ಅಮೆರಿಕ(America), ಬ್ರಿಟನ್‌(Britain), ರಷ್ಯಾ(Russia), ಉಕ್ರೇನ್‌(Ukraine), ಟರ್ಕಿ(Turkey), ಜರ್ಮನಿ(German), ಬ್ರೆಜಿಲ್‌(Brazil) ಸೇರಿದಂತೆ ಹಲವು ದೇಶಗಳಲ್ಲಿ ಕಳೆದ 2 ತಿಂಗಳ ಬಳಿಕ ಮತ್ತೆ ಹೊಸ ಕೊರೋನಾ ಪ್ರಕರಣ ಮತ್ತು ಸಾವಿನ ಸಂಖ್ಯೆ ಸ್ಫೋಟಗೊಂಡಿದ್ದು, ಭಾರತ(India) ಸೇರಿದಂತೆ ಇತರೆ ದೇಶಗಳಿಗೆ 3ನೇ ಅಲೆಯ ಭೀತಿ ಶುರುವಾಗಿದೆ. ಎಲ್ಲ ರೂಲ್ಸ್​​ಗಳನ್ನ ಮರೆತು ಜನರು ಫ್ರೀಯಾಗಿ ಓಡಾಡಿಕೊಂಡಿದ್ದರು. ಕೊರೋನಾದ ಕಹಿ ಘಟನೆಯನ್ನು ಮರೆತು ಹೊಸ ಜೀವನ ರೂಪಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಮತ್ತೆ ಕ್ರೂರಿ ಕೊರೋನಾ ಹೇಳದೆ, ಕೇಳದೆ ಮತ್ತೆ ಪಶ್ಚಿಮ ರಾಷ್ಟ್ರಗಳಲ್ಲಿ ತನ್ನ ಆರ್ಭಟವನ್ನು ಶುರುಮಾಡಿಕೊಂಡಿದೆ. ಇದರಿಂದ ಭಾರತದಲ್ಲೂ ಶೀಘ್ರದಲ್ಲೇ 3ನೇ ಅಲೆ ಎಂಟ್ರಿಯಾಗಲಿದೆ ಅಂತ ಹೇಳಲಾಗುತ್ತಿದೆ.

ಹೊಸ ತಳಿಗಳ ಬಗ್ಗೆ WHO ವಾರ್ನಿಂಗ್​

ಭಾರತದಲ್ಲಿ ಕೊರೋನಾ ಅಬ್ಬರ ನಿಜಕ್ಕೂ ತಗ್ಗಿದೆ. ಕಳೆದ 126 ದಿನಗಳಿಂದ 50 ಸಾವಿರಕ್ಕಿಂತ ಕಡಿಮೆ ಕೇಸ್​ಗಳು ದಾಖಲಾಗುತ್ತಿದೆ. 3ನೇ ಅಲೆ ಬರುವುದೆಲ್ಲ ಸುಳ್ಳು ಎಂದು ಹೇಳಲಾಗಿತ್ತು. ಆದರೆ ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ಬಗ್ಗೆ ಮತ್ತೆ ಆತಂಕಕಾರಿ ವಿಷಯ ತಿಳಿಸಿದ್ದಾರೆ. ವಿಶ್ವದ ಎಲ್ಲ ದೇಶಗಳಲ್ಲೂ, ಎರಡು ಡೋಸ್​ ಲಸಿಕೆ ಪಡೆದವರು ಸೇರಿದಂತೆ ಎಲ್ಲರಿಗೂ ಹೊಸ ಕೊರೋನಾ ತಳಿಗಳು ಭಾಧಿಸುವ ಅಪಾಯ ಎದುರಾಗಲಿದೆ ಎಂದು ಇತ್ತೀಚಿನ ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ. ಇದು ಭಾರತಕ್ಕೂ ಆತಂಕ ಮೂಡಿಸಿದೆ.

ಇದನ್ನು ಓದಿ : ಕೇರಳದಲ್ಲಿ ಒಂದೇ ದಿನಕ್ಕೆ ದಿಢೀರ್ ಏರಿಕೆಯಾದ ಕೊರೋನಾ ಸಾವಿನ ಸಂಖ್ಯೆ..! ಕಾರಣವೇನು?

ಕೋವಿಡ್‌ ಸಾಂಕ್ರಾಮಿಕದ ಅಪಾಯ ಇನ್ನೂ ಮುಗಿದಿಲ್ಲ

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್‌ ಅಧೋನಾಮ್‌ ಘೇಬ್ರಿಯಾಸಿಸ್‌, ‘ಕಳೆದ 2 ತಿಂಗಳಲ್ಲೇ ಮೊದಲ ಬಾರಿಗೆ ವಿಶ್ವದಾದ್ಯಂತ ಹೊಸ ಪ್ರಕರಣ ಮತ್ತು ಸಾವು ಎರಡರಲ್ಲೂ ಏರಿಕೆ ಕಂಡುಬರುತ್ತಿದೆ. ಇದು ಕೋವಿಡ್‌ ಸಾಂಕ್ರಾಮಿಕದ ಅಪಾಯ ಇನ್ನೂ ಮುಗಿದಿಲ್ಲ ಎಂಬುದರ ಎಚ್ಚರಿಕೆಯ ಗಂಟೆಯಾಗಿದೆ. ಪ್ರತಿ ದೇಶದಲ್ಲೂ ಕೋವಿಡ್‌ ನಿಯಂತ್ರಣವಾಗದ ಹೊರತಾಗಿಯೂ, ವೈರಸ್‌ ಹೊಸ ಹೊಸ ರೂಪ ತಾಳುತ್ತಲೇ ಇರುತ್ತದೆ ಮತ್ತು ಎಲ್ಲೆಡೆ ಹಬ್ಬುತ್ತಲೇ ಇರುತ್ತದೆ’ ಎಂದು ಹೇಳಿದ್ದಾರೆ.

ಬಹುತೇಕ ದೇಶಗಳಲ್ಲಿ 3ನೇ ಅಲೆ ಅಪಾಯ

ವಿಶ್ವದ ಶ್ರೀಮಂತ ದೇಶಗಳು ಹಾಗೂ ಎಲ್ಲ ದೇಶಗಳಲ್ಲಿ ಮತ್ತೆ ಕೊರೋನಾ ಆರ್ಭಟಿಸುವ ಭೀತಿಯನ್ನು ಎದುರಸುತ್ತಿವೆ. ಹೀಗಾಗಿ ದೇಶಗಳು ಸಾವರ್ಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ. ಕಳೆದ ಕೆಲವು ವಾರಗಳಿಂದ ಪ್ರತಿ ವಾರ 30 ಲಕ್ಷ ಕೇಸ್​ ಮತ್ತು 50 ಸಾವಿರ ಸಾವು ದಾಖಲಾಗುತ್ತಿದೆ. ಇದು ಹಿಂದಿನ ವಾರಗಳಿಗಿಂತ ಕ್ರಮವಾಗಿ ಶೇ.4. ಮತ್ತು ಶೇ.5ರಷ್ಟುಹೆಚ್ಚು ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಇದನ್ನು ಓದಿ : ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕ್ವಾರಂಟೈನ್ ಆಗುವ ಅವಶ್ಯಕತೆ ತೆಗೆದು ಹಾಕಿದ ಭಾರತ

ಚೀನಾ ಮತ್ತೆ `ಲಾಕ್​’, ಭಾರತಕ್ಕೂ ಢವ ಢವ!

ಚೀನಾದಲ್ಲಿ ಮತ್ತೆ ಕೆಲ ದಿನಗಳಿಂದ ಕೊರೋನಾ ತನ್ನ ಹಳೇ ಆಟವನ್ನು ಮುಂದುವರಿಸಿದೆ. ಸಿಕ್ಕ ಸಿಕ್ಕವರ ಮೇಲೆ ಅಟ್ಯಾಕ್​ ಮಾಡುತ್ತಿದೆ. ಮತ್ತೊಂದೆಡೆ ಡೆಲ್ಟಾಪ್ಲಸ್‌ ವೈರಸ್‌ ಹಾವಳಿ ಎಬ್ಬಿಸಿದ್ದು, ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಸರ್ಕಾರ ಸಂಪೂರ್ಣ ಲಾಕ್​ಡೌನ್​. ಅಮೆರಿಕ, ಬ್ರಿಟನ್​, ರಷ್ಯಾ, ಉಕ್ರೇನ್​, ಟರ್ಕಿ, ಜರ್ಮನಿ, ಬ್ರೆಜಿಲ್​ ದೇಶಗಳಲ್ಲೂ ಕೊರೋನಾ ಪ್ರಕರಣಗಳಲ್ಲಿ ದಿಢೀರ್​ ಏರಿಕೆ ಕಂಡಿದೆ. ಮೊದಲೇ ಜನಸಂಖ್ಯೆ ಹೆಚ್ಚಿರುವ ಭಾರತದಲ್ಲಿ ಮತ್ತೆ ಮೂರನೇ ಅಲೆ ಸೋಂಕು ಕಾಣಿಸಿಕೊಂಡರೇ, ಶರವೇಗದಲ್ಲಿ ಹಬ್ಬುವುದಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಭಾರತದಲ್ಲಿ ಮೂರನೇ ಅಲೆಯ ಭೀತಿ ಹೆಚ್ಚಾಗಿದೆ. ಜನರು ಕೊರೋನಾ ನಿಯಮಗಳನ್ನು ಫಾಲೋ ಮಾಡಿದರಷ್ಟೇ, ಈ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯ.
Published by:Vasudeva M
First published: