Covid19: ದೇಶದಲ್ಲಿ ಕರೋನಾ ಮಹಾಸ್ಫೋಟ; 24 ಗಂಟೆಗಳಲ್ಲಿ 8,329 ಜನಕ್ಕೆ ತಗುಲಿದ ಸೋಂಕು

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಕಡಿಮೆ ಆಯ್ತು ಎನ್ನುವಷ್ಟರಲ್ಲೇ ಮಹಾಮಾರಿ ಆಟ ಶುರು ಮಾಡಿದೆ. ಕಳೆದ 100 ದಿನಗಳ ನಂತರದಲ್ಲಿ ಕೋವಿಡ್-19 ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 8,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 40,370ಕ್ಕೆ ಏರಿಕೆಯಾಗಿದೆ

ಕೊರೊನಾ ಕೇಸ್ ಹೆಚ್ಚಳ

ಕೊರೊನಾ ಕೇಸ್ ಹೆಚ್ಚಳ

  • Share this:
ನವದೆಹಲಿ (ಜೂ 12): ಭಾರತದಲ್ಲಿ ಕರೋನಾ ವೈರಸ್ (Corona Virus) ಸಾಂಕ್ರಾಮಿಕ ಸೋಂಕಿನ ಹಾವಳಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. 3 ತಿಂಗಳ ನಂತರ ಕೋವಿಡ್ 19 ಪ್ರಕರಣಗಳ (Covid19 Case) ಸಂಖ್ಯೆಯಲ್ಲಿ ಸತತ 4ನೇ ದಿನವೂ ಹೆಚ್ಚಳವಾಗಿದ್ದು ಸೋಂಕಿತರ ಸಂಖ್ಯೆಯು 8,000 ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 6,129 ಜನರಿಗೆ ಕರೋನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ (Medical Test) ಪತ್ತೆಯಾಗಿದೆ. ಇದೇ ಅವಧಿಯಲ್ಲಿ 10 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದರೆ, 4,216 ಗುಣಮುಖರಾಗಿದ್ದಾರೆ ಎಂದು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಒಟ್ಟು ಕೋವಿಡ್ 19 ಸೋಂಕಿತ ಪ್ರಕರಣಗಳ ಸಂಖ್ಯೆ 43,213,435ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ಇದುವರೆಗೂ 42,648,308 ಸೋಂಕಿತರು ಗುಣಮುಖರಾಗಿದ್ದು 524,757 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 40,370ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲೂ ಕೊರೊನಾ ಕೇಸ್ ಏರಿಕೆಯಾಗಿದೆ.

9 ದಿನಗಳಲ್ಲೇ ವೈರಸ್ ದಾಖಲೆ

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಕಡಿಮೆ ಆಯ್ತು ಎನ್ನುವಷ್ಟರಲ್ಲೇ ಮಹಾಮಾರಿ ಆಟ ಶುರು ಮಾಡಿದೆ. ಕಳೆದ 100 ದಿನಗಳ ನಂತರದಲ್ಲಿ ಕೋವಿಡ್-19 ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 8,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 40,370ಕ್ಕೆ ಏರಿಕೆ ಆಗುವಂತೆ ಮಾಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ: New Covid Symptoms: ಈ ಎರಡು ರೋಗಲಕ್ಷಣಗಳು ಇದ್ರೆ ಬಹಳ ಸಮಯದವರಗೆ ಕೋವಿಡ್ ನಿಮ್ಮನ್ನು ಕಾಡಬಹುದು ಅಂತಾರೆ ವೈದ್ಯರು

ರಾಜ್ಯದಲ್ಲೂ ವೈರಸ್ ದಾಳಿ

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲೇ 525 ಮಂದಿಗೆ ಕರೋನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪರೆ, ಇದೇ ಅವಧಿಯಲ್ಲಿ 228 ಸೋಂಕಿತರು ಗುಣಮುಖರಾಗಿದ್ದು ಆದರೆ ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 3955309 ಕರೋನಾ ವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 3912024 ಸೋಂಕಿತರು ಗುಣಮುಖರಾಗಿದ್ದು, 40,066 ಜನರು ಕೋವಿಡ್ 19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇದರ ಹೊತರಾಗಿ ರಾಜ್ಯದಲ್ಲಿ 3177 ಸಕ್ರಿಯ ಪ್ರಕರಣಗಳಿವೆ.

ಸೋಂಕಿನ ಪ್ರಕರಣದ ಏರಿಳಿತ

ಕರೋನಾ ವೈರಸ್ ಸೋಂಕಿತರ ಸಂಖ್ಯೆಯು ಏಕಾಏಕಿ ಏರಿಕೆಯಾಗದ ಉದಾಹರಣೆಗಳನ್ನೂ ಭಾರತ ಈ ಹಿಂದೆ ಕಂಡಿದೆ. ದೇಶದಲ್ಲಿ 2020ರ ಆಗಸ್ಟ್ 7ರಂದು 20 ಲಕ್ಷ ಕೋಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದವು. ಅಲ್ಲಿಂದ ಸೋಂಕಿತರ ಸಂಖ್ಯೆಯು ಗಣನೀಯವಾಗಿ ಏರಿಕೆ ಆಯಿತು.

ಸೆಪ್ಟೆಂಬರ್ 11 ರ ವೇಳೆಗೆ 50 ಲಕ್ಷದ ಗಡಿ ದಾಟಿತು

ಆಗಸ್ಟ್ 23ರ ಹೊತ್ತಿಗೆ ಈ ಸಂಖ್ಯೆ: 30 ಲಕ್ಷ ತಲುಪಿತು. ಸೆಪ್ಟೆಂಬರ್ 5ರ ವೇಳೆಗೆ 40 ಲಕವಾದರೆ, ಅದೇ ಸೆಪ್ಟೆಂಬರ್ 11 ರ ವೇಳೆಗೆ 50 ಲಕ್ಷದ ಗಡಿ ದಾಟಿತು, ಸೆಪ್ಟೆಂಬರ್ 28ಕ್ಕೆ ಸೋಂಕಿತ ಪ್ರಕರಣಗಳ ಸಂಖ್ಯೆ: 60 ಲಕ್ಷದ ಗಡಿ ದಾಟಿತು. ಅಕ್ಟೋಬರ್ 11ಕ್ಕೆ 70 ಲಕ್ಷ ಸೋಂಕಿತ ಪ್ರಕರಣಗಳಾದರೆ, ಆ ಸಂಖ್ಯೆಯು ಅಕ್ಟೋಬರ್ 29ರ ಹೊತ್ತಿಗೆ 80 ಲಕ್ಷ ತಲುಪಿತು.

ಇದನ್ನೂ ಓದಿ:  Norovirus Alert: ಏನಿದು ನೊರೊವೈರಸ್? ಬರದಂತೆ ತಡೆಯುವುದು ಹೇಗೆ? ಸೋಂಕು ತಗುಲಿದರೆ ಏನು ಮಾಡಬೇಕು?

ಇವು ಅಂಕಿ-ಸಂಖ್ಯೆಗಳ ವಿವರ

ಅದೇ ರೀತಿ ನವೆಂಬರ್ 20ರ ವೇಳೆಗೆ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 90 ಲಕ್ಷ ತಲುಪಿದರೆ, ಡಿಸೆಂಬರ್ 19ರ ಹೊತ್ತಿಗೆ ಒಂದು ಕೋಟಿಯ ಗಡಿ ದಾಟಿತು. 2021ರ ಮೇ 4ರ ವೇಳೆಗೆ ಕೋವಿಡ್-1) ಸೋಂಕಿತ ಪ್ರಕರಣಗಳ ಸಂಖ್ಯೆಯು ಒಂದು ಕೋಟಿಯಿಂದ ಎರಡು ಕೋಟಿಗೆ ಜಿಗಿಯಿತು. ಅದೇ ರೀತಿ 2021ರ ಜೂನ್ 23ರ ಹೊತ್ತಿಗೆ ಸೋಂಕಿತ ಪ್ರಕರಣಗಳ ಸಂಖ್ಯೆಯು ಮೂರು ಕೋಟಿ ಗಡಿ ಮುಟ್ಟಿತು ಎಂಬುದನ್ನು ಅಂಕಿ-ಸಂಖ್ಯೆಗಳು ವಿವರಿಸುತ್ತವೆ.
Published by:Pavana HS
First published: