CoronaVirus: ದೇಶದಲ್ಲಿ 15 ಲಕ್ಷದ ಗಡಿ ದಾಟಿದ ಕೊರೋನಾ ಪ್ರಕರಣ; ವಿಶ್ವದ ಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನ

ಸರಾಸರಿಯಾಗಿ 7 ದಿನಗಳ ಅವಧಿಯಲ್ಲಿ ಕೊರೋನಾ ವೈರಸ್ ಬೆಳೆಯುವ ಸರಾಸರಿಯ ವೇಗ ಭಾರತದಲ್ಲಿ ಶೇ. 3.6 ರಷ್ಟಿದೆ ಎಂದು ಅಂದಾಜಿಸಲಾಗಿದೆ. ಆದರೆ, ಈ ಪ್ರಮಾಣ ಅಮೆರಿಕದಲ್ಲಿ ಶೇ.1.7 ರಷ್ಟಿದ್ದರೆ, ಬ್ರೆಜಿಲ್‌ನಲ್ಲಿ ಶೇ. 2.4 ರಷ್ಟಿದೆ. ಈ ದರವನ್ನು ತಗ್ಗಿಸದಿದ್ದರೆ ಮುಂದಿನ ಎರಡು ತಿಂಗಳಲ್ಲಿ ಭಾರತ ಸೋಂಕು ಪೀಡಿತರ ಸಂಖ್ಯೆಯಲ್ಲಿ ಅಮೆರಿಕವನ್ನೂ ಮೀರಿಸುವ ಅಪಾಯವಿದೆ ಎಂದು ಎಚ್ಚರಿಕೆ ನೀಡಲಾಗಿದೆ.

MAshok Kumar | news18-kannada
Updated:July 29, 2020, 8:58 AM IST
CoronaVirus: ದೇಶದಲ್ಲಿ 15 ಲಕ್ಷದ ಗಡಿ ದಾಟಿದ ಕೊರೋನಾ ಪ್ರಕರಣ; ವಿಶ್ವದ ಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನ
ಸಾಂದರ್ಭಿಕ ಚಿತ್ರ.
  • Share this:
ನವ ದೆಹಲಿ (ಜುಲೈ 29); ಬುಧವಾರ ಸಂಜೆಯ ವೇಳೆಗೆ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 15 ಲಕ್ಷದ ಗಡಿ ದಾಟಿದ್ದು, ಕೊರೋನಾ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ದೇಶಗಳ ಪಟ್ಟಿಯಲ್ಲಿ ಭಾರತ ಇದೀಗ ಮೂರನೇ ಸ್ಥಾನಕ್ಕೆ ಏರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಭಾರತದಲ್ಲಿ ಪ್ರಸ್ತುತ ಸೋಂಕು ಪೀಡಿತರ ಸಂಖ್ಯೆ 15,24,168.

2.4 ಮಿಲಿಯನ್ ಸೋಂಕು ಪ್ರಕರಣಗಳೊಂದಿಗೆ ಬ್ರಿಜಿಲ್ ಎರಡನೇ ಸ್ಥಾನದಲ್ಲಿದ್ದರೆ, 4.2 ಮಿಲಿಯನ್ ಪ್ರಕರಣಗಳನ್ನು ಹೊಂದಿರುವ ಅಮೆರಿಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ವಿಶ್ವದಾದ್ಯಂತ 16.5 ಮಿಲಿಯನ್ ಜನ ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಅಲ್ಲದೆ, ಸುಮಾರು 6,54,860 ಜನ ಈ ಮಾರಣಾಂತಿಕ ಸೋಂಕಿಗೆ ಬಲಿಯಾಗಿದ್ದಾರೆ.

"ಭಾರತದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಅತ್ಯಂತ ವೇಗವಾಗಿ ಹರಡುತ್ತಿದೆ. ವಿಶ್ವದಲ್ಲೇ ಅತ್ಯಂತ ವೇಗದ ಬೆಳವಣಿಗೆಯ ದರವನ್ನು ಭಾರತ ಹೊಂದಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಪ್ರತಿದಿನ ಸುಮಾರು 50,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಮೇ 16 ರಂದು ಭಾರತದಲ್ಲಿದ್ದ ಸೋಂಕು ಪೀಡಿತರ ಸಂಖ್ಯೆ ಕೇವಲ 1 ಲಕ್ಷ ಮಾತ್ರ ಇತ್ತು. ಆದರೆ, ಕೇವಲ ಎರಡು ತಿಂಗಳ ಅವಧಿಯಲ್ಲಿ ಈ ಪ್ರಮಾಣ 15 ಲಕ್ಷದ ಗಡಿ ದಾಟಿದೆ.

ಸರಾಸರಿಯಾಗಿ 7 ದಿನಗಳ ಅವಧಿಯಲ್ಲಿ ಕೊರೋನಾ ವೈರಸ್ ಬೆಳೆಯುವ ಸರಾಸರಿಯ ವೇಗ ಭಾರತದಲ್ಲಿ ಶೇ. 3.6 ರಷ್ಟಿದೆ ಎಂದು ಅಂದಾಜಿಸಲಾಗಿದೆ. ಆದರೆ, ಈ ಪ್ರಮಾಣ ಅಮೆರಿಕದಲ್ಲಿ ಶೇ.1.7 ರಷ್ಟಿದ್ದರೆ, ಬ್ರೆಜಿಲ್‌ನಲ್ಲಿ ಶೇ. 2.4 ರಷ್ಟಿದೆ. ಈ ದರವನ್ನು ತಗ್ಗಿಸದಿದ್ದರೆ ಮುಂದಿನ ಎರಡು ತಿಂಗಳಲ್ಲಿ ಭಾರತ ಸೋಂಕು ಪೀಡಿತರ ಸಂಖ್ಯೆಯಲ್ಲಿ ಅಮೆರಿಕವನ್ನೂ ಮೀರಿಸುವ ಅಪಾಯವಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮೊನ್ನೆ ಮನ್‌ಕಿ ಬಾತ್‌ ನಲ್ಲಿ ಮಾತನಾಡುತ್ತಾ "ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ" ದಿಂದಾಗಿ ಭಾರತವು ಇತರ ದೇಶಗಳಿಗಿಂತ ಉತ್ತಮ ಸ್ಥಾನದಲ್ಲಿದೆ ಎಂದು ಹೇಳಿದ್ದರು. ಆದರೆ, ದೇಶದಲ್ಲಿ ಪರಿಸ್ಥಿತಿ ಕೈಮೀರಿದೆ ಎಂಬುದೇ ವಾಸ್ತವ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ರಾಜ್ಯ ಸಂಪುಟ ಪುನಾರಚನೆ, ಶಶಿಕಲಾ ಜೊಲ್ಲೆ ಸ್ಥಾನಕ್ಕೆ ಕುತ್ತು?; ದೆಹಲಿಗೆ ದೌಡಾಯಿಸಿರುವ ಸಚಿವೆ

ದಕ್ಷಿಣ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಪಶ್ಚಿಮ ರಾಜ್ಯವಾದ ಮಹಾರಾಷ್ಟ್ರಗಳಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ದೆಹಲಿಯಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ಈ ಸಂಖ್ಯೆಯಿಂದಾಗಿ ಭಾರತದಲ್ಲಿನ ದತ್ತಾಂಶ ಹೆಚ್ಚಾಗುತ್ತಿದೆ. ಈ ನಡುವೆ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆಯೂ 33,425 ಗಡಿ ದಾಟಿದ್ದು, ಬುಧವಾರವೂ 654 ಸಾವುಗಳು ವರದಿಯಾಗಿರುವುದು ಕಳವಳಕಾರಿಯಾಗಿದೆ.
Published by: MAshok Kumar
First published: July 29, 2020, 8:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading