Covid19: 2-3 ವಾರಗಳಲ್ಲಿ ರಾಜ್ಯಕ್ಕೆ ಕೋವಿಡ್ 4ನೇ ಅಲೆ ಎಂಟ್ರಿ!? ಕೊರೊನಾ ರೂಲ್ಸ್​ ಮರೆಯದಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊರೊನಾ ಹರಡದಿರಲು ಕೋವಿಡ್​ ನಿಯಮಾವಳಿಗಳನ್ನು ಫಾಲೋ ಮಾಡುವಂತೆ ಆರೋಗ್ಯ ಇಲಾಖೆ ತಿಳಿಸಿದೆ.  ಕೋವಿಡ್ ಲಸಿಕೆ ಪಡೆದಿದ್ದರೂ, ಜನರು ಇನ್ನೂ ಕೆಲ ಕಾಲ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು.

  • Share this:

ಬೆಂಗಳೂರು (ಜೂ 5): ರಾಜ್ಯದಲ್ಲಿ ಕಳೆದೊಂದು ವಾರದಿಂದ ಕೋವಿಡ್ ಸೋಂಕಿನ ಪ್ರಕರಣಗಳು (Covid19 Case) ಸಂಖ್ಯೆ ಹೆಚ್ಚುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ. ಇದರೊಂದಿಗೆ ನಾಲ್ಕನೇ ಅಲೆ (4th wave) ಭೀತಿ ಎದುರಾಗಿದೆ. ಹೊಸ ಕೋವಿಡ್ ತಳಿ ಕಾಣಿಸಿಕೊಂಡರೆ ನಾಲ್ಕನೇ ಅಲೆ ನಿಶ್ಚಿತವಾದರೂ ಆತಂಕಪಡುವ ಅಗತ್ಯವಿಲ್ಲ. ಮುಂದಿನ 2-3 ವಾರಗಳು (Weeks) ನಿರ್ಣಾಯಕವಾಗಿದ್ದು, ಕೋವಿಡ್ ನಿಯಮಾವಳಿಗಳನ್ನು (Covid19 Rules) ಕಡ್ಡಾಯವಾಗಿ ಪಾಲಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಎಲ್ಲಾ ರಾಜ್ಯಗಳಲ್ಲೂ ಕೊರೊನಾ ಪ್ರಕರಣಗಳು ಹೆಚ್ಚಾಗಿದೆ. ಕರ್ನಾಟಕದಲ್ಲೂ (Karnataka) ದಿನದಿಂದ ದಿನಕ್ಕೆ ಕೋವಿಡ್​ ಕೇಸ್​ ಹೆಚ್ಚುತ್ತಲಿದೆ.


ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಳ


ರಾಜ್ಯದಲ್ಲಿ 1,927 ಸೋಂಕು ಪ್ರಕರಣಗಳು ವರದಿಯಾಗಿದ್ದು, ದಿನದ ಸೋಂಕು ಪ್ರಮಾಣ ದರ ಶೇ.1ಕ್ಕಿಂತ ಹೆಚ್ಚಿದೆ. ಈ ಅವಧಿಯಲ್ಲಿ ಕೋವಿಡ್‌ನಿಂದ ಒಂದು ಸಾವು ಸಂಭವಿಸಿದ್ದು, 1,443 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಅತ್ತ, ನೆರೆಯ ಮಹಾರಾಷ್ಟ್ರದಲ್ಲಿ ಹಾಗೂ ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದು ಆತಂಕ ಮೂಡಿಸಿದೆ. ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಕೇರಳದ ಪ್ರಮುಖ ಮೂರು ನಗರಗಳಲ್ಲಿ ಸೋಂಕಿನ ಏರಿಕೆ ಹೆಚ್ಚಾಗುತ್ತಿದೆ.


ಕೋವಿಡ್​ ನಿಯಮ ಪಾಲಿಸಿ, ಲಸಿಕೆ ಪಡೆಯಿರಿ


ಕೊರೊನಾ ಹರಡದಿರಲು ಕೋವಿಡ್​ ನಿಯಮಾವಳಿಗಳನ್ನು ಫಾಲೋ ಮಾಡುವಂತೆ ಆರೋಗ್ಯ ಇಲಾಖೆ ತಿಳಿಸಿದೆ.  ಕೋವಿಡ್ ಲಸಿಕೆ ಪಡೆದಿದ್ದರೂ, ಜನರು ಇನ್ನೂ ಕೆಲ ಕಾಲ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಸಾಧ್ಯವಾದಷ್ಟು ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ನಿಯಂತ್ರಿಸಬೇಕು. ತಪ್ಪದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಜ್ಞರು ಸೂಚಿಸಿದ್ದಾರೆ. ಆಸ್ಪತ್ರೆ ದಾಖಲಾತಿ ಪ್ರಮಾಣ ತಗ್ಗಿದೆ


ಇದನ್ನೂ ಓದಿ: Covid19: ದಿನೇ ದಿನೇ ಹೆಚ್ಚುತ್ತಿದೆ ಕೊರೊನಾ ಅಬ್ಬರ; ಕರ್ನಾಟಕ ಸೇರಿ 5 ರಾಜ್ಯಕ್ಕೆ ಎಚ್ಚರಿಕೆ ಪತ್ರ


ರಾಜ್ಯದಲ್ಲಿ ಆಸ್ಪತ್ರೆ ದಾಖಲಾತಿ ಪ್ರಮಾಣ ತಗ್ಗಿದೆ


ರಾಜ್ಯದಲ್ಲಿ ಏರಿಕೆ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿಲ್ಲ. ದೈನಂದಿನ ಸೋಂಕು ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿದೆಯಾದರೂ, ಆಸ್ಪತ್ರೆ ದಾಖಲಾತಿ ಪ್ರಮಾಣ ತಗ್ಗಿದೆ. ಹೆಚ್ಚಿನವರು ಮನೆ ಆರೈಕೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಹೆದರುವ ಅಗತ್ಯವಿಲ್ಲ. ಸಂಭಾವ್ಯ ನಾಲ್ಕನೇ ಅಲೆ ಹಿನ್ನೆಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರಕ್ಕೆ ಸೂಚಿಸಲಾಗಿದೆ. ಇದರ ಹೊರತಾಗಿ ಜನರು ತಪ್ಪದೇ ನಿಯಮ ಪಾಲಿಸಬೇಕಿದೆ


ಮತ್ತೆ ಮಾಸ್ ಧರಿಸಲು ಸರ್ಕಾರದ ಸಲಹೆ


ಮಹಾರಾಷ್ಟ್ರದಲ್ಲಿ ಕೋವಿಡ್ ಕೇಸ್​ ಹೆಚ್ಚುತ್ತಿರೋ ಹಿನ್ನೆಲೆ ಉದ್ಧವ್‌ ಠಾಕ್ರೆ ಸರ್ಕಾರ ಕಟ್ಟೆಚ್ಚರಿಕೆ ಕೈಗೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮತ್ತೆ ಮಾಸ್ಕ್ ಧರಿಸುವಂತೆ ಮಹಾರಾಷ್ಟ್ರ ಸರ್ಕಾರ ಜನರಿಗೆ ಸಲಹೆ ನೀಡಿದೆ. ಮುಂಬೈ ಸೇರಿದಂತೆ ಹಲವೆಡೆ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರುತ್ತಿದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಾದ ರೈಲು, ಬಸ್, ಸಿನೆಮಾ, ಆಡಿಟೋರಿಯಂ ಆಸ್ಪತ್ರೆ, ಕಾಲೇಜು, ಶಾಲೆ ಮೊದಲಾದೆಡೆ ಮಾಸ್ಕ್ ಧರಿಸುವಂತೆ ಸರ್ಕಾರ ಸಾರ್ವಜನಿಕರಿಗೆ ಸಲಹೆ ನೀಡಿದೆ. ಈ ಕುರಿತು ಜಿಲ್ಲಾಡಳಿತಗಳಿಗೆ ಸರ್ಕಾರ ಸುತ್ತೋಲೆ ರವಾನಿಸಿದೆ.


ಇದನ್ನೂ ಓದಿ: Covid 19: ಮಹಾರಾಷ್ಟ್ರದಲ್ಲಿ ಒಂದೇ ದಿನ 700ಕ್ಕೂ ಹೆಚ್ಚು ಕೇಸ್! ಆ್ಯಕ್ಟಿವ್ ಕೇಸ್ 3 ಸಾವಿರಕ್ಕೂ ಹೆಚ್ಚು


ಮಾಸ್ಕ್ ಹಾಕದಿದ್ದರೆ ವಿಮಾನದಿಂದ ಕೆಳಗಿಳಿಸಿ


4ನೇ ಅಲೆ ಭೀತಿ ನಡುವೆಯೇ ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಹೊಸ ಕೋವಿಡ್ ಕ್ಲಸ್ಟರ್‌ಗಳು ಉಗಮವಾಗಿ ಕೊರೊನಾ ಪ್ರಕರಣ ಮತ್ತು ಪಾಸಿಟಿವಿಟಿ ದರ ಹೆಚ್ಚುತ್ತಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಈ ರಾಜ್ಯಗಳಲ್ಲಿ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದೆ.

Published by:Pavana HS
First published: