ಒಡಿಶಾ: ಕೋರಮಂಡಲ್ ಎಕ್ಸ್‌ಪ್ರೆಸ್(Coromandel Express) ಹಳಿ ತಪ್ಪಿ ಬಿದ್ದಿದ್ದು, ದೊಡ್ಡ ಅವಾಂತರ ಸೃಷ್ಟಿಸಿದೆ. ಅತಿ ವೇಗದಲ್ಲಿ ನಿಂತಿದ್ದ ಬಂದ ಕೋರಮಂಡಲ್ ಎಕ್ಸ್‌ಪ್ರೆಸ್ ನಿಂತಿದ್ದ ಗೂಡ್ಸ್ ರೈಲಿಗೆ (Goods Train) ಅಪ್ಪಳಿಸಿದ್ದು ಮಾತ್ರವಲ್ಲದೇ ಹಳಿತಪ್ಪಿ (Train Deralie) ಒಂದಷ್ಟು ಬೋಗಿಗಳು ಪಲ್ಟಿಯಾಗಿವೆ. ಈ ಅಪಘಾತದಲ್ಲಿ ಈಗಾಗಲೇ 280ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ಭಾರತದ (India) ಇತಿಹಾಸದಲ್ಲಿ ಅತ್ಯಂತ ಭೀಕರ ರೈಲು ಅಪಘಾತ (Train Accident) ಎನಿಸಿಕೊಂಡಿದೆ. ಆದರೆ 14 ವರ್ಷಗಳ ಹಿಂದೆ ನಡೆದ ಘಟನೆಯೊಂದು ಕುತೂಹಲ ಮೂಡಿಸಿದೆ.
14 ವರ್ಷಗಳ ಹಿಂದೆ , ಶುಕ್ರವಾರವೇ ಕೋರಮಂಡಲ್ ಎಕ್ಸ್ ಪ್ರೆಸ್ ಅಪಘಾತಕ್ಕೀಡಾಗುತ್ತು. ಫೆಬ್ರವರಿ 13, 2009 ರಂದು, ಜೈಪುರ ರಸ್ತೆ ರೈಲು ನಿಲ್ದಾಣ ಕ್ರಾಸ್ ಆಗುವ ವೇಳೆ ಅಪಘಾತಕ್ಕೊಳಗಾಗಿತ್ತು. ಟ್ರ್ಯಾಕ್ ಬದಲಾಯಿಸುವಾಗ ನಿಯಂತ್ರಣ ತಪ್ಪಿ ಬೋಗಿಗಳಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಎಂಜಿನ್ ಮತ್ತೊಂದು ಟ್ರ್ಯಾಕ್ ಮೇಲೆ ಬಿದ್ದಿತು. ಈ ಘಟನೆಯಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ.
ಇಲ್ಲಿ ಅಚ್ಚರಿಯ ಸಂಗತಿ ಎಂದರೆ ಆ ಅಪಘಾತವಾದ ದಿನವೂ ಶುಕ್ರವಾರವೇ ಆಗಿತ್ತು. ಅಪಘಾತದ ಸಮಯ ಸಂಜೆ 7:30 ರಿಂದ 7:40 ರ ನಡುವೆ. ಇದೀಗ ಈ ವಿಷಯ ವೈರಲ್ ಆಗಿದೆ. ಇದೀ 14 ವರ್ಷಗಳ ನಂತರ ಕೋರಮಂಡಲ್ ಎಕ್ಸ್ ಪ್ರೆಸ್ ಮತ್ತೆ ಶುಕ್ರವಾರವೇ ಹಳಿ ತಪ್ಪಿತ್ತು. ಅದೃಷ್ಟವಶಾತ ಇಂದಿನಂತೆ ಭಾರೀ ಪ್ರಮಾಣದ ಅನಾಹುತ ಸಂಭಿವಿಸಿರಲಿಲ್ಲ. ಅಂದು 16 ಮಂದಿ ಮಾತ್ರ ಸಾವಿಗೀಡಾಗಿದ್ದರು. ಆದರೆ ಈ ಬಾರಿ ಹಳಿತಪ್ಪಿದ ಕೋರಮಂಡಲ್ ಎಕ್ಸ್ ಪ್ರೆಸ್ ಬೆಂಗಳೂರು-ಹೌರಾ ಸೂಪರ್ ಫಾಸ್ಟ್ ರೈಲಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆ ಊಹಿಸಲೂ ಸಾಧ್ಯವಾಗದಷ್ಟು ಹೆಚ್ಚಾಗಿದೆ.
ಕೋರಮಂಡಲ್ ಎಕ್ಸ್‌ಪ್ರೆಸ್ ದುರಂತಗಳು
ಕೋರಮಂಡಲ್ ಎಕ್ಸ್‌ಪ್ರೆಸ್ 1977ರಲ್ಲಿ ಸಂಚಾರ ಆರಂಭಿಸಿತ್ತು. 2002ರ ಮಾರ್ಚ್ 15 ರಂದು ನೆಲ್ಲೂರು ಜಿಲ್ಲೆಯ ಕೋವುರು ಮಂಡಲ ಮೇಲು ಸೇತುವೆ ಬಳಿ ಏಳು ಬೋಗಿಗಳು ಹಳಿ ತಪ್ಪಿದ್ದವು. ಇದರಲ್ಲಿ ಸುಮಾರು ನೂರು ಪ್ರಯಾಣಿಕರು ಗಾಯಗೊಂಡಿದ್ದರು. ಮತ್ತೆ 2009ರ ಫೆಬ್ರವರಿ 13 ರಂದು ಒಡಿಶಾದಿಂದ ನೂರು ಕಿಲೋಮೀಟರ್ ದೂರದಲ್ಲಿರುವ ಜಾಜ್‌ಪುರ ಕಿಯೋಂಜಾರ್ ರಸ್ತೆ ಬಳಿ ಹಳಿ ತಪ್ಪಿ 16 ಪ್ರಯಾಣಿಕರು ಮೃತಪಟ್ಟು ಹಲವರು ಗಾಯಗೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ