Love Story: 4 ಯುವತಿಯರ ಜೊತೆ ಲವ್ವಿ-ಡವ್ವಿ, ಎಲ್ಲರಿಗೂ ವಿಷಯ ತಿಳಿದಿದ್ದಕ್ಕೆ ವಿಷ ಕುಡಿದ ಯುವಕ!

Love Story: ಇಲ್ಲೊಬ್ಬ ಆಸಾಮಿ ನಾಲ್ಕು ಹುಡುಗಿಯರನ್ನು ಪ್ರೀತಿಸುತ್ತಿದ್ದ. ನಾಲ್ಕು ಜನರು ಒಟ್ಟಿಗೆ ಆತನ ಮನೆ ಮುಂದು ಬಂದು ನಿಂತಿದ್ದಾರೆ. ಇತ್ತ ಇವರನ್ನು ಕಂಡು ಕಕ್ಕಾಬಿಕ್ಕಿಯಾದ ಆಧುನಿಕ ಪ್ರೇಮಿ ವಿಷ(Poison) ಕುಡಿದು ಆತ್ಮಹತ್ಯೆ(Suicide)ಗೆ ಯತ್ನಿಸಿದ್ದಾನೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರೀತ್ಸೋದು ತಪ್ಪಾ? ಎಲ್ಲರೂ ಈ ಸಿನಿಮಾ(Movie)ವನ್ನು ನೋಡಿರುತ್ತೀರಾ. ಪ್ರೀತಿ(Love) ಮಾಡುವುದು ನಿಜಕ್ಕೂ ತಪ್ಪಲ್ಲ. ಪ್ರೀತಿ ಅಂದರೆ ಕೇವಲ ಪುರುಷ(Men)ರಿಗೆ ಮಹಿಳೆಯ(Women) ಮೇಲೆ ಆಗುವುದು, ಅಥವಾ ಮಹಿಳೆಗಯರಿಗೆ ಪುರುಷರ ಮೇಲೆ ಆಗುವುದು ಪ್ರೀತಿ ಅಲ್ಲ.  ಅಪ್ಪ(Father), ಅಮ್ಮ(Mother), ಅಣ್ಣ, ತಂಗಿ, ಅಕ್ಕ, ಸ್ನೇಹಿತರು ಎಲ್ಲರೂ ಕಿಂಚಿತ್ತು ನೋವು ಅನುಭವಿಸಿದೇ ಇರಲಿ ಎಂದು ಅಂದುಕೊಳ್ಳುವುದೇ ಪ್ರೀತಿ. ‘ಹಾಡಿನಲ್ಲಿ ಹೇಳೋದಲ್ಲ.. ಹೇಳುವುದ ಕೇಳೋದಲ್ಲ.. ಕೇಳುತಲಿ ಕಲಿಯೋದಲ್ಲ.. ಕಲಿತು ನೀ ಮಾಡೋದಲ್ಲ.. ಮೌನವೆನೇ.. ಧ್ಯಾನವೆನೇ ಪ್ರೇಮ’ ಎಂಬ ಹಾಡಿನಲ್ಲಿ ಪ್ರೀತಿ ಎಂಬುಂದರ ಅರ್ಥ ಇದೆ. ಆದರೆ ಈ ಜಮಾನದಲ್ಲಿ ಬೆಳಗ್ಗೆ ಲವ್(Love)​, ಮಧ್ಯಾಹ್ನ ನೋವು(Pain), ಸಂಜೆ ಕಿವಿಗೆ ದಾಸವಾಳದ ಹೂವು. ಹೌದು, ಈ ಫಾಸ್ಟ್​ಫುಡ್​ ಜಮಾನದಲ್ಲಿ ಯಾರ ಮೇಲೆ ಬೇಕಾದರೂ ಪ್ರೀತಿ ಹುಟ್ಟುತ್ತೆ. ಯಾವ ವಯಸ್ಸಿನಲ್ಲಿ ಆದರೂ ಸರಿ. ಹೀಗೆ ಇಲ್ಲೊಬ್ಬ ಆಸಾಮಿ ನಾಲ್ಕು ಹುಡುಗಿಯರನ್ನು ಪ್ರೀತಿಸುತ್ತಿದ್ದ. ನಾಲ್ಕು ಜನರು ಒಟ್ಟಿಗೆ ಆತನ ಮನೆ ಮುಂದು ಬಂದು ನಿಂತಿದ್ದಾರೆ. ಇತ್ತ ಇವರನ್ನು ಕಂಡು ಕಕ್ಕಾಬಿಕ್ಕಿಯಾದ ಆಧುನಿಕ ಪ್ರೇಮಿ ವಿಷ(Poison) ಕುಡಿದು ಆತ್ಮಹತ್ಯೆ(Suicide)ಗೆ ಯತ್ನಿಸಿದ್ದಾನೆ. 

ನಾಲ್ಕು ಮಹಿಳೆಯರೊಂದಿಗೆ ಯುವಕನ ಲವ್ವಿ-ಡವ್ವಿ!

ಸುಭಮೋಯ್​ ಕರ್​ ಎಂಬ ಯುವಕ ಪಶ್ಚಿಮ ಬಂಗಾಳದ ಕೂಚ್​ ಬೆಹಾರ್​ ಪ್ರದೇಶದಲ್ಲಿ ವಾಸವಾಗಿದ್ದ. ಈತ ಕೂಚ್​ ಬೆಹಾರ್​ನ ಜೋರ್ಪಟ್ಕಿ ಗ್ರಾಮದ ಸ್ಥಳೀಯ ಮೆಡಿಕಲ್​ ಸ್ಟೋರ್​​ನಲ್ಲಿ ಸೇಲ್ಸ್​​ಮೆನ್​ ಆಗಿ ಕೆಲಸ ಮಾಡಿಕೊಂಡಿದ್ದ. ಇದೇ ವೇಳೆ ಈತನಿಗೆ ನಾಲ್ಕು ಯುವತಿಯರ ಮೇಲೆ ಪ್ರೀತಿ ಆಗುತ್ತೆ. ಸಾಮನ್ಯವಾಗಿ ಎಲ್ಲರಿಗೂ ಒಮ್ಮೆ ಒಬ್ಬರ ಮೇಲೆ ಮಾತ್ರ ಪ್ರೀತಿ ಹುಟ್ಟುತ್ತೆ. ಆದರೆ ಈತನಿಗೆ ನಾಲ್ಕು ಜನರ ಮೇಲೆ ಪ್ರೀತಿ ಹುಟ್ಟಿತ್ತು. ಒಬ್ಬರಿಗೆ ಮತ್ತೊಬ್ಬರ ವಿಷಯ ತಿಳಿಯದಂತೆ ನಾಲ್ಕು ಯುವತಿಯರೊಂದಿಗೆ ಈತ ಡೇಟಿಂಗ್​ ಮಾಡುತ್ತಿದ್ದ. ಆ ಯುವತಿಯರಿಗೂ ಈತನ ಮೇಲೆ ಸಂದೇಹ ಬಂದಿರಲಿಲ್ಲ. ವಾರದಲ್ಲಿ ನಾಲ್ಕು ದಿನವನ್ನು ನಾಲ್ಕು ಯುವತಿಯರಿಗೆ ಮುಡಿಪಾಗಿಟ್ಟಿದ್ದ. ದಿನ ಒಬ್ಬೊಬ್ಬರನ್ನು ಭೇಟಿಯಾಗುತ್ತಿದ್ದ. ಉಳಿದ ದಿನ ನಾನು ಕೆಲಸದಲ್ಲಿ ತುಂಬಾ ಬ್ಯುಸಿ ಇರುತ್ತೇನೆ ಎಂದು ಸುಳ್ಳು ಹೇಳಿದ್ದ.

ಇದನ್ನು ಓದಿ : ಪತ್ನಿ ಆದಾಯದ ಮೇಲೆ ಪತಿ ಕಣ್ಣು: `ಹಣದ ಹಸು’ ಎಂದವನಿಗೆ ವಿಚ್ಚೇದನ ಕೊಡಿಸಿದ ಕೋರ್ಟ್!

ಒಟ್ಟಾಗಿ ಮನೆ ಬಳಿ ಬಂದ ಯುವತಿಯರು

ಎಲ್ಲೋ ಏನೋ ಸರಿ ಹೋಗುತ್ತಿಲ್ಲ ಎಂದು ಯುವತಿಯೊಬ್ಬಳಿಗೆ ಅನಿಸಿದೆ. ಈತನಿಗೆ ತಿಳಿಯದ ಹಾಗೇ ಒಂದು ವಾರ ಈತನನ್ನು ಫಾಲೋ ಮಾಡಿದ್ದಾಳೆ. ಬಳಿಕ ಈತನ ನವರಂಗಿ ಆಟಗಳು ಆಕೆಗೆ ತಿಳಿದಿದೆ. ಕೂಡಲೇ ಆತನಿಗೆ ಏನು ಮಾಹಿತಿ ನೀಡದೇ, ಉಳಿದ ಯುವತಿಯರನ್ನು ಸಂಪರ್ಕಿಸಿದ್ದಾಳೆ. ಆತ ನಾಲ್ಕು ಮಹಿಳೆಯರನ್ನು ಪ್ರೀತಿ ಮಾಡುತ್ತಿದ್ದಾನಾ ಎಂಬುದನ್ನು ಖಚಿತಪಡಿಸಿಕೊಂಡಿದ್ದಾಳೆ. ಎಲ್ಲರೂ ಆತ ನನ್ನ ಲವರ್​ ಎಂದು ಗಲಾಟೆ ಮಾಡಿಕೊಂಡಿದ್ದಾರೆ. ಬಳಿಕ ನಾವೇ ಆತನ ಮನೆ ಬಳಿ ಹೋಗಿ ಕೇಳೋಣ ಬನ್ನಿ ಎಂದು ಮಾತಾಡಿಕೊಂಡಿದ್ದಾರೆ. ಅದರಂತೆ ಸುಭಮೋಯ್​​ ಕರ್​ ಮನೆ ಮುಂದೆ ಬಂದು ಗಲಾಟೆ ಮಾಡಿದ್ದಾರೆ.

ಇದನ್ನು ಓದಿ : ಮಾಡೆಲ್​ ಮೋನ ರೈ ಹತ್ಯೆ, ಕೊನೆಗೂ ಕೊಲೆಯ ಹಿಂದಿನ ಮಾಸ್ಟರ್​​ ಮೈಂಡ್​ ಲಾಕ್​!

ವಿಷ ಕುಡಿದು ಆತ್ಮಹತ್ಯೆಗೆ ಯತ್ನ

ಯುವತಿಯರು ಮನೆ ಮುಂದೆ ಬಂದು ಗಲಾಟೆ ಮಾಡಿದ್ದನ್ನು ಕಂಡ ಯುವಕನಿಗೆ ಟೆನ್ಶನ್​ ಹೆಚ್ಚಾಗಿತ್ತು. ನನ್ನ ಆಟ ಇನ್ನು ಮುಂದೆ ನಡೆಯಲ್ಲ ಎಂದು ಆತನಿಗೆ ಗೊತ್ತಾಗಿತ್ತು. ಏನು ಮಾಡಬೇಕೆಂದು ತೋಚದೆ, ಮನೆಯಲ್ಲೇ ಇದ್ದ ವಿಷವನ್ನು ಕುಡಿದುಬಿಟ್ಟಿದ್ದ. ಬಳಿಕ ಸ್ಥಳೀಯರೆಲ್ಲ ಸೇರಿ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ತಾವು ಆತನನ್ನು ನಂಬಿದ್ದೇ ತಪ್ಪಾಯ್ತು ಎಂದು ಯುವತಿಯರು ಕಣ್ಣೀರಿಡುತ್ತಿದ್ದಾರೆ. ಆದರೆ ಯಾವುದೇ ದೂರು ದಾಖಲಿಸಿಲ್ಲ.
Published by:Vasudeva M
First published: