2070ರಲ್ಲಿ ನಿವ್ವಳ ಶೂನ್ಯ ಪ್ರತಿಜ್ಞೆಯ ಮೂಲಕ ಹವಾಮಾನ ಶೃಂಗಸಭೆಯಲ್ಲಿ ಅಚ್ಚರಿ ಮೂಡಿಸಿದ ಪ್ರಧಾನಿ ಮೋದಿ

ದಿನನಿತ್ಯವೂ ಜಗತ್ತು ಹವಾಮಾನ ಬದಲಾವಣೆನಿಭಾಯಿಸಲು ವಿಳಂಬಗೊಳ್ಳುತ್ತಿದ್ದು ಇದರಿಂದ ನಿಷ್ಕ್ರಿಯತೆಯು ಹೆಚ್ಚಳಗೊಂಡಿದೆ ಎಂದು ಅಧ್ಯಕ್ಷರಾದ ಬೈಡನ್ ತಿಳಿಸಿದ್ದಾರೆ.

 ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • Share this:
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು COP26 (The climate summit in Glasgow) ಹವಾಮಾನ ಶೃಂಗಸಭೆಯಲ್ಲಿ ನೆರೆದಿದ್ದ ಪ್ರತಿನಿಧಿಗಳನ್ನು ತಮ್ಮ ದಿಟ್ಟ ಪ್ರತಿಜ್ಞೆಯ ಮೂಲಕ ಅಚ್ಚರಿಗೊಳಿಸಿದರು. 2070ರ ವೇಳೆಗೆ ಭಾರತ(India)ವು ಇಂಗಾಲದ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯ ಮಟ್ಟಕ್ಕೆ ಕಡಿತಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ. ದೇಶಗಳು ಈ ಗುರಿಯನ್ನು 2050ರ ವೇಳೆಗೆ ತಲುಪಬೇಕೆಂಬ COP26 ಶೃಂಗಸಭೆಯ ಪ್ರಮುಖ ಗುರಿ ಇಲ್ಲಿ ಮರೆಯಾಗಿದ್ದರೂ ನಿರಾಶಾದಾಯಕ ಫಲಿತಾಂಶದಿಂದ ಹಿನ್ನಡೆಯಾಗಿದ್ದ ಮಾತುಕತೆಗಳಿಗೆ ನರೇಂದ್ರ ಮೋದಿ(Narendra Modi)ಯವರ ಪ್ರತಿಜ್ಞೆಯು ಹೊಸ ಜೀವ ತುಂಬಿತು ಎಂಬುದಂತೂ ನಿಜವಾಗಿದೆ.

ನಿವ್ವಳ ಶೂನ್ಯ ಅಥವಾ ಇಂಗಾಲದ ತಟಸ್ಥಗೊಳಿಸುವಿಕೆ ಎಂದರೆ ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಪ್ರಮಾಣಕ್ಕೆ ಹೊರಸೂಸುವಿಕೆಗಳನ್ನು ಸೇರಿಸದೇ ಇರುವುದಾಗಿದೆ. ಜಾಗತಿಕವಾಗಿ, ಹಸಿರುಮನೆ ಅನಿಲ ಹೊರಸೂಸುವಿಕೆಯ ಪ್ರಾಥಮಿಕ ಮೂಲಗಳು ವಿದ್ಯುತ್ ಮತ್ತು ಶಾಖ (31%), ಕೃಷಿ (11%), ಸಾರಿಗೆ (15%), ಅರಣ್ಯ (6%) ಮತ್ತು ಉತ್ಪಾದನೆ (12%) ಆಗಿವೆ. ಎಲ್ಲಾ ರೀತಿಯ ಶಕ್ತಿಯ ಉತ್ಪಾದನೆಯು ಹೊರಸೂಸುವಿಕೆಗಳಲ್ಲಿ 72% ಹೊಂದಿದೆ.

ಗ್ಲಾಸ್ಗೋ ಶೃಂಗಸಭೆಯಲ್ಲಿ ಭಾರತವು ಮೊದಲ ಬಾರಿಗೆ ನಿವ್ವಳ ಶೂನ್ಯ ಗುರಿ ನಿಗದಿಪಡಿಸಿದ ಪ್ರತಿಜ್ಞೆಯನ್ನು ಮೋದಿಯವರು ಮಾಡಿದ್ದಾರೆ. ಇದೇ ಸಮಯದಲ್ಲಿ ಚೀನಾ 2060ರ ವೇಳೆಗೆ ಇಂಗಾಲದ ತಟಸ್ಥತೆಯ ಯೋಜನೆಗಳನ್ನು ಘೋಷಿಸಿದ್ದು ಅಮೆರಿಕ ಹಾಗೂ ಯುರೋಪಿಯನ್ ಯೂನಿಯನ್ ಈ ಗುರಿಯನ್ನು 2050ರ ವೇಳೆಗೆ ಸಾಧಿಸುವ ಗುರಿ ಪ್ರಕಟಪಡಿಸಿವೆ.

ಇದನ್ನೂ ಓದಿ:Afghan Crisis: ಅಫ್ಘಾನಿಸ್ತಾನಕ್ಕೆ ಭೂ ಮಾರ್ಗದ ಮೂಲಕ ಗೋಧಿ ಟ್ರಕ್‍ಗಳನ್ನು ಕಳುಹಿಸಲು, ಪಾಕಿಸ್ತಾನದ ಅನುಮತಿಯ ನಿರೀಕ್ಷೆಯಲ್ಲಿ ಭಾರತ

ಗ್ಲಾಸ್ಗೋದಲ್ಲಿ 2 ವಾರಗಳ ಸಮ್ಮೇಳನಕ್ಕಾಗಿ ಒಟ್ಟುಗೂಡಿದ 120ಕ್ಕೂ ಹೆಚ್ಚು ನಾಯಕರುಗಳಲ್ಲಿ ನಮ್ಮ ಭಾರತೀಯ ನಾಯಕರೂ ಒಬ್ಬರಾಗಿದ್ದಾರೆ. ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್, ಅಮೆರಿಕದ ಅಧ್ಯಕ್ಷರಾದ ಜೋ ಬೈಡನ್ ಹಾಗೂ ಯುಎನ್ ಸೆಕ್ರೆಟರಿ ಜನರಲ್ ಆ್ಯಂಟೋನಿಯೋ ಗುಟೆರಸ್ ಸೇರಿದಂತೆ ಹೆಚ್ಚಿನ ನಾಯಕರುಗಳು ಹವಾಮಾನ ಬಿಕ್ಕಟ್ಟನ್ನು ನಿಭಾಯಿಸುವ ಗುರಿಗಳ ಕುರಿತಂತೆ ಅಂಕಿಅಂಶಗಳನ್ನು ಪ್ರಸ್ತುತಪಡಿಸಿದರು.

ದಿನನಿತ್ಯವೂ ಜಗತ್ತು ಹವಾಮಾನ ಬದಲಾವಣೆನಿಭಾಯಿಸಲು ವಿಳಂಬಗೊಳ್ಳುತ್ತಿದ್ದು ಇದರಿಂದ ನಿಷ್ಕ್ರಿಯತೆಯು ಹೆಚ್ಚಳಗೊಂಡಿದೆ ಎಂದು ಅಧ್ಯಕ್ಷರಾದ ಬೈಡನ್ ತಿಳಿಸಿದ್ದಾರೆ. ಜಾಗತಿಕ ತಾಪಮಾನದ ವಿರುದ್ಧದ ಹೋರಾಟವು ವಿಶ್ವದ ಆರ್ಥಿಕತೆಗೆ ಅವಿಶ್ವಸನೀಯ ಅವಕಾಶಗಳನ್ನು ಒದಗಿಸಿದೆ ಎಂದು ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಭಾರತದ ನಿವ್ವಳ ಶೂನ್ಯ ಪ್ರತಿಜ್ಞೆ

ಚೀನಾ, ಅಮೆರಿಕ ಹಾಗೂ ಯುರೋಪಿಯನ್ ಒಕ್ಕೂಟಗಳ ನಂತರ ವಿಶ್ವದ ನಾಲ್ಕನೇ ಅತಿ ಹೆಚ್ಚು ಪ್ರಮಾಣದಲ್ಲಿ ಇಂಗಾಲದ ಡ್ರೈಆಕ್ಸೈಡ್ ಹೊರಸೂಸುವ ದೇಶ ಭಾರತವಾಗಿದೆ. ದೇಶದ ಜನಸಂಖ್ಯೆ ಎಂದರೆ ಅದರ ತಲಾ ಹೊರಸೂಸುವಿಕೆಗಳನ್ನು ವಿಶ್ವದ ಇತರ ಆರ್ಥಿಕತೆಗಳಿಗೆ ಹೋಲಿಸಿದಾಗ ತುಂಬಾ ಕಡಿಮೆಯಾಗಿದೆ. 2019ರಲ್ಲಿ ಪ್ರತಿ ಜನಸಂಖ್ಯೆಯ ತಲಾ 1.9 ಟನ್ CO2 ಹೊರಸೂಸಿದ್ದು ಅಮೆರಿಕವು 15.5 ಟನ್‌ಗಳಷ್ಟನ್ನು ಹೊರಸೂಸಿದ್ದರೆ ಇದೇ ವರ್ಷ ರಷ್ಯಾವು 12.5 ಟನ್‌ಗಳಷ್ಟನ್ನು ಹೊರಸೂಸಿದೆ.

ಮೋದಿ ದೇಶದ ಪರವಾಗಿ ಮಾಡಿದ ಐದು ಪ್ರತಿಜ್ಞೆಗಳಲ್ಲೊಂದಾಗಿ ನಿವ್ವಳ ಶೂನ್ಯ ನಿರ್ಧಾರ ಮಾಡಿದರು. ನವೀಕರಿಸಬಹುದಾದ ಸಂಪನ್ಮೂಲಗಳಿಂದ 50% ಶಕ್ತಿಯನ್ನು 2030ರ ಒಳಗೆ ಭಾರತಕ್ಕೆ ಪಡೆಯುವ ಭರವಸೆಯೊಂದಿಗೆ ಅದೇ ವರ್ಷ ಒಟ್ಟು ಯೋಜಿತ ಇಂಗಾಲದ ಹೊರಸೂಸುವಿಕೆಯನ್ನು ಒಂದು ಶತಕೋಟಿ ಟನ್‌ಗಳಷ್ಟು ಕಡಿಮೆ ಮಾಡುತ್ತದೆ ಎಂಬ ನಿರ್ಧಾರ ಒಳಗೊಂಡಿದೆ.

2070ರ ನಿವ್ವಳ ಶೂನ್ಯ ಗುರಿಯು ಕಾರ್ಯಕರ್ತರು ಹಾಗೂ ತಜ್ಞರನ್ನು ನಿರಾಶೆಗೊಳಿಸಿದ್ದರೂ ಮೋದಿ ಭಾರತೀಯರನ್ನು ಪ್ರಭಾವಿತಗೊಳಿಸಿದ್ದಾರೆ. BBC ಸುದ್ದಿ ವಾಹಿನಿಯ ವಿಕಾಸ್ ಪಾಂಡೆ ವರದಿ ಮಾಡಿರುವಂತೆ ಮೋದಿಯವರು ತಮ್ಮ ನಿಲುವಿನಲ್ಲಿ ಭದ್ರವಾಗಿರುವಂತೆ ಕಂಡುಬಂದಿದ್ದು ಹವಾಮಾನ ಬದಲಾವಣೆಗಳ ಕುರಿತು ಗಂಭೀರವಾಗಿದ್ದರೂ ದೇಶದ ಆರ್ಥಿಕ ಸಾಮರ್ಥ್ಯವನ್ನು ಎಂದಿಗೂ ರಾಜಿಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಭಾರತದ ದಿಟ್ಟ ನಿರ್ಧಾರ:

ಹವಾಮಾನ ಬದಲವಾಣೆಯಲ್ಲಿ ಉತ್ತಮ ಪರಿಹಾರವಾಗಿ ಜೀವನ ಶೈಲಿಯಲ್ಲಿ ಹೇಗೆಲ್ಲಾ ಮಾರ್ಪಡಿಸುವಿಕೆಗಳನ್ನು ತರಬಹುದು ಎಂಬ ಅಂಶಗಳಿಗೆ ಮೋದಿಯವರು ಹೆಚ್ಚು ಒತ್ತು ನೀಡಿದ್ದಾರೆ. ಇದೇ ಸಮಯದಲ್ಲಿ ತಮ್ಮ ಮಹತ್ವದ ಸುದ್ದಿಯ ಘೋಷಣೆಯನ್ನು ಮೋದಿಯವರು ಕೊನೆಯಲ್ಲಿ ಮಾಡಿದರು. ಹವಾಮಾನ ಬಿಕ್ಕಟ್ಟನ್ನು ನಿಗ್ರಹಿಸಲು ಭಾರತ ಪ್ರಸ್ತುತಪಡಿಸಲಿರುವ “ಐದು ಸಿದ್ಧೌಷಧಗಳು” ಎಂಬ ಪ್ರಸ್ತಾವನೆಯನ್ನು ವಿವರಿಸಿದ ಮೋದಿಯವರು 2070 ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯ ಗುರಿಯನ್ನು ಅಳವಡಿಸಿಕೊಳ್ಳಲಿದೆ ಎಂದು ಘೋಷಿಸಿದರು.

ಇದನ್ನೂ ಓದಿ:Corona Vaccine: ಭಾರತದ ಕೋವಿಡ್ ಸರ್ಟಿಫಿಕೇಟ್​​ಗೆ ಯಾವ್ಯಾವ ದೇಶಗಳಲ್ಲಿ ಬೆಲೆ ಇದೆ?

ವಿಶ್ವದ ಮೂರನೇ ಅತಿದೊಡ್ಡ ಹೊರಸೂಸುವಿಕೆಗೆ ಸಂಬಂಧಿಸಿದಂತೆ ಇದು ಅತ್ಯಂತ ಮಹತ್ವದ ನಿರ್ಧಾರವಾಗಿದ್ದು, ದೇಶವು 50%ಕ್ಕಿಂತ ಹೆಚ್ಚಿನ ವಿದ್ಯುತ್ ಪೂರೈಕೆಯನ್ನು ಕಲ್ಲಿದ್ದಲಿನಿಂದ ಪಡೆದುಕೊಳ್ಳುತ್ತಿದೆ. ಜಾಗತಿಕ ತಾಪಮಾನದ ಹೆಚ್ಚು ಅಪಾಯಕಾರಿ ಮಟ್ಟ ತಪ್ಪಿಸಲು ಇಂಗಾಲದ ತಟಸ್ಥತೆಯು ಅತ್ಯವಶ್ಯಕವಾಗಿದ್ದು ಶೀಘ್ರದಲ್ಲೇ ಇದನ್ನು ಕೈಗೊಳ್ಳಬೇಕೆಂಬುದು ವಿಜ್ಞಾನಿಗಳ ಕಿವಿಮಾತಾಗಿದೆ. ಈ ಗುರಿಗೆ ಸಭೆಯಲ್ಲಿ ಸಾರ್ವತ್ರಿಕ ಮನ್ನಣೆ ದೊರಕಿದೆ.

ನಮ್ಮ ಗೋರಿಗಳನ್ನು ನಾವೇ ಅಗೆಯುವುದು:

ಯುಎನ್ ಸೆಕ್ರೆಟರಿ ಜನರಲ್ ಆ್ಯಂಟೋನಿಯೊ ಗುಟೆರೆಸ್ ಪ್ರಖರ ಭಾಷಣದ ನಂತರ ಮೋದಿಯವರು ತಮ್ಮ ಅಂಕಿಅಂಶಗಳನ್ನು ಪ್ರಸ್ತಾವಿಸಿದರು. ಪ್ರಕೃತಿಯನ್ನು ಶೌಚಾಲಯದಂತೆ ಬಳಸುವುದನ್ನು ಜನರು ನಿಲ್ಲಿಸಬೇಕೆಂದು ಕರೆಕೊಟ್ಟ ಮೋದಿ ಪಳೆಯುಳಿಕೆ ಇಂಧನಗಳ ನಿರಂತರ ಬಳಕೆಯನ್ನು ಕಟುವಾಗಿ ಟೀಕಿಸಿದರು. ನಮ್ಮ ಸಮಾಧಿಯನ್ನು ನಾವೇ ನಿರ್ಮಿಸಿಕೊಳ್ಳುತ್ತಿದ್ದೇವೆ ಎಂಬ ಕಿವಿಮಾತನ್ನು ಹೇಳಿದರು.

ಇಂಗ್ಲೆಂಡ್ ಅಧ್ಯಕ್ಷರಾದ ಬೋರಿಸ್ ಜಾನ್ಸನ್ ಮುಂದಿನ ತಲೆಮಾರು ನಮ್ಮನ್ನು ಅತ್ಯಂತ ಕೆಟ್ಟದಾಗಿ ಉಪಚರಿಸುತ್ತದೆ ಎಂದು ತಿಳಿಸಿದರೆ, ಅಮೆರಿಕದ ಅಧ್ಯಕ್ಷರಾದ ಜೋ ಬೈಡನ್ ಈ ಕ್ಷಣವನ್ನು ನಾವು ಸದುಪಯೋಗಪಡಿಸಿಕೊಳ್ಳದೇ ಇದ್ದರೆ ಮುಂದೆರಗಲಿರುವ ವಿನಾಶವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಆದರೆ ಸ್ಕಾಟ್ಲೆಂಡ್‌ನ ಅತಿದೊಡ್ಡ ನಗರದ ಬೀದಿಗಳಲ್ಲಿ ಸಮ್ಮೇಳನದ ಹೊರಗೆ, ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರು ಜಾಗತಿಕ ನಾಯಕರು ಹೆಚ್ಚಿನ ಘೋಷಣೆಗಳನ್ನು ಮಾಡುವಂತೆ ಒತ್ತಾಯಿಸಿದರು. ಪ್ರಚಾರಕಿ ಗ್ರೇಟಾ ಥನ್‌ಬರ್ಗ್ ಹೇಳುವಂತೆ ಶೃಂಗಸಭೆಯಲ್ಲಿರುವ ನಾಯಕರುಗಳು ನಮ್ಮ ಭವಿಷ್ಯದ ಮೇಲೆ ಕಾಳಜಿ ಇರುವಂತೆ ನಟಿಸುತ್ತಿದ್ದಾರೆ ಎಂದು ತಿಳಿಸಿದರು.
Published by:Latha CG
First published: