ಶ್ರೀನಗರದಲ್ಲಿ ಉಗ್ರರ ದಾಳಿ​: ಕಾರ್ಯಾಚರಣೆಯಲ್ಲಿ ಓರ್ವ ಪೊಲೀಸ್​ ಬಲಿ, ಇಬ್ಬರು ಯೋಧರಿಗೆ ಗಾಯ

news18
Updated:August 12, 2018, 2:55 PM IST
ಶ್ರೀನಗರದಲ್ಲಿ ಉಗ್ರರ ದಾಳಿ​: ಕಾರ್ಯಾಚರಣೆಯಲ್ಲಿ ಓರ್ವ ಪೊಲೀಸ್​ ಬಲಿ, ಇಬ್ಬರು ಯೋಧರಿಗೆ ಗಾಯ
news18
Updated: August 12, 2018, 2:55 PM IST
ನ್ಯೂಸ್​18 ಕನ್ನಡ

ಶ್ರೀನಗರ (ಆ.12): ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ಬಟ್ಮಲೂ ಎಂಬ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದು, ವಿಶೇಷ ಕಾರ್ಯಾಚರಣೆ ಪಡೆಯ ಪೊಲೀಸ್​ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಕಾರ್ಯಾಚರಣೆ ವೇಳೆ ಇಬ್ಬರು ಸಿಆರ್​ಪಿಎಫ್​ ಯೋಧರಿಗೆ ಗಾಯಗಳಾಗಿವೆ.

ಇಂದು ಮುಂಜಾನೆ ಬಟ್ಮಲೂ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಲು ಆರಂಭಿಸಿವೆ. ಈ ವೇಳೆ ಉಗ್ರರು ಇದ್ದಕ್ಕಿದ್ದಂತೆ ಸೇನಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರು ಅಡಗಿರುವ ತಾಣವನ್ನು ಸುತ್ತುವರೆದ ಭದ್ರತಾ ಪಡೆಯ ಸಿಬ್ಬಂದಿ ಎನ್​ಕೌಂಟರ್ ನಡೆಸಲಾರಂಭಿಸಿದ್ದಾರೆ. ಇನ್ನೂ ಎನ್​ಕೌಂಟರ್​ ಕಾರ್ಯಾಚರಣೆ ನಡೆಯುತ್ತಿದ್ದು, ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಶೇಷ್​ ಪೌಲ್​ ವೇದ್​ ಟ್ವೀಟ್​ ಮಾಡಿದ್ದಾರೆ.

 


Loading...

First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...