Police Brutality: ರೈಲ್ವೇ ನಿಲ್ದಾಣದಲ್ಲಿ ವೃದ್ಧರೊಬ್ಬರಿಗೆ ಕಾಲಿನಿಂದ ಒದ್ದು, ಥಳಿಸಿದ ಪೊಲೀಸ್! ವಿಡಿಯೋ ವೈರಲ್

ಮಧ್ಯಪ್ರದೇಶದ ಜಬಲ್‍ಪುರ ರೈಲು ನಿಲ್ದಾಣದಲ್ಲಿ ಪೊಲೀಸ್ ಪೇದೆಯೊಬ್ಬರು ವೃದ್ಧರೊಬ್ಬರನ್ನು ಅಮಾನುಷವಾಗಿ ಥಳಿಸಿದ್ದಾರೆ. ಕಾಲಿನಿಂದ ಒದ್ದು, ರೈಲ್ವೇ ಹಳಿ ಬಳಿ ಎಳೆದೊಯ್ದು ತಲೆ ಕೆಳಗಾಗಿ ನಿಲ್ಲಿಸಿದ್ದಾರೆ.

ಪೊಲೀಸರ ಅಮಾನುಷ ವರ್ತನೆ

ಪೊಲೀಸರ ಅಮಾನುಷ ವರ್ತನೆ

  • Share this:
    ಪೊಲೀಸ್ (Police) ಅಂದ್ರೆ ಒಂದು ಜವಾಬ್ದಾರಿಯುತ ಕೆಲಸ (Work). ಸಮಾಜದ ರಕ್ಷಣೆಗೆ ಇರುವ ರಕ್ಷಕರು. ತಪ್ಪು ಮಾಡಿದಾಗ ಶಿಕ್ಷೆ ನೀಡಬೇಕು. ಅಧಿಕಾರ ಇದೆ ಎಂದು ಮನಬಂದಂತೆ ನಡೆದುಕೊಳ್ಳಬಾರದು. ಪೊಲೀಸರು ಇತರ ಜನರಿಗೆ ಮಾದರಿಯಾಗುವಂತೆ ಬದುಕಬೇಕು. ಅದು ಬಿಟ್ಟು ಇವರೆಂಥಾ ಪೊಲೀಸರಪ್ಪ ಎಂಬ ಭಾವನೆ ಬರಬಾರದು. ಕೆಲ ಪೊಲೀಸರು ತಮ್ಮ ಕೆಲಸದಿಂದ ಗುರುತಿಸಿಕೊಂಡು ಒಳ್ಳೆಯ ಕೆಲಸ ಮಾಡುತ್ತಾರೆ. ಇನ್ನೂ ಕೆಲವರು ಅಧಿಕಾರದ ದರ್ಪದಿಂದ ಮೆರೆಯುತ್ತಾರೆ. ಅದೇ ರೀತಿಯ ಘಟನೆಯೊಂದು ನಡೆದಿದೆ.  ಮಧ್ಯಪ್ರದೇಶದ (Madya Pradesh) ಜಬಲ್‍ಪುರ (Jabalpur) ರೈಲು ನಿಲ್ದಾಣದಲ್ಲಿ (Railway station ) ಪೊಲೀಸ್ ಪೇದೆಯೊಬ್ಬರು ವೃದ್ಧರ ಮೇಲೆ ಅಮಾನುಷವಾಗಿ ಥಳಿಸಿದ್ದಾರೆ. ಕಾಲಿನಿಂದ ಒದ್ದು, ರೈಲ್ವೇ ಹಳಿ ಬಳಿ ಎಳೆದೊಯ್ದು ತಲೆ ಕೆಳಗಾಗಿ ನಿಲ್ಲಿಸಿದ್ದಾರೆ.

    ವೃದ್ಧನಿಗೆ ಅಮಾನುಷವಾಗಿ ಥಳಿತ
    ಮಧ್ಯಪ್ರದೇಶದ ಜಬಲ್‍ಪುರ ರೈಲು ನಿಲ್ದಾಣದಲ್ಲಿ ವೃದ್ಧರೊಬ್ಬರು ಕುಡಿದ ಅಮಲಿನಲ್ಲಿ ನಿಲ್ದಾಣದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು. ಅವರಿಗೆ ಪೊಲೀಸರು ಹೇಗೋ ಬುದ್ಧಿ ಹೇಳಿ ಕಳಿಸಬಹುದಿತ್ತು. ಆದ್ರೆ ಪೊಲೀಸ್ ಪೇದೆ ತಾಳ್ಮೆ ಕಳೆದುಕೊಂಡು ಆತನನ್ನು ಅಮಾನುಷವಾಗಿ ಥಳಿಸಿದ್ದಾರೆ.

    30 ಸೆಕೆಂಡ್ ವಿಡಿಯೋದಲ್ಲಿ ಏನಿದೆ?
    ರೈಲು ನಿಲ್ದಾಣದಲ್ಲಿ ವಯಸ್ಸಾದ ವ್ಯಕ್ತಿಗೆ ಪೊಲೀಸ್ ತಮ್ಮ ಬೂಟು ಕಾಲಿನಿಂದ ಒದೆಯುತ್ತಾರೆ. ಅಲ್ಲಿರೋ ಯಾರೋ ಒಬ್ಬ ಪೊಲೀಸರನ್ನು ಎಳೆದರೂ ಬಿಡದೇ, ಮತ್ತೆ ಎರಡು, ಮೂರು ಬಾರಿ ಕಾಲಿನಿಂದ ಒದೆಯುತ್ತಾರೆ. ನಂತರ ಆ ವೃದ್ಧನ ಎರಡು ಕಾಲು ಹಿಡಿದು ದರ ದರನೇ ಎಳೆದು, ರೈಲ್ವೇ ಟ್ರ್ಯಾಕ್ ಬಳಿ ಎಳದು ತಂದು ತಲೆ ಕೆಳಗೆ ಮಾಡಿ ನಿಲ್ಲುತ್ತಾರೆ. ಅಲ್ಲೂ ಆತನಿಗೆ ಒದ್ದು ಹಿಂಸೆ ಕೊಡುತ್ತಾರೆ.

    ವಿಡಿಯೋ ಮಾಡಿದ್ದ ಪ್ರಯಾಣಿಕರು
    ಪೊಲೀಸ್ ಪೇದೆ ವೃದ್ಧನಿಗೆ ಥಳಿಸುತ್ತಿರುವುದನ್ನು ಇನ್ನೊಂದು ಹಳಿಯಲ್ಲಿ ನಿಂತಿದ್ದ ರೈಲಿನೊಳಗೆ ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ್ದಾರೆ. ಈಗ ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಇದನ್ನೂ ಓದಿ: New Rules: ರಾಜ್ಯದ ಪಬ್​, ಬಾರ್​ & ರೆಸ್ಟೋರೆಂಟ್​ಗೆ ಹೊಸ ರೂಲ್ಸ್; ಪೊಲೀಸ್​ ಇಲಾಖೆಯಿಂದ ಸುತ್ತೋಲೆ

    ಪೊಲೀಸ್ ಪೇದೆ ಅಮಾನತು
    ವೃದ್ಧನಿಗೆ ಥಳಿಸಿದ ಪೇದೆಯನ್ನು ಅನಂತ್ ಮಿಶ್ರಾ ಎಂದು ಗುರುತಿಸಲಾಗಿದೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ರೇವಾ ಜಿಲ್ಲೆಯ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

    ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?
    'ಜಬಲ್‍ಪುರ ರೈಲು ನಿಲ್ದಾಣದಲ್ಲಿ ವೃದ್ಧರೊಬ್ಬರ ಮೇಲೆ ಕಾನ್‍ಸ್ಟೆಬಲ್ ಅನಂತ್ ಮಿಶ್ರಾ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ತನಿಖೆ ನಡೆಸಿದಾಗ ರೇವಾ ಜಿಲ್ಲೆಯ ಪೊಲೀಸ್ ಠಾಣೆಗೆ ಕಾನ್‍ಸ್ಟೆಬಲ್ ಅನಂತ್ ಮಿಶ್ರಾ ಅವರನ್ನು ನಿಯೋಜಿಸಿರುವುದು ಕಂಡುಬಂದಿದೆ. ಮಿಶ್ರಾ ಅವರನ್ನು ಅಮಾನತುಗೊಳಿಸಲಾಗಿದೆ' ಎಂದು ಸಹಾಯಕ ಪೆÇಲೀಸ್ ವರಿಷ್ಠಾಧಿಕಾರಿ ಪ್ರತಿಮಾ ಪಟೇಲ್ ತಿಳಿಸಿದ್ದಾರೆ.

    ತೀವ್ರ ಟೀಕೆಗೆ ಗುರಿಯಾದ ಪೇದೆ
    ವೃದ್ಧನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಲವರು ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸ್‍ಗೆ ಮಾನವೀಯತೆ ಇಲ್ವಾ? ಆ ವೃದ್ಧನಿಗೆ ಹೇಗೆ ಥಳಿಸಿದ್ದಾರೆ ನೋಡಿ ಎಂದು ಆಕ್ರೋಶ್ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: Uttara Kannada: ಸೇನೆ, ಪೋಲಿಸ್ ಸೇವೆ ಸೇರಲು ಸಿಗುತ್ತೆ ತರಬೇತಿ! ಈಗಲೇ ಹೀಗೆ ಅರ್ಜಿ ಸಲ್ಲಿಸಿ

    ಪೊಲೀಸರನ್ನು ತಡೆಯದ ಸಾರ್ವಜನಿಕರು
    ರೈಲ್ವೇ ನಿಲ್ದಾಣದಲ್ಲಿ ಪೇದೆಯೊಬ್ಬರು ವೃದ್ಧನನ್ನು ಥಳಿಸುತ್ತಿದ್ದರೆ, ಜನ ಸುಮ್ಮನೇ ನಿಂತು ಕೊಂಡು ನೋಡಿದ್ದಾರೆ. ಯಾರೊಬ್ಬರು ತಡೆದಿಲ್ಲ ಎಂದು ಟ್ವಿಟರ್‍ನಲ್ಲಿ ಕಾಮೆಂಟ್ ಮಾಡಿದ್ದಾರೆ. ಆದರೆ ಅಲ್ಲಿನ ಜನಕ್ಕೆ ಆ ವದ್ಧ ತನ್ನ ವರ್ತನೆಯಿಂದ ಬೇಜಾರು ಮಾಡಿದ್ದ ಎಂದು ತಿಳಿದು ಬಂದಿದೆ. ಅಲ್ಲದೇ ಪೊಲೀಸ್ ಹೊಡೆಯುವಾಗ ಜನ ಸಾಮಾನ್ಯರು ತಡೆಯಲು ಭಯ ಪಡುತ್ತಾರೆ. ಪೊಲೀಸರನ್ನೇ ಹೇಗೆ ತಡೆಯುವುದು ಎಂದು ಯೋಚನೆ ಮಾಡುತ್ತಾರೆ. ಆದ ಕಾರಣ ತಡೆಯದೇ ಇರಬಹುದು ಎಂದು ಸಹ ಕಾಮೆಂಟ್‍ಗಳು ಬಂದಿವೆ.
    Published by:Savitha Savitha
    First published: