HOME » NEWS » National-international » COP AMONG FOUR ARRESTED FOR RAPING IMPREGNATING MINOR GIRL IN KASHMIR MAK

Crime News: ಜಮ್ಮು-ಕಾಶ್ಮೀರದಲ್ಲಿ ಪೊಲೀಸ್​ ಸಿಬ್ಬಂದಿಯಿಂದಲೇ ಬಾಲಕಿ ಮೇಲೆ ಅತ್ಯಾಚಾರ; ನಾಲ್ವರ ಬಂಧನ!

ಈ ದೂರಿನ ಮೇಲೆ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಆದರೆ, ಈ ಸಮಯದಲ್ಲಿ ಆಕೆ ಗರ್ಭಿಣಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಅತ್ಯಾಚಾರ ಪ್ರಕರಣ ಹೊರಬಂದಿದೆ

news18-kannada
Updated:April 8, 2021, 4:09 PM IST
Crime News: ಜಮ್ಮು-ಕಾಶ್ಮೀರದಲ್ಲಿ ಪೊಲೀಸ್​ ಸಿಬ್ಬಂದಿಯಿಂದಲೇ ಬಾಲಕಿ ಮೇಲೆ ಅತ್ಯಾಚಾರ; ನಾಲ್ವರ ಬಂಧನ!
ಪ್ರಾತಿನಿಧಿಕ ಚಿತ್ರ.
  • Share this:
ಜಮ್ಮು-ಕಾಶ್ಮೀರ (ಏಪ್ರಿಲ್ 08); ಜನರ ರಕ್ಷಣೆಗೆ ಮುಂದಾಗಬೇಕಾದ ಪೊಲೀಸ್​ ಸಿಬ್ಬಂದಿಯೇ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಂ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಕಣಿವೆ ರಾಜ್ಯದಲ್ಲಿ ದೊಡ್ಡ ಮಟ್ಟದ ಜನಾಕ್ರೋಶಕ್ಕೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೊಲೀಸ್​ ಇಲಾಖೆ ಸಿಬ್ಬಂದಿ ಸೇರಿದಂತೆ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ಖಾಜಿಗುಂಡ್ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಬೊನಿಗಾಮ್ ಖಾಜಿಗುಂಡ್‌ನಲ್ಲಿ ತನ್ನ ಮಗಳ ಮೇಲೆ ಮೂವರು ಅತ್ಯಾಚಾರವೆಸಗಿದ್ದಾರೆ. ಇದಕ್ಕೆ ಡ್ಯಾಮ್ಜೆನ್ ಪ್ರದೇಶದ ಮಹಿಳೆಯೊಬ್ಬರು ಸಹಾಯ ಮಾಡಿದ್ದಾರೆ" ಎಂದು ಲಿಖಿತ ದೂರು ನೀಡಿದ್ದರು.

ಈ ದೂರಿನ ಮೇಲೆ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಆದರೆ, ಈ ಸಮಯದಲ್ಲಿ ಆಕೆ ಗರ್ಭಿಣಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಅತ್ಯಾಚಾರ ಪ್ರಕರಣ ಹೊರಬಂದಿದೆ” ಎಂದು ಪೊಲೀಸ್ ಇಲಾಖೆಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೂರು ಸ್ವೀಕರಿಸಿದ ನಂತರ, ಪೊಲೀಸ್ ಠಾಣೆ ಖಾಜಿಗುಂಡ್‌ನಲ್ಲಿ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ. ತನಿಖೆ ನಡೆಸಿ ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆ ಪೂರೈಕೆಯಲ್ಲಿ ವಿಳಂಬ – ಸೀರಂ ಇನ್ಸ್​ಟಿಟ್ಯೂಟ್​ಗೆ AstraZeneca ನೋಟೀಸ್

ಆರೋಪಿಗಳನ್ನು ಬೀಬ್ರಾಡಾ ಪರಿಗಂ ನಿವಾಸಿ ಜಹೂರ್ ಅಹ್ಮದ್ ಮಿರ್, ಚೆಯಾನ್ ದೇವ್ಸರ್ ನಿವಾಸಿ ಈಜಾಜ್ ಅಹ್ಮದ್ ಶಾ, ಕಿಫಾಯತ್ ಅಹ್ಮದ್ ಮಲ್ಲಿಕ್ ಮತ್ತು ಶಬ್ರೂಜಾ ಎಂದು ಗುರುತಿಸಲಾಗಿದೆ. ಆದರೆ, ಇದರಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಯಾರು ಎಂದು ತಿಳಿಸಿಲ್ಲ.

ಅತ್ಯಾಚಾರ ಕೃತ್ಯ ನಡೆದಾಗ ಆರೋಪಿ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿ ಇರಲಿಲ್ಲ ಮತ್ತು ಕೃತ್ಯ ಪೊಲೀಸ್ ಆವರಣದೊಳಗೆ ನಡೆದಿಲ್ಲ. ಕ್ರಿಮಿನಲ್ ಮೊಕದ್ದಮೆಗಳ ಜೊತೆಗೆ, ಆತನ ವಿರುದ್ಧ ಇಲಾಖಾ ಕ್ರಮಗಳನ್ನು ಸಹ ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published by: MAshok Kumar
First published: April 8, 2021, 4:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories