ಅಪ್ರ‍ಾಪ್ತ ಬಾಲಕಿ ಅತ್ಯಾಚಾರ ಪ್ರಕರಣ - ಪೊಲೀಸ್ ಪೇದೆ ಸೇರಿ ನಾಲ್ವರ ಬಂಧನ

ಬಾಲಕಿಯನ್ನು ಜನವರಿ 14 ರಂದು ಜಾಜ್​​​​​​​ಪುರ ಜಿಲ್ಲೆಯ ಚಂಡಿಕೋಲ್​​​​​​​​ ಬಳಿ ಅಪಹರಿಸಿ ಅತ್ಯಾಚಾರ ಎಸೆಯಲಾಗಿತ್ತು. ನಂತರ ಬಾಲಕಿಯು ಜನವರಿ 18 ರಂದು ಬಾರಾಬತಿ ಗ್ರಾಮದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು

G Hareeshkumar | news18-kannada
Updated:January 25, 2020, 8:36 AM IST
ಅಪ್ರ‍ಾಪ್ತ ಬಾಲಕಿ ಅತ್ಯಾಚಾರ ಪ್ರಕರಣ - ಪೊಲೀಸ್ ಪೇದೆ ಸೇರಿ ನಾಲ್ವರ ಬಂಧನ
ಸಾಂರ್ಭಿಕ ಚಿತ್ರ
  • Share this:
ಜೈ​​ಪುರ(ಜ.25) : 16 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ 16 ವರ್ಷದ ದಲಿತ ಬಾಲಕಿಯನ್ನುಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್‌ಸ್ಟೆಬಲ್ ಸೇರಿದಂತೆ ಇನ್ನೂ ನಾಲ್ವರನ್ನು ಶುಕ್ರವಾರ ಬಂಧಿಸಲಾಗಿದೆ. ಬಂಧಿತರಲ್ಲಿ ಧರ್ಮ ಸಾಲಾ ಪೊಲೀಸ್​ ಠಾಣೆಯ ಪೇದೆ ಒಬ್ಬರು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯನ್ನು ಜನವರಿ 14 ರಂದು ಜಾಜ್​​​​​​​ಪುರ ಜಿಲ್ಲೆಯ ಚಂಡಿಕೋಲ್​​​​​​​​ ಬಳಿ ಅಪಹರಿಸಿ ಅತ್ಯಾಚಾರ ಎಸೆಯಲಾಗಿತ್ತು. ನಂತರ ಬಾಲಕಿಯು ಜನವರಿ 18 ರಂದು ಬಾರಾಬತಿ ಗ್ರಾಮದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ಬಗ್ಗೆ ಬಾಲಕಿಯ ತಂದೆ ಪೋಲಿಸ್​​ ಠಾಣೆಯಲ್ಲಿ ದೂರು ನೀಡಿದ್ದರು.

ಘಟನೆಗೆ  ಸಂಬಂಧಿಸಿ ಇಲ್ಲಿಯವರೆಗೆ ಒಟ್ಟು 8 ಜನರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಪ್ರಮುಖ ಆರೋಪಿ, ಆತನ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಜನವರಿ 20 ರಂದು ಬಂಧಿಸಲಾಗಿದೆ.

ಇದನ್ನೂ ಓದಿ: ಆಸ್ತಿ ವಿವಾದ: ಮೂರು ವರ್ಷದ ಮಗು, ನಾದಿನಿ ಮುಖಕ್ಕೆ ಆ್ಯಸಿಡ್​ ಎರಚಿದ ಕಿರಾತಕ

ಇಬ್ಬರು ಮಹಿಳೆಯರು ಮತ್ತು ಸಹೋದರರನ್ನು ಬಾಲಕಿಯನ್ನು ಅವರ ನಿವಾಸದಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ಈ ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
First published:January 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ