ನವದೆಹಲಿ(ಜು.01): ಬಹಳ ದಿನಗಳಿಂದ ಅಡುಗೆ ಎಣ್ಣೆ ಬೆಲೆ ಕೇಳಿ ಶಾಕ್ ಆಗಿದ್ದ ಮಹಿಳೆಯರಿಗೆ ಈಗ ಸಿಹಿಸುದ್ದಿ ಸಿಕ್ಕಿದೆ. ಶೀಘ್ರದಲ್ಲೇ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಚ್ಚಾ ತಾಳೆ ಎಣ್ಣೆಗೆ ವಿಧಿಸುವ ಸುಂಕವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬೆಲೆ ಏರಿಕೆಯ ಸಂದರ್ಭದಲ್ಲಿ ಸರ್ಕಾರದ ಈ ತೀರ್ಮಾನದಿಂದ ದೇಶದ ಜನರಿಗೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ. ಕೇಂದ್ರ ಸರ್ಕಾರ ಕ್ರೂಡ್ ಪಾಮ್ ಆಯಿಲ್(ಕಚ್ಚಾ ತಾಳೆ ಎಣ್ಣೆ)ಮೇಲಿನ ಸುಂಕವನ್ನು ಶೇಕಡಾ 5ರಷ್ಟು ಕಡಿತಗೊಳಿಸಿದೆ.
’ಕಳೆದೊಂದು ತಿಂಗಳಿನಿಂದ ಕಚ್ಚಾ ಖಾದ್ಯ ತೈಲದ ಅಂತರಾಷ್ಟ್ರೀಯ ಬೆಲೆ ಮತ್ತು ರಿಫೈನ್ಡ್ ಪಾಮ್ ಆಯಿಲ್ ಬೆಲೆಗಳು ಇಳಿಮುಖವಾಗುತ್ತಿವೆ. ದೇಶೀಯ ಸಂಸ್ಕರಿಸಿದ ತಾಳೆ ಎಣ್ಣೆ ಮತ್ತು ಕಚ್ಚಾ ಖಾದ್ಯ ತೈಲದ ಬೆಲೆಗಳು ಹೆಚ್ಚಾಗಿದ್ದವು. ಖಾದ್ಯ ತೈಲದ ಬೆಲೆ ಏರಿಕೆಯ ಬಗ್ಗೆ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕಚ್ಚಾ ಪಾಮ್ ಆಯಿಲ್ ಮೇಲಿನ ಸುಂಕವನ್ನು ಕಡಿಮೆ ಮಾಡಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:ನಟ ಜಗ್ಗೇಶ್ ಪುತ್ರನಿಗೆ ಆಕ್ಸಿಡೆಂಟ್; ಪ್ರಾಣಾಪಾಯದಿಂದ ಪಾರು
"ಹಣಕಾಸು ಸಚಿವಾಲಯವು ಅಧಿಸೂಚನೆ ಸಂಖ್ಯೆ 34/2021-ಜೂನ್ 29, 2021 ರ ಕಸ್ಟಮ್ಸ್ ಕಚ್ಚಾ ತಾಳೆ ಎಣ್ಣೆ ಮೇಲಿನ ಸುಂಕವನ್ನು 15% ರಿಂದ 10% ಕ್ಕೆ ಇಳಿಸಿದೆ. ಈ ಆದೇಶ 2021 ರ ಜೂನ್ 30ರಿಂದ ಸೆಪ್ಟೆಂಬರ್ 30, 2021 ರವರೆಗೆ ಜಾರಿಯಲ್ಲಿರುತ್ತದೆ"ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಸುಂಕ ಕಡಿತದ ನಂತರ, ಕಚ್ಚಾ ತಾಳೆ ಎಣ್ಣೆ ಮೇಲಿನ ತೆರಿಗೆ ದರ ಶೇ.30.25 ಆಗಿರುತ್ತದೆ. ಇದರಲ್ಲಿ ಹೆಚ್ಚುವರಿ ಕೃಷಿ ತೆರಿಗೆ ಶೇ. 17.5 ಮತ್ತು ಸಮಾಜ ಕಲ್ಯಾಣ ತೆರಿಗೆ ಶೇ.10ರಷ್ಟು ಇರುತ್ತದೆ. ಈ ಕಡಿತವು ಖಾದ್ಯ ತೈಲಗಳ ಚಿಲ್ಲರೆ ಬೆಲೆಗಳನ್ನು ತಗ್ಗಿಸುತ್ತದೆ. ಶುಲ್ಕಗಳಲ್ಲಿನ ಈ ಕಡಿತವು ಸೆಪ್ಟೆಂಬರ್ 30ರವರೆಗೆ ಅನ್ವಯಿಸುತ್ತದೆ.
ಸಂಸ್ಕರಿಸಿದ ತಾಳೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡಲು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (ಡಿಎಫ್‌ಪಿಡಿ) ಆರ್‌ಬಿಡಿ ಪಾಮೋಲಿನ್ ಆಮದಿನ ಮೇಲಿನ ನಿರ್ಬಂಧವನ್ನು ತೆಗೆದುಹಾಕುವಂತೆ ಶಿಫಾರಸ್ಸು ಮಾಡಿದೆ. ದೇಶೀಯ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಎಣ್ಣೆ ಲಭ್ಯವಾಗುವಂತೆ ಡಿಎಫ್‌ಪಿಡಿ ಹೇಳಿದೆ. ಜೊತೆಗೆ ಸಂಸ್ಕರಿಸಿದ ತಾಳೆ ಎಣ್ಣೆಯನ್ನು ಮುಕ್ತ ಸಾಮಾನ್ಯ ಆಮದುಗಳಲ್ಲಿ ಇರಿಸಿದೆ.
ಇದನ್ನೂ ಓದಿ:LPG Price Hike: ಗ್ರಾಹಕರಿಗೆ ಶಾಕಿಂಗ್ ನ್ಯೂಸ್; ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆ
“ 2021 ರ ಜೂನ್ 30 ರ ವಾಣಿಜ್ಯ ಇಲಾಖೆ ಅಧಿಸೂಚನೆ ಸಂಖ್ಯೆ 10 / 2015-2020 ರಿಫೈನ್ಡ್ ಬ್ಲೀಚ್ಡ್ ಡಿಯೋಡರೈಸ್ಡ್ (ಆರ್ಬಿಡಿ) ಪಾಮ್ ಆಯಿಲ್ ಮತ್ತು ಆರ್ಬಿಡಿ ಪಾಮೋಲಿನ್ಗಾಗಿ ಪರಿಷ್ಕೃತ ಆಮದು ನೀತಿಯನ್ನು ಬದಲಾಯಿಸಿದೆ. ಈ ನೀತಿಯು ಕೂಡಲೇ ಜಾರಿಯಾಗಲಿದ್ದು, ಡಿಸೆಂಬರ್ 31ರವರೆಗೆ ಅನ್ವಯವಾಗಲಿದೆ ಎಂದು ಕೇಂದ್ರವು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ