Cooking Oil Price: 11 ವರ್ಷದಲ್ಲೇ ಗರಿಷ್ಠ ಮಟ್ಟ ತಲುಪಿದ ಅಡುಗೆ ಎಣ್ಣೆ ಬೆಲೆ; ಕೇಂದ್ರ ಆರೋಗ್ಯ ಇಲಾಖೆ ಕಳವಳ!

ಅಧಿಕೃತ ಅಂಕಿಅಂಶಗಳ ಪ್ರಕಾರ, ಪ್ಯಾಕ್ ಮಾಡಿದ ಖಾದ್ಯ ತೈಲಗಳ (ಅಡುಗೆ ಎಣ್ಣೆ) ಮಾಸಿಕ ಸರಾಸರಿ ಚಿಲ್ಲರೆ ಬೆಲೆಗಳು ಈ ತಿಂಗಳು ಒಂದು ದಶಕದಲ್ಲಿ ಗರಿಷ್ಠ ಮಟ್ಟಕ್ಕೆ ಏರಿವೆ. ಇದರಲ್ಲಿ ನೆಲಗಡಲೆ(ಸೇಂಗಾ), ಸಾಸಿವೆ, ವನಸ್ಪತಿ, ಸೋಯಾ, ಸೂರ್ಯಕಾಂತಿ ಮತ್ತು ತಾಳೆ ಎಣ್ಣೆಗಳು ಸೇರಿವೆ ಎಂಬುದು ಉಲ್ಲೇಖಾರ್ಹ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ನವ ದೆಹಲಿ (ಮೇ 26); ಭಾರತದ ಮಟ್ಟಿಗೆ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆಗಳು ತೀರಾ ಇತ್ತೀಚೆಗೆ ನೂರರ ಗಡಿ ದಾಟಿ ಮುನ್ನುಗ್ಗುತ್ತಿವೆ. ಆದರೆ, 5 ವರ್ಷಗಳ ಹಿಂದೆ 80-90ರ ಆಸುಪಾಸಿನಲ್ಲಿದ್ದ ಅತೀ ಅಗತ್ಯವಾದ ಅಡುಗೆ ಎಣ್ಣೆ ಬೆಲೆ ಶತಕ ಬಾರಿಸಿ 150 ರೂ.ಗಳ ಗಡಿ ದಾಟಿ ಬಹಳ ದಿನಗಳೇ ಉರುಳಿವೆ. ಆದರೆ, ಅಡುಗೆ ಮನೆಯ ಒಳಗೆ ತಣ್ಣಗಾಗುತ್ತಿದ್ದ ಈ ವಿಚಾರ ಹೆಚ್ಚು ಸದ್ದು ಮಾಡಿದ್ದು ತೀರಾ ಕಡಿಮೆಯೇ. ಆದರೆ, ಇದೀಗ ಅಡುಗೆ ಎಣ್ಣೆ ಬೆಲೆ ತೀರಾ 170-180ರ ಗಡಿ ದಾಟಿ ದ್ವಿಶತ ಸಾಧನೆಯತ್ತ ಮುನ್ನುಗ್ಗುತ್ತಿದೆ. ಹೀಗಾಗಿ ಭಾರತೀಯ ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ. ಈಗಾಗಲೇ ಕೊರೋನಾ, ಲಾಕ್​ಡೌನ್ ನಡುವೆ ಸಿಲುಕಿ ಪೆಟ್ರೋಲ್-ಡೀಸೆಲ್​ ಹಾಗೂ ದಿನೋಪಯೋಗಿ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ನಲುಗಿರುವ ಭಾರತೀಯರು ಅಡುಗೆ ಎಣ್ಣೆ ಬೆಲೆ ಏರಿಕೆಯಿಂದ ಅಕ್ಷರಶಃ ಕಂಗಾಲಾಗಿದ್ದಾರೆ.  

    ಹೀಗಾಗಿ ಈಗ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಈ ಬಗ್ಗೆ ಸಮಾಲೋಚನೆ ಶುರು ಮಾಡಿದೆ. ಸಾಂಕ್ರಾಮಿಕ ಮತ್ತು ವಿವಿಧ ರಾಜ್ಯಗಳಲ್ಲಿನ ಲಾಕ್‌ಡೌನ್‌ಗಳ ಮಧ್ಯೆ ಅಡುಗೆ ಎಣ್ಣೆಗಳ ಬೆಲೆಯಲ್ಲಿನ ಹೆಚ್ಚಳವು ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದು, ಕೇಂದ್ರ ಆಹಾರ ಇಲಾಖೆ ‘ಇದು ಕಳವಳಕಾರಿ ಬೆಳವಣಿಗೆ’ ಎಂದು ಅಡುಗೆ ಎಣ್ಣೆ ಬೆಲೆ ಏರಿಕೆಗೆ ಆಕ್ಷೇಪ ವ್ಯಕ್ತಪಡಿಸಿದೆ.

    ಅಧಿಕೃತ ಅಂಕಿಅಂಶಗಳ ಪ್ರಕಾರ, ಪ್ಯಾಕ್ ಮಾಡಿದ ಖಾದ್ಯ ತೈಲಗಳ (ಅಡುಗೆ ಎಣ್ಣೆ) ಮಾಸಿಕ ಸರಾಸರಿ ಚಿಲ್ಲರೆ ಬೆಲೆಗಳು ಈ ತಿಂಗಳು ಒಂದು ದಶಕದಲ್ಲಿ ಗರಿಷ್ಠ ಮಟ್ಟಕ್ಕೆ ಏರಿವೆ. ಇದರಲ್ಲಿ ನೆಲಗಡಲೆ(ಸೇಂಗಾ), ಸಾಸಿವೆ, ವನಸ್ಪತಿ, ಸೋಯಾ, ಸೂರ್ಯಕಾಂತಿ ಮತ್ತು ತಾಳೆ ಎಣ್ಣೆಗಳು ಸೇರಿವೆ ಎಂಬುದು ಉಲ್ಲೇಖಾರ್ಹ.

    ಸೋಮವಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಎಲ್ಲಾ ಮಧ್ಯಸ್ಥಗಾರ ರೊಂದಿಗೆ ಸಭೆ ನಡೆಸಿ, ಖಾದ್ಯ ತೈಲಗಳ ಬೆಲೆಯನ್ನು ತಗ್ಗಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿದೆ.

    ಕಳೆದ ಕೆಲವು ತಿಂಗಳುಗಳಲ್ಲಿ ಖಾದ್ಯ ತೈಲದ ಅಂತರರಾಷ್ಟ್ರೀಯ ಬೆಲೆಗಳ ಏರಿಕೆಗೆ ಹೋಲಿಸಿದರೆ ಭಾರತದಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ತುಸು ಜಾಸ್ತಿ ಪ್ರಮಾಣದಲ್ಲಿ ಏರಿಕೆಯಾಗುವುದರ ಬಗ್ಗೆ ಕೇಂದ್ರವು ಕಳವಳ ವ್ಯಕ್ತಪಡಿಸಿದ್ದರಿಂದ ಸಭೆಯನ್ನು ನಡೆಸುವ ಅಗತ್ಯ ಬಿತ್ತು ಎಂದು ಇಲಾಖೆ ತಿಳಿಸಿದೆ. ದೇಶೀಯ ಖಾದ್ಯ ತೈಲ ಬೆಲೆಗಳು ಸಾಮಾನ್ಯವಾಗಿ ಅಂತರರಾಷ್ಟ್ರೀಯ ಬೆಲೆಗಳನ್ನೇ ಪ್ರತಿಬಿಂಬಿಸುತ್ತವೆ, ಏಕೆಂದರೆ ಭಾರತದ ಶೇಕಡಾ 60 ರಷ್ಟು ಬೇಡಿಕೆಯನ್ನು ಆಮದಿನ ಮೂಲಕ ಪೂರೈಸಲಾಗುತ್ತದೆ.

    ಬುರ್ಸಾ ಮಲೇಷ್ಯನ್ ವಿನಿಮಯ ಕೇಂದ್ರದಲ್ಲಿ ಕಚ್ಚಾ ತಾಳೆ ಎಣ್ಣೆಯ (ಪಾಮ್ ಆಯಿಲ್) ಬೆಲೆಯನ್ನು ಮೇ 25 ರಂದು ಪ್ರತಿ ಟನ್‌ಗೆ 3,890 ರಿಂಗಿಟ್ (ಮಲೇಷ್ಯಾ ಕರೆನ್ಸಿ) ಎಂದು ಉಲ್ಲೇಖಿಸಲಾಗಿದೆ. ಇದು ಒಂದು ವರ್ಷದ ಹಿಂದೆ 2,281 ಇತ್ತು. ಚಿಕಾಗೊ ಬೋರ್ಡ್ ಆಫ್ ಟ್ರೇಡ್ (ಸಿಬಿಒಟಿ)ನಲ್ಲಿನ ಸೋಯಾಬೀನ್ ಎಣ್ಣೆ ಬೆಲೆಗಳು ಸಹ ಹೆಚ್ಚಿನ ಮಟ್ಟದಲ್ಲಿವೆ. ಸಿಬಿಒಟಿಯಲ್ಲಿ, ಜುಲೈನಲ್ಲಿ ಸೋಯಾಬೀನ್ ಮುಕ್ತಾಯದ ಬೆಲೆ ಮೇ 24 ರಂದು ಪ್ರತಿ ಟನ್‌ಗೆ 559.51 ಡಾಲರ್‌‌ನಷ್ಟಾಗಿದೆ. ಕಳೆದ ವರ್ಷದ ಈ ಸಮಯದಲ್ಲಿ ಇದು 306.16 ಡಾಲರ್‌ನಷ್ಟಿತ್ತು. ಅಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ದುಬಾರಿ ಬೆಲೆ ಇದೆ.

    ಇದನ್ನೂ ಓದಿ: PM Cares: ಪಿಎಂ ಕೇರ್ಸ್​ ಹಣದಲ್ಲಿ ನೀಡಲಾದ 150 ವೆಂಟಿಲೇಟರ್​​ಗಳ ಪೈಕಿ 113 ನಿಶ್ಪ್ರಯೋಜಕ; ಬಾಂಬೆ ಹೈಕೋರ್ಟ್ ಕಿಡಿ!

    ರಾಜ್ಯ ನಾಗರಿಕ ಸರಬರಾಜು ಇಲಾಖೆಗಳು ಒದಗಿಸಿದ ಮಾಹಿತಿ ಮತ್ತು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಅಖಿಲ ಭಾರತ ಮಟ್ಟದಲ್ಲಿ ಆರು ಖಾದ್ಯ ತೈಲಗಳ ಚಿಲ್ಲರೆ ಬೆಲೆಗಳು ಜನವರಿ 2010 ಕ್ಕೆ ಹೋಲಿಸಿದರೆ ಗರಿಷ್ಠ ಮಟ್ಟವನ್ನು ತಲುಪಿವೆ ಎಂಬುದು ಗೊತ್ತಾಗುತ್ತದೆ.

    ಮಂಗಳವಾರದ ಅಂಕಿಅಂಶದ ಪ್ರಕಾರ, ಸಾಮಾನ್ಯ ಅಡುಗೆ ಎಣ್ಣೆಯಾದ ಸಾಸಿವೆ ಎಣ್ಣೆಯ (ಪ್ಯಾಕ್ಡ್) ಮಾಸಿಕ ಸರಾಸರಿ ಚಿಲ್ಲರೆ ಬೆಲೆ ಈ ವರ್ಷದ ಮೇ ತಿಂಗಳಲ್ಲಿ ಒಂದು ಕೆ.ಜಿ.ಗೆ 164.44 ರೂ.ಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಇದು ಕಳೆದ ವರ್ಷ ಮೇ ತಿಂಗಳಿಮ ದರಕ್ಕಿಂತ (ಆಗ ರೂ 118.25) ಶೇ 39ರಷ್ಟು ಹೆಚ್ಚಾಗಿದೆ.

    ಇದನ್ನೂ ಓದಿ: Corona 2nd Wave: ಕೋವಿಡ್​ ಎರಡನೇ ಅಲೆಯಲ್ಲಿ ತಂದೆ-ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳ ಸಂಖ್ಯೆ ಎಷ್ಟು ಗೊತ್ತಾ?

    ಈ ವರ್ಷದ ಏಪ್ರಿಲ್‌ನಲ್ಲಿ ಖಾದ್ಯ ತೈಲಗಳ ಸರಾಸರಿ ಬೆಲೆ ಕೆ.ಜಿ.ಗೆ 155.39 ರೂ. ಇದ್ದರೆ, ಮೇ 2010 ರಲ್ಲಿ ಅದು ಕೆ.ಜಿ.ಗೆ 63.05 ರೂ. ಇತ್ತು. ಅಂದರೆ ಎರಡೂವರೆ ಪಟ್ಟು ಏರಿಕೆಯಾಗಿದೆ. ತಾಳೆ ಎಣ್ಣೆ (ಪಾಮ್ ಆಯಿಲ್) ಭಾರತೀಯ ಮನೆಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತದೆ, ಇದರ ರೇಟು ಇನ್ನೂ ಜೋರಾಗಿ ಏರಿಕೆ ಕಂಡಿದೆ. ಪಾಮ್ ಆಯಿಲ್ ಮಾಸಿಕ ಸರಾಸರಿ ಚಿಲ್ಲರೆ ಬೆಲೆ ಈ ವರ್ಷದ ಮೇ ತಿಂಗಳಿಗೆ ಪ್ರತಿ ಕೆ.ಜಿ.ಗೆ 131.69 ರೂ.ಗಳಷ್ಟಿದೆ. ಇದು ಕಳೆದ 11 ವರ್ಷಗಳಲ್ಲಿ ಅತಿ ಹೆಚ್ಚು ಮತ್ತು ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ ಶೇಕಡಾ 49 ರಷ್ಟು ಹೆಚ್ಚಾಗಿದೆ. ಈಗ ಪ್ರತಿ ಕೆ.ಜಿ.ಗೆ 87.27 ರೂ. ದರವಿದೆ. 11 ವರ್ಷಗಳ ಹಿಂದೆ 2010 ರ ಏಪ್ರಿಲ್‌ನಲ್ಲಿ ತಾಳೆ ಎಣ್ಣೆಯ ಮಾಸಿಕ ಚಿಲ್ಲರೆ ಬೆಲೆಯು ದಾಖಲಾಗಿದ್ದು, ಪ್ರತಿ ಕೆ.ಜಿ.ಗೆ 49.13 ರೂ. ಇತ್ತು. ಅಂದರೆ ಈಗ ಡಬಲ್ ಆಗಿದೆ.

    ನಾಲ್ಕು ಇತರ ಖಾದ್ಯ ತೈಲಗಳ ಮಾಸಿಕ ಸರಾಸರಿ ಚಿಲ್ಲರೆ ಬೆಲೆಗಳು – ನೆಲಗಡಲೆ (ಪ್ರತಿ ಕೆ.ಜಿ.ಗೆ 175.55 ರೂ.), ವನಸ್ಪತಿ (ಕೆ.ಜಿ.ಗೆ 128.7 ರೂ.), ಸೋಯಾ (ಕೆ.ಜಿ.ಗೆ 148.27 ರೂ.) ಮತ್ತು ಸೂರ್ಯಕಾಂತಿ (ಕೆ.ಜಿ.ಗೆ 169.54 ರೂ.) ಇವೆ. ಮೇ ತಿಂಗಳಲ್ಲಿ ಈ ದರಗಳು ಗರಿಷ್ಠ ಮಟ್ಟವನ್ನು ತಲುಪಿವೆ. ಕಳೆದ ವರ್ಷಕ್ಕಿಂತ ಶೇಕಡಾ 19-52 ರ ವ್ಯಾಪ್ತಿಯಲ್ಲಿ ಹೆಚ್ಚಳವಾಗಿದೆ.

    2019-20 ತೈಲ ವರ್ಷದಲ್ಲಿ (ನವೆಂಬರ್-ಅಕ್ಟೋಬರ್), ಭಾರತದ ದೇಶೀಯ ಸಸ್ಯಜನ್ಯ ತೈಲ ಉತ್ಪಾದನೆಯು ಕೇವಲ 8.5 ದಶಲಕ್ಷ ಟನ್‌ಗಳಷ್ಟಿದೆ ಎಂದು ಅಂದಾಜಿಸಲಾಗಿದ್ದು, ಆಮದು ಪ್ರಮಾಣ 13.5 ಮೆ.ಟನ್ ಇದೆ. ಆಮದು ಮಾಡಿಕೊಳ್ಳುವ ತೈಲಗಳಲ್ಲಿ ತಾಳೆ (7 ಮೆ.ಟನ್), ಸೋಯಾಬೀನ್ (3.5 ಮೆ.ಟನ್) ಮತ್ತು ಸೂರ್ಯಕಾಂತಿ (2.5 ಮೆ.ಟನ್) ಸೇರಿವೆ.
    Published by:MAshok Kumar
    First published: