ಪಾಟ್ನಾ: ಮುಂಬರುವ 2024 ರ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರ (Bihar Chief Minister Nitish Kumar)ಅವರು ಗೆಲುವು ಸಾಧಿಸಲಿದ್ದಾರೆ ಎಂದು ತೋರಿಸುವ ಸಲುವಾಗಿ ಕೆಲವು ಪೋಸ್ಟರ್ಗಳನ್ನು ಆರ್ಜೆಡಿ ನಾಯಕಿ ರಾಬ್ರಿ ದೇವಿ ( RJD leader Rabri Devi) ಅವರ ನಿವಾಸ ಮತ್ತು ಪಾಟ್ನಾದ (Patna) ರಾಜ್ಯ ಕಚೇರಿಯ ಹೊರಗೆ ಹಾಕಲಾಗಿದೆ. 2024ರ ಚುನಾವಣೆಯಲ್ಲಿ ಬಿಜೆಪಿ (BJP) ಸೋಲುತ್ತದೆ ಮತ್ತು ಮಹಾಮೈತ್ರಿಕೂಟ ಗೆಲುವನ್ನು ಸಾಧಿಸುತ್ತದೆ ಎಂದು ತಿಳಿಸಲು ಎರಡು ಹಿಂದೂ ಪುರಾಣ ಕಥೆಗಳಾದ ರಾಮಾಯಣ (Ramayana) ಮತ್ತು ಮಹಾಭಾರತದ (Mahabharata) ಫೋಟೋಗಳನ್ನು ಪೋಸ್ಟರ್ನಲ್ಲಿ ಹಾಕಲಾಗಿದೆ. ನಿತೀಶ್ ಕುಮಾರ್ ಅವರನ್ನು ಭಗವಾನ್ ರಾಮ/ಕೃಷ್ಣ (Rama/Krishna) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ರಾವಣ/ಕಂಸನಿಗೆ (Ravana/Kamsa) ಹೋಲಿಸಲಾಗಿದೆ.
2024ರಲ್ಲಿ ಮೋದಿ ಸೋಲಿಸುವುದಾಗಿ ಪೋಸ್ಟರ್
ಪೋಸ್ಟರ್ನ ಮೊದಲ ಎರಡು ಭಾಗಗಳಲ್ಲಿ ರಾಮಾಯಣದಲ್ಲಿ ರಾಮನು ರಾವಣನನ್ನು ಹೇಗೆ ಸೋಲಿಸಿದನು ಮತ್ತು ಮಹಾಭಾರತದಲ್ಲಿ ಕೃಷ್ಣನು ಕಂಸನನ್ನು ಹೇಗೆ ಸೋಲಿಸಿದನು ಎಂಬುದನ್ನು ವಿವರಿಸಲಾಗಿದೆ. ಪೋಸ್ಟರ್ನ ಕೊನೆಯ ಭಾಗದಲ್ಲಿ 2024 ರ ಲೋಕಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟವು ಪಿಎಂ ಮೋದಿಯನ್ನು ಸೋಲಿಸುವುದನ್ನು ತೋರಿಸಲಾಗಿದೆ.
ಇದರ ಜೊತೆಗೆ ಪೋಸ್ಟರ್ನಲ್ಲಿ ಛಾಪ್ರಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂನಂ ರೈ ಅವರ ಫೋಟೋದೊಂದಿಗೆ ಮಹಾಘಟಬಂಧನ್ ಜಿಂದಾಬಾದ್ ಘೋಷಣೆಗಳನ್ನು ಬರೆಯಲಾಗಿದೆ
ಮೋದಿ ಅವರು 2034 ರವರೆಗೆ ಅಧಿಕಾರದಲ್ಲಿರುತ್ತಾರೆ
ಮತ್ತೊಂದೆಡೆ ಬಿಜೆಪಿ ವಕ್ತಾರ ನವಲ್ ಕಿಶೋರ್ ಯಾದವ್ ಅವರು, ಮಾಯಾವತಿ, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಮತ್ತು ನವೀನ್ ಪಟ್ನಾಯಕ್ ಎಲ್ಲ ವಿರೋಧ ಪಕ್ಷದ ನಾಯಕರಲ್ಲಿ ನಿತೀಶ್ ಕುಮಾರ್ ಹೊಸಬರು. ಪ್ರಧಾನಿ ನರೇಂದ್ರ ಮೋದಿ ಅವರು 2034 ರವರೆಗೆ ಅಧಿಕಾರದಲ್ಲಿ ಇರುತ್ತಾರೆ. ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ತಯಾರಿಯಲ್ಲಿ ಆರ್ಜೆಡಿ
ಈ ಪೋಸ್ಟರ್ ಕುರಿತಂತೆ ಪ್ರತಿಕ್ರಿಯಿಸಿರುವ ಆರ್ಜೆಡಿ ರಾಷ್ಟ್ರೀಯ ವಕ್ತಾರ ಮೃತುಂಜಯ್ ತಿವಾರಿ, ಈ ಪೋಸ್ಟರ್ಗಳನ್ನು ಯಾರು ಹಾಕಿದ್ದಾರೆಂದು ನಮಗೆ ತಿಳಿದಿಲ್ಲ. ಇವುಗಳನ್ನು ಆರ್ಜೆಡಿ ಅಧಿಕೃತಗೊಳಿಸಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ತಯಾರಿ ಬಿಹಾರದಿಂದ ಪ್ರಾರಂಭವಾಗಿದ್ದು, ಎಲ್ಲಾ ವಿರೋಧ ಪಕ್ಷಗಳು ಒಂದಾಗಿವೆ. ಬಿಜೆಪಿ, ಬಡವರು, ಯುವಕರು ಮತ್ತು ರೈತರ ವಿರುದ್ಧದ ಪಕ್ಷ, ನಮ್ಮದು ಅದರ ವಿರುದ್ಧದ ಹೋರಾಟವಾಗಿದೆ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಯಾದವ್ ಅವರು "ರಾಮಚರಿತಮಾನಸ್" ಕುರಿತು ನೀಡಿದ್ದ ಹೇಳಿಕೆಯಿಂದ ಭಾರೀ ಚರ್ಚೆಗೆ ಕಾರಣವಾಗಿತ್ತು. ಮನುಸ್ಮೃತಿ, ರಾಮಚರಿತಮಾನಸ್ ಹಾಗೂ ಹಿಂದೂ ಮುಖಂಡ ಗೋಳ್ವಲ್ಕರ್ ಅವರ ‘ಬಂಚ್ ಆಫ್ ಥಾಟ್ಸ್’ ಪುಸ್ತಕ ಸಮಾಜದಲ್ಲಿ ದ್ವೇಷ ಸೃಷ್ಟಿಸುತ್ತವೆ ಎಂದು ಹೇಳಿ ವಿವಾದಕ್ಕೆ ಸಿಲುಕಿಕೊಂಡಿದ್ದರು.
ಇದನ್ನೂ ಓದಿ: Bihar Politics: ಬಿಜೆಪಿಯಿಂದ ದೂರ ಸರಿದಿದ್ದೇಕೆ ನಿತೀಶ್ ಕುಮಾರ್, ಬಯಲಾಯ್ತು ಶಾಕಿಂಗ್ ನಡೆ ಹಿಂದಿನ ಸತ್ಯ!
ಸಚಿವರ ನಾಲಿಗೆ ಕತ್ತರಿಸಿದವರಿಗೆ 10 ಕೋಟಿ ಬಹುಮಾನ ಘೋಷಣೆ
ನಂತರ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ತಕ್ಷಣವೇ ಚಂದ್ರಶೇಖರ ಯಾದವ್ ಅವರನ್ನು ವಜಾಗೊಳಿಸಬೇಕು. ಇಂತಹ ಅಜ್ಞಾನ ವ್ಯಕ್ತಿ ಶಿಕ್ಷಣ ಸಚಿವನಾಗಿ ಮುಂದುವರಿಯಲು ಹಕ್ಕು ಇಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ಚೌಬೆ ಕಿಡಿಕಾರಿದ್ದರು. ಅಲ್ಲದೇ ಅಯೋಧ್ಯೆ ಶ್ರೀಗಳಾದ ಜಗದ್ಗುರು ಪರಮಹಂಸ ಆಚಾರ್ಯ ಅವರು, ತಮ್ಮ ಹೇಳಿಕೆ ಬಗ್ಗೆ ವಾರದಲ್ಲಿ ಸಚಿವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಅವರ ನಾಲಿಗೆ ಕತ್ತರಿಸಿ ತಂದವರಿಗೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ