ಗೋ ಮಾಂಸ, ಹಂದಿ ಮಾಂಸ ತಿನ್ನುತ್ತಿದ್ದ ನೆಹರೂ 'ಪಂಡಿತ್' ಅಲ್ಲ: ಅಹುಜಾ
Updated:August 11, 2018, 7:31 PM IST
Updated: August 11, 2018, 7:31 PM IST
ನ್ಯೂಸ್ 18 ಕನ್ನಡ
ನವದೆಹಲಿ(ಆ.11): ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಚರ್ಚೆಯಲ್ಲಿರುವ ಬಿಜೆಪಿ ಶಾಸಕ ಜ್ಞಾನದೇವ ಅಹುಜಾ ಇದೀಗ ದೇಶದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರ್ಲಾಲ್ ನೆಹರೂ ವಿರುದ್ಧ ಕಿಡಿ ಕಾರುತ್ತಾ ಅವರು 'ಬೀಫ್'(ಹಸುವಿನ ಮಾಂಸ) ಹಾಗೂ 'ಪೋರ್ಕ್'(ಹಂದಿ ಮಾಂಸ) ಸೇವಿಸುತ್ತಿದ್ದರು. ಈ ಕಾರಣದಿಂದಾಗಿ ಅವರು ಪಂಡಿತ್ ಅಲ್ಲ.
ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಶುಕ್ರವಾರದಂದು ಮಾತನಾಡಿದ ಅಹುಜಾರವರು "ನೆಹರೂ ಪಂಡಿತ್ ಆಗಿರಲು ಸಾಧ್ಯವಿಲ್ಲ. ಅವರು ಬೀಫ್ ಹಾಘೂ ಪೋರ್ಕ್ ತಿನ್ನುತ್ತಿದ್ದರು. ಕಾಂಗ್ರೆಸ್ ಪಕ್ಷವೇ ಅವರ ಹೆಸರಿನೆದುರು ಪಂಡಿತ್ ಎಂದು ಸೇರಿದ್ದರು" ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್ನ ಪ್ರಾದೇಶಿಕ ಅಧ್ಯಕ್ಷ ಸಚಿನ್ ಪಾಯ್ಲೆಟ್ ರಾಹುಲ್ ಗಾಂಧಿಯವರು ದೇವಸ್ಥಾನಕ್ಕೆ ಹೋಗುವುದನ್ನು ತನ್ನ ಅಜ್ಜಿ ಇಂದಿರಾ ಗಾಂಧಿಯವರಿಂದ ಕಲಿತಿದ್ದರು" ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತಿರುಗೇಟಾಗಿ ಅಹುಜಾರವರು ಈ ವಿವಾದಾತ್ಮಕ ಹೆಳಿಕೆ ನೀಡಿದ್ದಾರೆ.ಇಷ್ಟೇ ಅಲ್ಲದೇ ಅಹುಜಾರವರು ಕಾಂಗ್ರೆಸ್ ವಿರುದ್ಧ ಜಾತಿ ರಾಜಕೀಯ ನಡೆಸಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಆರೋಪ ಮಾಡಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಯಾವತ್ತೂ ಇಂದಿರಾ ಗಾಂಧಿಯೊಂದಿಗೆ ದೇವಸ್ಥಾನಕ್ಕೆ ತೆರಳಿರಲಿಲ್ಲ. ಒಂದು ವೇಳೆ ಅವರು ಹೇಳಿದ ವಿಚಾರ ತಪ್ಪು ಎಂದು ಸಾಬೀತಾದರೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ.
ಅಹುಜಾರವರು ಈ ಹಿಂದೆಯೂ ಗೋ ಹತ್ಯೆ, ಲವ್ ಜಿಹಾದ್ ಸೇರಿದಂತೆ ಇನ್ನೂ ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿ ಚರ್ಚೆಗೀಡಾಗಿದ್ದರು ಎಂಬುವುದು ಗಮನಾರ್ಹ.

Loading...