• Home
  • »
  • News
  • »
  • national-international
  • »
  • Controversial Question: ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಬೇಕೇ? ಪರೀಕ್ಷೆಯಲ್ಲಿತ್ತು ಈ ಪ್ರಶ್ನೆ

Controversial Question: ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಬೇಕೇ? ಪರೀಕ್ಷೆಯಲ್ಲಿತ್ತು ಈ ಪ್ರಶ್ನೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮಧ್ಯಪ್ರದೇಶ ಲೋಕಸೇವಾ ಆಯೋಗದ ರಾಜ್ಯ ಸೇವೆ ಮತ್ತು ಅರಣ್ಯ ಸೇವೆಯ ಪೂರ್ವಭಾವಿ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಯೊಂದು ವಿವಾದಕ್ಕೆ ಕಾರಣವಾಗಿದೆ. ಪೂರ್ವಭಾವಿ ಪರೀಕ್ಷೆಯಲ್ಲಿ ವಿವಾದಕ್ಕೆ ಎಡೆಮಾಡಿಕೊಡುವಂತ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ಪ್ರಶ್ನೆ ಪತ್ರಿಕೆಯಲ್ಲಿದ್ದ ಪ್ರಶ್ನೆ ಏನೆಂದರೆ, ‘ಭಾರತವು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಬೇಕೇ’ ಎಂಬುವುದಾಗಿತ್ತು.

ಮುಂದೆ ಓದಿ ...
  • Share this:

ಮಧ್ಯಪ್ರದೇಶ ಲೋಕಸೇವಾ ಆಯೋಗದ (ಎಂಪಿಪಿಎಸ್‌ಸಿ) ಪೂರ್ವಭಾವಿ ಪರೀಕ್ಷೆಯಲ್ಲಿ ಕಾಶ್ಮೀರದ (Kashmir) ಕುರಿತು ಕೇಳಿದ ಪ್ರಶ್ನೆಯು ಹೊಸ ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ಪ್ರಶ್ನೆ ಪತ್ರಿಕೆ ತಯಾರಿಸಿದ ಅಧಿಕಾರಿಗಳನ್ನು ಸಹ ಡಿಬಾರ್ ಮಾಡಲಾಗಿದೆ. ವಿವಾದಕ್ಕೆ (Controversy) ಕಾರಣವಾದ ಆ ಪ್ರಶ್ನೆ ಯಾವುದು? ವಿವಾದ ಏನು ಎಂಬುದರ ಹೆಚ್ಚಿನ ಮಾಹಿತಿ ಇಲ್ಲಿದೆ. ಹೌದು, ಮಧ್ಯಪ್ರದೇಶ ಲೋಕಸೇವಾ ಆಯೋಗದ ರಾಜ್ಯ ಸೇವೆ ಮತ್ತು ಅರಣ್ಯ ಸೇವೆಯ ಪೂರ್ವಭಾವಿ ಪರೀಕ್ಷೆಯಲ್ಲಿ (Exam) ಕೇಳಿದ ಪ್ರಶ್ನೆಯೊಂದು ವಿವಾದಕ್ಕೆ ಕಾರಣವಾಗಿದೆ. ಪೂರ್ವಭಾವಿ ಪರೀಕ್ಷೆಯಲ್ಲಿ ವಿವಾದಕ್ಕೆ ಎಡೆಮಾಡಿಕೊಡುವಂತ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ಪ್ರಶ್ನೆ ಪತ್ರಿಕೆಯಲ್ಲಿದ್ದ ಪ್ರಶ್ನೆ ಏನೆಂದರೆ, ‘ಭಾರತವು (India) ಕಾಶ್ಮೀರವನ್ನು ಪಾಕಿಸ್ತಾನಕ್ಕೆ (Pakistan) ನೀಡಬೇಕೇ’ ಎಂಬುವುದಾಗಿತ್ತು.


ಈ ಪ್ರಶ್ನೆಯನ್ನು ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳಿಗೆ ಕೇಳಲಾಗಿತ್ತು. ಈ ಘಟನೆ ಬೆಳಕಿಗೆ ಬಂದ ನಂತರ, ಪ್ರಶ್ನೆ ಪತ್ರಿಕೆ ಹೊಂದಿಸುವಲ್ಲಿ ಭಾಗಿಯಾಗಿದ್ದ ಆಯೋಗದ ಇಬ್ಬರು ಅಧಿಕಾರಿಗಳನ್ನು ಡಿಬಾರ್ ಮಾಡಿ ಕ್ರಮ ಕೈಗೊಳ್ಳಲಾಗಿದೆ. ಜೂನ್ 19 ಭಾನುವಾರದಂದು ನಡೆದ ಎಂಪಿಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಈ ಪ್ರಶ್ನೆಯನ್ನು ಪತ್ರಿಕೆಯಲ್ಲಿ ಕೇಳಲಾಗಿತ್ತು.


ಪ್ರಶ್ನೆ ಮಾದರಿ ಹೇಗಿತ್ತು ?
ಬಹುಆಯ್ಕೆ ಪ್ರಶ್ನೆ ಇದಾಗಿದ್ದು, ಕೆಳಗೆ ಮತ್ತೆರೆಡು ವಾದಗಳನ್ನು ಸಹ ನೀಡಲಾಗಿತ್ತು. ಪರೀಕ್ಷಾರ್ಥಿಗಳಿಗೆ ಕೇಳಲಾದ ಪ್ರಶ್ನೆಗಳಿಗೆ ನಾಲ್ಕು ಉತ್ತರ ಆಯ್ಕೆಗಳ ನಂತರ ಎರಡು ವಾದಗಳಿದ್ದವು.


ಪ್ರಶ್ನೆ 1) ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಲು ಭಾರತ ನಿರ್ಧರಿಸಬೇಕೇ?
ಆಯ್ಕೆ 1: ಹೌದು, ಇದು ಭಾರತಕ್ಕೆ ಬಹಳಷ್ಟು ಹಣವನ್ನು ಉಳಿಸುತ್ತದೆ
ಆಯ್ಕೆ 2: ಇಲ್ಲ, ಅಂತಹ ನಿರ್ಧಾರವು ಇದೇ ರೀತಿಯ ಬೇಡಿಕೆಗಳ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ.


ಇದನ್ನೂ ಓದಿ: Birthday Boy Death: ಪಬ್ಲಿಕ್​ನಲ್ಲಿ ರೊಮ್ಯಾನ್ಸ್​ ಮಾಡ್ತಿದ್ದ ಜೋಡಿ! ದಿಟ್ಟಿಸಿ ನೋಡಿದ್ದಕ್ಕೆ ಯುವಕನ ಕೊಲೆ


ಈ ಮೇಲಿನವು ಪ್ರಶ್ನೆ ಮತ್ತು ವಾದಗಳಾಗಿದ್ದವು. ಇದನ್ನು ಗಮನದಲ್ಲಿಟ್ಟುಕೊಂಡು ಕೆಳಗೆ ಉತ್ತರಗಳನ್ನು ಸಿದ್ಧಪಡಿಸಲಾಗಿತ್ತು. ಉತ್ತರುಗಳು ಹೀಗಿದ್ದವು,


ನಾಲ್ಕು ಉತ್ತರ ಆಯ್ಕೆಗಳೆಂದರೆ
(ಎ) ಆಯ್ಕೆ 1 ಬಲವಾಗಿದೆ
(ಬಿ) ಆಯ್ಕೆ 2 ಪ್ರಬಲವಾಗಿದೆ
(ಸಿ) ಆಯ್ಕೆ  1 ಮತ್ತು 2 ಎರಡೂ ಪ್ರಬಲವಾಗಿವೆ
(ಡಿ) ಆಯ್ಕೆ  1 ಮತ್ತು 2 ಎರಡೂ ಪ್ರಬಲವಾಗಿಲ್ಲ.


ಈ ಆಯ್ಕೆಗಳಲ್ಲಿ ಒಂದನ್ನು ಆರಿಸಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಲು ಭಾರತ ನಿರ್ಧರಿಸಬೇಕೇ? ಎಂಬ ಪ್ರಶ್ನೆಗೆ ಉತ್ತರವನ್ನು ಅಭ್ಯರ್ಥಿಗಳು ನೀಡಬೇಕಿತ್ತು.


ಪ್ರಶ್ನೆ ಪತ್ರಿಕೆ ಸಿದ್ಧಮಾಡಿದ್ದ ಅಧಿಕಾರಿಗಳು ಡಿಬಾರ್
ಈ ವಿವಾದಾತ್ಮಕ ಪ್ರಶ್ನೆಯ ವಿಷಯ ಬೆಳಕಿಗೆ ಬಂದಾಗ, ಮಧ್ಯಪ್ರದೇಶ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ, “ಎಂಪಿಪಿಎಸ್‌ಸಿ ಪರೀಕ್ಷೆಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ವಿವಾದಿತ ಪ್ರಶ್ನೆಯನ್ನು ಕೇಳುವ ಸಂದರ್ಭ ಆಕ್ಷೇಪಾರ್ಹವಾಗಿದೆ. ವಿವಾದಾತ್ಮಕ ಪ್ರಶ್ನೆಯನ್ನು ಕೇಳಿದ ಪೇಪರ್ ಸೆಟ್ಟರ್‌ಗಳು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದವರು. ಭವಿಷ್ಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದರಿಂದ ಅವರನ್ನು ಪಿಎಸ್‌ಸಿ ಡಿಬಾರ್ ಮಾಡಿದೆ ಎಂದಿದ್ದಾರೆ.


ಲೋಕಸೇವಾ ಆಯೋಗವು ನಿರ್ದಿಷ್ಟ ಎಂಪಿಪಿಎಸ್‌ಸಿ ಪೇಪರ್ ಸೆಟ್ಟರ್‌ಗೆ ನೋಟಿಸ್ ಕಳುಹಿಸುವ ಮೂಲಕ ಅವರ ಎಲ್ಲಾ ಕೆಲಸವನ್ನು ನಿಷೇಧಿಸಿದೆ.ಈ ಮೂಲಕ
ಪೇಪರ್ ಸೆಟ್ ಮಾಡಿದವರನ್ನು ಡಿಬಾರ್ ಮಾಡುವುದರ ಜೊತೆ ಅವರಿಗೆ ಎಲ್ಲಿಯೂ ಕೆಲಸ ನೀಡಬಾರದು ಎಂದು ಘೋಷಿಸಿದೆ. ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಪಿಎಸ್ ಸಿ ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ ಎಂದರು.


ಇದನ್ನೂ ಓದಿ: Sarayu River: ಸರಯೂ ನದಿಯಲ್ಲಿ ಹೆಂಡತಿಗೆ ಕಿಸ್ ಮಾಡಿದ ಗಂಡನಿಗೆ ಥಳಿತ


ಪತ್ರದಲ್ಲಿ, ಆಯೋಗವು ಮೇಲಿನ ಪ್ರಶ್ನೆಯನ್ನು ಉಲ್ಲೇಖಿಸಿ "ಸೆಟ್ ಎ ಯ ಪ್ರಶ್ನೆ ಸಂಖ್ಯೆ. 48, ಸೆಟ್ ಬಿಯ ಪ್ರಶ್ನೆ ಸಂಖ್ಯೆ. 11, ಸೆಟ್ ಸಿ ಯ ಪ್ರಶ್ನೆ ಸಂಖ್ಯೆ. 36, ಮತ್ತು ಸೆಟ್ ಡಿನ ಪ್ರಶ್ನೆ ಸಂಖ್ಯೆ. 31" ಈ ಪ್ರಶ್ನೆಗಳು ಅರ್ಹವಾಗಿಲ್ಲ ವಿವಾದಾತ್ಮಕವಾಗಿದೆ ಎಂದು ತಿಳಿಸಿದೆ.
ಪೇಪರ್ ಸೆಟ್ಟರ್ "ವೇಳಾಪಟ್ಟಿಯನ್ನು ಅನುಸರಿಸಿಲ್ಲ" ಎಂದು ಸಹ ಹೇಳಿದೆ.
"ಆದ್ದರಿಂದ, ಇದನ್ನು ದುರ್ನಡತೆಯ ವರ್ಗದಲ್ಲಿ ಪರಿಗಣಿಸಿ, ಭವಿಷ್ಯದಲ್ಲಿ ಆಯೋಗದ ಎಲ್ಲಾ ಕೆಲಸಗಳಿಂದ ನಿಮ್ಮನ್ನು ಡಿಬಾರ್ ಮಾಡಿದೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

Published by:Ashwini Prabhu
First published: