ಶ್ರೀಲಂಕಾದಲ್ಲಿ ಮುಂದುವರೆದ ಕೋಮು ಹಿಂಸಾಚಾರ; ದೇಶದಾದ್ಯಂತ ಅನಿರ್ದಿಷ್ಟಾವಧಿ ಕರ್ಫ್ಯೂ

“ನೂರಾರು ಸಂಖ್ಯೆ ಉದ್ರಿಕ್ತರ ಗುಂಪು ಭಾನುವಾರ ಮತ್ತು ಸೋಮವಾರ ಸತತವಾಗಿ ಮುಸ್ಲಿಮರ ಮನೆ ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆದಸಿ ಧ್ವಂಸಗೊಳಿಸುತ್ತಿದ್ದಾರೆ. ಆದರೆ, ಪೊಲೀಸರು ಹಾಗೂ ಸೇನೆ ಇದನ್ನು ಮೂಕಪ್ರೇಕ್ಷಕರಂತೆ ನಿಂತು ನೋಡುತ್ತಿದ್ದಾರೆ. ಅಲ್ಲದೆ ಸುರಕ್ಷತೆ ಹೆಸರಿನಲ್ಲಿ ನಮ್ಮನ್ನು ಮನೆಯಿಂದಲೂ ಹೊರಬರಲು ಬಿಡುತ್ತಿಲ್ಲ” ಎಂದು ಸ್ಥಳೀಯ ಮುಸ್ಲಿಮರು ಆರೋಪಿಸಿದ್ದಾರೆ.

ಉದ್ರಿಕ್ತರ ದಾಳಿಗೆ ತುತ್ತಾಗಿರುವ ಅಬ್ರಾರ್ ಮಸೀದಿಯ ಮುಂದೆ ನಿಂತಿರುವ ಮುಸ್ಲಿಂ ವ್ಯಕ್ತಿ.

ಉದ್ರಿಕ್ತರ ದಾಳಿಗೆ ತುತ್ತಾಗಿರುವ ಅಬ್ರಾರ್ ಮಸೀದಿಯ ಮುಂದೆ ನಿಂತಿರುವ ಮುಸ್ಲಿಂ ವ್ಯಕ್ತಿ.

  • News18
  • Last Updated :
  • Share this:
ಕೊಲಂಬೊ (ಮೇ.14) : ಈಸ್ಟರ್​ ಭಾನುವಾರದ ಆತ್ಮಹತ್ಯಾ ಬಾಂಬ್​ ದಾಳಿಯ ನಂತರ ಶ್ರೀಲಂಕಾದಾದ್ಯಂತ ಕೋಮು ಹಿಂಸಾಚಾರ ಭುಗಿಲೆದ್ದಿದ್ದು,  ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಅವರ ಮಸೀದಿ ಹಾಗೂ ಅಂಗಡಿ ಮುಂಗಟ್ಟುಗಳನ್ನು ಧ್ವಂಸ ಮಾಡಲಾಗುತ್ತಿದೆ. ಪರಿಣಾಮ ಸೋಮವಾರದಿಂದ ಪರಿಸ್ಥಿತಿ ಕೈಮೀರಿ ಹೋಗಿದ್ದು ಅಲ್ಲಿನ ಸರ್ಕಾರ ರಾಷ್ಟ್ರದಾದ್ಯಂತ ಅನಿರ್ದಿಷ್ಟಾವಧಿ ಕರ್ಪ್ಯೂ ಜಾರಿಮಾಡಿದೆ.

ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಶ್ರೀಲಂಕಾ ಪಶ್ಚಿಮ ಪ್ರಾಂತ್ಯಗಳಾದ ಕುಲಿಯಪಿತಿಯಾ, ಬಿಂಗಿರಿಯಾ ದುಮ್ಮಲ, ಸುರಿಯಾ ಮತ್ತು ಹೆಟ್ಟಿಪೋಲಾ ಜಿಲ್ಲೆಗಳಲ್ಲಿ ಭಾನುವಾರ ಕರ್ಪ್ಯೂ ಸಡಿಲಿಸಲಾಗಿತ್ತು. ಆದರೆ, ಕರ್ಫ್ಯೂ ಸಡಿಲಿಕೆಯಾಗುತ್ತಿದ್ದಂತೆ ಭಾನುವಾರದಿಂದ ಉದ್ರಿಕ್ತರ ಗುಂಪು ಸತತವಾಗಿ ಮುಸ್ಲಿಮರ ಮೇಲೆ ಮತ್ತೆ ಅಲ್ಲಲ್ಲಿ ದಾಳಿಗೆ ಮುಂದಾಗಿವೆ. ಅವರ ಅಂಗಡಿಗಳು ಪ್ರಾರ್ಥನಾ ಮಂದಿರಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ ಧ್ವಂಸಗೊಳಿಸುತ್ತಿವೆ.

ಸೋಮವಾರ ಈ ಉದ್ರಿಕ್ತರ ಗುಂಪಿನ ದಾಳಿಗೆ ಸಿಲುಕಿದ್ದ 42 ವರ್ಷದ ವ್ಯಕ್ತಿ ಮೊಹಮ್ಮದ್ ಅಮೀರ್ ಎಂಬ ವ್ಯಕ್ತಿ ಮೃತಪಟ್ಟಿದ್ದರು. ಬಾಂಬ್​ ದಾಳಿಯ ನಂತರ ಶ್ರೀಲಂಕಾದಲ್ಲಿ ಭುಗಿಲೆದ್ದ ಕೋಮು ಸಂಘರ್ಷದಲ್ಲಿ ಮೃತಪಟ್ಟ ಮೊದಲ ವ್ಯಕ್ತಿ ಈತ. ಪರಿಣಾಮ ಗಲಭೆಯ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿರುವ ಶ್ರೀಲಂಕಾ ಸರ್ಕಾರ ಇಡೀ ದೇಶದಾದ್ಯಂತ ಸೋಮವಾರದಿಂದ ಅನಿರ್ದಿಷ್ಟಾವಧಿಯ ಕರ್ಫ್ಯೂ ವಿಧಿಸಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಕರ್ಪ್ಯೂ ಇರಲಿದ್ದು ಜನಸಾಮಾನ್ಯರು ಬೀದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.

“ನೂರಾರು ಸಂಖ್ಯೆ ಉದ್ರಿಕ್ತರ ಗುಂಪು ಭಾನುವಾರ ಮತ್ತು ಸೋಮವಾರ ಸತತವಾಗಿ ಮುಸ್ಲಿಮರ ಮನೆ ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆದಸಿ ಧ್ವಂಸಗೊಳಿಸುತ್ತಿದ್ದಾರೆ. ಆದರೆ, ಪೊಲೀಸರು ಹಾಗೂ ಸೇನೆ ಇದನ್ನು ಮೂಕಪ್ರೇಕ್ಷಕರಂತೆ ನಿಂತು ನೋಡುತ್ತಿದ್ದಾರೆ. ಅಲ್ಲದೆ ಸುರಕ್ಷತೆ ಹೆಸರಿನಲ್ಲಿ ನಮ್ಮನ್ನು ಮನೆಯಿಂದಲೂ ಹೊರಬರಲು ಬಿಡುತ್ತಿಲ್ಲ” ಎಂದು ಸ್ಥಳೀಯ ಮುಸ್ಲಿಮರು ಆರೋಪಿಸಿದ್ದಾರೆ.

ಶ್ರೀಲಂಕಾದಾದ್ಯಂತ ನಡೆಯುತ್ತಿರುವ ಕೋಮು ಹಿಂಸಾಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ರಣಿಲ್ ವಿಕ್ರಮಸಿಂಗೆ, “ದೇಶದಾದ್ಯಂತ ನಡೆಯುತ್ತಿರುವ ಇಂತಹ ವಿಧ್ವಂಸಕ ಕೃತ್ಯಗಳು ಭದ್ರತಾ ಪಡೆಗಳ ತನಿಖೆಗೆ ಅಡ್ಡಿಯುಂಟು ಮಾಡುತ್ತಿದೆ. ವರ್ಣಭೇದ ನೀತಿ ಕೋಮು ದಳ್ಳುರಿ ಹೆಚ್ಚಾದಂತೆ ದೇಶದಲ್ಲಿ ಶಾಂತಿ ತಲೆಕೆಳಗಾಗಿ ಅಸ್ಥಿರತೆ ಉಂಟಾಗುತ್ತದೆ. ಅಲ್ಲದೆ ನಮ್ಮ ದೇಶದ ಶಾಂತಿಯನ್ನು ಕದಡಬೇಕು ಎಂಬ ಉಗ್ರರ ಉದ್ದೇಶ ಸಫಲವಾದಂತಾಗುತ್ತದೆ” ಎಂದು ತಿಳಿಸಿದ್ದಾರೆ. ಅಲ್ಲದೆ ದೇಶದಲ್ಲಿ ಶಾಂತಿ ನೆಲೆಸಲು ಜನಸಾಮಾನ್ಯರು ಸಹಕರಿಸಬೇಕು ಎಂದು ಕೇಳಿಕೊಂಡಿರುವ ವಿಕ್ರಮಸಿಂಗೆ ಪರಿಸ್ಥಿತಿಯನ್ನು ನಿಭಾಯಿಸಲು ಭದ್ರತಾ ಪಡೆಗಳಿಗೆ ಎಲ್ಲಾ ಅಧಿಕಾರವನ್ನೂ ನೀಡಿದ್ದಾರೆ ಆದೇಶ ಹೊರಡಿಸಿದ್ದಾರೆ.


ಸಾಮಾಜಿಕ ಜಾಲತಾಣಗಳು ಬ್ಯಾನ್​ : ಏಪ್ರಿಲ್ 21 ರಂದು ನಡೆದ ಈಸ್ಟರ್​ ಭಾನುವಾರದ ಆತ್ಮಹತ್ಯಾ ಬಾಂಬ್​ ಬ್ಲಾಸ್ಟ್​ನಲ್ಲಿ 260ಕ್ಕೂ ಹೆಚ್ಚು ಜನ ಕೈಸ್ತರು ಮೃತಪಟ್ಟಿದ್ದರು. ಇದರ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ವಹಿಸಿಕೊಂಡಿತ್ತು. ಪರಿಣಾಮ ಈ ಘಟನೆಯ ನಂತರ ಶ್ರೀಲಂಕಾದಾದ್ಯಂತ ಅಲ್ಲಲ್ಲಿ ಮುಸ್ಲಿಮರ ಮೇಲೆ ಉದ್ರಿಕ್ತರ ಗುಂಪು ದ್ವೇಷದ ದಾಳಿ ನಡೆಸತ್ತಲೇ ಇದೆ.

ಮುಸ್ಲಿಮರ ಮೇಲಿನ ದಾಳಿಯನ್ನು ಖಂಡಿಸಿ ಸೋಮವಾರ ಚಿಲಾವ್ ಪ್ರದೇಶದ ನಿವಾಸಿ ಮುಸ್ಲಿಂ ವ್ಯಕ್ತಿಯೊಬ್ಬ ಫೇಸ್​ಬುಕ್​ನಲ್ಲಿ ಪೋಸ್ಟ್​ ಒಂದನ್ನು ಹಾಕಿದ್ದ. ಈ ಪೋಸ್ಟ್​ನಲ್ಲಿ, “ತುಂಬಾ ನಗಬೇಡಿ ಮುಂದೊಂದು ದಿನ ನೀವು ಅಳಬೇಕಾದ ಪರಿಸ್ಥಿತಿ ಎದುರಾಗುತ್ತದೆ” ಎಂದು ಬರೆದುಕೊಂಡಿದ್ದ. ಆತನ ಪೋಸ್ಟ್​ಗೆ ಕೆರಳಿದ ಕ್ರಿಶ್ಚಿಯನ್​ ಸಮುದಾಯದ ಕೆಲ ಯುವಕರ ಗುಂಪು ಚಿಲಾವ್ ನಲ್ಲಿರುವ ಆತನ ಅಂಗಡಿಗೆ ನುಗ್ಗಿ ಇಡೀ ಅಂಗಡಿಯನ್ನು ಧ್ವಂಸಗೊಳಿಸಿದ್ದರು, ಅಂಗಡಿ ಮಾಲೀಕನನ್ನೂ ಹಿಗ್ಗಾಮುಗ್ಗ ಥಳಿಸಿ ಪಕ್ಕದಲ್ಲೇ ಇದ್ದ ಮಸೀದಿಯನ್ನೂ ಧ್ವಂಸಗೊಳಿಸಿದ್ದರು.

ಫೇಸ್​ಬುಕ್​ನಲ್ಲಿ ಇಂತಹ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಅಬ್ದುಲ್ ಹಮೀದ್ ಮೊಹಮ್ಮದ್ ಅನ್ಸಾರ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅಲ್ಲದೆ ದ್ವೇಷಪೂರಿತ ಬರಹಗಳು ಹರಡದಂತೆ ತಡೆಯುವ ಸಲುವಾಗಿ ಇಡೀ ಶ್ರೀಲಂಕಾದಾದ್ಯಂತ ಫೇಸ್​ಬುಕ್​, ಟ್ವಿಟರ್, ವಾಟ್ಸಾಪ್ ಹಾಗೂ ಇನ್ಸ್​ಟಾಗ್ರಾಮ್ ಅನ್ನು ಅಲ್ಲಿನ ಸರ್ಕಾರ ತಾತ್ಕಾಲಿಕವಾಗಿ ಬ್ಯಾನ್ ಮಾಡಿದೆ. ಅಲ್ಲದೆ ವೈಬರ್, ಐಎಂಓ, ಸ್ನಾಪ್​ಚಾಟ್​ ನಂತರ ಡಿಜಿಟಲ್ ಆ್ಯಪ್​ಗಳನ್ನು ಬ್ಲಾಕ್ ಮಾಡುವಂತೆ ಅಲ್ಲಿನ ಪೋನ್ ಅಪರೇಟರ್ ಕಂಪೆನಿಗಳಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆ.
First published: