ಜಮ್ಮು-ಕಾಶ್ಮೀರದ ಕುರಿತ ವಿಶ್ವಸಂಸ್ಥೆ ವರದಿ ತಪ್ಪು ಗ್ರಹಿಕೆಗಳಿಂದ ಕೂಡಿದೆ; ತನ್ನ ಪ್ರತಿಭಟನೆ ದಾಖಲಿಸಿದ ಭಾರತ!

ವಿಶ್ವಸಂಸ್ಥೆ ಮಾನವ ಹಕ್ಕುಗಳ ವಿಭಾಗ ಜಮ್ಮು-ಕಾಶ್ಮೀರದ ಕುರಿತು ನೀಡಿರುವ ವರದಿ ವಸ್ತುನಿಷ್ಠವಾಗಿಲ್ಲ. ಪೂರ್ವಾಗ್ರಹದಿಂದ ಕೂಡಿದೆ. ಅಲ್ಲದೆ ಈ ವರದಿ ಭಾರತ ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿವೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಂತಹ ಸಮಸ್ಯೆಯನ್ನು ವರದಿಯಲ್ಲಿ ನಿರ್ಲಕ್ಷಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

MAshok Kumar | news18
Updated:July 8, 2019, 4:57 PM IST
ಜಮ್ಮು-ಕಾಶ್ಮೀರದ ಕುರಿತ ವಿಶ್ವಸಂಸ್ಥೆ ವರದಿ ತಪ್ಪು ಗ್ರಹಿಕೆಗಳಿಂದ ಕೂಡಿದೆ; ತನ್ನ ಪ್ರತಿಭಟನೆ ದಾಖಲಿಸಿದ ಭಾರತ!
ಪ್ರಾತಿನಿಧಿಕ ಚಿತ್ರ.
MAshok Kumar | news18
Updated: July 8, 2019, 4:57 PM IST
ನವ ದೆಹಲಿ (ಜುಲೈ.08): ಪ್ರಸ್ತುತ ಅಂತಾರಾಷ್ಟ್ರೀಯ ಸಮಸ್ಯೆಯಾಗಿರುವ ಜಮ್ಮು-ಕಾಶ್ಮೀರ ಸಮಸ್ಯೆಯ ಕುರಿತ ವಿಶ್ವಸಂಸ್ಥೆ ಮಾನವ ಹಕ್ಕುಗಳ ವಿಭಾಗ ನೀಡಿರುವ ವರದಿ ತಪ್ಪು ಗ್ರಹಿಕೆ ಹಾಗೂ ಸಂಶೋಧನೆಗಳಿಲ್ಲದ ಸುಳ್ಳುಗಳಿಂದ ಕೂಡಿದೆ, ಅಲ್ಲದೆ ಗಡಿ ಭಾಗದಲ್ಲಿ ಉಗ್ರಗಾಮಿಗಳಿಗೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಪಾತ್ರವನ್ನು ನಗಣ್ಯವಾಗಿಸಿದೆ ಎಂದು ಭಾರತ ಸರ್ಕಾರ ವಿಶ್ವಸಂಸ್ಥೆ ಎದುರು ತನ್ನ ಪ್ರತಿಭಟನೆಯನ್ನು ದಾಖಲಿಸಿದೆ.

ಕಳೆದ ವರ್ಷ ಜಮ್ಮು ಕಾಶ್ಮೀರದ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗ ತನ್ನ ಮೊದಲ ವರದಿಯನ್ನು ಮಂಡಿಸಿತ್ತು. ಈ ವರದಿಯಲ್ಲಿ “ಭಾರತ ಪಾಕ್ ಗಡಿ ಭಾಗವಾದ ಜಮ್ಮು ಕಾಶ್ಮೀರದಲ್ಲಿ ಸಮಸ್ಯೆಯನ್ನು ಬಗೆಹರಿಸುವ ನಿಮಿತ್ತ ಎರಡೂ ದೇಶದ ಸರ್ಕಾರ ಯಾವುದೇ ಗಮನಾರ್ಹ ಕೆಲಸಕ್ಕೆ ಮುಂದಾಗಿಲ್ಲ” ಎಂದು ವರದಿ ನೀಡಿತ್ತು.

ಇದನ್ನೂ ಓದಿ : ರಾಜ್ಯಸಭೆಯಲ್ಲಿ ಜಮ್ಮು-ಕಾಶ್ಮೀರ ಮೀಸಲಾತಿ ತಿದ್ದುಪಡಿ ಮಸೂದೆ; ಗೃಹ ಸಚಿವ ಅಮಿತ್​ ಶಾ ಮಂಡನೆ

ಆದರೆ, ಈ ವರದಿಯ ಕುರಿತು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಮಾಹಿತಿ ನೀಡಿರುವ ಸಚಿವಾಲಯದ ವಕ್ತಾರ ರವೀಶ್ ಕುಮಾರ್, “ವಿಶ್ವಸಂಸ್ಥೆ ಮಾನವ ಹಕ್ಕುಗಳ ವಿಭಾಗ ಜಮ್ಮು-ಕಾಶ್ಮೀರದ ಕುರಿತು ನೀಡಿರುವ ವರದಿ ವಸ್ತುನಿಷ್ಠವಾಗಿಲ್ಲ. ಪೂರ್ವಾಗ್ರಹದಿಂದ ಕೂಡಿದೆ. ಅಲ್ಲದೆ ಈ ವರದಿ ಭಾರತ ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿವೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಂತಹ ಸಮಸ್ಯೆಯನ್ನು ವರದಿಯಲ್ಲಿ ನಿರ್ಲಕ್ಷಿಸಲಾಗಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಜಮ್ಮು-ಕಾಶ್ಮೀರ ಎನ್​​ಕೌಂಟರ್; ನಟೋರಿಯಸ್ ಬುರಾನ್ ವನಿ ಉಗ್ರ ತಂಡದ ಎಲ್ಲಾ 11 ಸದಸ್ಯರ ಬಲಿ ಪಡೆದ ಸೇನೆ

“ವಿಶ್ವಸಂಸ್ಥೆಯ ಈ ವರದಿಯಲ್ಲಿ ಪಾಕಿಸ್ತಾನ ಮುಂದುವರೆಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆ ದಾಳಿಗಳು, ಈ ದಾಳಿಯಿಂದ ಉಂಟಾದ ಪರಿಸ್ಥಿತಿ ಹಾಗೂ ಕಾರಣಗಳನ್ನು ಉಲ್ಲೇಖಿಸದೆ ವಿಶ್ಲೇಷಿಸಲಾಗಿದೆ. ಪ್ರಾಯೋಜಿತ ಭಯೋತ್ಪಾದನೆಯನ್ನು ಬಹಿರಂಗವಾಗಿ ಅಭ್ಯಾಸ ಮಾಡುವ ದೇಶ ಪಾಕಿಸ್ತಾನ. ಆದರೆ, ಈ ವರದಿ ಭಾರತದಂತಹ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಒಂದು ಕೃತಕ ಅಸಮಾನತೆಯನ್ನು ಸೃಷ್ಟಿಸುವ ಪ್ರಯತ್ನದಂತೆ ಗೋಚರಿಸುತ್ತಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ಈ ವರದಿಯಲ್ಲಿ ಉಲ್ಲೇಖವಾಗಿರುವ ಅಂಶಗಳ ಕುರಿತು ವಿಶ್ವಸಂಸ್ಥೆಯ ಎದುರು ತಮ್ಮ ತಕರಾರನ್ನು ಪ್ರತಿಭಟನೆಯನ್ನು ಮಂಡಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.
Loading...

First published:July 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...