HOME » NEWS » National-international » CONTEMPT OF COURT KUNAL KAMRA REEFUSES TO APOLOGIZE TO SUPREME COURT MAK

ಸುಪ್ರೀಂ ಕೋರ್ಟ್​ ವಿರುದ್ಧ ಟೀಕೆ, ನ್ಯಾಯಾಂಗ ನಿಂದನೆ ಕೇಸ್​; ಕ್ಷಮೆ ಕೇಳಲು ನಿರಾಕರಿಸಿದ ಕುನಾಲ್ ಕಮ್ರಾ

ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಬಂಧನಕ್ಕೊಳಗಾದ ಮತ್ತೊಬ್ಬ ಹಾಸ್ಯನಟ ಮುನವಾರ್ ಫಾರೂಕಿ ಬಂಧನದ ಬಗ್ಗೆಯೂ ಧ್ವನಿ ಎತ್ತಿರುವ ಕುನಾಲ್ ಕಮ್ರ,  ದೇಶದಲ್ಲಿ ಅಸಹಿಷ್ಣುತೆಯ ಸಂಸ್ಕೃತಿ ಬೆಳೆಯುತ್ತಿದೆ ಎಂದು ಆರೋಪಿಸಿದ್ದಾರೆ.

news18-kannada
Updated:January 29, 2021, 4:08 PM IST
ಸುಪ್ರೀಂ ಕೋರ್ಟ್​ ವಿರುದ್ಧ ಟೀಕೆ, ನ್ಯಾಯಾಂಗ ನಿಂದನೆ ಕೇಸ್​; ಕ್ಷಮೆ ಕೇಳಲು ನಿರಾಕರಿಸಿದ ಕುನಾಲ್ ಕಮ್ರಾ
ಕುನಾಲ್ ಕಮ್ರಾ.
  • Share this:
ನವ ದೆಹಲಿ (ಜನವರಿ 29); ಸುಪ್ರೀಂ ಕೋರ್ಟ್​ ಇತ್ತೀಚೆಗೆ ನೀಡಿದ ಹಲವು ಪ್ರಕರಣಗಳ ತೀರ್ಪಿಗೆ ಸಂಬಂಧಿಸಿದಂತೆ ಸ್ಟಾಂಡಪ್ ಕಾಮಿಡಿಯನ್ (ಹಾಸ್ಯ ನಟ) ಕುನಾಲ್​ ಕಮ್ರಾ ಹಾಸ್ಯಾತ್ಮಕವಾಗಿಯೇ ಬಹಿರಂಗ ಟೀಕೆ ಮಾಡಿದ್ದರು. ಹೀಗಾಗಿ ಕುನಾಲ್ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲಾಗಿತ್ತು. ಅಲ್ಲದೆ, ಅವರು ವಿರುದ್ಧ ನ್ಯಾಯಾಂಗ ನಿಂದನೆ ನೊಟೀಸ್​ ಸಹ ಜಾರಿ ಮಾಡಲಾಗಿತ್ತು. ಆದರೆ, ಈ ನೊಟೀಸ್​ಗೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್​ ಅಫಿಡವಿಟ್​ ಸಲ್ಲಿಸಿರುವ ಕುನಾಲ್​ ಕಮ್ರಾ, "ಹಾಸ್ಯಕ್ಕೆ ಯಾವುದೇ ರಕ್ಷಣೆ ಅಗತ್ಯವಿಲ್ಲ. ಹಾಸ್ಯಗಳು ವಾಸ್ತವವಲ್ಲ ಅಥವಾ ವಾಸ್ತವ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಇವೆಲ್ಲವೂ ಹಾಸ್ಯನಟನ ಗ್ರಹಿಕೆಗೆ ಆಧಾರವಾಗಿದೆ. ಹೀಗಾಗಿ ನಾನು ಕ್ಷಮೆಯಾಚಿಸಲಾರೆ" ಎಂದು ತಿಳಿಸಿದ್ದಾರೆ.

ಇಂಟೀರಿಯರ್​ ಡಿಸೈನರ್​ ಓರ್ವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ರಿಪಬ್ಲಿಕ್​ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಆದರೆ, ನ್ಯಾಯಾಲಯ ಅವರಿಗೆ ತಕ್ಷಣ ಜಾಮೀನು ಮಂಜೂರು ಮಾಡಿತ್ತು. ನ್ಯಾಯಾಲಯದ ಈ ನಡೆಯನ್ನು ಕುನಾಲ್​ ಕಮ್ರಾ ತನ್ನ ಹಾಸ್ಯದ ಧಾಟಿಯಲ್ಲೇ ಟ್ವೀಟ್​ ಮೂಲಕ ಟೀಕಿಸಿದ್ದರು. ಹೀಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿತ್ತು.

ಈ ಕುರಿತು ಕುನಾಲ್ ಕಮ್ರಾ ಸುಪ್ರೀಂ ಕೋರ್ಟ್​ಗೆ ತಾನು ಸಲ್ಲಿಸಿರುವ ಅಫಿಡವಿಟ್​ನಲ್ಲಿ, "ನ್ಯಾಯಾಂಗದ ಮೇಲೆ ಸಾರ್ವಜನಿಕರ ನಂಬಿಕೆಯು ಅದರ ಕಾರ್ಯಗಳನ್ನು ಅವಲಂಬಿಸಿದೆ. ಅದರ ಬಗ್ಗೆ ಮಾಡಿರುವ ಟೀಕೆಗಳ ಮೇಲೆ ಅಲ್ಲ. ತನ್ನ ಟ್ವೀಟ್‌ಗಳು ಹಾಗೂ ಹಾಸ್ಯಗಳು ವಿಶ್ವದ ಅತ್ಯಂತ ಶಕ್ತಿಶಾಲಿ ನ್ಯಾಯಾಲಯದ ಅಡಿಪಾಯವನ್ನು ಅಲುಗಾಡಿಸಬಹುದು ಎಂದು ಹೇಳುವ ಮೂಲಕ ತನ್ನ ಸಾಮರ್ಥ್ಯಗಳನ್ನು ತಪ್ಪಾಗಿ ಅರ್ಥೈಸಲಾಗಿದೆ" ಎಂದು ಕುನಾಲ್ ಕಮ್ರಾ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.

"ಪ್ರಜಾಪ್ರಭುತ್ವದಲ್ಲಿ ಯಾವುದಾದರೂ ಸಂಸ್ಥೆಯ ಮೇಲೆ ಟೀಕೆ ಮಾಡಬಾರದು ಎಂದು ನಂಬುವುದು ಹೇಗಿದೆ ಎಂದರೆ, ಅತ್ಯಂತ ಕೆಟ್ಟ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ‌‌ ವಲಸೆ ಕಾರ್ಮಿಕರು ಅವರ ಮನೆಗೆ ಹೋಗಲು ತಾವೆ ದಾರಿ ಹುಡುಕಬೇಕು ಎಂಬಂತಿದೆ; ಇದು ಅಸಂಬದ್ದ ಮತ್ತು ಪ್ರಜಾಪ್ರಭುತ್ವ ವಿರೋಧಿ" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರೈತರ ಟ್ರ್ಯಾಕ್ಟರ್​ ರ‍್ಯಾಲಿ ವೇಳೆ ಪ್ರಚೋದನಾತ್ಮಕ ಟ್ವೀಟ್​; ಶಶಿ ತರೂರ್​ ಸೇರಿದಂತೆ 6 ಜನರ ವಿರುದ್ಧ ದೇಶದ್ರೋಹ ಪ್ರಕರಣ!

"ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಬಂಧನಕ್ಕೊಳಗಾದ ಮತ್ತೊಬ್ಬ ಹಾಸ್ಯನಟ ಮುನವಾರ್ ಫಾರೂಕಿ ಬಂಧನದ ಬಗ್ಗೆಯೂ ಧ್ವನಿ ಎತ್ತಿರುವ ಕುನಾಲ್ ಕಮ್ರ,  ದೇಶದಲ್ಲಿ ಅಸಹಿಷ್ಣುತೆಯ ಸಂಸ್ಕೃತಿ ಬೆಳೆಯುತ್ತಿದೆ" ಎಂದು ಆರೋಪಿಸಿದ್ದಾರೆ.
Youtube Video
"ಮುನ್ನಾವರ್ ಫಾರೂಕಿಯಂತಹ ಹಾಸ್ಯನಟರು ಅವರು ಮಾಡದ ಹಾಸ್ಯಕ್ಕಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳನ್ನು ದೇಶದ್ರೋಹ ಪ್ರಕರಣದಲ್ಲಿ ವಿಚಾರಣೆಗೊಳಪಡಿಸುವ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಆಕ್ರಮಣಕ್ಕೆ ಸಾಕ್ಷಿಯಾಗಿದ್ದೇವೆ. ಇಂತಹ ಸಮಯದಲ್ಲಿ ಈ ನ್ಯಾಯಾಲಯವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರ್ವೋಚ್ಛ ತತ್ವವೆಂದು ಹೇಳುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
Published by: MAshok Kumar
First published: January 29, 2021, 4:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories