Compensation: ಮದ್ರಾಸ್ ಹೈಕೋರ್ಟ್ ವಕೀಲರಿಗೆ ಮಾನಸಿಕ ಕಿರುಕುಳ; ಪರಿಹಾರ ನೀಡಲು ಬ್ಯಾಂಕ್‌ಗೆ ಆದೇಶ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಂದಿನ ಕಾಲಮಾನದಲ್ಲಿ ಪ್ರತಿಯೊಬ್ಬರೂ ತಮಗಾಗುತ್ತಿರುವ ಅನ್ಯಾಯವನ್ನು ವಿರೋಧಿಸಿ ಸಂಬಂಧಿತ ನ್ಯಾಯಪೀಠದ ಸಹಾಯ ಹಸ್ತವನ್ನು ಕೋರುತ್ತಿದ್ದಾರೆ. ಮೊದಲೆಲ್ಲಾ ಅನ್ಯಾಯವನ್ನು ಸಹಿಸಿಕೊಂಡಿರುತ್ತಿದ್ದ ನಾಗರಿಕರು ಇಂದು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಇಂದಿನ ಲೇಖನದಲ್ಲಿ ನಾವು ಹೇಳಹೊರಟಿರುವುದು ನ್ಯಾಯಕ್ಕಾಗಿ ಹೋರಾಡಿ ಗೆದ್ದ ವಕೀಲರೊಬ್ಬರ ಕಥೆಯಾಗಿದೆ.

ಮುಂದೆ ಓದಿ ...
  • Share this:

ಇಂದಿನ ಕಾಲಮಾನದಲ್ಲಿ ಪ್ರತಿಯೊಬ್ಬರೂ ತಮಗಾಗುತ್ತಿರುವ ಅನ್ಯಾಯವನ್ನು ವಿರೋಧಿಸಿ ಸಂಬಂಧಿತ ನ್ಯಾಯಪೀಠದ ಸಹಾಯ ಹಸ್ತವನ್ನು ಕೋರುತ್ತಿದ್ದಾರೆ. ಮೊದಲೆಲ್ಲಾ ಅನ್ಯಾಯವನ್ನು ಸಹಿಸಿಕೊಂಡಿರುತ್ತಿದ್ದ ನಾಗರಿಕರು (Citizens) ಇಂದು ನ್ಯಾಯಕ್ಕಾಗಿ (justice) ಹೋರಾಡುತ್ತಿದ್ದಾರೆ. ಇಂದಿನ ಲೇಖನದಲ್ಲಿ ನಾವು ಹೇಳಹೊರಟಿರುವುದು ನ್ಯಾಯಕ್ಕಾಗಿ ಹೋರಾಡಿ ಗೆದ್ದ ವಕೀಲರೊಬ್ಬರ (Lawyer) ಕಥೆಯಾಗಿದೆ. ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ 75 ರ ಹರೆಯದ ಲೋಗನಾಥನ್‌ ಅವರಿಗೆ ವಾರ್ಷಿಕ 8% ಬಡ್ಡಿಯೊಂದಿಗೆ ರೂ 2 ಲಕ್ಷ ಪರಿಹಾರವನ್ನು ಮತ್ತು ರೂ 10,000 ವ್ಯಾಜ್ಯ ವೆಚ್ಚವನ್ನು ನೀಡುವಂತೆ ಗ್ರಾಹಕ ಆಯೋಗವು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ಗೆ (Standard Chartered Bank) ನಿರ್ದೇಶಿಸಿದೆ.


ಬ್ಯಾಂಕ್‌ಗೆ ಪರಿಹಾರ ನೀಡುವಂತೆ ಸೂಚಿಸಿದ ಆಯೋಗ:
 ವಕೀಲರು ಬಾಕಿಯನ್ನು ನಿಗದಿಪಡಿಸಿದ ದಿನಾಂಕಕ್ಕಿಂತ ಮೊದಲೇ ಪಾವತಿಸಿದ್ದರೂ ಬಾಕಿಯನ್ನು ತೆರವುಗೊಳಿಸುವಂತೆ ಕೋರಿ ಬ್ಯಾಂಕ್ ನಾಲ್ಕು ತಿಂಗಳುಗಳಲ್ಲಿ 58 ಕ್ಕೂ ಹೆಚ್ಚು ಬಾರಿ ತನ್ನ ಸಂಗ್ರಹಣೆ ಏಜೆಂಟ್‌ಗಳ ಮೂಲಕ ಕರೆಮಾಡಿಸಿದ್ದು ಸಂದೇಶಗಳನ್ನು ಕಳುಹಿಸಿದೆ. ಇದರಿಂದ ಮಾನಸಿಕವಾಗಿ ಕುಗ್ಗಿಹೋದ ಲೋಗನಾಥನ್ ಆಯೋಗಕ್ಕೆ ದೂರು ನೀಡಿದ್ದಾರೆ.


ಲೋಗನಾಥನ್ ಆಯೋಗವನ್ನು ಏಕೆ ಸಂಪರ್ಕಿಸಬೇಕಾಯಿತು?
ಬೆಂಗಳೂರು ನಗರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕೋರಮಂಗಲದಲ್ಲಿ ವಾಸವಾಗಿರುವ ಲೋಗನಾಥನ್ ಜಯಕುಮಾರ್ ಅವರಿಗೆ ಪರಿಹಾರ ಮತ್ತು ವ್ಯಾಜ್ಯ ವೆಚ್ಚವನ್ನು ಪಾವತಿಸಲು ಬ್ಯಾಂಕ್‌ಗೆ ನಿರ್ದೇಶಿಸಿದ್ದು, ನೋಟೀಸ್ ನೀಡಿದ್ದರೂ ಕೂಡ ದೂರು ಪ್ರಶ್ನಿಸದೇ ಬ್ಯಾಂಕ್ ಗೈರುಹಾಜರಾಗಿತ್ತು.


ಇದನ್ನೂ ಓದಿ:  Viral Video: ಪ್ಲೀಸ್, ನನಗೇ ಮತ ಹಾಕಿ; ಯುವತಿಯರ ಕಾಲಿಗೆ ಬಿದ್ದು ಮತಯಾಚನೆ


ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಅನ್ನು ಲೋಗನಾಥನ್ ಸುಮಾರು 25 ವರ್ಷಗಳಿಂದ ಬಳಸುತ್ತಿದ್ದರೂ, ನಿರ್ದಿಷ್ಟ ವಹಿವಾಟಿಗೆ ಸಂಬಂಧಿಸಿದಂತೆ ಸ್ಟೇಟ್‌ಮೆಂಟ್ ಬಂದ ನಂತರ ಜನವರಿ 2022 ರಲ್ಲಿ ರೂ 31,271 ಬಾಕಿಯನ್ನು ಸ್ವತಃ ಬ್ಯಾಂಕ್‌ಗೆ ತೆರಳಿ ಚೆಕ್ ಮೂಲಕ ಪಾವತಿಸಿದ್ದರು.


ಬಾಕಿ ಪಾವತಿಸಿದ್ದರೂ ಬ್ಯಾಂಕ್‌ನಿಂದ ನಿರಂತರ ಕಿರುಕುಳ
ಕೆಲವು ದಿನಗಳ ನಂತರ ಬಾಕಿಯನ್ನು ತುಂಬುವಂತೆ ಬ್ಯಾಂಕ್ ನಿರಂತರವಾಗಿ ಕರೆ ಹಾಗೂ ಸಂದೇಶಗಳನ್ನು ಕಳುಹಿಸಲು ಆರಂಭಿಸಿತು ಹಾಗೂ ಬಾಕಿ ಹಣವನ್ನು ಆಯಾ ದಿನಾಂಕದೊಳಗೆ ಕಟ್ಟದೇ ಹೋದರೆ ಕಾನೂನು ಕ್ರಮಗಳನ್ನು ಲೋಗನಾಥನ್ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಬ್ಯಾಂಕ್ ನೀಡಿದೆ. 2022 ರ ಫೆಬ್ರವರಿ 8, ರಿಂದ 19 ರವರೆಗೆ ಬ್ಯಾಂಕ್ 26 ಕ್ಕಿಂತ ಹೆಚ್ಚು ಬಾರಿ ಲೋಗನಾಥನ್ ಅವರಿಗೆ ಬೆದರಿಕೆ ಕರೆಗಳನ್ನು ಹಾಕಿದೆ ಎನ್ನಲಾಗಿದೆ. ಇದರಿಂದ ಮಾನಸಿಕ ಸಂಕಟ ಹಾಗೂ ಕಿರುಕುಳಕ್ಕೆ ಒಳಗಾದ ಲೋಗನಾಥನ್ ಕೊನೆಗೂ ಗ್ರಾಹಕ ಆಯೋಗವನ್ನು ಸಂಪರ್ಕಿಸಬೇಕಾಯಿತು.


ಇದನ್ನೂ ಓದಿ: Family Fight: ಹೆಂಡ್ತಿ ಯಾಕ್ ಹಿಂಗ್ ಕಾಡ್ತಿ ಅಂತ 80 ಅಡಿ ಮರವೇರಿದ ಗಂಡ! ಒಂದು ತಿಂಗಳಾದ್ರೂ ಕೆಳಕ್ಕೆ ಬರಲೇ ಇಲ್ಲ!


ಲೋಗನಾಥನ್ ಸಲ್ಲಿಸಿದ ದೂರನ್ನು ಆಲಿಸಿದ ಗ್ರಾಹಕ ಆಯೋಗವು, ಲೋಗನಾಥನ್ ಅವರಿಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುವುದಾಗಿ ಬ್ಯಾಂಕ್ ಅವರಿಗೆ ತಿಳಿಸಿರುವುದು ದಾಖಲೆಗಳಲ್ಲಿ ಸ್ಪಷ್ಟವಾಗಿ ಬಹಿರಂಗಗೊಂಡಿವೆ. ಅದಾಗ್ಯೂ ಲೋಗನಾಥನ್ ಫೆಬ್ರವರಿ 2022 ರಿಂದ ದೂರುಗಳನ್ನು ಸಲ್ಲಿಸುತ್ತಿದ್ದರೂ ಜೂನ್ 7, 2022 ರವರೆಗೆ ಬ್ಯಾಂಕ್ ಯಾವುದೇ ಕ್ರಮ ಕ್ರಮಗೊಂಡಿಲ್ಲ. ಬ್ಯಾಂಕ್‌ಗೆ ಸಂಬಂಧಿಸಿದ ಶಾಖೆ ನಿರಂತರವಾಗಿ ಲೋಗನಾಥನ್‌ಗೆ ಕರೆಮಾಡುತ್ತಿತ್ತು ಹಾಗೂ ಎಚ್ಚರಿಕೆ ಸಂದೇಶಗಳನ್ನು ರವಾನಿಸುತ್ತಿತ್ತು.


ದೂರುದಾರರ ಜೀವನ ನರಕ ಸದೃಶಗೊಳಿಸಿದ ಬ್ಯಾಂಕ್:
ಲೋಗನಾಥನ್ ಮಾಡಿರುವ ಪಾವತಿಯನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್, ದೂರುದಾರರಿಗೆ ಕರೆ ಮಾಡುವುದನ್ನು ನಿಲ್ಲಿಸಲು ಬ್ಯಾಂಕ್ ಸಂಬಂಧಿಸಿದ ಶಾಖೆ ಅಥವಾ ವಿಭಾಗಕ್ಕೆ ನಿರ್ದೇಶನವನ್ನು ನೀಡಬೇಕಾಗಿತ್ತು ಆದರೆ ಇದಕ್ಕೆ ಬದಲು ದೂರುದಾರರ ಜೀವನವನ್ನು ಬ್ಯಾಂಕ್ ನರಕಸದೃಶಗೊಳಿಸಿದೆ ಹಾಗೂ ಅವರ ಮಾನಸಿಕ ನೆಮ್ಮದಿಗೆ ಭಂಗವನ್ನುಂಟು ಮಾಡಿದೆ. ಬ್ಯಾಂಕ್ ತನ್ನ ಸೇವೆಯಲ್ಲಿ ಲೋಪವೆಸಗಿದೆ. ದೂರುದಾರರು ಹಿರಿಯ ನಾಗರಿಕರಾಗಿದ್ದರೂ ಅದನ್ನು ಪರಿಗಣಿಸದೆ ಮಾನಸಿಕ ಯಾತನೆ, ಚಿತ್ರಹಿಂಸೆ ಹಾಗೂ ಕಿರುಕುಳವನ್ನು ಬ್ಯಾಂಕ್ ನೀಡಿದೆ ಇದಕ್ಕಾಗಿ ಬ್ಯಾಂಕ್ ಲೋಗನಾಥನ್ ಅವರಿಗೆ ಪರಿಹಾರವನ್ನು ನೀಡುವಂತೆ ಸೂಚಿಸಿದೆ.

First published: