ಸದಾ ಒಂದಲ್ಲ ಒಂದು ವಿಚಾರಕ್ಕೆ ಕಾಲ್ಕೆರೆದು ಭಾರತದ (India) ಜೊತೆ ಜಗಳವಾಡಲು ಕಾಯುತ್ತಿರುವ ಚೀನಾ (China) ಭಾರತವನ್ನು ಹೊಸದೊಂದು ಸಂಕಷ್ಟಕ್ಕೆ ದೂಡಲು ಹೊರಟಿದೆ. ಚೀನಾದ ಒಂದು ಅಭಿವೃದ್ಧಿ (Developing) ಯೋಜನೆ ಭಾರತಕ್ಕೆ ಮುಳುವಾಗಲಿದೆ ಎಂಬ ಮುನ್ಸೂಚನೆ ದೊರೆಯುತ್ತಿದೆ. ಭಾರತಕ್ಕೆ ತೊಂದರೆ (Problem) ಉಂಟು ಮಾಡುತ್ತಿರುವ ಚೀನಾದ ಅಭಿವೃದ್ಧಿ ಕೆಲಸ (Work) ಏನು? ಇದರಿಂದ ಹೇಗೆ ಭಾರತಕ್ಕೆ ಸಂಕಷ್ಟ ಎದುರಾಗುತ್ತದೆ ಎಂಬುದನ್ನು ಇಲ್ಲಿ ವಿವರವಾಗಿ (Detail) ತಿಳಿಯೋಣ.
ಭಾರತಕ್ಕೆ ತೊಂದರೆ ಉಂಟು ಮಾಡುವ ಚೀನಾದ ಯೋಜನೆ ಯಾವುದು?
ಚೀನಾವು ಯಾರ್ಲುಂಗ್ ತ್ಸಾಂಗ್ಪೋ (ಭಾರತದಲ್ಲಿ ಬ್ರಹ್ಮಪುತ್ರ ನದಿ) ನದಿಗೆ 60 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಅಣೆಕಟ್ಟು ಒಂದನ್ನು ಚೀನಾ ನಿರ್ಮಿಸುತ್ತಿದೆಯೆಂದು ವಿದ್ಯುತ್ ಸಚಿವಾಲಯದ ಮೂಲಗಳು ತಿಳಿಸಿವೆ.
ನಿರ್ಮಾಣ ಹಂತದಲ್ಲಿರುವ ಈ ಅಣೆಕಟ್ಟು ಮೆಡೊಗ್ ಗಡಿಯಲ್ಲಿದ್ದು, ಅರುಣಾಚಲ ಪ್ರದೇಶಕ್ಕೆ ಅತ್ಯಂತ ಸಮೀಪದಲ್ಲಿದೆ. ಚೀನಾದ ಈ ಯೋಜನೆ ಭಾರತದಲ್ಲಿ ನೀರಿನ ಕೊರತೆಯನ್ನು, ಪ್ರವಾಹದ ಆತಂಕವನ್ನು ಮೂಡಿಸಿದೆ.
ಕೃತಕ ಪ್ರವಾಹ ಉಂಟು ಮಾಡುತ್ತದೆ ಚೀನಾದ ಡ್ಯಾಂ ಯೋಜನೆ
ಹೌದು, ಚೀನಾದಲ್ಲಿ ಈ ಅಣೆಕಟ್ಟು ನಿರ್ಮಾಣದ ಬಗ್ಗೆ ಭಾರತ ಚಿಂತಿಸುತ್ತಿದೆ. ಮೂಲಗಳ ಪ್ರಕಾರ, ಅಣೆಕಟ್ಟು ನಿರ್ಮಾಣದ ನಂತರ ಚೀನಾ ಬ್ರಹ್ಮಪುತ್ರ ನದಿಯ ನೀರನ್ನು ತಿರುಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಷ್ಟೇ ಅಲ್ಲ, ಈ ಅಣೆಕಟ್ಟಿನಿಂದ ನೀರು ನಿಲ್ಲಿಸುವುದರಿಂದ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎನ್ನಲಾಗುತ್ತಿದೆ. ಮುಖ್ಯವಾಗಿ ಚೀನಾ ನಿರ್ಮಿಸಲು ಹೊರಟಿರುವ ಅಣೆಕಟ್ಟು ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ನೀರಿನ ಕೊರತೆ ಅಥವಾ ಪ್ರವಾಹದಂತಹ ಪರಿಸ್ಥಿತಿಯನ್ನು ಉಂಟುಮಾಡಬಹುದು ಎಂದು ಮೂಲಗಳು ತಿಳಿಸಿವೆ.
"ಮೆಡೋಗ್‌ನಲ್ಲಿ ನಿರ್ಮಾಣ ಹಂತದಲ್ಲಿರುವ 60,000 MW ಅಣೆಕಟ್ಟು ಬ್ರಹ್ಮಪುತ್ರದ ನೈಸರ್ಗಿಕ ನೀರಿನ ಹರಿವನ್ನು ಕಡಿಮೆ ಮಾಡುತ್ತದೆ ಅಥವಾ "ಕೃತಕ ಪ್ರವಾಹ" ಉಂಟು ಮಾಡುತ್ತದೆ. ಇದು ಭಾರತಕ್ಕೆ ಕಳವಳಕಾರಿ" ಎಂದು ಮೂಲಗಳು ತಿಳಿಸಿವೆ.
ಪ್ರಸ್ತಾವಿತ ಯೋಜನೆಯ ವಿನ್ಯಾಸವು ಮಾನ್ಸೂನ್ ಹರಿವಿನ ಸಮಯದಲ್ಲಿ 9 ಶತಕೋಟಿ ಘನ ಮೀಟರ್ (ಅಥವಾ ಸುಮಾರು 9 ಶತಕೋಟಿ ಟನ್ ನೀರು) ಬಫರ್ ಸ್ಟೋರೇಜ್ ಅನ್ನು ಒಳಗೊಂಡಿದೆ ಎಂದು ಯೋಜನೆಗೆ ಸಂಬಂಧಿಸಿದ ಮೂಲಗಳು ತಿಳಿಸಿವೆ.
ಬಾಂಗ್ಲಾ ದೇಶದ ಮೇಲೂ ಎಫೆಕ್ಟ್
ಈ ಅಣೆಕಟ್ಟು ಯೋಜನೆ ಭಾರತ ಮಾತ್ರವಲ್ಲದೆ, ಬಾಂಗ್ಲಾದೇಶದ ಮೇಲೂ ಪರಿಣಾಮ ಬೀರಬಹುದು ಎಂದು ವಿದ್ಯುತ್ ಸಚಿವಾಲಯದ ಮೂಲಗಳು ತಿಳಿಸಿವೆ. ಈ ಮೂಲಕ ಚೀನಾ ಒಂದೇ ಕಲ್ಲಲ್ಲಿ ಎರಡು ಹಕ್ಕಿಯನ್ನು ಹೊಡಿಯುವ ಪ್ಲ್ಯಾನ್ ಮಾಡುತ್ತಿದೆ.
ಇದನ್ನೂ ಓದಿ:Indo-China Crisis: ಭಾರತದ ಗಡಿ ಪಕ್ಕದಲ್ಲೇ ಚೀನಾದಿಂದ ಬೃಹತ್ ಡ್ಯಾಂ ನಿರ್ಮಾಣ: ಉಪಗ್ರಹ ಚಿತ್ರ ಬಿಡುಗಡೆ
ಬ್ರಹ್ಮಪುತ್ರ ನದಿ
ಚೀನಾದಲ್ಲಿ ಯಾರ್ಲುಂಗ್ ತ್ಸಾಂಗ್ಪೋ ಎಂದು ಕರೆಯಲ್ಪಡುವ ಬ್ರಹ್ಮಪುತ್ರ ನದಿಯು 2,880 ಕಿಮೀ ಉದ್ದದ ಟ್ರಾನ್ಸ್‌ಬಾರ್ಡರ್ ನದಿಯಾಗಿದ್ದು, ಇದು ಮಾನಸ ಸರೋವರದಲ್ಲಿ ಹುಟ್ಟುತ್ತದೆ ಮತ್ತು ಟಿಬೆಟ್‌ನಲ್ಲಿ 1,700 ಕಿಮೀ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ 920 ಕಿಮೀ ಮತ್ತು ಬಾಂಗ್ಲಾದೇಶದಲ್ಲಿ 260 ಕಿಮೀ ಹರಿಯುತ್ತದೆ.
ಇದು ಸುಮಾರು 30% ಸಿಹಿನೀರಿನ ಸಂಪನ್ಮೂಲಗಳನ್ನು ಮತ್ತು 40% ಭಾರತದ ಜಲವಿದ್ಯುತ್ ಸಾಮರ್ಥ್ಯವನ್ನು ಹೊಂದಿದೆ. ಅದರ ಹರಿವನ್ನು ಬೇರೆಡೆಗೆ ತಿರುಗಿಸುವುದು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಕೃಷಿಯ ಮೇಲೆ ಪರಿಣಾಮ ಬೀರುತ್ತದೆ.
ಅರುಣಾಚಲ ಪ್ರದೇಶವನ್ನು ಬಹುಕಾಲದಿಂದ ದೊಡ್ಡ ಜಲವಿದ್ಯುತ್ ಯೋಜನೆಗಳಿಗೆ ಶ್ರೀಮಂತ ಸಾಮರ್ಥ್ಯ ಹೊಂದಿರುವ ರಾಜ್ಯವೆಂದು ಪರಿಗಣಿಸಲಾಗಿದೆ, ಸ್ಥಳೀಯ ಆಂದೋಲನಗಳು ಪ್ರಾಥಮಿಕವಾಗಿ ಕೃಷಿಭೂಮಿಗೆ ಬೆದರಿಕೆ, ಸ್ಥಳಾಂತರ ಮತ್ತು ಪರಿಸರ ಕಾಳಜಿಗಳ ಕಾರಣದಿಂದಾಗಿ ಅನೇಕ ಯೋಜನೆಗಳು ಸ್ಥಗಿತಗೊಂಡಿವೆ.
ಕಳೆದ ವಾರ, ಅರುಣಾಚಲ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಸ್ಥಗಿತಗೊಂಡಿರುವ ಐದು ಜಲವಿದ್ಯುತ್ ಯೋಜನೆಗಳನ್ನು ಕೇಂದ್ರ ಸಂಸ್ಥೆಗಳಿಗೆ ಹಸ್ತಾಂತರಿಸಲು ನಿರ್ಧರಿಸಿದೆ.
ಎಲ್ಲಾ ಪರಿಸ್ಥಿತಿಗಳನ್ನು ಎದುರಿಸುತ್ತೇವೆ -ಭಾರತ
ಚೀನಾದ ಕುತಂತ್ರಿ ಕೆಲಸಕ್ಕೆ ಗುದ್ದು ಕೊಡಲು ಭಾರತ ಸಜ್ಜಾಗಿದೆ. ಈ ಎಲ್ಲಾ ಬೆಳವಣಿಗೆಯನ್ನು, ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. "ಭಾರತವು ಅರುಣಾಚಲ ಪ್ರದೇಶದಲ್ಲಿ ಸಂಗ್ರಹ ಸಾಮರ್ಥ್ಯದೊಂದಿಗೆ ಅನೇಕ ಅಣೆಕಟ್ಟುಗಳನ್ನು ಸಿದ್ಧಪಡಿಸುತ್ತಿದೆ" ಎಂದು ಮೂಲಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ