ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಬಿಲ್​ ಸಂಸತ್ತಿನಲ್ಲಿ ಪಾಸ್​!


Updated:August 6, 2018, 8:27 PM IST
ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಬಿಲ್​ ಸಂಸತ್ತಿನಲ್ಲಿ ಪಾಸ್​!

Updated: August 6, 2018, 8:27 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.06): ರಾಷ್ಟ್ರೀಯ ಹಿಂದುಳಿದ ವರ್ಗದ ಆಯೋಗಕ್ಕೆ ಸಾಂವಿಧಾನಿಕ ದರ್ಜೆ ನೀಡುವ ಕುರಿತಾದ ಸಂವಿಧಾನ ತಿದ್ದುಪಡಿ ವಿಧೇಯಕಕ್ಕೆ ಸಂಸತ್ತಿನ ಅನುಮೋದನೆ ದೊರಕಿದೆ. ರಾಜ್ಯಸಭೆಯು ಸೋಮವಾರದಂದು ಇದಕ್ಕೆ ಸಂಬಂಧಿಸಿದ 'ಸಂವಿಧಾನ(123ನೇ ತಿದ್ದುಪಡಿ) ವಿಧೇಯಕವನ್ನು ಅನುಮೋದಿಸಿದೆ. ಲೋಕಸಭೆಯು ಈ ಮೊದಲೇ ಈ ಮಸೂದೆಗೆ ಸಮ್ಮತಿ ನೀಡಿತ್ತು. ಸಂವಿಧಾನ ತಿದ್ದುಪಡಿ ಮಾಡುವ ಸಲುವಾಗಿ ವಿಧೇಯಕ ಅನುಮೋದನೆಗೆ ಮತ ಎಣಿಕೆ ನಡೆಸಿದ್ದು, ಇದರಲ್ಲಿ ಎಲ್ಲಾ 156 ಸದಸ್ಯರು ತಮ್ಮ ಸಮ್ಮತಿ ನೀಡಿದ್ದಾರೆ.

ವಿಧೇಯಕಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಉತ್ತರಿಸಿದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಮಂತ್ರಿ ಥಾವರ್​ಚಂದ್​ ಗೆಹ್ಲೋಟ್​ "ಈ ಮಸೂದೆ ಅನುಮೋದನೆ ಪಡೆದ ಬಳಿಕ ರಾಜ್ಯದ ಹಕ್ಕುಗಳ ದುರುಪಯೋಗವಾಗುತ್ತದೆ ಎಂಬ ಕುರಿತಾಗಿ ಕೆಲ ಸದಸ್ಯರು ವ್ಯಕ್ತಪಡಿಸಿರುವ ಆತಂಕ ನಿಷ್ಪ್ರಯೋಜಕ" ಎಂದಿದ್ದಾರೆ. ಅಲ್ಲದೇ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕೇಂದ್ರ ಹಾಗೂ ರಾಜ್ಯ ಪಟ್ಟಿ ಒಂದೇ ಸಮನಾಗಿದೆ. ಆದರೆ ಒಬಿಸಿ ವಿಚಾರದಲ್ಲಿ ಇದು ಭಿನ್ನವಾಗಿದೆ ಎಂದಿದ್ದಾರೆ.

ರಾಜ್ಯವು ಒಬಿಸಿ ಜಾತಿಗಳನ್ನು ನಿರ್ಣಯಿಸಲು ಸ್ವತಂತ್ರವಾಗಿದೆ. ಈ ಮಸೂದೆ ಕಾನೂನು ಆದ ಬಳಿಕ ಒಂದು ವೇಳೆ ರಾಜ್ಯವು ಯಾವುದೇ ಜಾತಿಯನ್ನು ಒಬಿಸಿಯ ಕೇಂದ್ರೀಯ ಪಟ್ಟಿಗೆ ಸೇರ್ಪಡೆಗೊಳಿಸಲು ಇಚ್ಛಿಸಿದರೆ, ಅದು ಆ ಕೂಡಲೇ ತನ್ನ ನಿರ್ಣಯವನ್ನು ಕೇಂದ್ರ ಅಥವಾ ಈ ಆಯೋಗಕ್ಕೆ ಕಳುಹಿಸಿಕೊಡಬಹುದು ಎಂದು ಗೆಹ್ಲೋಟ್​ ಹೇಳಿದ್ದಾರೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ