HOME » NEWS » National-international » CONSTITUTION DAY OF INDIA KNOW WHY IS IT CELEBRATED ON 26 NOVEMBER SNVS

Constitution Day of India: ಸಂವಿಧಾನ ದಿನ – ನ. 26ರಂದು ಇದರ ಆಚರಣೆ ಯಾಕೆ?

National Law day 2020 – ಸ್ವಾತಂತ್ರ್ಯಪೂರ್ವದಲ್ಲಿ ರಚಿಸಲಾಗಿದ್ದ ಸಂವಿಧಾನ ರಚನಾ ಸಭೆ 1949ರಲ್ಲಿ ಸಂವಿಧಾನವನ್ನು ಅಳವಡಿಸಿದ ದಿನ ಇದಾಗಿದೆ. 2015ರಿಂದ ಸಂವಿಧಾನ ದಿನ ಎಂದು ಆಚರಿಸಲಾಗುತ್ತಿದೆ. ಅದಕ್ಕೆ ಮುನ್ನ ಕಾನೂನು ದಿನವಾಗಿ ಆಚರಿಸಲಾಗುತ್ತಿತ್ತು.

news18
Updated:November 26, 2020, 11:10 AM IST
Constitution Day of India: ಸಂವಿಧಾನ ದಿನ – ನ. 26ರಂದು ಇದರ ಆಚರಣೆ ಯಾಕೆ?
ಭಾರತದ ಸಂವಿಧಾನ
  • News18
  • Last Updated: November 26, 2020, 11:10 AM IST
  • Share this:
ಇವತ್ತು ನವೆಂಬರ್ 26 – ಪ್ರತೀ ವರ್ಷ ಈ ದಿನದಂದು ಭಾರತದಲ್ಲಿ ಸಂವಿಧಾನ ದಿನ ಎಂದು ಆಚರಿಸಲಾಗುತ್ತದೆ. ರಾಷ್ಟ್ರೀಯ ಕಾನೂನು ದಿನ ಅಥವಾ ನ್ಯಾಷನಲ್ ಲಾ ಡೇ ಎಂದೂ ಕರೆಯಲಾಗುತ್ತದೆ. ಭಾರತದ ಸಂವಿಧಾನವನ್ನು ಅಳವಡಿಸಿಕೊಂಡ ಸಂದರ್ಭದ ಸ್ಮರಣೆಗಾಗಿ ಈ ದಿನವನ್ನ ಆಚರಿಸಲಾಗುತ್ತದೆ. 1949ರ ಈ ದಿನದಂದು ಭಾರತದ ಕಾನ್ಸ್​ಟಿಟ್ಯೂಯೆಂಟ್ ಅಸೆಂಬ್ಲಿ (ಸಂವಿಧಾನ ರೂಪಿಸಲು ರಚಿಸಲಾಗಿದ್ದ ಸಭೆ) ಸಂವಿಧಾನವನ್ನು ಅಧಿಕೃತವಾಗಿ ಅಳವಡಿಸಿತು. ಅಂದರೆ ಸಂವಿಧಾನ ರಚನೆಯಾಗಿ ಸರಿಯಾಗಿ 71 ವರ್ಷ ಗತಿಸಿದೆ. ಮರು ವರ್ಷ, ಅಂದರೆ 1950, ಜನವರಿ 26ರಂದು ಸಂವಿಧಾನ ವಾಸ್ತವದಲ್ಲಿ ಜಾರಿಗೆ ಬಂದಿತು.

ಕುತೂಹಲಕ ವಿಷಯ ಎಂದರೆ, ಸಂವಿಧಾನ ದಿನ ಎಂದು ಆಚರಣೆ ಶುರುವಾಗಿದ್ದು 2015ರಿಂದ. ಅದಕ್ಕೂ ಮುನ್ನ ಕಾನೂನು ದಿನವಾಗಿ ಆಚರಿಸಲಾಗುತ್ತಿತ್ತು. 1930ರಲ್ಲಿ ಅಂದಿನ ಕಾಂಗ್ರೆಸ್​ನ ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯಕ್ಕೆ ಪಣ ತೊಡಲಾಯಿತು. ಆ ಐತಿಹಾಸಿಕ ದಿನ ಕೂಡ ನ. 26 ಆಗಿದೆ.

ಇನ್ನು, ಕಾನ್ಸ್​ಟಿಟ್ಯುಯೆಂಟ್ ಅಸೆಂಬ್ಲಿ ಅಥವಾ ಸಂವಿಧಾನ ರಚನಾ ಸಭೆಯನ್ನು ರೂಪಿಸಿದ್ದು 1946ರಲ್ಲಿ. ಆಗ ಭಾರತದ ಭಾಗವಾಗಿದ್ದ ಪಾಕಿಸ್ತಾನ, ಬಾಂಗ್ಲಾದೇಶದಿಂದಲೂ ಪ್ರತಿನಿಧಿಗಳು ಈ ಸಭೆಯಲ್ಲಿದ್ದರು. ವಿಭಜನೆ ಆದ ಬಳಿಕ ಅವೆರಡು ದೇಶಗಳು ಪ್ರತ್ಯೇಕ ಸಂವಿಧಾನ ರಚನೆ ಮಾಡಿದವು. ಭಾರತ 1950, ಜನವರಿ 26ರಂದು ಅಧಿಕೃತವಾಗಿ ಸಂವಿಧಾನವನ್ನು ಅಳವಡಿಕೆ ಮಾಡಿಕೊಂಡಿತು. ಆದರೆ, ಸಂವಿಧಾನವನ್ನು ಅಧಿಕೃತವಾಗಿ ಸ್ವೀಕರಿಸಿದ್ದು 1949, ನ. 26ರಂದು.

ಇದನ್ನೂ ಓದಿ: 26/11 Mumbai Attack: ಮುಂಬೈ ದಾಳಿ ನಂತರ ಕಸಬ್​ನನ್ನು ಹಿಂದೂ ಎಂದು ಬಿಂಬಿಸಲು ನಡೆದಿತ್ತು ಸಂಚು; ಸತ್ಯ ಬಿಚ್ಚಿಟ್ಟ ಮಾಜಿ ಕಮಿಷನರ್

ಏನಿದು ಸಂವಿಧಾನ?

ಸರ್ಕಾರ ಸಂವಿಧಾನದ ಮೂಲಕ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಅಧಿಕಾರದ ವ್ಯಾಖ್ಯಾನ ಮಾಡುತ್ತದೆ. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನ ನಿರ್ದಿಷ್ಟಪಡಿಸುತ್ತದೆ. ಎಲ್ಲಾ ಕಾನೂನಿಗಿಂತ ಸಂವಿಧಾನವೇ ಮಿಗಿಲು. ಹೀಗಾಗಿ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾನೂನು ರೂಪಿಸಲು ಸಾಧ್ಯವಿಲ್ಲ.

ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಲಾಗಿದೆ. ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಸಂವಿಧಾನ ರಚನಾ ಸಭೆಯಲ್ಲಿ 250ಕ್ಕೂ ಹೆಚ್ಚು ಸದಸ್ಯರು ಇದ್ದರಾದರೂ ಇದರ ಪ್ರಮುಖ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರಾಗಿದ್ದಾರೆ. ಹೀಗಾಗಿ, ಅವರನ್ನ ಸಂವಿಧಾನ ಕರ್ತೃ ಎಂದು ಹೇಳಲಾಗುತ್ತದೆ. ಜನಸಾಮಾನ್ಯರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಸಂವಿಧಾನ ದಿನವನ್ನು ಬಳಸಿಕೊಳ್ಳಲಾಗುತ್ತಿದೆ.
Published by: Vijayasarthy SN
First published: November 26, 2020, 10:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading