• Home
 • »
 • News
 • »
 • national-international
 • »
 • Constitution Day 2022: ಸಂವಿಧಾನದ ಕುರಿತಾದ ಕೆಲ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿದೆ ನೋಡಿ

Constitution Day 2022: ಸಂವಿಧಾನದ ಕುರಿತಾದ ಕೆಲ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿದೆ ನೋಡಿ

ಸಂಸತ್

ಸಂಸತ್

ಭಾರತದ ಪ್ರತಿಯೊಬ್ಬ ನಾಗರಿಕನೂ ಈ ಸಂವಿಧಾನಕ್ಕೆ ಎಂದೆಂದಿಗೂ ಬದ್ಧನಾಗಿರುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ಸಂವಿಧಾನವು ಪ್ರತಿಯೊಬ್ಬ ಭಾರತೀಯನ ಹಕ್ಕನ್ನು ಎತ್ತಿ ಹಿಡಿಯುವ ಸಾಧನವಾಗಿದೆ ಎಂದರೂ ತಪ್ಪಿಲ್ಲ.

 • Trending Desk
 • 3-MIN READ
 • Last Updated :
 • New Delhi, India
 • Share this:

  ವಿವಿಧ ಧರ್ಮಗಳು, ಸಂಪ್ರದಾಯಗಳು, ಆಚಾರ-ವಿಚಾರಗಳನ್ನು ಹೊಂದಿರುವ ಭಾರತ ದೇಶವು ದೊಡ್ಡ ಮಟ್ಟದಲ್ಲಿ, ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿನಿಧಿಸುವ ಬಹುಶಃ ಏಕೈಕ ದೇಶವಾಗಿರಬಹುದೇನೋ. ಜಾತಿ-ಅಂತಸ್ತು, ಸಿರಿವಂತ-ಬಡವ ಹೀಗೆ ಯಾವುದೇ ರೀತಿಯ ಜನರಿರಲಿ ಎಲ್ಲರೂ ಪರಿಪಾಲಿಸುವ ದೇಶದ ಏಕೈಕ ಮಹತ್ವದ ಅಂಶವೆಂದರೆ ಅದು ಸಂವಿಧಾನ. ಭಾರತದ ಪ್ರತಿಯೊಬ್ಬ ನಾಗರಿಕನೂ ಈ ಸಂವಿಧಾನಕ್ಕೆ ಎಂದೆಂದಿಗೂ ಬದ್ಧನಾಗಿರುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ಸಂವಿಧಾನವು ಪ್ರತಿಯೊಬ್ಬ ಭಾರತೀಯನ ಹಕ್ಕನ್ನು ಎತ್ತಿ ಹಿಡಿಯುವ ಸಾಧನವಾಗಿದೆ ಎಂದರೂ ತಪ್ಪಿಲ್ಲ.


  ಪ್ರಸ್ತುತ ಜಾರಿಯಲ್ಲಿರುವ ನಮ್ಮ ದೇಶದ ಸಂವಿಧಾನದ ರಚನೆಯನ್ನು ಅಂದಿನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್, ಬಿ.ಎನ್. ರಾವು (ಸಂವಿಧಾನ ಅಸ್ಸೆಂಬ್ಲಿಯ ಸಲಹೆಗಾರರು) ಹಾಗೂ ಸುರೇಂದ್ರನಾಥ್ ಮುಖರ್ಜೀ (ಸಂವಿಧಾನ ಅಸ್ಸೆಂಬ್ಲಿಯ ಪ್ರಮುಖ ಕರಡುಪ್ರತಿ ಕರ್ತೃ) ಇವರುಗಳಿಂದ ಮಾಡಲ್ಪಟ್ಟಿದೆ. ಹೀಗೆ ಪ್ರತಿಪಾದಿಸಲಾದ ಸಂವಿಧಾನದ ಕರಡು ಎಷ್ಟು ಶಕ್ತಿಶಾಲಿ ಅಂಶಗಳನ್ನು ಒಳಗೊಂಡಿತ್ತೆಂದರೆ ಇದು 1935 ರ ಭಾರತ ಸರ್ಕಾರದ ಕಾಯಿದೆ ಮತ್ತು ಭಾರತೀಯ ಸ್ವಾತಂತ್ರ್ಯ ಕಾಯಿದೆ 1947 ಗಳನ್ನು ರದ್ದುಗೊಳಿಸಿತು.


  ಇದನ್ನೂ ಓದಿ:  Shocking Law: ತಾಯಿಯಿಂದ ಮಕ್ಕಳನ್ನು ದೂರವಾಗಿರಿಸುವುದೂ ಕಾನೂನುಬದ್ಧವಂತೆ!


  ಸಂವಿಧಾನದ ಪೀಠಿಕೆ/ಮುನ್ನುಡಿ


  ನಮ್ಮ ಸಂವಿಧಾನದ ಮುನ್ನುಡಿಯ ಪ್ರಕಾರ, ಭಾರತದ ಸಂವಿಧಾನವು ಭಾರತವನ್ನು "ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ" ಆಗಿ ರೂಪಿಸಲು ಪ್ರಮಾಣ ವಚನ ಸ್ವೀಕರಿಸಿದ ನಿರ್ಣಯವನ್ನು ಅನುಸರಿಸುತ್ತದೆ ಎನ್ನುವುದು ಗಮನಾರ್ಹವಾದ ಅಂಶವಾಗಿದೆ. ಇಲ್ಲಿ ಸಾರ್ವಭೌಮತ್ವ ಎಂದರೆ ಸರ್ವೋಚ್ಚ ಮತ್ತು ಅಂತಿಮ ಶಕ್ತಿ ಎಂದು ಪರಿಗಣಿಸಿರುವುದಾಗಿದೆ. ಅಂದರೆ ಮುನ್ನುಡಿಯ ಮುಖ್ಯ ಉದ್ದೇಶಗಳು, ಎಲ್ಲ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಭದ್ರಪಡಿಸುವುದಾಗಿದೆ. ಹೀಗೆ ರಚಿತವಾದ ಸಂವಿಧಾನಕ್ಕೆ 284 ಸಾಂವಿಧಾನಿಕ ಅಸೆಂಬ್ಲಿ ಸದಸ್ಯರು ಸಹಿ ಹಾಕಿದರು ಹಾಗೂ ಅವರಲ್ಲಿ ಜವಾಹರಲಾಲ್ ನೆಹರು, ವಲ್ಲಭಭಾಯಿ ಪಟೇಲ್ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ ಮುಂತಾದವರಿದ್ದಾರೆ.


  ಅಂಗೀಕೃತಗೊಂಡ ದಿನ


  ಹೀಗೆ ಭಾರತದ ಸಂವಿಧಾನ ರಚಿತವಾದ ಮೇಲೆ ಸಂವಿಧಾನ ಸಭೆಯು ನವೆಂಬರ್ 26, 1949 ರಂದು ದೇಶದಲ್ಲಿ ಸಂವಿಧಾನವನ್ನು ಸಮರ್ಪಕವಾಗಿ ಅಂಗೀಕರಿಸಲಾಯಿತು. ಆ ಕಾರಣದಿಂದಾಗಿಯೇ ಭಾರತ ಸರ್ಕಾರವು ನವೆಂಬರ್ 26, 2015 ಅನ್ನು ಸಂವಿಧಾನ ದಿನವೆಂದು ಘೋಷಿಸಿತು ಎಂಬುದನ್ನು ನೆನಪಿಸಿಕೊಳ್ಳಬಹುದು. ಭಾರತದ ಕಾನೂನುಗಳು ಮತ್ತು ಅವುಗಳ ಅನುಷ್ಠಾನವನ್ನು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿದೆ. ಆದ್ದರಿಂದ, ನವೆಂಬರ್ 26 ಅನ್ನು "ರಾಷ್ಟ್ರೀಯ ಕಾನೂನು ದಿನ" ಎಂದೂ ಸಹ ಕರೆಯಲಾಗುತ್ತದೆ ಎಂಬುದು ಇನ್ನೊಂದು ವಿಶೇಷ.


  ಸಂವಿಧಾನದ ಮುಖ್ಯ ಸಲಹೆಗಾರ


  ಸಂವಿಧಾನದ ಮುಖ್ಯ ಸಲಹೆಗಾರರಾಗಿದ್ದ ಸರ್ ಬೆನೆಗಲ್ ನರಸಿಂಗ್ ರಾವು ಅವರು ICS ಆಗಿದ್ದರು, ಅವರು ಅಂತರರಾಷ್ಟ್ರೀಯ ನ್ಯಾಯಾಲಯದ (ICJ) ಮೊದಲ ಭಾರತೀಯ ನ್ಯಾಯಾಧೀಶರು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷರೂ ಆಗಿದ್ದರು ಎಂಬುದು ಇಲ್ಲಿ ವಿಶೇಷ. ಸರ್ ರಾವು ಸಂವಿಧಾನದ ಆರಂಭಿಕ ಕರಡನ್ನು ಸಿದ್ಧಪಡಿಸಿದ್ದರು. ಈ ಬಗ್ಗೆ ಡಾ ಬಿ ಆರ್ ಅಂಬೇಡ್ಕರ್ ಅವರು ನವೆಂಬರ್ 25, 1949 ರಂದು ತಮ್ಮ ಭಾಷಣದಲ್ಲಿ ಸರ್ ರಾವು ಅವರ ಕೊಡುಗೆಗಳನ್ನು ಗುರುತಿಸಿದ್ದರು.


  ಇದನ್ನೂ ಓದಿ:   ಹಿಂದೂಗಳು ಒಬ್ಬರನ್ನು ಮದುವೆಯಾಗಿ ಮೂವರನ್ನು ಇಟ್ಟುಕೊಳ್ಳುತ್ತಾರೆ; AIMIM ಮುಖಂಡ


  ಕೆಲವು ಆಸಕ್ತಿಕರ ವಿಷಯಗಳು


  ಸಂವಿಧಾನದ ಮೂಲ ಆವೃತ್ತಿಯನ್ನು ಅಲಂಕರಿಸಿದವರು ಯಾರೆಂಬುದು ನಿಮಗೆ ಗೊತ್ತೆ?


  ಬೆಯೋಹರ್ ರಾಮಮನೋಹರ್ ಸಿನ್ಹಾ ಮತ್ತು ನಂದಲಾಲ್ ಬೋಸ್ ಮತ್ತು ಶಾಂತಿನಿಕೇತನದ ಕಲಾವಿದರು.


  ಸಂವಿಧಾನದ ಕ್ಯಾಲಿಗ್ರಾಫರ್ ಯಾರು?


  ಪ್ರೇಮ್ ಬಿಹಾರಿ ನರೇನ್ ರೈಜಾದಾ


  ಹೀಗೆ ರಚಿತವಾದ ಭಾರತದ ಸಂವಿಧಾನ ಇಂದಿಗೂ ಜಾರಿಯಲ್ಲಿದ್ದು ಪ್ರತಿಯೊಬ್ಬರೂ ಅದಕ್ಕೆ ಬದ್ಧರಾಗಿದ್ದಾರೆ. ಇಂದಿಗೂ ನಮ್ಮ ದೇಶದಲ್ಲಿ ಸಂವಿಧಾನಕ್ಕಿಂತ ಮಿಗಿಲಾಗಿದ್ದು ಯಾವುದೂ ಇಲ್ಲ ಎಂಬಂಶವು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಅಂಶವೇ ಆಗಿದೆ. ಹಾಗಾಗಿ ಇಂದು ಸಂವಿಧಾನ ದಿನ ಇರುವುದರಿಂದ ನಾವೆಲ್ಲರೂ ನಮ್ಮ ಸಂವಿಧಾನಕ್ಕೆ ನಿಷ್ಠರಾಗಿರೋಣ ಎಂಬ ಪ್ರತಿಜ್ಞೆಯನ್ನು ಮಾಡೋಣ.

  Published by:Precilla Olivia Dias
  First published: