ಇತ್ತೀಚಿನ ದಿನಗಳಲ್ಲಿ ಜಿಮ್‌ನಲ್ಲಿ (Gym) ವ್ಯಾಯಾಮ (Exercise) ಮಾಡುವಾಗ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅತಿಯಾದ ವ್ಯಾಯಾಮ ಮತ್ತು ಹೆಚ್ಚಿನ ಪ್ರಮಾಣದ ಪ್ರೋಟೀನ್ ಶೇಕ್‌ಗಳ (Protien Shakes) ನಿಯಮಿತ ಬಳಕೆ ಸೇರಿದಂತೆ ಇತರ ಅಂಶಗಳಿಂದ ಹೃದಯಾಘಾತ (Heart Attackl) ಉಂಟಾಗುತ್ತದೆ ಎಂದು ವೈದ್ಯರು (Doctor) ನಂಬುತ್ತಾರೆ. ಎಲ್ಲರ ದೇಹವೂ ಎಲ್ಲದ್ದಕ್ಕೂ ಒಗ್ಗಿಕೊಳ್ಳುವುದಿಲ್ಲ ಎಂಬುದನ್ನು ನೀವು ತಿಳಿದಿರಬೇಕು. ಜಿಮ್‌ನಲ್ಲಿ ಒಬ್ಬರ ಬಾಡಿ ಚೆನ್ನಾಗಿದ್ದರೆ ಅವರ ರೀತಿ ನಾವೂ ಆಗಬೇಕು ಎಂದು ಅಂದುಕೊಳ್ಳಬಾರದು. ನಮ್ಮ ದೇಹವನ್ನು ಯಾವ ರೀತಿ ಇಟ್ಟುಕೊಳ್ಳಬೇಕೆಂಬ ಮನಸ್ಥಿತಿ ಮಾತ್ರ ಇರಬೇಕು. ಹೆಚ್ಚಾಗಿ ವ್ಯಾಯಾಮ ಮಾಡಿದರೂ ಅಪಾಯ ಕಟ್ಟಿಟ್ಟ ಬುತ್ತಿ.
ವರ್ಕೌಟ್ ಮಾಡುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್!
ಇತ್ತೀಚೆಗಷ್ಟೇ ಹೈದರಾಬಾದಿನ ಬೋಯಿನಪಲ್ಲಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ನಗರದ ಆಸಿಫ್‌ನಗರ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿರುವ ವಿಶಾಲ್ ಪ್ರತಿದಿನದಂತೆ ಇಂದು ಬೆಳಗ್ಗೆಯೂ ವಿಶಾಲ್ ಬೋಯಿನಪಲ್ಲಿ ಜಿಮ್‌ಗೆ ತೆರಳಿ ವ್ಯಾಯಾಮ ಮಾಡಿದರು. ಬಹಳ ಹೊತ್ತು ಪುಷ್-ಅಪ್ಸ್ ಮಾಡಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದರು. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಬೆಚ್ಚಿ ಬೀಳಿಸೋ ಭಯಾನಕ ವಿಡಿಯೋ ಇಲ್ಲಿದೆ!
ಇನ್ನೂ ಕಾನ್ಸ್ಟೇಬಲ್ ವಿಶಾಲ್ ಕುಸಿದು ಬೀಳುವ ಭಯಾನಕ ದೃಶ್ಯಗಳು ಜಿಮ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಡ ನೋಡುತ್ತಲೇ ಕ್ಷಣಾರ್ಧದಲ್ಲಿ ವಿಶಾಲ್ ಕುಸಿದು ಬೀದಿದ್ದಾರೆ. ವಿಶಾಲ್ ಅವರು ಕಳೆದ ಕೆಲ ವರ್ಷಗಳಿಂದ ಜಿಮ್ ಮಾಡಿ ತುಂಬಾ ಫಿಟ್ ಆಗಿ ಕಾಣುತ್ತಿದ್ದರು. ಆದರೆ ಇಂದು ಏನಾಯಿತು ಎಂದು ತಿಳಿಯುವ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ.
వ్యాయామం చేస్తుండగా అటాక్తో కానిస్టేబుల్ మృతి
హైదరాబాద్ - ఆసిఫ్ నగర్ పోలీస్ స్టేషన్లో విధులు నిర్వహిస్తున్న కానిస్టేబుల్ విశాల్ వ్యాయామం చేస్తుండగా హార్ట్ అటాక్ వచ్చి మృతి. pic.twitter.com/XEG4ZFGWbe
— Telugu Scribe (@TeluguScribe) February 24, 2023
ಹೆಚ್ಚಿನ ವರ್ಕೌಟ್ ಮಾಡೋದು ಕೂಡ ಡೇಂಜರ್!
ಯುವ ಪೀಳಿಗೆ ಜಿಮ್ ಮಾಡಿ ಅರ್ಧದಲ್ಲೇ ಪ್ರಾಣ ಕಳೆದುಕೊಳ್ಳುತ್ತಿರುವುದೇಕೆ? ಜಿಮ್ ನಿಜವಾಗಿಯೂ ಹೃದಯ ಬಡಿತವನ್ನು ನಿಲ್ಲಿಸುತ್ತಾ? ಸಾಮಾನ್ಯವಾಗಿ ಪ್ರತಿನಿತ್ಯ ವ್ಯಾಯಾಮ ಮಾಡುವವರಲ್ಲಿ ಹೃದ್ರೋಗ ಬರುವುದಿಲ್ಲ. ಆದಾಗ್ಯೂ, ವ್ಯಾಯಾಮದ ಸಮಯದಲ್ಲಿ ದೇಹದ ಅತಿಯಾದ ಒತ್ತಡದಿಂದಾಗಿ, ರಕ್ತ ಪರಿಚಲನೆಯ ವೇಗವು ಮಹತ್ತರವಾಗಿ ಹೆಚ್ಚಾಗುತ್ತದೆ. ಆದ್ದರಿಂದ, ಹೃದಯದ ಮೇಲೆ ಹೆಚ್ಚಿನ ಕೆಲಸದ ಹೊರೆಯಿಂದಾಗಿ, ಅದರಲ್ಲಿರುವ ಪ್ಲೆಕ್ಸ್ಗಳು ಹಾನಿಗೊಳಗಾಗುತ್ತವೆ.
ಇದನ್ನೂ ಓದಿ: ನಮ್ಮನ್ನು ತಡೆದರೆ ಇಂದಿರಾ ಗಾಂಧಿಗೆ ಆದ ಗತಿ ನಿಮಗೂ ಬರುತ್ತೆ: ಅಮಿತ್ ಶಾಗೆ ಖಲಿಸ್ತಾನಿಗಳ ಬೆದರಿಕೆ!
ಇದರಿಂದ ಹೃದಯ ಸ್ತಂಭನ ಸಂಭವಿಸಿ ಸಾವು ಸಂಭವಿಸುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು. ಆನುವಂಶಿಕ ಕಾರಣಗಳಿಂದ, ವ್ಯಕ್ತಿಯು ಎಷ್ಟೇ ಫಿಟ್ ಆಗಿದ್ದರೂ, ಹೃದಯಾಘಾತವಾಗುವ ಸಾಧ್ಯತೆಗಳು ಹೆಚ್ಚು. ಕುಟುಂಬದ ಇತಿಹಾಸದಲ್ಲಿ ಈ ಹಿಂದೆ ಹೃದಯಾಘಾತದ ಪ್ರಕರಣಗಳಿದ್ದರೆ, ಅಂತಹ ಕೆಲವು ಕುಟುಂಬಗಳು ಎಷ್ಟೇ ಫಿಟ್ ಆಗಿದ್ದರೂ ಹಠಾತ್ ಹೃದಯಾಘಾತಕ್ಕೆ ಒಳಗಾಗಬಹುದು.
ಹೃದಯ ಸ್ತಂಭನಕ್ಕೆ ಕಾರಣಗಳೇನು?
ವಾಸ್ತವವಾಗಿ, ಹೃದಯಾಘಾತವು ತುಂಬಾ ಆರೋಗ್ಯಕರವಾಗಿರುವ, ಉತ್ತಮ ಆಹಾರಕ್ರಮವನ್ನು ಅನುಸರಿಸುವ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವವರಲ್ಲಿಯೂ ಸಹ ಸಾಮಾನ್ಯವಾಗಿದೆ. ಜಿಮ್‌ನಲ್ಲಿ ಭಾರವಾದ ಭಾರವನ್ನು ಎತ್ತುವುದು ಮತ್ತು ದೇಹವನ್ನು ಒಮ್ಮೆಗೆ ಹೆಚ್ಚಿನ ಒತ್ತಡಕ್ಕೆ ಒಳಪಡಿಸುವುದರಿಂದ ದೇಹದ ಆಮ್ಲಜನಕದ ಬೇಡಿಕೆಯನ್ನು ಹೆಚ್ಚಿಸುತ್ತದೆ.
ಈ ಕಾರಣದಿಂದಾಗಿ, ರಕ್ತನಾಳಗಳಲ್ಲಿ ರಕ್ತ ಪೂರೈಕೆಯ ವೇಗವು ಹೆಚ್ಚಾಗುತ್ತದೆ ಮತ್ತು ನಾಳಗಳು ಹಾನಿಗೊಳಗಾಗುವ ಸಾಧ್ಯತೆಯಿದೆ. ಇದು ಹೃದಯದಲ್ಲಿ ವಿದ್ಯುತ್ ಆಘಾತ ತರಂಗಗಳನ್ನು ಉಂಟುಮಾಡುತ್ತದೆ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಹಾಗಾಗಿ ನಮ್ಮ ಮಿತಿ ಮೀರಿ ಜಿಮ್ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ