"ಹೌದು, ನಾವು ನೆಹರೂ ಕುಟುಂಬದ ಗುಲಾಮರು" ಅಂತ ಹೆಮ್ಮೆಯಿಂದ ಘೋಷಿಸಿಕೊಂಡ Congress ನಾಯಕ!

ವಿಧಾನಸಭಾ ಕಲಾಪದಲ್ಲಿಯೇ ಕಾಂಗ್ರೆಸ್ ಶಾಸಕರೊಬ್ಬರು “ನಾವು ನೆಹರೂ ಕುಟುಂಬದ ಗುಲಾಮರು” ಅಂತ ಬಹಿರಂಗವಾಗಿಯೇ ಘೋಷಿಸಿದ್ದಾರೆ. "ನಮ್ಮ ಕೊನೆಯ ಉಸಿರು ಇರುವವರೆಗೂ ನಾವು ಅವರ ಗುಲಾಮರಾಗಿಯೇ ಇರುತ್ತೇವೆ" ಅಂತ ಹೇಳಿದ್ದು, ಇದೀಗ ತೀವ್ರ ಟೀಕೆ ವ್ಯಕ್ತವಾಗಿದೆ.

ಕಾಂಗ್ರೆಸ್ ಶಾಸಕ ಸನ್ಯಾಮ್ ಲೋಧಾ

ಕಾಂಗ್ರೆಸ್ ಶಾಸಕ ಸನ್ಯಾಮ್ ಲೋಧಾ

  • Share this:
ರಾಜಸ್ಥಾನ: ಪಂಚ ರಾಜ್ಯಗಳ (5 States) ವಿಧಾನಸಭಾ ಚುನಾವಣೆ (Assembly Election) ಸೋಲಿನ ಬಳಿಕ ಕಾಂಗ್ರೆಸ್‌ನಲ್ಲಿ (Congress) ಪಕ್ಷದಲ್ಲಿ (Party) ಅಲ್ಲೋಲ ಕಲ್ಲೋಲ ಉಂಟಾಗುತ್ತದೆ. ರಾಹುಲ್‌ ಗಾಂಧಿ (Rahul Gandhi) ನಾಯಕತ್ವದ (Ledership) ವಿರುದ್ಧ ಕಾಂಗ್ರೆಸ್‌ನ ಹಿರಿಯ ನಾಯಕರೇ (Senior Leader) ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಈ ವೇಳೆ ಮತ್ತೊಂದಿಷ್ಟು ನಾಯಕರು ಸೋನಿಯಾ ಗಾಂಧಿ (Sonia Gandhi) ಹಾಗೂ ಕುಟುಂಬಸ್ಥರಿಗೆ (Family) ತಮ್ಮ ನಿಷ್ಠೆ ಅಂತ ಬಹಿರಂಗವಾಗಿಯೇ ಹೇಳಿದ್ದರು. ಇದೀಗ ರಾಜಸ್ಥಾನದ (Rajasthan) ಕಾಂಗ್ರೆಸ್ ಶಾಸಕರೊಬ್ಬರು (MLA) ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. “ನಾವು ನೆಹರೂ (Nehru) ಹಾಗೂ ಗಾಂಧಿ (Gandhi) ಕುಟುಂಬದ ಗುಲಾಮರು (Slave)” ಅಂತ ಬಹಿರಂಗವಾಗಿಯೇ ಘೋಷಿಸಿದ್ದಾರೆ. ಇವರ ಹೇಳಿಕೆ ಇದೀಗ ವೈರಲ್ (Viral) ಆಗಿದ್ದು, ಬಿಜೆಪಿ (BJP) ಸೇರಿದಂತೆ ವಿವಿಧ ಪಕ್ಷಗಳ ನಾಯಕರು, ಜನಸಾಮಾನ್ಯರು ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

“ನಾವು ನೆಹರೂ-ಗಾಂಧಿ ಕುಟುಂಬದ ಗುಲಾಮರು!”

ನಾವು ನೆಹರೂ-ಗಾಂಧಿ ಕುಟುಂಬದ ಗುಲಾಮರು ಮತ್ತು ಕೊನೆಯ ಉಸಿರು ಇರುವವರೆಗೂ ಅವರ ಗುಲಾಮರಾಗಿಯೇ ಇರುತ್ತೇವೆ ಎಂದು ರಾಜಸ್ಥಾನದ ಸಿರೋಹಿ ಶಾಸಕ ಸನ್ಯಾಮ್ ಲೋಧಾ ಹೇಳಿದ್ದಾರೆ. ರಾಜಸ್ಥಾನ  ವಿಧಾನಸಭಾ ಕಲಾಪದಲ್ಲಿ ಭಾಗಿಯಾಗಿ ಮಾತನಾಡುವಾಗ ಹೆಮ್ಮೆಯಿಂದ ಘೋಷಿಸಿದ್ದಾರೆ.

“ಕೊನೆ ಉಸಿರು ಇರುವವರೆಗೂ ಗುಲಾಮರಾಗೇ ಇರುತ್ತೇವೆ”

ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ಹರಿದೇವ್ ಜೋಶಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ತಿದ್ದುಪಡಿ ಮಸೂದೆ ಕುರಿತು ಮಾತನಾಡಿದ ಸನ್ಯಾಮ್ ಲೋಧಾ, ಹೌದು ನಾವು ನೆಹರು-ಗಾಂಧಿ ಕುಟುಂಬದ ಗುಲಾಮರು ಮತ್ತು ನಮ್ಮ ಕೊನೆಯ ಉಸಿರು ಇರುವವರೆಗೂ ನಾವು ಅವರ ಗುಲಾಮರಾಗಿಯೇ ಇರುತ್ತೇವೆ ಎಂದರು.

ಇದನ್ನೂ ಓದಿ: Narendra Modiಯವರಿಂದ ಇಂದು ಉದ್ಘಾಟನೆಗೊಳ್ಳಲಿದೆ 'ಭಾರತ್ ಗ್ಯಾಲರಿ', ಹಾಗಿದ್ರೆ ಇದರ ವಿಶೇಷತೆಗಳು ಏನು ಗೊತ್ತಾ?

ನೆಹರು-ಗಾಂಧಿ ಕುಟುಂಬವು ದೇಶವನ್ನು ಪ್ರಗತಿಯತ್ತ ಕೊಂಡೊಯ್ದಿದೆ. ಉತ್ತಮ ಆಡಳಿತವನ್ನು ನೀಡಿದೆ. ಹಾಗಾಗಿ ನಾವು ಕೊನೆ ಉಸಿರಿರುವವರೆಗೂ ಆ ಕುಟುಂಬದ ಗುಲಾಮರಾಗಿಯೇ ಇರಲು ಬಯಸುತ್ತೇವೆ ಎಂದು ಹೇಳಿದ್ದಾರೆ.


ಯಾರು ಈ ಸನ್ಯಾಮ್ ಲೋಧಾ?

ಸನ್ಯಾಮ್ ಲೋಧಾ ಅವರು ರಾಜಸ್ಥಾನದ ಸಿರೋಹಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ. ಜೊತೆಗೆ ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಾರ್ಚ್ 15ರಂದು ವಿಧಾನಸಭೆಯಿಂದ ಅಮಾನತು

ಇದಕ್ಕೂ ಮುನ್ನ ಮಾರ್ಚ್ 15 ರಂದು, ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್ ಅವರ ಭಾಷಣಕ್ಕೆ ಸನ್ಯಾಮ್ ಲೋಧಾ ಅಡ್ಡಿಪಡಿಸಿದ್ದರು. ಹೀಗಾಗಿ ಅವರನ್ನು ರಾಜಸ್ಥಾನ ವಿಧಾನಸಭೆಯಿಂದ ಹೊರಹಾಕಲಾಗಿತ್ತು.

ಸನ್ಯಾಮ್ ಲೋಧಾ ಹೇಳಿಕೆಗೆ ಬಿಜೆಪಿ ಟೀಕೆ

ಕಾಂಗ್ರೆಸ್ ಶಾಸಕ ಸನ್ಯಾಮ್ ಲೋಧಾ ಹೇಳಿಕೆಗೆ ಬಿಜೆಪಿ ಹಾಗೂ ವಿರೋಧ ಪಕ್ಷಗಳಿಂದ ತೀಕ್ಷ್ಣವಾದ ಪ್ರತಿಕ್ರಿಯೆ ಬಂದಿದೆ. ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಮಾತನಾಡಿ, ಮತ್ತೊಂದು ಹೊಸತಾದ ಗುಲಾಮಿ ಸಂಸ್ಕೃತಿ ಬಂದಿದೆ. ಗುಲಾಮರಾಗಿರುವುದಕ್ಕೆ ನಿಮಗೆ ಅಭಿನಂದನೆಗಳು. ಗುಲಾಮರಾಗಿರುವ ಇವರು, ಸಮಾಜಕ್ಕೆ ಯಾವ ಸಂದೇಶ ನೀಡುತ್ತಾರೆ?. ಗುಲಾಮರು ತಮ್ಮ ಮನಸ್ಪೂರ್ತಿಯಾಗಿ ನಡೆದುಕೊಳ್ಳಲು, ಮಾತನಾಡಲು ಸಾಧ್ಯವಿಲ್ಲ, ಅದನ್ನು ಇವರು ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: Shaheed Diwas: ಹುತಾತ್ಮರ ದಿನವನ್ನು ಪಬ್ಲಿಕ್ ಹಾಲಿಡೇ ಎಂದು ಘೋಷಿಸಿದ ಸಿಎಂ ಭಗವಂತ್ ಮನ್

ವಿಧಾನಸಭೆಯಲ್ಲಿ ಗದ್ದಲ ಕೋಲಾಹಲ

ಇನ್ನು ಸನ್ಯಾಮ್ ಲೋಧಾ ಹೇಳಿಕೆಗೆ ರಾಜಸ್ಥಾನ ವಿಧಾನಸಭಾ ಕಲಾಪದಲ್ಲಿ ಪರ ಮತ್ತು ವಿರೋಧ ವ್ಯಕ್ತವಾಯಿತು. ಬಿಜೆಪಿ ಸೇರಿದಂತೆ ವಿಪಕ್ಷಗಳು ಅವರನ್ನು ಟೀಕಿಸಿದನು. ಈ ವೇಳೆ ನಡೆದ ಮಾತಿನ ಚಕಮಕಿಯು ವಿಧಾನಸಭೆಯಲ್ಲಿ ಗೊಂದಲಕ್ಕೆ ಕಾರಣವಾಯಿತು. ಎರಡೂ ಕಡೆಯವರು ಗದ್ದಲ ಎಬ್ಬಿಸಿದಾಗ, ಸ್ಪೀಕರ್ ಮಧ್ಯಪ್ರವೇಶಿಸಿ ವಿಷಯವನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಲು ಪ್ರಯತ್ನಿಸಿದರು.
Published by:Annappa Achari
First published: