• Home
  • »
  • News
  • »
  • national-international
  • »
  • CWC Meeting: ಇಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ದಿನಾಂಕ ಪ್ರಕಟ ಸಾಧ್ಯತೆ

CWC Meeting: ಇಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ದಿನಾಂಕ ಪ್ರಕಟ ಸಾಧ್ಯತೆ

ಸೋನಿಯಾ ಗಾಂಧಿ-ರಾಹುಲ್ ಗಾಂಧಿ

ಸೋನಿಯಾ ಗಾಂಧಿ-ರಾಹುಲ್ ಗಾಂಧಿ

ಮುಂದಿನ ವರ್ಷ ಬರುವ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಹಾಗೂ ಮಣಿಪುರ ವಿಧಾನಸಭೆ ಚುನಾವಣೆಗಳಿಗೆ ಪಕ್ಷವನ್ನು ಹೇಗೆ ಸನ್ನದ್ಧಗೊಳಿಸಬೇಕು? ಎಂಬಿತ್ಯಾದಿ ಬಗ್ಗೆ ಕೂಡ ಚರ್ಚೆ ನಡೆಯಲಿದೆ.

  • Share this:

ನವದೆಹಲಿ, ಅ. 16: ಸತತ‌ ಸೋಲು, ನಾಯಕರ ಅಸಹಕಾರ, ಅಸಮಾಧಾನಗಳ ನಡುವೆ ಒಂದೂ ವರ್ಷದ ಬಳಿಕ ಇಂದು ಮಹತ್ವದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ (Congress Working Committee Meeting) ನಡೆಯಲಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ (All India Congress Committee Interim President Sonia Gandhi) ನೇತೃತ್ವದಲ್ಲಿ ಸಭೆ ನಡೆಯಲಿದ್ದು ಎಐಸಿಸಿಯ ಅಧ್ಯಕ್ಷೀಯ ಚುನಾವಣೆ (AICC Presidential Election) ಯಾವಾಗ ಆಗಬೇಕು? ಎಂಬ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಲಿದೆ. ಇಂದೇ ದಿನಾಂಕ ಪ್ರಕಟಗೊಳ್ಳಲಿದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.


ಅಧ್ಯಕ್ಷ ಸ್ಥಾನ ಮಾತ್ರವಲ್ಲದೆ ಎಲ್ಲ ಪದಾಧಿಕಾರಿಗಳ ಹುದ್ದೆಯ ಆಯ್ಕೆಗೆ ಸಾಂಸ್ಥಿಕ ಚುನಾವಣೆ ನಡೆಸುವ ಬಗ್ಗೆ ಚರ್ಚೆ ಆಗಲಿದೆ ಎಂದು ಕೂಡ ಹೇಳಲಾಗುತ್ತಿದೆ. ಕೂಡಲೇ ಪೂರ್ಣಾವಧಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನಾದರೂ ಆಯ್ಕೆ ಮಾಡಿ ಜೊತೆಗೆ ಪದಾಧಿಕಾರಿಗಳ ಹುದ್ದೆಯ ಆಯ್ಕೆಗೆ ಸಾಂಸ್ಥಿಕ ಚುನಾವಣೆ ನಡೆಸಿ ಎಂದು ಇತ್ತೀಚೆಗೆ ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ 'ಜಿ- 23' ನಾಯಕರು (G- 23 Leaders) ಎಂಬ ಅಪಸ್ವರ ಎತ್ತಿತ್ತು. ಆದುದರಿಂದ 'ಜಿ- 23' ನಾಯಕರ (G- 23 Leaders) ವಿಷಯದಲ್ಲಿ ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೆ ಎಂಬುದು ಕೂಡ ಇಂದು ನಿರ್ಧಾರವಾಗುವ ಸಾಧ್ಯತೆ ಇದೆ.


ಮುಂಬರುವ ಚುನಾವಣೆಗಳೇ ಮುಖ್ಯ


ಇಂದಿನ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮುಂದಿನ ವರ್ಷಾರಂಭದಲ್ಲಿ ಬರುವ ಉತ್ತರ ಪ್ರದೇಶ (Uttar Pradesh), ಪಂಜಾಬ್ (Punjab), ಗೋವಾ (Goa), ಉತ್ತರಾಖಂಡ (Uttarkhand) ಹಾಗೂ ಮಣಿಪುರ (Manipur) ವಿಧಾನಸಭೆ ಚುನಾವಣೆಗಳಿಗೆ ಪಕ್ಷವನ್ನು ಹೇಗೆ ಸನ್ನದ್ಧಗೊಳ್ಳಬೇಕು? ಪಂಜಾಬ್ ಬಿಟ್ಟರೆ ಬೇರೆ ಎಲ್ಲಾ ಕಡೆ ಬಿಜೆಪಿ (BJP) ಅಧಿಕಾರದಲ್ಲಿ ಇರುವುದರಿಂದ ಯಾವ ರೀತಿಯ ತಂತ್ರಗಳನ್ನು ಅನುಸರಿಸಬೇಕು? ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಹೇಗೆ ಎಂಬಿತ್ಯಾದಿ ಚರ್ಚೆ ನಡೆಯಲಿದೆ.


ಈ ಐದು ಚುನಾವಣೆಗಳ ಜೊತೆಗೆ ಮುಂದಿನ‌ ವರ್ಷದ ಕೊನೆಗೆ ಗುಜರಾತ್ ವಿಧಾನಸಭಾ ಚುನಾವಣೆ (Gujarat Assembly Election) ಕೂಡ ನಡೆಯಲಿದ್ದು ಇವು 2024ರ ಲೋಕಸಭಾ ಚುನಾವಣೆಗೆ (Lok sabha Election-2024) ಸೆಮಿಫೈನಲ್ಸ್ (Semifinals) ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಸದ್ಯ ಪಂಜಾಬಿನಲ್ಲಿ ಇರುವ ಅಧಿಕಾರವನ್ನು ‌ಉಳಿಸಿಕೊಳ್ಳುವುದರ ಜೊತೆಗೆ ಗೋವಾ ಮತ್ತು ಉತ್ತರಖಂಡದಲ್ಲಿ ಕಾಂಗ್ರೆಸ್ ಗೆದ್ದರೆ ಹಾಗೂ ಉತ್ತರ ಪ್ರದೇಶ, ಮಣಿಪುರಗಳಲ್ಲಿ ಸ್ಥಳೀಯ ಪಕ್ಷಗಳನ್ನು (Regional Parties) ಬೆಂಬಲಿಸಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆದರೆ ಲೋಕಸಭಾ ಚುನಾವಣೆಯ ಹಾದಿ ಸುಗಮವಾಗಲಿದೆ. ಆದುದರಿಂದ ಈ ಚುನಾವಣೆಗಳಿಗೂ ಮೊದಲೇ ಎಐಸಿಸಿ ಅಧ್ಯಕ್ಷೀಯ ಚುನಾವಣೆ ನಡೆಸುವ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಇದೆ.


ಇದನ್ನೂ ಓದಿ:Gati Shakti Plan: 100 ಲಕ್ಷ ಕೋಟಿ ಮೌಲ್ಯದ ‘ಗತಿ ಶಕ್ತಿ ಯೋಜನೆ‘ ಅನಾವರಣಗೊಳಿಸಿದ ಪ್ರಧಾನಿ ಮೋದಿ; ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ..


ಒಪ್ಪದ ರಾಹುಲ್ ಗಾಂಧಿ!


ಅಧ್ಯಕ್ಷ ಸ್ಥಾನಕ್ಕೆ ಈಗಲೂ ಪಕ್ಷದ ಬಹುತೇಕರ ಆಯ್ಕೆ ರಾಹುಲ್ ಗಾಂಧಿ (Rahul Gandhi) ಅವರೇ. ಆದರೆ ರಾಹುಲ್ ಗಾಂಧಿ 'ಈ ಬಾರಿ ತಮ್ಮ ಕುಟುಂಬದವರನ್ನು ಬಿಟ್ಟು ಬೇರೆ ಯಾರನ್ನಾದರೂ ಅಧ್ಯಕ್ಷರನ್ನಾಗಿ ಮಾಡಿ' ಎಂದು ಹೇಳಿಬಿಟ್ಟಿರುವುದರಿಂದ ಸದ್ಯ ಬೇರೆ ನಾಯಕರ ಹುಡುಕಾಟ ನಡೆದಿದೆ. ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Opposition Leader of Rajyasabha Mallikarjuna Karge), ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Rajasthan Chief Minister Ashok Gehlot) ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ (Rajasthan Deputy Chief Minister Sachin Pilot) ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ (Madyapradesh Former Chief Minister Kamalnath) ಮತ್ತಿತರ ಹೆಸರುಗಳು ‌ಮುಂಚೂಣಿಯಲ್ಲಿವೆ.

Published by:Latha CG
First published: