ಕಾಂಗ್ರೆಸ್​ ಕಾರ್ಯಕಾರಿಣಿ ಸಮಿತಿ ಸಭೆ: ಮೋದಿ ಸರ್ಕಾರದ ಭ್ರಷ್ಟಚಾರ ಬಯಲಿಗೆ ನಿರ್ಧಾರ


Updated:August 4, 2018, 4:18 PM IST
ಕಾಂಗ್ರೆಸ್​ ಕಾರ್ಯಕಾರಿಣಿ ಸಮಿತಿ ಸಭೆ: ಮೋದಿ ಸರ್ಕಾರದ ಭ್ರಷ್ಟಚಾರ ಬಯಲಿಗೆ ನಿರ್ಧಾರ

Updated: August 4, 2018, 4:18 PM IST
ನ್ಯೂಸ್​ 18 ಕನ್ನಡ

ದೆಹಲಿ (ಆ.4): ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆದ ಎರಡನೇ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ಬಳಿಕ ಅಶೋಕ್ ಗೆಹ್ಲೋಟ್, ರಣದೀಪ್ ಸುರ್ಜೆವಾಲರಿಂದ ಜಂಟಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಅಸ್ಸಾಂ ಎನ್ಆರ್ ಸಿ , ಬ್ಯಾಂಕ್ ಹಗರಣ, ಮೋದಿ ಆಡಳಿತದ ಭ್ರಷ್ಟಾಚಾರ, ರೆಫೆಲ್ ಡೀಲ್ ಸೇರಿದಂತೆ ನಿರುದ್ಯೋಗ ಮತ್ತು ಕೃಷಿ ಸಮಸ್ಯೆ ಕುರಿತು ಚರ್ಚಿಸಿದ್ದೇವೆ ಎಂದು ಕಾಂಗ್ರೆಸ್​ ನಾಯಕರು ತಿಳಿಸಿದ್ಧಾರೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತಾಡಿದ ಕಾಂಗ್ರೆಸ್​ ನಾಯಕರು, ಮೋದಿ ನೇತೃತ್ವದ ಕೇಂದ್ರ  ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುತ್ತೇವೆ. ದೇಶದ ಕೃಷಿ ಬೆಳವಣಿಗೆ ಕುರಿತು ಸುದೀರ್ಘ ಚರ್ಚೆ ಮಾಡಲಾಗಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಕೇಂದ್ರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ಧೇವೆ ಎಂದರು.

ಇದೆ ವೇಳೆ ಎನ್ಆರ್ ಸಿ ಕಾರ್ಯಕ್ಕೆ ರಾಜೀವ್ ಗಾಂಧಿ ಮೊದಲು ಚಾಲನೆ ಕೊಟ್ಟಿದ್ದರು ಎಂದು ಆರೋಪಿಸಲಾಗಿದೆ. ವಿದೇಶಿಗರು ಅಕ್ರಮವಾಗಿ ದೇಶಕ್ಕೆ ಬಂದು ನೆಲಸಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಎನ್​ಆರ್​ಸಿ ವಿಚಾರವನ್ನು ಸುಪ್ರೀಂಕೋರ್ಟ್ ಗಮನಿಸುತ್ತಾ ಬಂದಿದೆ. ಪಟ್ಟಿಯಲ್ಲಿ 40 ಲಕ್ಷ ಜನರ ಹೆಸರು ಸೇರಿಸಿಲ್ಲ ಎನ್ನಲಾಗಿದೆ. ಈ ಕ್ರಮದ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ರಾಷ್ಟ್ರೀಯ ಕಾಂಗ್ರೆಸ್​ ನಾಯಕರು ಎಚ್ಚರಿಕೆ ನೀಡಿದರು.

ಅಸ್ಸಾಂ ಎನ್​ಆರ್​ಸಿ ಪಟ್ಟಿಯಲ್ಲಿ ಇಲ್ಲದವರು ವಿವಿಧ ಪಂಗಡಕ್ಕೆ ಸೇರಿದವರಾಗಿದ್ದಾರೆ. ಕಾಂಗ್ರೆಸ್ ಎಲ್ಲಾ ಭಾರತೀಯರ ಸಹಾಯಕ್ಕೆ ಸದಾ ನಿಲ್ಲುತ್ತದೆ. ಎನ್​ಆರ್​ಸಿ ವಿಚಾರ ಬಳಸಿಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ಜನರಲ್ಲಿ ಸಾಮಾಜಿಕ ಗಲಭೆಗಳನ್ನು ಸೃಷ್ಟಿಸಿ ಗೊಂದಲಗಳನ್ನು ಹುಟ್ಟುಹಾಕುತ್ತಿದೆ ಎಂದು ಆರೋಪಿಸಿದ್ಧಾರೆ.

ಪ್ರಧಾನಿ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಿದ್ದೇವೆ. ಎರಡು ವರ್ಷಗಳಲ್ಲಿ ನಡೆಸಲಾಗಿರುವ ಬ್ಯಾಂಕ್ ಹಗರಣ ಬಗ್ಗೆಯೂ ಗಂಭೀರವಾಗಿ ಚರ್ಚಿಸಲಾಗಿದೆ. ಬ್ಯಾಂಕುಗಳಲ್ಲಿ ಅಕ್ರಮ ಹಣ ವರ್ಗಾವಣೆ
ನಡೆಸಲಾಗಿದೆ. ಪ್ರಧಾನಿ ಸರ್ಕಾರದ ವಿರುದ್ಧ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕೆಲಸ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Loading...

ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಎರಡನೇ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ನಡೆಯಲಿದೆ. ಪಕ್ಷದ ಉಸ್ತುವಾರಿ ವಹಿಸಿದ ಬಳಿಕ ರಾಹುಲ್ ನಡೆಸುತ್ತಿರುವ ಎರಡನೇ ಸಭೆ ಇದಾಗಿದ್ದು, ಲೋಕಸಭೆ ಚುನಾವಣೆ ಕುರಿತಂತೆ ಮಹತ್ವದ ಮಾತುಕತೆಗಳು ನಡೆಯಲಿವೆ ಎನ್ನಲಾಗಿದೆ.

ಇನ್ನು ದೆಹಲಿಯ ರಾಹುಲ್ ಗಾಂಧಿ ನಿವಾಸದಲ್ಲಿ ನಡೆದ ಕಾಂಗ್ರೆಸ್​ ಕಾರ್ಯಕಾರಿಣಿ ಸಮಿತಿ  ಸಭೆಯಲ್ಲಿ 26 ಜನ ಖಾಯಂ ಸದಸ್ಯರು, ವಿಶೇಷ ಆಹ್ವಾನಿತರು ಭಾಗಿಯಾಗಲಿದ್ಧಾರೆ ಎನ್ನಲಾಗಿತ್ತು. ಈ ಹಿಂದೆ ಜುಲೈ 22ರಂದು ನಡೆದಿದ್ದ ಮೊದಲ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯಗಳ ಪರಾಮರ್ಶೆ ಕೂಡ ನಡೆಯಲಿದೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿತ್ತು.

ಕಳೆದ ಬಾರಿ ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಚಾರವೂ ಚರ್ಚಿಸಲಾಗಿತ್ತು. ಅಲ್ಲದೇ ಅಂತಿಮ ನಿರ್ಧಾರವನ್ನ ರಾಹುಲ್ ಗಾಂಧಿಯೇ ಕೈಗೊಳ್ಳಲಿ ಎಂದು ಸಮಿತಿ ನಿರ್ಧರಿಸಿತ್ತು. ಹೀಗಾಗಿ, ಇಂದಿನ ಸಭೆಯಲ್ಲಿ ರಾಹುಲ್ ಗಾಂಧಿ ಮಹಾಮೈತ್ರಿ ಬಗ್ಗೆ ಯಾವ ನಿರ್ಣಯ ತೆಗೆದುಕೊಂಡಿದ್ದಾರೆ ಅನ್ನುವ ಬಗ್ಗೆ ಕಾರ್ಯಕಾರಿಣಿ ಸಮಿತಿ ಚರ್ಚೆ ನಡೆಸಿದೆ ಎನ್ನುತ್ತಿವೆ ಮೂಲಗಳು.
First published:August 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ