Telangana: ಕೇಂದ್ರ ಸಚಿವೆಯನ್ನು ತಡೆದ ಕಾಂಗ್ರೆಸ್​ ನಾಯಕರು: ಬಿಜೆಪಿ, ಕೈ ಕಾರ್ಯಕರ್ತರ ಮಾರಾಮಾರಿ!

Congress workers try to obstruct Nirmala Sitharaman convoy clash with BJP activists cops ಶುಕ್ರವಾರ ಬೆಳಗ್ಗೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ವೇಳೆ ನಡೆದ ಘರ್ಷಣೆಯಲ್ಲಿ ಹಲವಾರು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಯುವ ಕಾಂಗ್ರೆಸ್ ಸದಸ್ಯರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಸೀತಾರಾಮನ್ ಅವರ ಬೆಂಗಾವಲು ಪಡೆಯನ್ನು ತಡೆಯಲು ಯತ್ನಿಸಿದರು. ಅವರನ್ನು ತಡೆಯಲು ಯತ್ನಿಸಿದವರನ್ನು ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರೊಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ನಡೆಸಿದರು

ಸಂಸದೀಯ ಕ್ಷೇತ್ರಕ್ಕೆ ಭೇಟಿ ಕೊಟ್ಟ ನಿರ್ಮಲಾ ಸೀತಾರಾಮನ್

ಸಂಸದೀಯ ಕ್ಷೇತ್ರಕ್ಕೆ ಭೇಟಿ ಕೊಟ್ಟ ನಿರ್ಮಲಾ ಸೀತಾರಾಮನ್

  • Share this:
ಹೈದರಾಬಾದ್(ಸೆ.02): ಸೀತಾರಾಮನ್ (Nirmala Sitharaman) ಅವರು ಬಿಜೆಪಿಯ ಸಂಸದರ ಪ್ರವಾಸ ಯೋಜನೆಯಡಿ ರಾಜ್ಯದ ಜಹೀರಾಬಾದ್ ಸಂಸದೀಯ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಕಾಮರೆಡ್ಡಿ (Kamareddy) ಮಾತ್ರವಲ್ಲದೇ, ಅವರು ಶುಕ್ರವಾರ ಬನ್ಸ್ವಾರಾ ಮತ್ತು ಇತರ ಪ್ರದೇಶಗಳನ್ನು ತಲುಪಿದರು. ಯುವ ಕಾಂಗ್ರೆಸ್ (Youth Congress) ಸದಸ್ಯರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಸೀತಾರಾಮನ್ ಅವರ ಬೆಂಗಾವಲು ಪಡೆಯನ್ನು ತಡೆಯಲು ಯತ್ನಿಸಿದರು. ಹೀಗಿರುವಾಗ ಕಾಂಗ್ರೆಸ್​ ಕಾರ್ಯಕರ್ತರನ್ನು ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಹೀಗಿರುವಾಗ ವಾಗ್ವಾದ ನಡೆದಿದದ್ದು, ಹೊಡೆದಾಟವೂ ನಡೆದಿದೆ.

ಇದನ್ನೂ ಓದಿ:  ಲೈಂಗಿಕ ದೌರ್ಜನ್ಯ ಆರೋಪದಡಿ ಟಿಆರ್​ಎಸ್ ಸಂಸದರ ಪುತ್ರನ ಮೇಲೆ ಪ್ರಕರಣ ದಾಖಲು

ಶುಕ್ರವಾರ ಬೆಳಗ್ಗೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ವೇಳೆ ನಡೆದ ಘರ್ಷಣೆಯಲ್ಲಿ ಹಲವಾರು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಯುವ ಕಾಂಗ್ರೆಸ್ ಸದಸ್ಯರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಸೀತಾರಾಮನ್ ಅವರ ಬೆಂಗಾವಲು ಪಡೆಯನ್ನು ತಡೆಯಲು ಯತ್ನಿಸಿದರು. ಅವರನ್ನು ತಡೆಯಲು ಯತ್ನಿಸಿದವರನ್ನು ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರೊಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಉಭಯ ಪಕ್ಷದ ಕಾರ್ಯಕರ್ತರ ನಡುವೆ ಜಟಾಪಟಿ

ಹೀಗಿರುವಾಗ ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದ ನಡೆಸಿದರು. ನಿರ್ಮಲಾ ಸೀತಾರಾಮನ್ ಅವರ ಬೆಂಗಾವಲು ವಾಹನಕ್ಕೆ ಅಡ್ಡಿಪಡಿಸಲು ಯತ್ನಿಸಿದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಬಿಜೆಪಿ ಬೆಂಬಲಿಗರು ಬೀದಿಗಿಳಿದು ಕೇಂದ್ರ ಹಣಕಾಸು ಸಚಿವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ಪೊಲೀಸರು ಮಧ್ಯ ಪ್ರವೇಶಿಸಿ ರಸ್ತೆ ಸುಗಮಗೊಳಿಸಿದರು.

ಇದನ್ನೂ ಓದಿ:  ಚುನಾವಣೆಗೂ ಮೊದಲೇ ಕೆಸಿಆರ್​ಗೆ ಆಘಾತ; ಕಾಂಗ್ರೆಸ್​ನತ್ತ ವಾಲಿದ ಟಿಆರ್​ಎಸ್​ ಸಂಸದ


ಕಾಮರೆಡ್ಡಿ ಜಿಲ್ಲೆಯ ಬಿರ್ಕೂರ್‌ನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಂಗಡಿಗಳಿಗೆ ಭೇಟಿ ನೀಡಿದರು ಮತ್ತು ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಏಕೆ ಕಾಣೆಯಾಗಿದೆ ಎಂದು ನಾಗರಿಕ ಸರಬರಾಜು ಇಲಾಖೆ ಮತ್ತು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು. ಕೇಂದ್ರದಿಂದ ಪಿಡಿಎಸ್ ಅಕ್ಕಿ ಎಷ್ಟು ಪೂರೈಕೆಯಾಗಿದೆ ಎಂದು ಕಾಮರೆಡ್ಡಿ ಜಿಲ್ಲಾಧಿಕಾರಿ ಜಿತೇಶ್ ಪಾಟೀಲ್ ಅವರನ್ನು ಕೇಳಿದರು. ತೃಪ್ತಿಕರ ಉತ್ತರ ಸಿಗದ ಹಿನ್ನೆಲೆಯಲ್ಲಿ ಸೀತಾರಾಮನ್ ಅವರು ವಿವರಗಳನ್ನು ಖಚಿತಪಡಿಸಿಕೊಂಡು ಅವರಿಗೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅವರು ಬನ್ಸ್ವಾರ ನಗರದ ಕೋಟಗಿರಿ ಪಿಎಚ್‌ಸಿಯಲ್ಲಿರುವ ಕೋವಿಡ್-19 ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.
Published by:Precilla Olivia Dias
First published: