Uttar Pradesh Election: ಯೂಪಿಯ ಎಲ್ಲಾ 403 ಕ್ಷೇತ್ರಗಳಲ್ಲೂ‌ ಕಣಕ್ಕಿಳಿಯಲು ನಿರ್ಧರಿಸಿದ ಕಾಂಗ್ರೆಸ್

Priyanka Gandhi Decision: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ. ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ.

ಪ್ರಿಯಾಂಕಾ ಗಾಂಧಿ.

  • Share this:
ನವದೆಹಲಿ, ನ. 14: ಮುಂದಿನ‌ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಎಲ್ಲಾ ರಾಜಕೀಯ ಪಕ್ಷಗಳು ಅಣಿಯಾಗುತ್ತಿದ್ದು ಕಾಂಗ್ರೆಸ್ (Congress) ಪ್ರಿಯಾಂಕಾ ಗಾಂಧಿ ವಾದ್ರಾ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸನ್ನದ್ದವಾಗುತ್ತಿದೆ.‌ ಕಾಂಗ್ರೆಸ್ ಈ ಬಾರಿ ತನ್ನ ಪ್ರಣಾಳಿಕೆಯಲ್ಲಿ (Manifesto) ವಿಶಿಷ್ಟವಾದ ಘೋಷಣೆ ಮಾಡಲು ಮುಂದಾಗಿದೆ. ಅಲ್ಲಿನ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ (BJP), ಸಮಾಜವಾದಿ ಪಕ್ಷ (Samajawadi Party) ಹಾಗೂ ಬಹುಜನ‌ ಸಮಾಜ ಪಕ್ಷ (Bahujana Samaj Party) ಗಳಿಗಿಂತ ಮೊದಲು ಕಾಂಗ್ರೆಸ್ (Congress) ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಕ್ಕೂ ಸಿದ್ದತೆ ನಡೆಸಿದೆ. ಶೇಕಡಾ ‌40ರಷ್ಟು ಟಿಕೆಟ್ ಗಳನ್ನು ಮಹಿಳೆಯರಿಗೆ ನೀಡಲು ಮುಂದಾಗಿದೆ. ಅದಲ್ಲದೆ ಈಗ ಉತ್ತರ ಪ್ರದೇಶದ ಎಲ್ಲಾ 403 ಕ್ಷೇತ್ರಗಳಲ್ಲೂ ತನ್ನ ಹುರಿಯಾಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಕಾಂಗ್ರೆಸ್ ಪರವಾದ ಅಲೆ ಸೃಷ್ಟಿ ಮಾಡಲು ಉತ್ತರ ಪ್ರದೇಶದಾದ್ಯಂತ 'ಪ್ರತಿಜ್ಞಾ ಯಾತ್ರೆ' (Congress Pratijna Yatra) ಹಮ್ಮಿಕೊಂಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Uttar Pradesh In charge and AICC General Secretary Priyanka Gandhi) ಈ ಹಿಂದೆ ಈ ಬಾರಿ ಶೇಕಡಾ ‌40ರಷ್ಟು ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣೆಯನ್ನು ಮಹಿಳಾ ಪ್ರಧಾನವನ್ನಾಗಿ ಮಾಡುವುದಾಗಿ ಘೋಷಿಸಿದ್ದರು. ಇದೀಗ ಉತ್ತರ ಪ್ರದೇಶದ ಎಲ್ಲಾ 403 ಕ್ಷೇತ್ರಗಳಲ್ಲೂ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಘೋಷಿಸಿದ್ದಾರೆ.

ಜನಾಂದೋಲನಕ್ಕಾಗಿ‌ ಪ್ರತಿಜ್ಞಾ ಯಾತ್ರೆ:

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh Chief Minister Yogi Adityanath) ಸರ್ಕಾರದ ‌ದುರಾಡಳಿತವನ್ನು ಜನರಿಗೆ ತಿಳಿಸುವುದು ಕಾಂಗ್ರೆಸ್ ಪ್ರತಿಜ್ಞಾ ಯಾತ್ರೆಯ ಪ್ರಮುಖ ಉದ್ದೇಶ. ಇತ್ತೀಚೆಗೆ ಲಖೀಂಪುರ್ ಖೇರಿಯಲ್ಲಿ ನಾಲ್ವರು ರೈತರನ್ನು ಹತ್ಯೆಗೈದ ಉತ್ತರ ಪ್ರದೇಶ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು (BJP Governments) ರೈತ ವಿರೋಧಿಯಾಗಿವೆ. ರಾಜ್ಯಾದ್ಯಂತ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ ದಲಿತ ವಿರೋಧಿಯಾಗಿದೆ.‌ ಕಾನೂನು‌ ಸುವ್ಯವಸ್ಥೆ ಇಲ್ಲದಂತಾಗಿದೆ. ಕೊರೋನಾ ಮಹಾಮಾರಿ (Corona Pandemic) ಅನ್ನು ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ ಎಂಬುದನ್ನು ಜನರಿಗೆ ತಿಳಿಸಲು ಕಾಂಗ್ರೆಸ್ ಪ್ರತಿಜ್ಞಾ ಯಾತ್ರೆಯನ್ನು ಮಾಡಲಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರಿಂದ ಮಹಿಳೆಯರ ಭೇಟಿ:

ಪ್ರತಿಜ್ಞಾ ಯಾತ್ರೆ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಹಿಳೆಯರನ್ನು ಭೇಟಿಯಾಗುತ್ತಿದ್ದಾರೆ. ಮಹಿಳಾ‌ ಅಭ್ಯರ್ಥಿಗಳ ಹುಡುಕಾಟ ನಡೆಸುತ್ತಿದ್ದು ಈ ಹಿನ್ನೆಲೆಯಲ್ಲಿ ಮಹಿಳೆಯರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಈ ಬಾರಿಯ ಚುನಾವಣೆಯನ್ನು ಮಹಿಳಾ ಪ್ರಧಾನವನ್ನಾಗಿ ಮಾಡಲು ಬಿಜೆಪಿ (BJP), ಎಸ್ ಪಿ(SP) ಮತ್ತು ಬಿಎಸ್ ಪಿ(BSP) ಮೇಲೆ  ಸ್ತ್ರೀ ಅಸ್ತ್ರ ಪ್ರಯೋಗ ಮಾಡಲು ಕಾಂಗ್ರೆಸ್ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: CBI, ED ಅಧಿಕಾರಾವಧಿ 5 ವರ್ಷ ವಿಸ್ತರಣೆಗೆ ಕೇಂದ್ರದ ಒಲವು; ಮುಂದಿನ ಅಧಿವೇಶನದಲ್ಲಿ ಜಾರಿ ಸಾಧ್ಯತೆ

ಅಭ್ಯರ್ಥಿಗಳ ಆಯ್ಕೆ ತಯಾರಿ ಕೂಡ ಆರಂಭ:

ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷ ನಾಮಪತ್ರ ಸಲ್ಲಿಸಲು (Nomination Filing) ಕಡೆ ದಿನ‌ ಬರುವವರೆಗೂ ಕಾದು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುತ್ತಿತ್ತು. ಆದರೆ ಈಗ ಆಶ್ಚರ್ಯಕರ ಬೆಳವಣಿಗೆಯಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಇನ್ನೂ ನಾಲ್ಕೈದು ತಿಂಗಳಿರುವಾಗಲೇ ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಮುಂದಾಗಿದೆ.‌ ಎಲ್ಲಾ ರಾಜಕೀಯ ಪಕ್ಷಗಳಿಗಿಂತ‌ ಮೊದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ  ಈಗಾಗಲೇ ಸಭೆ ನಡೆಸುತ್ತಿದ್ದಾರೆ.

ಪ್ರಣಾಳಿಕೆ ತಯಾರಿ ಭರ್ಜರಿ:

ಇನ್ನೊಂದೆಡೆ ದೇಶದ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ 2022ರ ವಿಧಾನಸಭಾ ಚುನಾವಣೆಗೆ ವಿಭಿನ್ನ ಪ್ರಣಾಳಿಕೆ ನೀಡಲು‌ ನಿರ್ಧರಿಸಿದ್ದು ಅದರ ಕಾರ್ಯ‌ ಭರದಿಂದ ಸಾಗಿದೆ ಎಂದು ತಿಳಿದುಬಂದಿದೆ. ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರಗಳನ್ನು (Training Center For Competitive Exams) ತೆರೆಯುವ ಘೋಷಣೆ ಮಾಡಲಿದೆ‌. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (Aam Admi Party) ಘೋಷಣೆ ಮಾಡಿದಂತೆ ಉಚಿತ ವಿದ್ಯುತ್ (Free Electricity) ಅನ್ನೂ ಘೊಷಿಸಲಿದೆ. ಇದೇ ರೀತಿ ಇನ್ನೂ ಹತ್ತು ಹಲವು ನವ ನವೀನವಾದ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ‌.

ಇದನ್ನೂ ಓದಿ: Pakistan: ಪಾಕಿಸ್ತಾನದ ಅಭಿವೃದ್ಧಿಗೆ ಸಿಖ್ಖರ ಬೆಂಬಲ? ವಿದೇಶದಲ್ಲಿರುವ ಭಾರತೀಯರ ಬಳಿ ಬೇಡಿಕೊಂಡ ಪಾಕ್

2022 ರ ಚುನಾವಣಾ ಪ್ರಣಾಳಿಕೆಗೆ ಒಳಹರಿವುಗಳನ್ನು ಸಂಗ್ರಹಿಸಲು ರಾಜ್ಯದಾದ್ಯಂತ ಸಾರ್ವಜನಿಕ ಅಭಿಯಾನವನ್ನು ನಡೆಸುತ್ತಿದೆ. ಜೊತೆಗೆ ಸಾಮಾಜಿಕ ಮಾಧ್ಯಮಗಳು (Social Media) ಮತ್ತು ಇತರ ಡಿಜಿಟಲ್ ಮಾಧ್ಯಮಗಳ (Digital Media) ಮೂಲಕ ಜನರ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. ಅಲ್ಲದೆ ರಾಜ್ಯದಾದ್ಯಂತ ಬೌದ್ಧಿಕ ವರ್ಗ ಮತ್ತು ಸಮೂಹ ಸಂಸ್ಥೆಗಳಿಂದ ಲಿಖಿತ ಸಲಹೆಯನ್ನು ಪಡೆಯಲಾಗುತ್ತಿದೆ.

ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ಪ್ರಣಾಳಿಕೆ ರೂಪಿಸುವ ಹಿನ್ನಲೆಯಲ್ಲಿ ಆರು ತಿಂಗಳಿಂದ ರಾಜ್ಯದ ಪರಿಚಿತ, ಬೌದ್ಧಿಕ ಮತ್ತು ಸಾಮಾನ್ಯ ಜನರಿಂದ ಸಲಹೆ, ಶಿಫಾರಸುಗಳನ್ನು ಪಡೆಯುತ್ತಿದೆ. ಪದೇ ಪದೇ ಕೇಂದ್ರ ಸರ್ಕಾರದ (Union Government) ಕೆಟ್ಟ ನಿಲುವುಗಳಿಂದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳುವ ಕಾಂಗ್ರೆಸ್ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಿದೆ.

ಪ್ರತಿ ಜಿಲ್ಲೆಗೆ ತೆರಳಿ ಅಭಿಪ್ರಾಯ ಸಂಗ್ರಹ: 

ಇದರ ಹೊರತಾಗಿ ಪ್ರತಿ ಜಿಲ್ಲೆಯಲ್ಲಿ ವಕೀಲರು ಮತ್ತು ರೈತರ ಬಳಿ ತೆರಳಿ ಚರ್ಚೆ ಮಾಡುತ್ತಿದೆ. ರಾಜ್ಯದ ಅಭಿವೃದ್ಧಿ, ರೈತರ ಮೇಲಿನ ಸಾಲಗಳು ಮತ್ತು ಸಂಭವನೀಯ ಸಾಲ ಮನ್ನಾ, ಉದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಅವರನ್ನು ಹೇಗೆ ಸ್ವಾವಲಂಬಿಗಳನ್ನಾಗಿ ಮಾಡುವುದು ಎಂಬ ಪ್ರಮುಖ ಅಂಶಗಳ ಮೇಲೆ ಗಮನಹರಿಸಿದೆ. ಪ್ರಣಾಳಿಕೆಯ ಸಮಿತಿಯ ಮುಖ್ಯಸ್ಥ ಸಲ್ಮಾನ್ ಖುರ್ಷೀದ್ ಎರಡು ದಿನಗಳ ಕನಿಷ್ಠ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಮತ್ತು ಜನರಿಂದ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಮತ್ತು ಮುಂದಿನ 200 ಯೂನಿಟ್‌ಗಳಿಗೆ ದರಗಳನ್ನು 50% ಕಡಿತಗೊಳಿಸುವ ಬಗ್ಗೆಯೂ ಕೆಲಸ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
Published by:Vijayasarthy SN
First published: