‘ಸರದಾರ್ ಪಟೇಲ್ ವಿಗ್ರಹದ ಕೆಳಗೆ ಆರೆಸ್ಸೆಸ್ ನಿಷೇಧಾಜ್ಞೆ ಪ್ರತಿ ಇರಿಸಿ’ - ಕೇಂದ್ರಕ್ಕೆ ಚುಚ್ಚಿದ ಕಾಂಗ್ರೆಸ್

ಅವರಿಗೆ(ಆರೆಸ್ಸೆಸ್-ಬಿಜೆಪಿ) ತಮ್ಮದೇ ಸ್ವಂತ ಹೀರೋಗಳಿಲ್ಲ. ಹೀಗಾಗಿ, ಸರದಾರ್ ಪಟೇಲ್ ಅವರ ಏಕತಾ ಶಿಲೆ ಕಟ್ಟುತ್ತಿದ್ದಾರೆ. ಇದನ್ನೂ ಚೀನಾದಿಂದಲೇ ಮಾಡಿಸಿ ತರುತ್ತಿದ್ದಾರೆ,” ಎಂದು ಆನಂದ್ ಶರ್ಮಾ ಟೀಕೆ ಮಾಡಿದ್ದಾರೆ.

Vijayasarthy SN
Updated:October 16, 2018, 3:25 PM IST
‘ಸರದಾರ್ ಪಟೇಲ್ ವಿಗ್ರಹದ ಕೆಳಗೆ ಆರೆಸ್ಸೆಸ್ ನಿಷೇಧಾಜ್ಞೆ ಪ್ರತಿ ಇರಿಸಿ’ - ಕೇಂದ್ರಕ್ಕೆ ಚುಚ್ಚಿದ ಕಾಂಗ್ರೆಸ್
ಸರದಾರ್ ಪಟೇಲ್ ಅವರ ವಿಗ್ರಹ
  • Share this:
- ನ್ಯೂಸ್18 ಕನ್ನಡ

ಪುಣೆ(ಅ. 16): ಪ್ರಧಾನಿ ನರೇಂದ್ರ ಮೋದಿ ಭಾರೀ ಪ್ರಚಾರ ಮಾಡಿ ನಿರ್ಮಿಸುತ್ತಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಬೃಹತ್ ವಿಗ್ರಹದ ಸುತ್ತಲಿನ ವಿವಾದ ನಿಲ್ಲುವಂತೆ ಕಾಣುತ್ತಿಲ್ಲ. ಈ ದೈತ್ಯ ಏಕತಾ ಶಿಲೆ ವಿಚಾರದಲ್ಲಿ ಬಿಜೆಪಿ ಹಾಗೂ ಅದರ ವಿರೋಧಿಗಳ ಮಧ್ಯೆ ದೊಡ್ಡ ವಾಕ್​ಸಮರವೇ ನಡೆಯುತ್ತಿದೆ. ಕಾಂಗ್ರೆಸ್​ನ ಹಿರಿಯ ಮುಖಂಡರಾಗಿದ್ದ ಉಕ್ಕಿನ ಮನುಷ್ಯ ವಲ್ಲಭಭಾಯಿ ಪಟೇಲ್ ಅವರ ಹೆಸರ ಬಿಜೆಪಿ ಮತ್ತು ಆರೆಸ್ಸೆಸ್ ಸಾಕಷ್ಟು ಬಾರಿ ಬಳಸಿಕೊಂಡು ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸುತ್ತಿರುವುದುಂಟು. ಇದೀಗ ಕಾಂಗ್ರೆಸ್ ಪಕ್ಷ ಮುಖಂಡ ಆನಂದ್ ಶರ್ಮಾ ಅವರು ಅದೇ ಅಸ್ತ್ರವನ್ನು ಆರೆಸ್ಸೆಸ್ ವಿರುದ್ಧ ಪ್ರಯೋಗಿಸಿದ್ದಾರೆ. ಮಹಾತ್ಮ ಗಾಂಧಿ ಹತ್ಯೆಯಾದ ನಂತರ ಅಂದಿನ ಗೃಹಸಚಿವರಾಗಿದ್ದ ಸರದಾರ್ ಪಟೇಲ್ ಅವರು ಆರೆಸ್ಸೆಸ್ ಸಂಘಟನೆಯನ್ನು ನಿಷೇಧಿಸಿ ಹೊರಡಿಸಿದ್ದ ಆದೇಶದ ಪ್ರತಿಯನ್ನು ಬೃಹತ್ ಏಕತಾ ಶಿಲೆಯ ಅಡಿಯಲ್ಲಿ ಛಾಪಿಸಬೇಕು ಎಂದು ಆನಂದ್ ಶರ್ಮಾ ಒತ್ತಾಯಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಆನಂದ್ ಶರ್ಮಾ, ದೇಶದ ಮೊದಲ ಗೃಹ ಸಚಿವರಿಗೆ ಅವರ (ಆರೆಸ್ಸೆಸ್) ಬಗ್ಗೆ ಯಾವ ಭಾವನೆ ಇತ್ತೆಂಬುದು ದೇಶದ ಜನತೆಗೆ ಗೊತ್ತಾಗಬೇಕಿದೆ ಎಂದು ಹೇಳಿದ್ದಾರೆ.

“ಮಹಾತ್ಮ ಗಾಂಧಿ ಹತ್ಯೆಯಾದ ನಂತರ 1948ರಲ್ಲಿ ನಿಷೇಧದ ಬಗ್ಗೆ ಪಟೇಲ್ ಅವರು ಲಿಖಿತ ಆದೇಶ ಹೊರಡಿಸಿದ್ದರು. ವಿಗ್ರಹದ ತಳದಲ್ಲಿ ಆ ಆದೇಶದ ಪ್ರತಿಯನ್ನು ಇರಿಸಬೇಕು. ಅವರ ಬಗ್ಗೆ ಪಟೇಲರು ಯಾವ ಭಾವನೆ ಹೊಂದಿದ್ದರೆಂಬುದು ದೇಶದ ಜನತೆಗೆ ತಿಳಿಸಿದಂತಾಗುತ್ತದೆ…. ಅವರಿಗೆ(ಆರೆಸ್ಸೆಸ್-ಬಿಜೆಪಿ ತಮ್ಮದೇ ಸ್ವಂತ ಹೀರೋಗಳಿಲ್ಲ. ಹೀಗಾಗಿ, ಸರದಾರ್ ಪಟೇಲ್ ಅವರ ಏಕತಾ ಶಿಲೆ ಕಟ್ಟುತ್ತಿದ್ದಾರೆ. ಇದನ್ನೂ ಚೀನಾದಿಂದಲೇ ಮಾಡಿಸಿ ತರುತ್ತಿದ್ದಾರೆ,” ಎಂದು ಆನಂದ್ ಶರ್ಮಾ ಆರೆಸ್ಸೆಸ್ ಹೆಸರೆತ್ತದೆಯೇ ಪರೋಕ್ಷ ಟೀಕೆ ಮಾಡಿದ್ದಾರೆ.‘

ಗುಜರಾತ್​ನ ವಡೋದರಾದ ನರ್ಮದಾ ನದಿ ದಂಡೆಯಲ್ಲಿ 182 ಅಡಿ (597 ಅಡಿ) ಎತ್ತರದ ಸರ್ದಾರ್ ಪಟೇಲ್ ಅವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಏಕತಾ ಶಿಲೆ ಎಂದೇ ಕರೆಯಲಾಗುತ್ತಿರುವ ಇದು ವಿಶ್ವದ ಅತೀ ಎತ್ತರದ ವಿಗ್ರಹವೆನಿಸಿದೆ. ನರ್ಮದಾ ಅಣೆಕಟ್ಟಿಗೆ ಮುಖ ಮಾಡಿ ನಿಂತಿರುವ ಈ ವಿಗ್ರಹದ ಸುತ್ತ 12 ಚದರ ಕಿಮೀ ಕೃತಕ ಕೊಳವನ್ನು ಕಟ್ಟಲಾಗಿದೆ. ಎಲ್​ ಅಂಡ್ ಟಿ ಸಂಸ್ಥೆಗೆ ಈ ವಿಗ್ರಹ ನಿರ್ಮಾಣದ ಗುತ್ತಿಗೆ ನೀಡಲಾಗಿದ್ದು ಸುಮಾರು 3 ಸಾವಿರ ಕೋಟಿ ರೂ ವೆಚ್ಚವಾಗಿದೆ. ಇದೇ ಅಕ್ಟೋಬರ್ 31ರಂದು ಈ ಶಿಲೆಯ ಉದ್ಘಾಟನೆಯಾಗುವ ಸಾಧ್ಯತೆ ಇದೆ.

ವಿಜಯಪುರದಲ್ಲಿ ಬಾಲಕನ ಕೈಚಳಕ: ಬೈಕ್ ಕದ್ದು ಪರಾರಿಯಾದ ವಿಡಿಯೋ:
First published:October 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading