Rafale Deal| ರಪೇಲ್ ಅಕ್ರಮ ವಿವಾದ, ತನಿಖೆಗೆ ಆದೇಶಿಸಿದ ಫ್ರೆಂಚ್ ಸರ್ಕಾರ; ಆದರೂ, ಬಿಜೆಪಿ ಮೌನವೇಕೆ? ಕಾಂಗ್ರೆಸ್ ಕಿಡಿ

ಈಗ ಲಭ್ಯವಿರುವ ದಾಖಲೆಗಳ ಪ್ರಕಾರ, ರಫೇಲ್ ಒಪ್ಪಂದದಲ್ಲಿ ಮಧ್ಯವರ್ತಿಗಳಿಗೆ ಭಾರಿ ಪ್ರಮಾಣದ ಹಣವನ್ನು ಪಾವತಿಸಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ಸಮರ್ಥಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ರಫೇಲ್ ಯುದ್ಧವಿಮಾನ.

ರಫೇಲ್ ಯುದ್ಧವಿಮಾನ.

 • Share this:
  ನವ ದೆಹಲಿ (ಜುಲೈ 05); ಭಾರತದ ವಾಯಪಡೆಯನ್ನು ಮತ್ತಷ್ಟು ಬಲಿಷ್ಠಗೊಳಿ ಸುವ ಸಲುವಾಗಿ ಕೇಂದ್ರ ಸರ್ಕಾರ 2016 ಬಹುಕೋಟಿ ಮೊತ್ತದ ರಫೇಲ್​ ಯುದ್ಧ ವಿಮಾನಗಳ ಖರೀದಿಗೆ ಫ್ರಾನ್ಸ್​ ಜೊತೆ ಒಪ್ಪಂದ ಮಾಡಿಕೊಂಡಿ ತ್ತು. ಭಾರತ ಸರ್ಕಾರ ಮತ್ತು ಫ್ರೆಂಚ್ ವಿಮಾನ ತಯಾರಕ ಡಸಾಲ್ಟ್ ನಡುವಿನ 36 ವಿಮಾನಗಳಿಗೆ 7.8 ಬಿಲಿಯನ್ ಯುರೋ (9.3 ಬಿಲಿಯನ್ ಡಾಲರ್‌‌) ಒಪ್ಪಂದವು ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದೆ. ಈ ಅಕ್ರಮವನ್ನು ತನಿಖೆ ನಡೆಸಲು ಫ್ರೆಂಚ್ ಸರ್ಕಾರ ನ್ಯಾಯಾಧೀಶರನ್ನು ನೇಮಿಸಿದೆ. ಈ ವಿಚಾರ ರಾಜಕೀಯ ವಾಗಿ ಬಿಜೆಪಿ ನೇತೃತ್ವದ ಮೋದಿ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಅಲ್ಲದೆ, 59,000 ಕೋಟಿ ರಫೇಲ್ ಜೆಟ್ ಒಪ್ಪಂದದ ಬಗ್ಗೆ ಫ್ರೆಂಚ್ ತನಿಖೆಯ ಬಗ್ಗೆ ಬಿಜೆಪಿ ಸರ್ಕಾರ ಮೌನವಾಗಿರುವುದನ್ನು ಕಾಂಗ್ರೆಸ್ ಭಾನುವಾರ ಉಗ್ರವಾಗಿ ಖಂಡಿಸಿದೆ.

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, "ಈಗ ಲಭ್ಯವಿರುವ ದಾಖಲೆಗಳ ಪ್ರಕಾರ, ರಫೇಲ್ ಒಪ್ಪಂದದಲ್ಲಿ ಮಧ್ಯವರ್ತಿಗಳಿಗೆ ಭಾರಿ ಪ್ರಮಾಣದ ಹಣವನ್ನು ಪಾವತಿಸಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ಸಮರ್ಥಿಸುತ್ತದೆ" ಎಂದು ಆಕ್ರೋಶ ವ್ಯಕ್ತಪಡಿಸಿದೆ.

  ಕಾಂಗ್ರೆಸ್​ ಪಕ್ಷವು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ರಫೇಲ್ ಅಕ್ರಮದ ವಿಷಯದ ಬಗ್ಗೆ ತನ್ನ ಅಭಿಯಾನವನ್ನು ನಡೆಸಿತ್ತು. ಇದೇ ವಿಚಾರವನ್ನು ಮುಂದಿಟ್ಟು ಚುನಾವಣೆಯನ್ನು ಎದುರಿಸಿತ್ತು. ಆದರೆ, ಈ ತಂತ್ರ ಕಾಂಗ್ರೆಸ್​ ಗೆ ಫಲ ನೀಡಿಲ್ಲ. ಆದರೆ, ಈಗ ಇದೇ ವಿಚಾರ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಕಾಂಗ್ರೆಸ್​ ಮತ್ತೆ ಬಿಜೆಪಿ ವಿರುದ್ಧ ಮುಗಿಬಿದ್ದಿದೆ. ಅಲ್ಲದೆ, ಮೆಗಾ ಒಪ್ಪಂದದ ಅಕ್ರಮದ ಬಗ್ಗೆ ಶನಿವಾರ ಕಾಂಗ್ರೆಸ್ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒತ್ತಾಯಿಸಿದೆ.

  ಇದನ್ನೂ ಓದಿ: Petrol Price Today | ಶತಕವನ್ನೂ ಮೀರಿ ಮುನ್ನಡೆಯುತ್ತಿದೆ ತೈಲ ಬೆಲೆ; ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು?

  ಭಾನುವಾರ ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್​ ಮಾಡಿ ಅಪಹಾಸ್ಯ ಮಾಡಿರುವ ರಾಹುಲ್ ಗಾಂಧಿ, "ರಫೇಲ್ ಅಕ್ರಮದ ಜಂಟಿ ಸಂಸದೀಯ ಸಮಿತಿ ತನಿಖೆಗೆ ಪ್ರಧಾನಿ ಮೋದಿ ಸರ್ಕಾರ ಏಕೆ ಸಿದ್ಧರಿಲ್ಲ? ಎಂದು ಪ್ರಶ್ನೆ ಮಾಡಿರುವ ರಾಹುಲ್ ಗಾಂಧಿ, ಇದಕ್ಕೆ ಉತ್ತರವಾಗಿ ಕೆಲವು ಆಯ್ಕೆಗಳು ಹೀಗಿವೆ: "ಅಪರಾಧ ಮನಸ್ಸಾಕ್ಷಿ, ಸ್ನೇಹಿತರನ್ನು ಸಹ ರಕ್ಷಿಸಬೇಕಾಗಿದೆ, ಜೆಪಿಸಿಗೆ ರಾಜ್ಯಸಭಾ ಸ್ಥಾನ ಬೇಕಾಗಿಲ್ಲ ಮತ್ತು ಎಲ್ಲಾ ಆಯ್ಕೆಗಳು ಸರಿಯಾಗಿವೆ" ಎಂದು ಟೀಕಿಸಿದ್ದಾರೆ.

  ರಾಹುಲ್ ಗಾಂಧಿ 2019 ರ ಸಂಸತ್ ಚುನಾವಣೆಗೆ ಮುಂಚಿತವಾಗಿ, ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರನ್ನು "ಚೌಕಿದಾರ್ ಚೋರ್ ಹೈ" (ಕಾವಲುಗಾರ ಸ್ವತಃ ಕಳ್ಳ) ಘೋಷಣೆ ಮಾಡಿದ್ದರು. ಆದರೆ, ಕಾಂಗ್ರೆಸ್ ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕುವಲ್ಲಿ ವಿಫಲವಾಗಿತ್ತು.

  ಇದನ್ನೂ ಓದಿ: Rafale Deal| ರಫೇಲ್ ಡೀಲ್​ನಲ್ಲಿ ಭ್ರಷ್ಟಾಚಾರದ ವಾಸನೆ, ಒಪ್ಪಂದದ ತನಿಖೆಗೆ ನ್ಯಾಯಾಧೀಶರನ್ನು ನೇಮಿಸಿದ ಫ್ರಾನ್ಸ್‌ ಸರ್ಕಾರ

  ಭಾನುವಾರ, ಪಕ್ಷದ ವಕ್ತಾರ ಪವನ್ ಖೇರಾ ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, "ರಫೇಲ್ ಒಪ್ಪಂದವು ಭಾರತ ಮತ್ತು ಫ್ರಾನ್ಸ್ ನಡುವಿನ ಅಂತರ್-ಸರ್ಕಾರಿ ಒಪ್ಪಂದವಾಗಿದೆ ಮತ್ತು ಉಭಯ ದೇಶಗಳಲ್ಲಿ ಒಂದು ತನಿಖೆಯನ್ನು ಪ್ರಾರಂಭಿಸಿದೆ. ಭ್ರಷ್ಟಾಚಾರ, ಪ್ರಭಾವ ಬೀರುವಿಕೆ, ಮನಿ ಲಾಂಡರಿಂಗ್, ಒಲವು ತೋರುವುದು ಮುಂತಾದ ವಿಷಯಗಳ ಬಗ್ಗೆ ತನಿಖೆ ನಡೆಸಲು ಫ್ರಾನ್ಸ್ ಆದೇಶಿಸಿ 24 ಗಂಟೆಗಳಾಗಿದೆ. ಇಡೀ ರಾಷ್ಟ್ರ, ಇಡೀ ಜಗತ್ತು ಈಗ ನವದೆಹಲಿಯತ್ತ ನೋಡುತ್ತಿದೆ. ಆದರೂ ಬಿಜೆಪಿ ಈ ಬಗ್ಗೆ ಮೌನ ಏಕೆ?" ಎಂದು ಪ್ರಶ್ನೆ ಮಾಡಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: