• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Narendra Modi: ಈಶಾನ್ಯ ರಾಜ್ಯಗಳನ್ನ ಕಾಂಗ್ರೆಸ್​ ಎಟಿಎಂ ಮಾಡಿಕೊಂಡಿತ್ತು, ಬಿಜೆಪಿ ಅಷ್ಟಲಕ್ಷ್ಮಿ ಎಂದು ಪರಿಗಣಿಸಿದೆ -ಪಿಎಂ ಮೋದಿ

Narendra Modi: ಈಶಾನ್ಯ ರಾಜ್ಯಗಳನ್ನ ಕಾಂಗ್ರೆಸ್​ ಎಟಿಎಂ ಮಾಡಿಕೊಂಡಿತ್ತು, ಬಿಜೆಪಿ ಅಷ್ಟಲಕ್ಷ್ಮಿ ಎಂದು ಪರಿಗಣಿಸಿದೆ -ಪಿಎಂ ಮೋದಿ

ನರೇಂದ್ರ ಮೋದಿ

ನರೇಂದ್ರ ಮೋದಿ

ಈಶಾನ್ಯದ (Northeast) 8 ರಾಜ್ಯಗಳನ್ನ ಕಾಂಗ್ರೆಸ್ (Congress)​ ತನ್ನ ಎಟಿಎಂ ಆಗಿ ಬಳಸಿಕೊಂಡಿತ್ತು. ಆದರೆ ಬಿಜೆಪಿ ಅವುಗಳನ್ನು ಅಷ್ಟಲಕ್ಷ್ಮಿ (Ashtalakshmi) ಎಂದು ಪರಿಗಣಿಸಿದೆ. ಜೊತೆಗೆ ಇಲ್ಲಿ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ . ಈಶಾನ್ಯ ರಾಜ್ಯಗಳಲ್ಲಿ ಶಾಶ್ವತ ಶಾಂತಿ ಸ್ಥಾಪನೆಗೆ ಎನ್​ಡಿಎ ಶ್ರಮಿಸುತ್ತಿದೆ ಎಂದು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮೋದಿ ಹೇಳಿದ್ದಾರೆ.

ಮುಂದೆ ಓದಿ ...
  • Share this:

ನಾಗಲ್ಯಾಂಡ್: ಪ್ರಧಾನಿ ನರೇಂದ್ರ ಮೋದಿ (PM Narendra Modi) ಚುನಾವಣಾ (Election) ರಾಜ್ಯ ನಾಗಲ್ಯಾಂಡ್​ನಲ್ಲಿ (Nagaland)ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್​ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಈಶಾನ್ಯದ (Northeast) 8 ರಾಜ್ಯಗಳನ್ನ ಕಾಂಗ್ರೆಸ್ (Congress)​ ತನ್ನ ಎಟಿಎಂ ಆಗಿ ಬಳಸಿಕೊಂಡಿತ್ತು. ಆದರೆ ಬಿಜೆಪಿ ಅವುಗಳನ್ನು ಅಷ್ಟಲಕ್ಷ್ಮಿ (Ashtalakshmi) ಎಂದು ಪರಿಗಣಿಸಿದೆ. ಜೊತೆಗೆ ಇಲ್ಲಿ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ . ಈಶಾನ್ಯ ರಾಜ್ಯಗಳಲ್ಲಿ ಶಾಶ್ವತ ಶಾಂತಿ ಸ್ಥಾಪನೆಗೆ ಎನ್​ಡಿಎ ಶ್ರಮಿಸುತ್ತಿದೆ. ಅದಕ್ಕಾಗಿಯೇ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ, 1958 ಅನ್ನು ರಾಜ್ಯದಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.


ಕಾಂಗ್ರೆಸ್ ಆಳ್ವಿಕೆಯಲ್ಲಿ ನಾಗಾಲ್ಯಾಂಡ್‌ನಲ್ಲಿ ರಾಜಕೀಯ ಅಸ್ಥಿರತೆ ಇತ್ತು, ಹಳೆಯ ಪಕ್ಷ ದೆಹಲಿಯಿಂದಲೇ ಈಶಾನ್ಯ ರಾಜ್ಯಗಳನ್ನು ರಿಮೋಟ್-ಕಂಟ್ರೋಲ್ ಮಾಡಿಕೊಂಡಿತ್ತು. ರಾಜವಂಶದಂತೆ ಆಳ್ವಿಕೆ ನಡೆಸುತ್ತಿತ್ತು. ಮತ ಪಡೆದು ಮರೆತು ಬಿಡಿ ಎಂಬ ವಿಭಜನೆ ನೀತಿಯನ್ನು ಕಾಂಗ್ರೆಸ್​ ಅನುಸರಿಸುತ್ತಿತ್ತು. ಇಲ್ಲಿನ ಸಮಸ್ಯೆಗಳ ಬಗ್ಗೆ ಅವರು ತಲೆಕೆಡಿಸಿಕೊಳ್ಳದೆ ಕಣ್ಣು ಮುಚ್ಚಿ ಕುಳಿತಿರುತ್ತಿದ್ದರು. ಆದರೆ ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದರು.


ದೈವಿಕ ಆಡಳಿತವಾಗಿ ಪರಿವರ್ತನೆ


ನಮ್ಮ ಸ್ವಂತ ಜನರ ಮೇಲೆ ಅಪನಂಬಿಕೆಯಿಂದ ದೇಶವನ್ನು ನಡೆಸಲಾಗುವುದಿಲ್ಲ. ಅವರ ಸಮಸ್ಯೆಗಳನ್ನು ಗೌರವಿಸಬೇಕು ಮತ್ತು ಪರಿಹರಿಸಬೇಕು. ಈ ಹಿಂದೆ, ಈಶಾನ್ಯವು ವಿಭಜನೆಯ ರಾಜಕೀಯವನ್ನು ಹೊಂದಿತ್ತು, ಆದರೆ ನಾವು ಈಗ ಅದನ್ನು ದೈವಿಕ ಆಡಳಿತವಾಗಿ ಪರಿವರ್ತಿಸಿದ್ದೇವೆ. ಬಿಜೆಪಿ ಜನರನ್ನು ಧರ್ಮ ಅಥವಾ ಪ್ರದೇಶ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ.


ಇದನ್ನೂ ಓದಿ:  Narendra Modi: ಯಡಿಯೂರಪ್ಪ ಭಾಷಣ ನನಗೆ ಸ್ಪೂರ್ತಿ ನೀಡಿದೆ; ಬಿಎಸ್‌ವೈ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ ಪ್ರಧಾನಿ ಮೋದಿ


ನಾಗಾಲ್ಯಾಂಡ್‌ನ ಸಾಂಸ್ಕೃತಿಕ ವೈವಿಧ್ಯತೆಯಿಂದ ನಾನು ಪ್ರಭಾವಿತನಾಗಿದ್ದೇನೆ. ನಾಗಾಲ್ಯಾಂಡ್‌ನಲ್ಲಿ ಅಭಿವೃದ್ಧಿಯ ಅಲೆ ಮತ್ತು ವಿಶ್ವಾಸವಿದೆ ಎಂದ ಪ್ರಧಾನಿ ಮೋದಿ ಬಿಜೆಪಿ-ಎನ್‌ಡಿಪಿಪಿ ಸರ್ಕಾರವನ್ನು ಶ್ಲಾಘಿಸಿದರು. ಇಲ್ಲಿನ ನಮಗೆ ಸಾಕಷ್ಟು ಬೆಂಬಲ ಇರುವ ಕಾರಣದಿಂದಲೇ ಈಶಾನ್ಯ ರಾಜ್ಯಗಳ ತ್ವರಿತ ಅಭಿವೃದ್ಧಿಗಾಗಿ ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದು ಪಿಎಂ ಹೇಳಿದರು.




ಎನ್​ಡಿಎ ಮೂರು ಮಂತ್ರ ಅನುಸರಿಸುತ್ತಿದೆ


ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಬಿಜೆಪಿ ಭ್ರಷ್ಟಾಚಾರಕ್ಕೆ ದೊಡ್ಡ ಅಡ್ಡಗಲಾಗಿದೆ. ಇದರ ಪರಿಣಾಮವಾಗಿ ದೆಹಲಿಯಿಂದ ಕಳುಹಿಸಲಾದ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ನಾಗಾಲ್ಯಾಂಡ್ ಅನ್ನು ಮುನ್ನಡೆಸಲು ಶಾಂತಿ, ಪ್ರಗತಿ ಮತ್ತು ಸಮೃದ್ಧಿ ಎಂಬ ಮೂರು ಮಂತ್ರಗಳನ್ನು ಅಳವಡಿಸಿಕೊಂಡಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.


ಶೇ 75ರಷ್ಟು ಹಿಂಸಾಚಾರ ಕಡಿಮೆ


ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಯು ಮಹಿಳೆಯರು, ಆದಿವಾಸಿಗಳು ಮತ್ತು ಬಡವರ ಮೇಲೆ ಕೇಂದ್ರೀಕೃತವಾಗಿದೆ. ಬಿಜೆಪಿ ನಾಗಾಲ್ಯಾಂಡ್‌ಗೆ ಮೊದಲ ಮಹಿಳಾ ರಾಜ್ಯಸಭಾ ಸಂಸದೆಯನ್ನು ಸಹ ನೀಡಿದೆ, ಬಿಜೆಪಿ ಅವಧಿಯಲ್ಲಿ ನಾಗಾಲ್ಯಾಂಡ್‌ನಲ್ಲಿ ಹಿಂಸಾಚಾರದ ಘಟನೆಗಳು ಶೇಕಡಾ 75 ರಷ್ಟು ಕಡಿಮೆಯಾಗಿದೆ. ಇಲ್ಲಿನ ಅನೇಕ ಯುವಕರು ಮುಖ್ಯವಾಹಿನಿಗೆ ಮರಳಿದ್ದಾರೆ. ನಾವು ಈಶಾನ್ಯ ರಾಜ್ಯಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇವೆ. ಅದಕ್ಕೆ ಇಲ್ಲಿನ ಬದಲಾವಣೆಗಳೇ ಸಾಕ್ಷಿ. ಪ್ರವಾಸೋದ್ಯಮದಿಂದ ತಂತ್ರಜ್ಞಾನದವರೆಗೆ ಮತ್ತು ಕ್ರೀಡೆಯಿಂದ ಸ್ಟಾರ್ಟ್‌ಅಪ್‌ಗಳವರೆಗೆ ನಾವು ಯುವಕರನ್ನು ಬೆಂಬಲಿಸುತ್ತೇವೆ ಎಂದು ಮೋದಿ ತಿಳಿಸಿದರು.


ಕಾಂಗ್ರೆಸ್​ ನಾಯಕರ ವಿರುದ್ಧ ಕಿಡಿ


ಮೇಘಾಲಯ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ತಮ್ಮ ವಿರುದ್ಧ ಕಾಂಗ್ರೆಸ್ ನಾಯಕ ಪವನ್​ ಖೇರಾ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯನ್ನು ಸ್ಮರಿಸಿದ ಮೋದಿ, ಕೆಟ್ಟ ಭಾಷೆ ಪ್ರಯೋಗಿಸುವವರಿಗೆ ದೇಶದ ಜನರೇ ಉತ್ತರ ಕೊಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್​ ಕುಟುಂಬ ರಾಜಕಾರಣವನ್ನು ಬೆಂಬಲಿಸುತ್ತದೆ. ಆದರೆ ಮೇಘಾಲಯ ಜನರು ಫ್ಯಾಮಿಲಿ ಫಸ್ಟ್​ ಬದಲಿಗೆ ಪೀಪಲ್ ಫಸ್ಟ್​ ಸರ್ಕಾರವನ್ನು ಬಯಸುತ್ತಾರೆ ಎಂದು ಹೇಳಿದರು.

Published by:Rajesha M B
First published: