ಜಮ್ಮು ಕಾಶ್ಮೀರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬಹಿಷ್ಕರಿಸಲು ಕಾಂಗ್ರೆಸ್ ನಿರ್ಧಾರ​​

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದಾಗಿನಿಂದ ರಾಜಕೀಯ ನಾಯಕರು ಗೃಹ ಬಂಧನದಲ್ಲಿದ್ದಾರೆ. ಎರಡು ತಿಂಗಳಾದರೂ ಅವರು ಬಂಧ ಮುಕ್ತಗೊಂಡಿಲ್ಲ. ಈ ಹಿನ್ನೆಲೆ ಚುನಾವಣೆಯನ್ನು ಬಹಿಷ್ಕಾರ​ ಮಾಡಲು ಕಾಂಗ್ರೆಸ್​ ನಿರ್ಧರಿಸಿದೆ.

Seema.R | news18-kannada
Updated:October 9, 2019, 6:11 PM IST
ಜಮ್ಮು ಕಾಶ್ಮೀರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬಹಿಷ್ಕರಿಸಲು ಕಾಂಗ್ರೆಸ್ ನಿರ್ಧಾರ​​
ಜಮ್ಮು-ಕಾಶ್ಮೀರ
Seema.R | news18-kannada
Updated: October 9, 2019, 6:11 PM IST
ಜಮ್ಮು (ಅ.9): ಕಣಿವೆ ರಾಜ್ಯದಲ್ಲಿ ಘೋಷಣೆಯಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬಹಿಷ್ಕರಿಸಲು ಕಾಂಗ್ರೆಸ್​ ತೀರ್ಮಾನ ಮಾಡಿದೆ. 

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದಾಗಿನಿಂದ ರಾಜಕೀಯ ನಾಯಕರು ಗೃಹ ಬಂಧನದಲ್ಲಿದ್ದಾರೆ. ಎರಡು ತಿಂಗಳಾದರೂ ಅವರು ಬಂಧ ಮುಕ್ತಗೊಂಡಿಲ್ಲ. ಈ ಹಿನ್ನೆಲೆ ಚುನಾವಣೆಯನ್ನು ಬಹಿಷ್ಕಾರ​ ಮಾಡಲು ಕಾಂಗ್ರೆಸ್​ ನಿರ್ಧರಿಸಿದೆ.

ಇದೇ ಅ.24ರಿಂದ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದ್ದು, ಈ ಹೊತ್ತಿಗೆ ಪರಿಸ್ಥಿತಿ ತಿಳಿಕೊಳ್ಳಲಿದೆ. ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆ ಶುರುವಾಗಲಿದೆ ಎಂದು ಕೇಂದ್ರ ತಿಳಿಸಿದೆ.

"ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಬಲಗೊಳಿಸುವಲ್ಲಿ ಕಾಂಗ್ರೆಸ್​ ನಂಬಿಕೆ ಹೊಂದಿದೆ. ಚುನಾವಣೆಗಳಿಂದ ಅವನ್ನು ಮರೆಮಾಚುವ ಪ್ರಯತ್ನ ನಡೆಸಿಲ್ಲ. ಆದರೆ, ಇಂದು ರಾಜ್ಯ ಆಡಳಿತದಲ್ಲಿನ ಅಸಡ್ಡೆ ವರ್ತನೆ ಮತ್ತು ಹಿರಿಯ ನಾಯಕರ ಗೃಹ ಬಂಧನದ ಅವಧಿ ಮುಂದುವರೆದ ಹಿನ್ನೆಲೆ ಈ ತೀರ್ಮಾನವನ್ನು ಕಾಂಗ್ರೆಸ್​ ಕೈಗೊಂಡಿದೆ '  ಎಂದು ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಜಿಎ ಮಿರ್​ ತಿಳಿಸಿದ್ದಾರೆ.

ಇದನ್ನು ಓದಿ: ಗೃಹ ಬಂಧನದಲ್ಲಿರುವ ಪಕ್ಷದ ಮುಖ್ಯಸ್ಥ ಫಾರೂಕ್​ರನ್ನು ಭೇಟಿಯಾದ ನ್ಯಾಷನಲ್​ ಕಾನ್ಫೆರನ್ಸ್​ ಪಕ್ಷದ ನಿಯೋಗ

ಜಮ್ಮು ಕಾಶ್ಮೀರವನ್ನು ವಿಭಜಿಸಿ ಎರಡು ಕೇಂದ್ರಾಡಳಿತವಾಗಿ ಕೇಂದ್ರ ಘೋಷಿಸುವುದಕ್ಕೆ ಸ್ಥಳೀಯ ನಾಯಕರು ವಿರೋಧಿಸುವ ಮುನ್ಸೂಚನೆ ಅರಿತ ಕೇಂದ್ರ ಆ.5ರಿಂದ ಕಣಿವೆ ರಾಜ್ಯದ 400ಕ್ಕೂ ಹೆಚ್ಚು ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸಿದೆ. ಗೃಹಬಂಧನದಲ್ಲಿರುವ ನಾಯಕರನ್ನು ಒಬ್ಬೊಬ್ಬರಾಗಿ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯಪಾಲರ ಸಲಹೆಗಾರರು ಕಳೆದವಾರ ಪ್ರಕಟಿಸಿದ್ದರು.

ರಾಜ್ಯದ ಮಾಜಿ ಸಿಎಂಗಳಾದ ಮುಫ್ತಿ, ಒಮರ್​, ಫಾರೂಕ್​ ಅಬ್ಧಲ್ಲಾ ಅವರನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ.
Loading...

First published:October 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...