ತೆಲಂಗಾಣದಲ್ಲಿ ಕೆಸಿಆರ್ ವಿರುದ್ಧ ಒಟ್ಟುಗೂಡಿದ ಟಿಡಿಪಿ, ಕಾಂಗ್ರೆಸ್ ಮತ್ತು ಎಡಪಕ್ಷಗಳು


Updated:September 11, 2018, 9:00 PM IST
ತೆಲಂಗಾಣದಲ್ಲಿ ಕೆಸಿಆರ್ ವಿರುದ್ಧ ಒಟ್ಟುಗೂಡಿದ ಟಿಡಿಪಿ, ಕಾಂಗ್ರೆಸ್ ಮತ್ತು ಎಡಪಕ್ಷಗಳು

Updated: September 11, 2018, 9:00 PM IST
- ನ್ಯೂಸ್18 ಕನ್ನಡ

ಹೈದರಾಬಾದ್(ಸೆ. 11): ತೆಲಂಗಾಣದಲ್ಲಿ ಬಿಜೆಪಿ ಜೊತೆ ಟಿಆರ್​ಎಸ್ ಮೈತ್ರಿ ಮಾಡಿಕೊಳ್ಳಬಹುದು ಎಂಬ ಸುದ್ದಿಗಳು ಕೇಳಿಬರುತ್ತಿರುವ ಬೆನ್ನಲ್ಲೇ ಅಲ್ಲಿ ಇತರ ಪಕ್ಷಗಳು ಟಿಆರ್​ಎಸ್ ವಿರುದ್ಧ ಒಗ್ಗೂಡಿವೆ. ಕಾಂಗ್ರೆಸ್, ಟಿಡಿಪಿ ಮತ್ತು ಎಡಪಕ್ಷಗಳು ಈಗ ಒಟ್ಟುಗೂಡಿ ಹಂಗಾಮಿ ಸಿಎಂ ಕೆ.ಸಿ. ಚಂದ್ರಶೇಖರ್ ರಾವ್ ವಿರುದ್ಧ ಕತ್ತಿ ಮೊನಚು ಮಾಡುತ್ತಿವೆ. ತೆಲಂಗಾಣದ ವಿಧಾನಸಭೆ ವಿಸರ್ಜನೆಯಾದ ನಂತರ ಹಂಗಾಮಿ ಸಿಎಂ ಆಗಿರುವ ಕೆ.ಸಿ. ಚಂದ್ರಶೇಖರ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಈ ಮೂರು ಪಕ್ಷಗಳು ಆರೋಪಿಸಿವೆ.

ವಿಧಾನಸಭೆ ವಿಸರ್ಜನೆಯಾದರೂ 12 ಸಲಹೆಗಾರರು ಮುಂದುವರಿದಿದ್ದಾರೆ; ಯೋಜನಾ ಮಂಡಳಿಯ ಸದಸ್ಯರು ಈಗಲೂ ಅಧಿಕಾರದ ಫಲ ಅನುಭವಿಸುತ್ತಿದ್ದಾರೆ; ಕೆಲ ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಇವರು ವಿವಿಧ ನಿಗಮಗಳಿಗೆ ಅಧ್ಯಕ್ಷರಾಗಿ ಅಧಿಕಾರ ಅನುಭವಿಸುತ್ತಿದ್ದಾರೆ. ಇಂಥ ಕೆಲವರು ಟಿಆರ್​ಎಸ್ ಪಕ್ಷದ ಟಿಕೆಟ್ ಕೂಡ ಪಡೆದಿದ್ದಾರೆ. ಇವು ಅಕ್ರಮ ಮತ್ತು ಅಸಾಂವಿಧಾನಿಕ ಎಂದು ಈ ಮೂರು ಪಕ್ಷಗಳು ಅಭಿಪ್ರಾಯಪಟ್ಟಿವೆ.

ಈ ಕುರಿತು ಟಿಡಿಪಿ, ಕಾಂಗ್ರೆಸ್ ಮತ್ತು ಎಡರಂಗ ಪಕ್ಷಗಳು ತೆಲಂಗಾಣ ರಾಜ್ಯಪಾಲ ಇಎಸ್​ಎಲ್ ನರಸಿಂಹನ್ ಅವರಿಗೆ ಪತ್ರ ಬರೆದು ದೂರಿವೆ.

ಸೆ. 6, ಗುರುವಾರದಂದು ಕೆ.ಸಿ. ಚಂದ್ರಶೇಖರ್ ರಾವ್ ಅವರು ತೆಲಂಗಾಣ ವಿಧಾನಸಭೆ ವಿಸರ್ಜನೆ ಮಾಡಿದ್ದಾರೆ. ಅದಾದ ಬೆನ್ನಲ್ಲೇ 105 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನೂ ಪ್ರಕಟಿಸಿ ಚುನಾವಣಾ ರಣಕಹಳೆಯನ್ನು ಎಲ್ಲರಿಗಿಂತ ಮೊದಲೇ ಮೊಳಗಿಸಿದ್ದಾರೆ. ಬಿಜೆಪಿ ಬಲಾಢ್ಯವಿರುವ ಕೆಲ ಕ್ಷೇತ್ರಗಳಿಗೆ ಟಿಆರ್​ಎಸ್ ಅಭ್ಯರ್ಥಿಗಳನ್ನ ಪ್ರಕಟಿಸಿಲ್ಲದಿರುವುದು ಗಮನಾರ್ಹ. ಬಿಜೆಪಿ ಜೊತೆ ಅವರು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇರುವುದರ ಸುಳಿವು ಅದರಲ್ಲಿದೆ.
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ