• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ವೆಬ್​ಸೈಟ್​ ಹ್ಯಾಕ್​ ಪ್ರಕರಣ: ಬಿಜೆಪಿಗೆ ಸಹಾಯ'ಹಸ್ತ' ಚಾಚಿದ ಕಾಂಗ್ರೆಸ್​; ಟ್ವಿಟ್ಟರ್​ನಲ್ಲಿ ಟ್ರೋಲ್​ ಮಾಡಿದ ಆಪ್​

ವೆಬ್​ಸೈಟ್​ ಹ್ಯಾಕ್​ ಪ್ರಕರಣ: ಬಿಜೆಪಿಗೆ ಸಹಾಯ'ಹಸ್ತ' ಚಾಚಿದ ಕಾಂಗ್ರೆಸ್​; ಟ್ವಿಟ್ಟರ್​ನಲ್ಲಿ ಟ್ರೋಲ್​ ಮಾಡಿದ ಆಪ್​

ರಾಹುಲ್ ಗಾಂಧಿ- ಮೋದಿ

ರಾಹುಲ್ ಗಾಂಧಿ- ಮೋದಿ

ದೆಹಲಿಯಲ್ಲಿ ಈ ಬಾರಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್​ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಆಮ್​ ಆದ್ಮಿ ಪಕ್ಷ ಮುಂದಾಗಿತ್ತು. ಆದರೆ, ಕಾಂಗ್ರೆಸ್​ ದೆಹಲಿಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿತ್ತು.

  • News18
  • 2-MIN READ
  • Last Updated :
  • Share this:

ನವದೆಹಲಿ (ಮಾ. 6): ಬಿಜೆಪಿ ಅಧಿಕೃತ ವೆಬ್‌ಸೈಟ್‌ ನಿನ್ನೆ ಹ್ಯಾಕ್​ ಆಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಲಾರಂಭಿಸಿದೆ. ಈ ವಿಷಯವೀಗ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ರಾಜಕೀಯ ಚಕಮಕಿಗೆ ಕಾರಣವಾಗಿದೆ.

ಬಿಜೆಪಿಯನ್ನು ಉದ್ದೇಶಿಸಿ ಟ್ವೀಟ್​ ಮಾಡಿರುವ ಕಾಂಗ್ರೆಸ್​, ನಿಮಗೇನಾದರೂ ಬ್ಯಾಕಪ್​ ಬೇಕಿದ್ದರೆ ನಾವು ಸಹಾಯ ಮಾಡುತ್ತೇವೆ ಎಂದು ಹಗ್​ ಇಮೋಜಿ ಹಾಕಿ ಇಂದು ಟ್ವೀಟ್​ ಮಾಡಿತ್ತು. ಆದರೆ, ಅದೇ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿರುವ ಆಮ್​ ಆದ್ಮಿ ಪಕ್ಷ ಕಾಂಗ್ರೆಸ್​ನ ಕಾಲೆಳೆಯಲಾರಂಭಿಸಿದೆ.

ಬಿಜೆಪಿಯ ಅಧಿಕೃತ ವೆಬ್​ಸೈಟ್​ನಲ್ಲಿ ನಿನ್ನೆ 'ವಿ ವಿಲ್ ಬ್ಯಾಕ್​ ಸೂನ್​ (ನಾವು ಶೀಘ್ರದಲ್ಲೇ ಮತ್ತೆ ನಿಮ್ಮನ್ನು ಸಂಪರ್ಕಿಸುತ್ತೇವೆ)' ಎಂಬ ಮೆಸೇಜ್​ ಹಾಕಲಾಗಿತ್ತು. ಅದರ ಸ್ಕ್ರೀನ್​ಶಾಟ್​ ತೆಗೆದುಕೊಂಡು ಕಾಂಗ್ರೆಸ್​ ಟ್ವೀಟ್​ ಮಾಡಿತ್ತು. ಆದರೆ, ಅದನ್ನು ತನಗೆ ಬೇಕಾದಂತೆ ಬಳಸಿಕೊಂಡು ಜಾಣತನದಿಂದ ಟ್ವೀಟ್​ ಮಾಡಿರುವ ಆಪ್​, ನೀವು ದೆಹಲಿಯಲ್ಲಿ ನಮಗೆ ಮಾಡಿದಂತೆ ಬಿಜೆಪಿಗೂ ಸಹಾಯ ಮಾಡುತ್ತೀರಾ? ಎಂದು ಲೇವಡಿ ಮಾಡಿದೆ.


ಬಿಜೆಪಿ ವೆಬ್​ಸೈಟ್​ಗೆ​ ಹ್ಯಾಕರ್ಸ್​ಗಳ ದಾಳಿ​

ಚುನಾವಣೆಯಲ್ಲಿ ಎಲ್ಲೆಲ್ಲಿ ಬಿಜೆಪಿ ಸೋಲುವ ಹಂತದಲ್ಲಿರುತ್ತದೋ ಅಲ್ಲೆಲ್ಲ ಅವರಿಗೆ ಗೆಲ್ಲಲು (ಬ್ಯಾಕಪ್​) ಕಾಂಗ್ರೆಸ್​ ಸಹಾಯ ಮಾಡಿದೆ. ನಾವು ಈ ಮೊದಲೇ ಹೇಳಿದಂತೆ ಕಾಂಗ್ರೆಸ್​ ಬಿಜೆಪಿಗೆ ಸಹಾಯ ಮಾಡುತ್ತಿದೆ ಎಂದು ತನ್ನ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಆಮ್​ ಆದ್ಮಿ ಪಾರ್ಟಿ ಹೇಳಿಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಜೊತೆಗೆ ಬಿಜೆಪಿ ಡೀಲ್​ ಮಾಡಿಕೊಂಡಿದೆ ಎಂದು ಆಮ್​ ಆದ್ಮಿ ಪಕ್ಷ ಆರೋಪಿಸಿದೆ.

ದೆಹಲಿಯಲ್ಲಿ ಈ ಬಾರಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್​ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಆಮ್​ ಆದ್ಮಿ ಪಕ್ಷ ಮುಂದಾಗಿತ್ತು. ಆದರೆ, ಕಾಂಗ್ರೆಸ್​ ದೆಹಲಿಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿತ್ತು. ಇದರಿಂದಾಗಿ ಆಪ್​ ನಾಯಕ ಅರವಿಂದ್​ ಕೇಜ್ರಿವಾಲ್​ ಅಸಮಾಧಾನಗೊಂಡಿದ್ದರು.

12 ಸೀಟು ಕೇಳಿದ್ದೇನೆ, ಹತ್ತಾನ್ನಾದರೂ ಕೊಡಲಿ; ರಾಹುಲ್​ ಭೇಟಿ ಬಳಿಕ ದೇವೇಗೌಡರ ಮಾತು

ಈ ಬಗ್ಗೆ ಟ್ವೀಟ್​ ಕೂಡ ಮಾಡಿದ್ದ ಅರವಿಂದ್​ ಕೇಜ್ರಿವಾಲ್​, ಇಡೀ ದೇಶವೇ ಈ ಬಾರಿಯ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತು ಅಮಿತ್​ ಷಾ ಅವರನ್ನು ಸೋಲಿಸಲು ಬಯಸುತ್ತಿದೆ. ಆದರೆ, ಕಾಂಗ್ರೆಸ್​ ಮಾತ್ರ ಬಿಜೆಪಿ ವಿರೋಧಿಗಳ ಮತಗಳನ್ನು ಒಡೆಯುವ ಮೂಲಕ ಬಿಜೆಪಿ ಗೆಲ್ಲಲು ಪರೋಕ್ಷವಾಗಿ ಸಹಾಯ ಮಾಡುತ್ತಿದೆ. ಬಿಜೆಪಿಯೊಂದಿಗೆ ಕಾಂಗ್ರೆಸ್​ ಒಳಗೊಳಗೇ ಗುಪ್ತ ಒಪ್ಪಂದ ಮಾಡಿಕೊಂಡಿದೆ ಎಂಬ ವದಂತಿಗಳೂ ಹರಿದಾಡುತ್ತಿವೆ. ಕಾಂಗ್ರೆಸ್​- ಬಿಜೆಪಿಯ ಮೈತ್ರಿಯ ವಿರುದ್ಧ ಹೋರಾಡಲು ದೆಹಲಿಯಲ್ಲಿ ಆಪ್​ ಸಿದ್ಧವಿದೆ. ಆ ಎರಡೂ ರಾಷ್ಟ್ರೀಯ ಪಕ್ಷಗಳ ಅಪವಿತ್ರ ಮೈತ್ರಿಗೆ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ಟ್ವೀಟ್​ ಮಾಡಿದ್ದರು.

ಅಂದಹಾಗೆ, ಬಿಜೆಪಿಯ ವೆಬ್​ಸೈಟ್​ ಹ್ಯಾಕ್​ ಆಗಿದೆ ಎಂದು ಮೊದಲ ಬಾರಿಗೆ ಟ್ವೀಟ್​ ಮಾಡಿದವರು ಕಾಂಗ್ರೆಸ್​ ಸೋಷಿಯಲ್ ಮೀಡಿಯಾ ಉಸ್ತುವಾರಿಯಾಗಿರುವ ರಮ್ಯ (ದಿವ್ಯಸ್ಪಂದನ). ಹೀಗಾಗಿ, ಆ ಬಗ್ಗೆಯೂ ಚರ್ಚೆಯಾಗುತ್ತಿದೆ.

First published: