Uttar Pradesh: ಪ್ರಿಯಾಂಕ ಗಾಂಧಿ ನೇತೃತ್ವದಲ್ಲಿ 1200 ಕಿ.ಮೀ ಯಾತ್ರೆ ಮಾಡಲಿರುವ ಕಾಂಗ್ರೆಸ್​

ಚುನಾವಣೆಗೆ ಮುನ್ನ ಪಕ್ಷದ ಸಿದ್ಧತೆಗಳನ್ನು ಪರಿಶೀಲಿಸಲು ಪ್ರಿಯಾಂಕಾ (Priyanka) ಗುರುವಾರ ಇಲ್ಲಿಗೆ ಆಗಮಿಸಿದ್ದರು. ಈ ಯಾತ್ರೆಯು ಭ್ರಷ್ಟಾಚಾರ, ಹಣದುಬ್ಬರ, ಅಪರಾಧ, ಮಹಿಳೆಯರ ಮೇಲಿನ ದೌರ್ಜನ್ಯ, ನಿರುದ್ಯೋಗ ಮತ್ತು ಕಳಪೆ ಆರೋಗ್ಯ ಸೇವೆಗಳ (corruption, inflation, crime, violence against women, unemployment and poor health services) ಬಗ್ಗೆ ಜನರ ಗಮನ ಸೆಳೆಯುತ್ತದೆ ಎಂದು ಪಕ್ಷ ತಿಳಿಸಿದೆ.

ಪ್ರಿಯಾಂಕ ಗಾಂಧಿ

ಪ್ರಿಯಾಂಕ ಗಾಂಧಿ

 • Share this:
  Priyanka Gandhi Vadra: ಕಾಂಗ್ರೆಸ್ ತನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನೇತೃತ್ವದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ 12,000 ಕಿಮೀ ಉದ್ದದ ಯಾತ್ರೆಯನ್ನು ಉತ್ತರ ಪ್ರದೇಶದ ಹಳ್ಳಿಗಳು ಮತ್ತು ಪಟ್ಟಣಗಳ ಮೂಲಕ ಸಂಚರಿಸುವ ನಿರ್ಧಾರ ಕೈಗೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

  "ಕಾಂಗ್ರೆಸ್ ಪ್ರತಿಜ್ಞಾ ಯಾತ್ರೆ: ಹಮ್ ವಚನ ನಿಬಾಯೇಂಗೆ" ಮಾಡುವ ನಿರ್ಧಾರವನ್ನು ಪ್ರಿಯಾಂಕ ಗಾಂಧಿ  ಪಕ್ಷದ ಸಲಹಾ ಮತ್ತು ಕಾರ್ಯತಂತ್ರದ ಸದಸ್ಯರೊಂದಿಗೆ ನಡೆಸಿದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.

  ಚುನಾವಣೆಗೆ ಮುನ್ನ ಪಕ್ಷದ ಸಿದ್ಧತೆಗಳನ್ನು ಪರಿಶೀಲಿಸಲು ಪ್ರಿಯಾಂಕಾ (Priyanka) ಗುರುವಾರ ಇಲ್ಲಿಗೆ ಆಗಮಿಸಿದ್ದರು. ಈ ಯಾತ್ರೆಯು ಭ್ರಷ್ಟಾಚಾರ, ಹಣದುಬ್ಬರ, ಅಪರಾಧ, ಮಹಿಳೆಯರ ಮೇಲಿನ ದೌರ್ಜನ್ಯ, ನಿರುದ್ಯೋಗ ಮತ್ತು ಕಳಪೆ ಆರೋಗ್ಯ ಸೇವೆಗಳ (corruption, inflation, crime, violence against women, unemployment and poor health services) ಬಗ್ಗೆ ಜನರ ಗಮನ ಸೆಳೆಯುತ್ತದೆ ಎಂದು ಪಕ್ಷ ತಿಳಿಸಿದೆ.

  "ಯಾತ್ರೆ 12,000 ಕಿಮೀ ಕ್ರಮಿಸುತ್ತದೆ ಮತ್ತು ರಾಜ್ಯದ ಹಳ್ಳಿಗಳು ಮತ್ತು ಪಟ್ಟಣಗಳ ಮೂಲಕ ಹಾದು ಹೋಗುತ್ತದೆ" ಎಂದು ಅದು ಹೇಳಿದೆ. ಯಾತ್ರೆಯ ಸಮಯದಲ್ಲಿ, ಕಾಂಗ್ರೆಸ್ ನಾಯಕರು ಚುನಾವಣೆಗೆ ಮುಂಚಿತವಾಗಿ ಪಕ್ಷವು ನೀಡಿದ ಭರವಸೆಗಳನ್ನು ಪೂರೈಸುವುದಾಗಿ ಜನರಿಗೆ ಭರವಸೆ ನೀಡುತ್ತಾರೆ. ಯಾತ್ರೆಯ ಸಮಯದಲ್ಲಿ ಕೈಗೊಳ್ಳಲಾಗುವ ಮಾರ್ಗಗಳು ಮತ್ತು ಸಮಸ್ಯೆಗಳ ಬಗ್ಗೆ ಗಾಂಧಿ ಚರ್ಚೆ ನಡೆಸಿದರು ಎಂದು ಪಕ್ಷ ಹೇಳಿದೆ.


  "ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದಿನದ 24 ಗಂಟೆಗಳ ಕಾಲ ಶ್ರಮವಹಿಸುವಂತೆ ಅವರು ನಾಯಕರನ್ನು, ಕಾರ್ಯಕರ್ತರನ್ನು ಕೇಳಿಕೊಂಡರು" ಎಂದು ಪಕ್ಷದ ವಕ್ತಾರರು ಹೇಳಿದರು, ಟಿಕೆಟ್ ವಿತರಣೆಯಲ್ಲಿ ಪಕ್ಷದ ದೃಷ್ಟಿಕೋನಗಳು ಮುಖ್ಯವಾಗುತ್ತವೆ ಎಂದು ಅವರು ಒತ್ತಿ ಹೇಳಿದರು.

  ಪ್ರಿಯಾಂಕ ಗಾಂಧಿ ಪ್ರದೇಶವಾರು ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆಗಳನ್ನು ನಡೆಸಿದರು ಮತ್ತು ಸಂಭಾವ್ಯ ಅಭ್ಯರ್ಥಿಗಳು, ಚುನಾವಣಾ ನಿರ್ವಹಣೆ ಮತ್ತು ಪ್ರಚಾರ ಕಾರ್ಯಕ್ರಮಗಳ ಬಗ್ಗೆ ಅಭಿಪ್ರಾಯಗಳನ್ನು ಕೇಳಿದರು. ಅವರು ಪೂರ್ವಾಂಚಲ್, ಬುಂದೇಲ್‌ಖಂಡ್, ಮಧ್ಯ ಯುಪಿ ಮತ್ತು ಆಗ್ರಾ ಪ್ರದೇಶಗಳಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ಲಿಖಿತ ವರದಿಗಳನ್ನು ಕೋರಿದರು.

  ತಿಂಗಳ ಅಂತ್ಯದ ವೇಳೆಗೆ ಗ್ರಾಮ ಸಭಾ ಸಮಿತಿಗಳ ರಚನೆಗೆ ಅವರು ಒತ್ತು ನೀಡಿದರು. ಚುನಾವಣೆಗೆ ಪಕ್ಷದ ಸಿದ್ಧತೆಗಳನ್ನು ಪರಿಶೀಲಿಸಲು ಗಾಂಧಿ ಕೆಲವು ಜಿಲ್ಲೆಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.


  ಇದನ್ನೂ ಓದಿ: Pakistan: ಪಾಕಿಸ್ತಾನ ಕ್ರಿಕೆಟ್​ ಮಂಡಲಿ ಅಧ್ಯಕ್ಷರಾಗಿ ರಮೀಜ್​ ರಾಜಾ ಸೋಮವಾರ ಅಧಿಕಾರ ಸ್ವೀಕಾರ

  2017 ರ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಳು ಸ್ಥಾನಗಳಿಗೆ ಇಳಿದಿದೆ.  ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ ರಚಿಸಲು 403 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದುಕೊಂಡಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: