ಆಸ್ಪತ್ರೆಗೆ ದಾಖಲಾದ ಕಾಂಗ್ರೆಸ್ ನಾಯಕಿ, ನಟಿ ಖುಷ್ಬೂ..!

ಅಲ್ಲದೆ ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಕೇಂದ್ರ ಕ್ಷೇತದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಖುಷ್ಬೂ ಪ್ರಚಾರ ನಡೆಸಿದ್ದರು.

zahir | news18
Updated:May 24, 2019, 7:56 PM IST
ಆಸ್ಪತ್ರೆಗೆ ದಾಖಲಾದ ಕಾಂಗ್ರೆಸ್ ನಾಯಕಿ, ನಟಿ ಖುಷ್ಬೂ..!
@TNM
zahir | news18
Updated: May 24, 2019, 7:56 PM IST
ದಕ್ಷಿಣ ಭಾರತದ ಖ್ಯಾತ ತಾರೆ ಕಾಂಗ್ರೆಸ್ ಪಕ್ಷದ ನಾಯಕಿ ನಟಿ ಖುಷ್ಬೂ ಆಸ್ಪತ್ರೆ ದಾಖಲಾಗಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಆಸ್ಪತ್ರೆಗೆ ಸೇರಿರುವ ಖುಷ್ಬೂ, ಫಲಿತಾಂಶದ ದಿನ ಟಿವಿಗಳಲ್ಲಿ ಕಾಣಿಸುವುದಿಲ್ಲ ಎಂದು ಟ್ವೀಟ್ ಮಾಡಿ ತಿಳಿಸಿದ್ದರು.

ಕಾಂಗ್ರೆಸ್ ಪಕ್ಷದ ವಕ್ತಾರೆಯಾಗಿರುವ ನಟಿ ಖುಷ್ಬೂ, ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಟಿವಿಗಳಲ್ಲಿ ಕಾಣಿಸುವುದಿಲ್ಲ. ಏಕೆಂದರೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಾಳೆ (ಗುರುವಾರ) ನಡೆಯಲಿರುವ ಡ್ರಾಮಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾವು ಏನಾದರೂ ಪ್ಲ್ಯಾನ್​ ಮಾಡಿದರೆ, ಪ್ರಕೃತಿ ಮತ್ತೊಂದು ಕರುಣಿಸುತ್ತದೆ. ತುಂಬಾ ನಿರಾಸೆಗೆ ಒಳಗಾಗಿರುವುದಾಗಿ ಪೋಸ್ಟ್​ನಲ್ಲಿ ತಿಳಿಸಿದ್ದರು.

ತಮಿಳು ನಾಡಿನ ಕಾಂಗ್ರೆಸ್ ನಾಯಕಿಯಾಗಿರುವ ಖುಷ್ಬೂ, ಈ ಮೊದಲು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಾಯಕಿ ಹಾಗೂ ಪೋಷಕ ಪಾತ್ರದಲ್ಲಿ ಮಿಂಚಿದ್ದರು. 'ರಣಧೀರ' ಸಿನಿಮಾ ಮೂಲಕ ಸ್ಯಾಂಡಲ್​ವುಡ್​ ಎಂಟ್ರಿ ಕೊಟ್ಟಿದ್ದ ನಟಿ, ರವಿಚಂದ್ರನ್ ಚಿತ್ರಗಳ ಖಾಸಾ ನಾಯಕಿಯಾಗಿ ಸಿನಿಪ್ರಿಯರ ಸ್ವಪ್ನ ಸುಂದರಿಯಾಗಿದ್ದರು.

ಇದನ್ನೂ ಓದಿ: VIDEO: ಆಂಡ್ರೆ ರಸೆಲ್​ ಭಯಂಕರ ಬೌನ್ಸರ್: ವಿಶ್ವಕಪ್​ನಿಂದ ಉಸ್ಮಾನ್ ಖ್ವಾಜಾ ಔಟ್?

ಅಲ್ಲದೆ ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಕೇಂದ್ರ ಕ್ಷೇತದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಖುಷ್ಬೂ ಪ್ರಚಾರ ನಡೆಸಿದ್ದರು. ಈ ವೇಳೆ ಅನುಚಿತವಾಗಿ ವರ್ತಿಸಿದ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿ ಭಾರೀ ಸುದ್ದಿಯಾಗಿದ್ದರು. ಸದ್ಯ ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು ಕಾಂಗ್ರೆಸ್ ಪಕ್ಷವು ಕರ್ನಾಟಕ ಸೇರಿದಂತೆ ಹಲವೆಡೆ ಹೀನಾಯವಾಗಿ ಸೋತಿದೆ.ಅನಾರೋಗ್ಯ ನಿಮ್ಮಿತ್ತ ಆಸ್ಪತ್ರೆಯಲ್ಲಿರುವ ಖುಷ್ಬೂ ಅವರ ಟ್ವೀಟ್​ಗೆ ಹಲವರು ಪ್ರತಿಕ್ರಿಯಿಸಿದ್ದು, ಪಕ್ಷವು ಸೋತಿದ್ದು ನೀವು ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದಾರೆ. ದೇಶ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಪಕ್ಷ ವಿಫಲವಾದರೂ, ತಮಿಳುನಾಡಿನಲ್ಲಿ ಕಾಂಗ್ರೆಸ್ 8 ಸೀಟುಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿರುವುದು ನಟಿ ಖಷ್ಬೂ ಅವರಿಗೆ ತುಸು ನೆಮ್ಮದಿ ಎನ್ನಬಹುದು.

First published:May 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...