ಮೋದಿ-ಶಾರನ್ನು ಕೃಷ್ಣಾರ್ಜುನರಿಗೆ ಹೋಲಿಸಿದ ರಜನಿಕಾಂತ್​​ ವಿರುದ್ಧ ಕಾಂಗ್ರೆಸ್​ ಕಿಡಿ

ರಜನಿಕಾಂತ್​ ಅವರಿಂದ ಇಂತಹ ಹೇಳಿಕೆಯನ್ನು ನಾವು ಎದುರು ನೋಡಿರಲಿಲ್ಲ. ಅವರ ಈ ಮಾತುಗಳು ನಮಗೆ ಅಚ್ಚರಿ ಮೂಡಿಸಿದೆ

Seema.R | news18-kannada
Updated:August 13, 2019, 12:23 PM IST
ಮೋದಿ-ಶಾರನ್ನು ಕೃಷ್ಣಾರ್ಜುನರಿಗೆ ಹೋಲಿಸಿದ ರಜನಿಕಾಂತ್​​ ವಿರುದ್ಧ ಕಾಂಗ್ರೆಸ್​ ಕಿಡಿ
ನಟ ರಜನೀಕಾಂತ್.
  • Share this:
ಚೆನ್ನೈ(ಆ.13): ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಕಲಂ 370 ವಿಧಿ ರದ್ದು ಮಾಡಿದ ಅಮಿತ್​ ಶಾ ಹಾಗೂ ಮೋದಿಯನ್ನು ಕೃಷ್ಣ ಹಾಗೂ ಅರ್ಜುನರಿಗೆ ಹೋಲಿಸಿದ ರಜನಿಕಾಂತ್​ ಮತ್ತೊಮ್ಮೆ ಮಹಾಭಾರತವನ್ನು ಸರಿಯಾಗಿ ಓದಿ ಎಂದು ಕಾಂಗ್ರೆಸ್​ ತಿರುಗೇಟು ನೀಡಿದೆ.

ರಜನಿ ವಿರುದ್ಧ ವಾಗ್ದಾಳಿ ನಡೆಸಿರುವ ತಮಿಳುನಾಡು ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಕೆ.ಎಸ್​ ಅಳಗಿರಿ, ನಮ್ಮ ರಾಜ್ಯ ಸೇರಿದಂತೆ ಈಶಾನ್ಯ ಭಾರತ ಈ ವಿಶೇಷ ಸ್ಥಾನಮಾನವನ್ನು ಅನುಭವಿಸುತ್ತಿದೆ. ಈಗ ಕಾಶ್ಮೀರಕ್ಕೆ ಈ ಮಾನ್ಯತೆ ರದ್ದು ಮಾಡಲಾಗಿದೆ. ಮುಂದೆ ಇವನ್ನು ರದ್ದು ಮಾಡುವುದಿಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಕಾಶ್ಮೀರಕ್ಕಿರುವ ಸ್ಥಾನಮಾನ ರದ್ದು ಮಾಡಲು ಕಾರಣ ಅಲ್ಲಿ ಮುಸಲ್ಮಾನರು ಬಹುಸಂಖ್ಯಾತರು ಎಂದು ಆರೋಪಿಸಿದರು.

ರಜನಿಕಾಂತ್​ ಅವರಿಂದ ಇಂತಹ ಹೇಳಿಕೆಯನ್ನು ನಾವು ಎದುರು ನೋಡಿರಲಿಲ್ಲ. ಅವರ ಈ ಮಾತುಗಳು ನಮಗೆ ಅಚ್ಚರಿ ಮೂಡಿಸಿದೆ ಎಂದಿದ್ದಾರೆ.

ಇದನ್ನು ಓದಿ: ಪ್ರವಾಹದ ನಡುವೆ ಸ್ವಾತಂತ್ರ್ಯ ದಿನಾಚರಣೆಗೆ ರಾಜಧಾನಿಯಲ್ಲಿ ಸಕಲ ಸಿದ್ಧತೆ

ಪ್ರಧಾನಿ ಮೋದಿ ಮತ್ತು ಅಮಿತ್​ ಶಾ ಅವರನ್ನು ಕೃಷ್ಣ ಅರ್ಜುನರಿಗೆ ಹೋಲಿಕೆ ಮಾಡಲಾಗಿದೆ. ಕೃಷ್ಣಾರ್ಜುನರು ಹೇಗೆ ತಾನೇ ಕೋಟ್ಯಾಂತರ ಜನರ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯ? ಪ್ರೀತಿಯ ರಜನಿಕಾಂತ್​ ಅವರೇ ಈ ರೀತಿ ಹೋಲಿಕೆ ಮಾಡುವ ಬದಲು ಮೊದಲು ಮಹಾಭಾರತವನ್ನು ಸರಿಯಾಗಿ ಓದಲಿ ಎಂದಿದ್ದಾರೆ.

ಚೆನ್ನೈನ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ರಜನಿಕಾಂತ್​, ಮಹಾಭಾರತದಲ್ಲಿ ಕೌರವರ ವಿರುದ್ಧ ಪಾಂಡವರು ಗೆಲುವು ಸಾಧಿಸಿದಲು ಪ್ರಮುಖ ಪಾತ್ರವಹಿಸಿದವರು ಕೃಷ್ಣ ಮತ್ತು ಅರ್ಜುನ.ಈಗ ಅದೇ ರೀತಿ ಮೋದಿ-ಶಾ ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ದಿಟ್ಟ ನಿರ್ಧಾರ ಕೈಗೊಂಡರು. ಆದರೆ, ಇದರಲ್ಲಿ ಕೃಷ್ಣ ಯಾರು? ಅರ್ಜುನ ಯಾರು? ಎಂಬುದು ನಮಗೆ ತಿಳಿದಿಲ್ಲ ಎಂದಿದ್ದರು.

First published:August 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ