Ayodhya Verdict: ಸುಪ್ರೀಂಕೋರ್ಟ್​ ತೀರ್ಪು ಸ್ವಾಗತಿಸುತ್ತೇವೆ - ಕಾಂಗ್ರೆಸ್​​

ಭಾರತದ ಸಂಪ್ರದಾಯಗಳನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ. ಎಲ್ಲಾ ಧರ್ಮಗಳ ನಂಬಿಕೆಗಳನ್ನು ಪರಸ್ಪರ ಗೌರವಿಸಬೇಕು. ಸಮಾಜದಲ್ಲಿ ಏಕತೆಯನ್ನು ಎತ್ತಿ ಹಿಡಿಯಬೇಕು ಎಂದು ಕಾಂಗ್ರೆಸ್​​​​​ ಹೇಳಿದೆ.

news18-kannada
Updated:November 9, 2019, 1:06 PM IST
Ayodhya Verdict: ಸುಪ್ರೀಂಕೋರ್ಟ್​ ತೀರ್ಪು ಸ್ವಾಗತಿಸುತ್ತೇವೆ - ಕಾಂಗ್ರೆಸ್​​
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ನ.09): ಶತಮಾನಗಳ ಕಾಲದ ಅಯೋಧ್ಯೆ ಬಾಬರಿ ಮಸೀದಿ-ರಾಮ ಜನ್ಮಭೂಮಿ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಈ ಪ್ರಕರಣ ಸಂಬಂಧ ಇಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್​​, ವಿವಾದಿತ 2.77 ಎಕರೆ ಜಾಗವನ್ನು ಟ್ರಸ್ಟ್‌ಗೆ ನೀಡಿದೆ. ಇನ್ನು ಮೂರು ತಿಂಗಳಿನಲ್ಲಿ ಟ್ರಸ್ಟ್‌ ರಚನೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಹಾಗೇ ಮುಸ್ಲಿಂ ಸಮುದಾಯಕ್ಕೆ 5 ಎಕರೆ ಪ್ರತ್ಯೇಕ ಜಾಗ ನೀಡಲು ಸುಪ್ರೀಂಕೋರ್ಟ್​ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್​​ ಗೊಗೋಯ್​​ ನೇತೃತ್ವದ ಐವರು ಸದಸ್ಯರ ಸಂವಿಧಾನಿಕ ಪೀಠ ನೀಡಿದ ಈ ಐತಿಹಾಸಿಕ ತೀರ್ಪನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​​ ಸ್ವಾಗತಿಸಿದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​ ಸುಪ್ರೀಂಕೋರ್ಟ್​ ತೀರ್ಪನ್ನು ಗೌರವಿಸುತ್ತದೆ. ಸುಪ್ರೀಂಕೋರ್ಟ್​ ತೀರ್ಪನ್ನು ಒಪ್ಪಿಕೊಳ್ಳುವ ಮೂಲಕ ದೇಶದ ಜಾತ್ಯಾತೀತ, ಸಮಾನತೆ ಮತ್ತು ಭ್ರಾತೃ‍ತ್ವ ಮೌಲ್ಯಗಳನ್ನು ಗೌರವಿಸಬೇಕೆಂದು ಎಲ್ಲಾ ಸಮುದಾಯ ಮತ್ತು ಪಕ್ಷಗಳಿಗೆ ಮನವಿ ಮಾಡುತ್ತೇವೆ. ಹಾಗೆಯೇ ದೇಶದ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಕೇಳಿಕೊಳ್ಳುತ್ತೇವೆ ಎಂದು ಕಾಂಗ್ರೆಸ್​ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Ayodhya Verdict: ಅಯೋಧ್ಯೆಯಲ್ಲಿ ರಾಮಮಂದಿರ; ಹಿಂದೂಗಳಿಗೆ ನಿರ್ಬಂಧ ವಿಧಿಸಿ ಜಾಗ, ಮುಸ್ಲಿಮರಿಗೆ ಬದಲಿ ಜಾಗ

ಭಾರತದ ಸಂಪ್ರದಾಯಗಳನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ. ಎಲ್ಲಾ ಧರ್ಮಗಳ ನಂಬಿಕೆಗಳನ್ನು ಪರಸ್ಪರ ಗೌರವಿಸಬೇಕು. ಸಮಾಜದಲ್ಲಿ ಏಕತೆಯನ್ನು ಎತ್ತಿ ಹಿಡಿಯಬೇಕು ಎಂದು ಕಾಂಗ್ರೆಸ್​​​​​ ಹೇಳಿದೆ.

ಅತ್ತ ಕಾಂಗ್ರೆಸ್​ ಸೇರಿದಂತೆ ಬಿಜೆಪಿ ನಾಯಕರು ಸುಪ್ರೀಂಕೋರ್ಟ್​ ತೀರ್ಪು ಸ್ವಾಗತ ಮಾಡಿದ್ಧಾರೆ. ಇತ್ತ ಸುಪ್ರೀಂ ಕೋರ್ಟ್‌ ತೀರ್ಪನ್ನು ಗೌರವಿಸುತ್ತೇವಾದರೂ, ಇದರಿಂದ ತೃಪ್ತಿ ಹೊಂದಿಲ್ಲ ಎಂದು ಸುನ್ನಿ ವಕ್ಫ್‌ ಮಂಡಳಿ ಪರ ವಕೀಲ ಜಾಫರ್‌ ಯಾಬ್ ಜಿಲಾನಿ ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಸದ್ಯದಲ್ಲೇ ಮತ್ತೊಂದು ತೀರ್ಮಾನಕ್ಕೆ ಬರಲಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯದ್ದೇ ಮತ್ತೊಂದು ಪ್ರಕರಣ: ಬಾಬರಿ ಮಸೀದಿ ಧ್ವಂಸಗೊಳಿಸಿದವರ ಹಣೆಬರಹ ಶೀಘ್ರದಲ್ಲೇ ನಿರ್ಧಾರ

ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದ್ದ ಅಯೋಧ್ಯೆ ರಾಮಮಂದಿರ ಹಾಗೂ ಬಾಬರಿ ಮಸೀದಿ ಭೂ ವಿವಾದದ ಐತಿಹಾಸಿಕ ತೀರ್ಪನ್ನು ಸುಪ್ರಿಂಕೋರ್ಟ್​ ನೀಡಿದೆ. ಅಲ್ಲದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುಮತಿಯೂ ನೀಡಿದೆ. ಸುಪ್ರೀಂಕೋರ್ಟ್​ ಸರ್ವಾನುಮತದ ತೀರ್ಪು ನೀಡಿದ್ದು, ವಿವಾದಿತ ಭೂಮಿ ಸರ್ಕಾರಕ್ಕೆ ಸೇರಿದ್ದು ಎಂದು ಹೇಳಿದೆ.---------
First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading