Himachal Pradesh: ಬಿಜೆಪಿ ಸೇರುವ ವದಂತಿ ಮಧ್ಯೆ ತನ್ನ ಕಾರ್ಯಾಧ್ಯಕ್ಷನ ಕೆಳಗಿಳಿಸಿದ ಕಾಂಗ್ರೆಸ್!

ಪವನ್ ಕಾಜಲ್ 2012 ರಲ್ಲಿ ಕಾಂಗ್ರೆಸ್ ಸೇರುವ ಮೊದಲು ಬಿಜೆಪಿ ಕಾರ್ಯಕರ್ತರಾಗಿದ್ದರು. ಆದರೆ ಅವರು ಸ್ವತಂತ್ರ ಅಭ್ಯರ್ಥಿಯಾಗಿದ್ದಾಗ ವೀರಭದ್ರ ಸರ್ಕಾರಕ್ಕೆ ಬೆಂಬಲ ನೀಡಿದರು. ಇದಾದ ಬಳಿಕವೇ ಅವರು ಕಾಂಗ್ರೆಸ್ ಸೇರಿದರು. ಅವರನ್ನು ವೀರಭದ್ರ ಸಿಂಗ್‌ಗೆ ಅತ್ಯಂತ ನಿಕಟ ವ್ಯಕ್ತಿ ಎಂದು ಪರಿಗಣಿಸಲಾಗಿತ್ತು. ಕಾಜಲ್ ಅವರು ಕಂಗ್ರಾದಿಂದ ಎರಡು ಬಾರಿ ಶಾಸಕರಾಗಿದ್ದಾರೆ ಮತ್ತು ಕಳೆದ 10 ವರ್ಷಗಳಲ್ಲಿ ಎರಡೂ ಚುನಾವಣೆಗಳಲ್ಲಿ ಗೆದ್ದಿದ್ದಾರೆ.

ಸೋನಿಯಾ ಗಾಂಧಿ

ಸೋನಿಯಾ ಗಾಂಧಿ

  • Share this:
ಶಿಮ್ಲಾ(ಆ.17): ಸದ್ಯ ಹಿಮಾಚಲ ಪ್ರದೇಶದಲ್ಲಿ (Himachal Pradesh) ರಾಜಕೀಯ ಅಬ್ಬರ ನಡೆಯುತ್ತಿದೆ. ನಾಯಕರೆಲ್ಲರೂ ರಾಜಕೀಯ ಕೆಸರೆರಚಾಟದಲ್ಲಿ ತಲ್ಲೀನರಾಗಿದ್ದಾರೆ. ಏತನ್ಮಧ್ಯೆ, ಹಿಮಾಚಲದಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಲಿದ್ದು, ಕಾಂಗ್ರೆಸ್ ಈ ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸಿದೆ. ಹೀಗಿದ್ದರೂ ಕಂಗ್ರಾದ ಕಾಂಗ್ರೆಸ್ ಶಾಸಕ ಪವನ್ ಕಾಜಲ್ (Pawan Kajal)  ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಭಾರೀ ಸದ್ದು ಮಾಡಲಾರಂಭಿಸಿದೆ. ಅವರು ಬಿಜೆಪಿ (BJP) ಸೇರುತ್ತಾರೆ ಎಂಬ ಊಹಾಪೋಹಗಳ ನಡುವೆಯೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅವರನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದೆ.

कांगड़ा से कांग्रेस विधायक पवन काजल के भाजपा में शामिल होने जा रहे हैं.

ಇದನ್ನೂ ಓದಿ: ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಯಲ್ಲೂ ಕಾಂಗ್ರೆಸ್​​ಗೆ ಸೋಲು: ಪ್ರಶಾಂತ್ ಕಿಶೋರ್ ಭವಿಷ್ಯ

ಮಾಜಿ ಸಂಸದ ಚಂದ್ರಕುಮಾರ್ ನೂತನ ಕಾರ್ಯಾಧ್ಯಕ್ಷ

ಪವನ್ ಬದಲಿಗೆ ಮಾಜಿ ಸಂಸದ ಚಂದ್ರಕುಮಾರ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಪರವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮಂಗಳವಾರ ತಡರಾತ್ರಿ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಮೊನ್ನೆಯಷ್ಟೇ ಪವನ್ ಕಾಜಲ್ ಕಾಂಗ್ರೆಸ್ ಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಚರ್ಚೆ ದಿನವಿಡೀ ನಡೆಯುತ್ತಿತ್ತು. ಬಿಜೆಪಿಯ ಸಂಘಟನಾ ಸಚಿವರೊಂದಿಗೆ ದೆಹಲಿಗೆ ತೆರಳಿದ್ದು, ಮಂಗಳವಾರ ಸಿಎಂ ಜೈ ರಾಮ್ ಠಾಕೂರ್ ಮತ್ತು ಹಿಮಾಚಲ ಬಿಜೆಪಿ ರಾಜ್ಯಾಧ್ಯಕ್ಷ ಸುರೇಶ್ ಕಶ್ಯಪ್ ಕೂಡ ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.ಇದನ್ನೂ ಓದಿ:  ಹಿಮಾಚಲ ಪ್ರದೇಶದಲ್ಲಿ ಮಿಸ್ ಮಾಡ್ದೇ ನೋಡಬೇಕಿರೋ ಸ್ಥಳಗಳಿವು!

ಮೊದಲು ಬಿಜೆಪಿ ಸೇರಿದ್ದ ಪವನ್ ಕಾಜಲ್ ಮತ್ತೆ ಕಾಂಗ್ರೆಸ್ ಗೆ ಮರಳಿದ್ದರು

ಪವನ್ ಕಾಜಲ್ 2012 ರಲ್ಲಿ ಕಾಂಗ್ರೆಸ್ ಸೇರುವ ಮೊದಲು ಬಿಜೆಪಿ ಕಾರ್ಯಕರ್ತರಾಗಿದ್ದರು. ಆದರೆ ಅವರು ಸ್ವತಂತ್ರವಾಗಿದ್ದಾಗ ವೀರಭದ್ರ ಸರ್ಕಾರಕ್ಕೆ ಬೆಂಬಲ ನೀಡಿದರು ಮತ್ತು ನಂತರ ಅವರು ಕಾಂಗ್ರೆಸ್ ಸೇರಿದರು. ಅವರನ್ನು ವೀರಭದ್ರ ಸಿಂಗ್‌ಗೆ ಅತ್ಯಂತ ನಿಕಟವಾಗಿ ಪರಿಗಣಿಸಲಾಗಿತ್ತು. ಕಾಜಲ್ ಅವರು ಕಂಗ್ರಾದಿಂದ ಎರಡು ಬಾರಿ ಶಾಸಕರಾಗಿದ್ದಾರೆ ಮತ್ತು ಕಳೆದ 10 ವರ್ಷಗಳಲ್ಲಿ ಎರಡೂ ಚುನಾವಣೆಗಳಲ್ಲಿ ಗೆದ್ದಿದ್ದಾರೆ. ಹೀಗಿರುವಾಗ ಈಗ ಕಾಂಗ್ರೆಸ್ ಗೆ ದೊಡ್ಡ ಹಿನ್ನಡೆಯಾಗಿದೆ. ಇದೇ ವೇಳೆ ಮತ್ತೋರ್ವ ಕಾಂಗ್ರೆಸ್ ಶಾಸಕ ಬಿಜೆಪಿ ಸೇರುವ ಊಹಾಪೋಹ ಇದೆ ಎಂಬುವುದು ಉಲ್ಲೇಖನೀಯ.
Published by:Precilla Olivia Dias
First published: