ದೆಹಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​​ನ ಮೊದಲ ಪಟ್ಟಿ ಬಿಡುಗಡೆ : ಚಾಂದಿನಿ ಚೌಕ್​​​ ಕ್ಷೇತ್ರದಿಂದ ಆಪ್​​​ನ ಮಾಜಿ ನಾಯಕಿಗೆ ಟಿಕೆಟ್

ದೆಹಲಿಯ ಮಾಜಿ ಸಚಿವ ಅಶೋಕ್ ವಾಲಿಯಾ ಕೃಷ್ಣ ನಗರದಿಂದ, ಸಂಗಮ್ ವಿಹಾರ್‌ನ ಕೀರ್ತಿ ಆಜಾದ್ ಅವರ ಹೆಂಡತಿ ಹಾಗೂ ಆಮ್​​ ಆದ್ಮಿ ಪಕ್ಷದ ಮಾಜಿ ನಾಯಕಿ ಅಲಕಾ ಲಂಬಾ ಚಾಂದನಿ ಚೌಕ್‌ನಿಂದ ಸ್ಪರ್ಧಿಸಲಿದ್ದಾರೆ.

ಅಲ್ಕಾ ಲಂಬಾ ಹಾಗೂ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ

ಅಲ್ಕಾ ಲಂಬಾ ಹಾಗೂ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ

  • Share this:
ನವದೆಹಲಿ(ಜ.18): ದೆಹಲಿ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 54 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಫೆಬ್ರವರಿ 8ರಂದು ಚುನಾವಣೆ ನಡೆಯಲಿದ್ದು, ಫೆ.11ರಂದು ಫಲಿತಾಂಶ ಪ್ರಕಟವಾಗಲಿದೆ.

ರಾಷ್ಟ್ರ ರಾಜಧಾನಿಯು ಒಟ್ಟು 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಮೊದಲ ಭಾಗವಾಗಿ ಕಾಂಗ್ರೆಸ್​ 54 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಆಮ್​ ಆದ್ಮಿ ಪಕ್ಷದಿಂದ ಟಿಕೆಟ್​ ದೊರೆಯದೇ ಕಾಂಗ್ರೆಸ್​ ಸೇರಿರುವ ದ್ವಾರಕ ಕ್ಷೇತ್ರದ ಶಾಸಕ ಆದರ್ಶ​ ಶಾಸ್ತ್ರಿಯನ್ನು ಕಾಂಗ್ರೆಸ್​ ಚುನಾವಣಾ ಕಣಕ್ಕಿಳಿಸಿದೆ. ದ್ವಾರಕ ಕ್ಷೇತ್ರದಲ್ಲಿ ಶಾಸ್ತ್ರಿಗೆ ಪ್ರತಿಸ್ಪರ್ಧಿಯಾಗಿ ಆಪ್​ನ ವಿನಯ್​ ಮಿಶ್ರ ಸ್ಪರ್ಧಿಸಿದ್ದಾರೆ.

ಆಪ್​ ಮಾಜಿ ನಾಯಕ ಅಲಕಾ ಲಂಬಾರಿಗೂ ಕಾಂಗ್ರೆಸ್​ ಟಿಕೆಟ್​ ನೀಡಿದ್ದು, ಚಾಂದನಿ ಚೌಕ್ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇದನ್ನು ಹೊರತುಪಡಿಸಿ, ಅರವಿಂದರ್​ ಸಿಂಗ್​ ಲವ್ಲಿ ಗಾಂಧಿನಗರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಆಡಳಿತಾರೂಢ ಆಮ್​ ಆದ್ಮಿ ಪಕ್ಷ ನಾಲ್ಕು ದಿನಗಳ ಹಿಂದೆಯೇ 70 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.

2015ರ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ 67 ಸ್ಥಾನದಲ್ಲಿ ದಾಖಲೆಯ ಗೆಲವು ಸಾಧಿಸಿದ್ದ ಆಮ್ ಆದ್ಮಿ ಪಾರ್ಟಿ ಅದೇ ಉತ್ಸಾಹದಲ್ಲಿ ಪ್ರಚಾರ ಕಾರ್ಯ ಆರಂಭಿಸಿದೆ. ಮೂರು ಸ್ಥಾನಗಳನ್ನ ಪಡೆದು ಎರಡನೇ ಸ್ಥಾನದಲ್ಲಿದ್ದ ಬಿಜೆಪಿ, ಕಳೆದ ಚುನಾವಣೆಯಲ್ಲಿ ಹೆಚ್ಚು ಮತಗಳನ್ನ ಪಡೆದ ಮುಖಗಳಿಗೆ ಆದ್ಯತೆ ನೀಡಿದೆ.

ಇದನ್ನೂ ಓದಿ : ದೆಹಲಿ ವಿಧಾನಸಭೆ ಚುನಾವಣಾ ಕಣದಲ್ಲಿ ಮೂರು ಪಕ್ಷಗಳದ್ದು ಮೂರು ರೀತಿಯ ಪರಿಸ್ಥಿತಿ!

2015ರಲ್ಲಿ ಖಾತೆ ತೆರೆಯದೆ ಮುಖಭಂಗ ಅನುಭವಿಸಿದ್ದ ಕಾಂಗ್ರೆಸ್ ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಎಚ್ಚರಿಕೆಯ ನಡೆ ಅನುಸರಿಸಿದೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ 70 ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ ಮೂರು ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಿತ್ತು.
First published: