Congress raises the issue : ಗುಜರಾತ್ ಬಂದರಿನಲ್ಲಿ ಭಾರೀ ಪ್ರಮಾಣದ ಮಾದಕ ವಸ್ತು ಸಾಗಾಟದ(massive heroine haul) ಬಗ್ಗೆ ಕೇಂದ್ರದ ವಿರುದ್ಧ ಕಾಂಗ್ರೆಸ್ ಭಾರೀ ಆಕ್ಷೇಪ ವ್ಯಕ್ತಪಡಿಸಿದೆ. ಯಾರ ಆದೇಶ ಮೇರೆಗೆ ಮಾದಕ ದ್ರವ್ಯಗಳನ್ನು ದೇಶಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ(Randeep Surjewala) ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಪ್ರಶ್ನಿಸಿದರು. ಗುಜರಾತ್ನ ಮುಂದ್ರಾ ಬಂದರಿನಲ್ಲಿ(Mundra port in Gujarat) ಭಾರೀ ಪ್ರಮಾಣದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಮಾದಕದ್ರವ್ಯ ಕಳ್ಳಸಾಗಣೆಯ ಹಿಂದೆ ಯಾರು ಇದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮಾಡಿದೆ. ಈ ಮಾದಕದ್ರವ್ಯದ ಹಾವಳಿಯನ್ನು ತಡೆಯುವ ಜವಾಬ್ದಾರಿ ಹೊಂದಿರುವ ದೇಶದ ತನಿಖಾ ಸಂಸ್ಥೆಗಳತ್ತ ಸುರ್ಜೇವಾಲಾ ಬೊಟ್ಟು ಮಾಡಿದರು. ಡ್ರಗ್ಸ್ ಸಾಗಾಟ ಸಂಬಂಧ ಅದಾನಿ ಮುಂದ್ರಾ ಬಂದರನ್ನು ಏಕೆ ತನಿಖೆಗೆ ಒಳಪಡಿಸಲಿಲ್ಲ ಎಂದು ಪ್ರಶ್ನಿಸಿದರು.
ಸರ್ಕಾರಿ ತನಿಖಾ ಸಂಸ್ಥೆಗಳು ಏನು ಮಾಡುತ್ತಿವೆ?
ಬಂದರಿನಲ್ಲಿ ವಶಪಡಿಸಿಕೊಂಡಿರುವ ಹೆರಾಯಿನ್ ಮೌಲ್ಯವು ಬರೋಬ್ಬರಿ ₹ 21,000 ಕೋಟಿ. ಇದುವರೆಗೆ ಅತಿ ದೊಡ್ಡ ಡ್ರಗ್ಸ್ ಸಾಗಾಣಿಕೆ ಇದಾಗಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ. ಮಾದಕದ್ರವ್ಯ ನಿಯಂತ್ರಣ ಮಂಡಳಿ, ಇಡಿ, ಡಿಆರ್ಐ ಡ್ರಗ್ಸ್ ಸಾಗಾಟ ತಡೆಯುವಲ್ಲಿ ತಮ್ಮ ಜವಾಬ್ದಾರಿಯನ್ನು ಮರೆತಂತಿವೆ ಎಂದು ಆರೋಪಿಸಿದರು. ದೇಶದ ಯುವ ಪೀಳಿಗೆಯನ್ನು ಡ್ರಗ್ಸ್ ಹಾವಳಿ ಹಾಳುಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೆಹಲಿ ಪೊಲೀಸರು ಈ ವರ್ಷದ ಜುಲೈನಲ್ಲಿ 4ರಂದು 2,500 ಕೋಟಿಗೂ ಹೆಚ್ಚು ಮೌಲ್ಯದ 354 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಬೃಹತ್ ಮಾದಕವಸ್ತು ಕಳ್ಳಸಾಗಣೆಗಳ ಹಿಂದೆ ಇರುವವರನ್ನು ಬಹಿರಂಗಪಡಿಸಬೇಕು ಎಂದು ಸುರ್ಜೇವಾಲಾ ಆಗ್ರಹಿಸಿದರು.
ಡ್ರಗ್ಸ್ ಜಾಲದ ಹಿಂದೆ ತಾಲಿಬಾನ್ ಇದೆ..!
1,75,000 ಕೋಟಿ ಮೌಲ್ಯದ 2,500 ಕೆಜಿ ಹೆರಾಯಿನ್ ಎಲ್ಲಿ ಪತ್ತೆಯಾಗಿದೆ. ಈ ಭಾರೀ ಪ್ರಮಾಣದ ಹೆರಾಯಿನ್ ಹಿಂದೆ ಇರುವ ಭಾರತ ವಿರೋಧಿ ಕೈವಾಡವನ್ನು ಬಹಿರಂಗಪಡಿಸಬೇಕು. ಇದರಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟಾಗಿದೆ ಏಕೆಂದರೆ ಈ ಮಾದಕ ದ್ರವ್ಯ ಸಾಗಣೆ ಹಿಂದೆ ಅಫ್ಘಾನಿಸ್ತಾನದ ತಾಲಿಬಾನ್ ನಂಟಿದೆ ಎನ್ನಲಾಗುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದರು. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಾಧೀಶರ ನೇತೃತ್ವದ ಆಯೋಗ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಬಂದರ್ ಮೂಲಕ ಡ್ರಗ್ಸ್ ಸಾಗಾಟ
ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್ಐ) ಗುಜರಾತ್ನ ಕಚ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ ಎರಡು ಕಂಟೇನರ್ಗಳಿಂದ ₹ 21,000 ಕೋಟಿ ಮೌಲ್ಯದ 2,988.21 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ. ಈ ಸಂಬಂಧ ಚೆನ್ನೈನಿಂದ ಆಮದು ಸಂಸ್ಥೆಯನ್ನು ನಡೆಸುತ್ತಿದ್ದ ದಂಪತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಹೆಂಡತಿಗೆ ಹಿಂಸೆ: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಂಧನ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಹೆರಾಯಿನ್ ಬೆಲೆ ಸುಮಾರು 5 ಕೋಟಿ ರೂಪಾಯು. ಅಫ್ಘಾನಿಸ್ತಾನದಿಂದ ಕಳುಹಿಸಲಾಗಿದೆ ಎಂಬ ಮಾಹಿತಿ ಆಧಾರದ ಮೇಲೆ DRI ಅಧಿಕಾರಿಗಳು ಎರಡು ಕಂಟೇನರ್ಗಳನ್ನು ವಶಪಡಿಸಿಕೊಂಡರು. ವಶಪಡಿಸಿಕೊಂಡ ವಸ್ತುವಿನ ವಿಧಿವಿಜ್ಞಾನ ವಿಶ್ಲೇಷಣೆಯು ಹೆರಾಯಿನ್ ಇರುವುದನ್ನು ದೃಢಪಡಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ