• Home
 • »
 • News
 • »
 • national-international
 • »
 • Rahul Gandhi: ರಾಹುಲ್​ ಗಾಂಧಿ ಜನ್ಮದಿನವನ್ನು ಸೇವಾದಿನವಾಗಿ ಆಚರಿಸಿದ ಕಾಂಗ್ರೆಸ್​ ನಾಯಕರು

Rahul Gandhi: ರಾಹುಲ್​ ಗಾಂಧಿ ಜನ್ಮದಿನವನ್ನು ಸೇವಾದಿನವಾಗಿ ಆಚರಿಸಿದ ಕಾಂಗ್ರೆಸ್​ ನಾಯಕರು

ರಾಹುಲ್ ಗಾಂಧಿ.

ರಾಹುಲ್ ಗಾಂಧಿ.

ರಾಹುಲ್ ಗಾಂಧಿಯವರ ಜನ್ಮದಿನದ ಅಂಗವಾಗಿ ರೇಸ್ ಕೋರ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಸೇವಾದಳ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

 • Share this:

  ಕಾಂಗ್ರೆಸ್​ನ ಚಿರ ಯುವಕ ಎಂದೇ ಜನಪ್ರಿಯರಾಗಿರುವ ರಾಹುಲ್​ ಗಾಂಧಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 51ನೇ ಜನ್ಮದಿನ ಆಚರಿಸುತ್ತಿರುವ ರಾಹುಲ್​ ಗಾಂಧಿಗೆ ಕಾಂಗ್ರೆಸ್​ ನಾಯಕರು ಶುಭಾಶಯಗಳ ಮಹಾಪೂರ ಹರಿಸಿದ್ದಾರೆ. ಕಾಂಗ್ರೆಸ್​ ಮಾಜಿ ಅಧ್ಯಕ್ಷರ ಹುಟ್ಟುಹಬ್ಬದ ಅಂಗವಾಗಿ ಈ ದಿನವನ್ನು ಕಾರ್ಯಕರ್ತರು ಸೇವಾ ದಿನವಾಗಿ ಆಚರಿಸುತ್ತಿದ್ದಾರೆ. ಕೋವಿಡ್​ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡವರಿಗೆ ಫೇಸ್​ ಮಾಸ್ಕ್​, ಅಗತ್ಯ ಔಷಧದ ಕಿಟ್​ ಹಾಗೂ ಊಟವನ್ನು ಹಂಚುವ ಮೂಲಕ ತಮ್ಮ ನಾಯಕನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ವಾಯನಾಡು ಸಂಸದರಿಗೆ ಪಕ್ಷದ ಎಲ್ಲಾ ಘಟಕದ ನಾಯಕರು ಸೇರಿದಂತೆ ಕೆಲ ಬಿಜೆಪಿ ನಾಯಕರು ಕೂಡ ಶುಭ ಹಾರೈಸಿದ್ದಾರೆ.


  ದೆಹಲಿಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರಯ 272 ಮುನ್ಸಿಪಲ್​ ಕಾರ್ಪೊರೇಷನ್​ನ 272 ವಾರ್ಡ್​ಗಳಲ್ಲಿ ಉಚಿತವಾಗಿ ರೇಷನ್​ ನೀಡಿದ್ದಾರೆ. ಕಾಂಗ್ರೆಸ್​ ನಾಯಕ ಶಶಿತರೂರು, ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಣ್​ ಸೇರಿದಂತೆ ಅನೇಕ ನಾಯಕರು ರಾಹುಲ್​ ಗಾಂಧಿಗೆ ಶುಭ ಕೋರಿದರು.  ರಾಜ್ಯದಲ್ಲಿ ಕೂಡ ರಾಹುಲ್​ ಗಾಂಧಿ ಜನ್ಮ ದಿನದ ಅಂಗವಾಗಿ ಸೇವಾ ದಿವಸ್​ ಆಚರಣೆ ಮಾಡಲಾಯಿತು.  ವಿಪಕ್ಷ ನಾಯಕರಾದ ಸಿದ್ದರಾಮಯ್ಯ ರಾಹುಲ್​ ಗಾಂಧಿ ಅವರಿಗೆ ಶುಭಕೋರಿ ಹಾರೈಸಿದ್ದಾರೆ ಇದೇ ವೇಳೆ ಸತ್ಯಸಂಧತೆ, ನ್ಯಾಯನಿಷ್ಠುರತೆ ಮತ್ತು ರಾಜಿ ಇಲ್ಲದ ಜನಪರ ಕಾಳಜಿಯ ಗುಣಗಳು ಖಂಡಿತ ಫಲ ನೀಡಲಿದೆ ಎಂದು ಶುಭ ಕೋರಿದ್ದಾರೆ.


  ಇದೇ ವೇಳೆ ರಾಹುಲ್ ಗಾಂಧಿಯವರ ಜನ್ಮದಿನದ ಅಂಗವಾಗಿ ರೇಸ್ ಕೋರ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಸೇವಾದಳ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

  Published by:Seema R
  First published: