ರಾಹುಲ್​ ಜತೆ ಮದುವೆ ಸುಳ್ಳುಸುದ್ಧಿ, ಅವರು ನನ್ನ ' ರಾಖಿ ಅಣ್ಣ' ಎಂದ ಶಾಸಕಿ!

news18
Updated:May 6, 2018, 12:01 PM IST
ರಾಹುಲ್​ ಜತೆ ಮದುವೆ ಸುಳ್ಳುಸುದ್ಧಿ, ಅವರು ನನ್ನ ' ರಾಖಿ ಅಣ್ಣ' ಎಂದ ಶಾಸಕಿ!
news18
Updated: May 6, 2018, 12:01 PM IST
ನವದೆಹಲಿ: ಕರ್ನಾಟಕ ಚುನಾವಣೆ ಹಣಾಹಣಿ ತೀವ್ರ ರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹಾಗೂ ರಾಯ್​ ಬರೇಲಿ ಶಾಸಕಿಯೊಂದಿಗೆ ಮದುವೆ ನಿಶ್ಚಿಯವಾಗಿದೆ ಎಂದ ಮೆಸೇಜ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದೇ ಮೇ ತಿಂಗಳಲ್ಲಿ ಮದುವೆಯ ದಿನಾಂಕವನ್ನು ಘೋಷಿಸಲಾಗಿದೆ ಎಂದು ರಾಯ್​ ಬರೇಲಿ ಅದಿತಿ ಸಿಂಗ್ ಜೊತೆಗಿನ ರಾಹುಲ್ ಗಾಂಧಿಯ ಕೆಲವು ಫೋಟೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ಆ ಫೋಟೋಗಳು ಸಖತ್ ವೈರಲ್ ಆಗಿದ್ದವು.

ಆದರೆ ಈ ಕುರಿತು ನ್ಯೂಸ್​ 18ನೊಂದಿಗೆ ಮಾತನಾಡಿರುವ ಅದಿತಿ, ಇದೊಂದು ಸುಳ್ಳು ಸುದ್ದಿಯಾಗಿದ್ದು, ರಾಹುಲ್​ಗೆ ನಾನು ಪ್ರತೀ ಬಾರಿ ರಾಖಿ ಕಟ್ಟುತ್ತೇನೆ. ಹೀಗಾಗಿ ಅವರು ನನ್ನ ' ರಾಖಿ ಅಣ್ಣ' ಎಂದು ಹೇಳಿದ್ದಾರೆ.

ಶನಿವಾರ ಫೇಸ್ ಬುಕ್, ಟ್ವಿಟ್ಟರ್ ಮತ್ತು ವ್ಯಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹಸಿರು ಸೀರೆಯುಟ್ಟ ಅದಿತಿ ಸಿಂಗ್, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರೊಂದಿಗೆ ನಿಂತಿರುವ ರೀತಿ ಎಡಿಟ್ ಮಾಡಲಾಗಿತ್ತು. ಬಳಿಕ ಈ ಚಿತ್ರವನ್ನು ಸಾಮಾಜಿಕ ಜಾಲದಲ್ಲಿ ಹರಡಲಾಗಿತ್ತು.

29 ವರ್ಷದ ಅದಿತಿ ಅವರು ಅಖಿಲೇಶ್ ಸಿಂಗ್ ಅವರ ಮಗಳಾಗಿದ್ದು, ರಾಯ್ ಬರೇಲಿಯಿಂದ ಐದು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ತಮ್ಮ ಮೊದಲ ಚುನಾವಣೆಯಲ್ಲೇ ಇವರು 90,000 ಕ್ಕಿಂತ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದರು.
First published:May 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...