• Home
  • »
  • News
  • »
  • national-international
  • »
  • Congress President: ತರೂರ್ ಹಾಗೂ ಖರ್ಗೆ ಇವರಲ್ಲಿ ಕಾಂಗ್ರೆಸ್​ ಅಧ್ಯಕ್ಷರಾಗೋರು ಯಾರು? ಇಂದು ಎಲೆಕ್ಷನ್!

Congress President: ತರೂರ್ ಹಾಗೂ ಖರ್ಗೆ ಇವರಲ್ಲಿ ಕಾಂಗ್ರೆಸ್​ ಅಧ್ಯಕ್ಷರಾಗೋರು ಯಾರು? ಇಂದು ಎಲೆಕ್ಷನ್!

ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ (ಸಂಗ್ರಹ ಚಿತ್ರ)

ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ (ಸಂಗ್ರಹ ಚಿತ್ರ)

iMdu ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ನ ಹಿರಿಯ ನಾಯಕ, ಕರ್ನಾಟಕ ಮೂಲದ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಹಾಗೂ ಸಂಸದ ಶಶಿ ತರೂರ್ (Shashi Tharoor) ನಡುವೆ ಸ್ಪರ್ಧೆ ನಡೆಯಲಿದೆ. ಇನ್ನು ಅಕ್ಟೋಬರ್ 19ರಂದು ಮತ ಎಣಿಕೆ ನಡೆಯಲಿದ್ದು, ತೀವ್ರ ಕುತೂಹಲ ಕೆರಳಿಸಿದೆ.

ಮುಂದೆ ಓದಿ ...
  • Share this:

ನವದೆಹಲಿ: ಇಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ (Congress presidential election) ನಡೆಸಿದೆ. ಕಾಂಗ್ರೆಸ್‌ನ ಹಿರಿಯ ನಾಯಕ, ಕರ್ನಾಟಕ ಮೂಲದ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಹಾಗೂ ಸಂಸದ ಶಶಿ ತರೂರ್ (Shashi Tharoor) ನಡುವೆ ಸ್ಪರ್ಧೆ ನಡೆಯಲಿದೆ. ಮಲ್ಲಿಕಾರ್ಜುನ ಖರ್ಗೆ ದೇಶದ ರಾಜಕೀಯದಲ್ಲಿ ದೊಡ್ಡ ಹೆಸರು. ಅದರಲ್ಲೂ ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ ಅನುಭವವವೂ ಇದೆ. ಜೊತೆಗೆ ಹಿಂದಿನಿಂದಲೂ ಖರ್ಗೆ ಗಾಂಧಿ ಕುಟುಂಬದ (Gandhi Family) ಆಪ್ತರಲ್ಲಿ ಒಬ್ಬರು. ಹೀಗಾಗಿ ಗಾಂಧಿ ಫ್ಯಾಮಿಲಿ ಸಲಹೆಯಂತೆ ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಅಕ್ಟೋಬರ್ 19ರಂದು ಮತ ಎಣಿಕೆ (Counting) ನಡೆಯಲಿದ್ದು, ತೀವ್ರ ಕುತೂಹಲ ಕೆರಳಿಸಿದೆ.


ಇಂದಿನ ಚುನಾವಣೆಗೆ ಸಕಲ ಸಿದ್ಧತೆ


ನಾಳೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಸೋನಿಯಾಗಾಂಧಿ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅಧ್ಯಕ್ಷರಾಗಿದ್ದರು. ಆದರೆ ಲೋಕಸಭಾ ಚುನಾವಣೆ ಸೋಲಿನ ಬಳಿಕ ರಾಹುಲ್ ಗಾಂಧಿ ಸ್ಥಾನ ತ್ಯಜಿಸಿದ್ದು, ಪುನಃ ಸೋನಿಯಾ ಗಾಂಧಿಯವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆದಿದ್ದರು. ಇದೀಗ ಇಂದು ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ಇಂದು ನಡೆಯಲಿರುವ ಚುನಾವಣೆಗೆ ಎಲ್ಲಾ ರಾಜ್ಯಗಳಲ್ಲಿ 67 ಬೂತ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರ (ಸಿಇಎ) ತಿಳಿಸಿದೆ.


ದೆಹಲಿಯಲ್ಲಿ ಮತ ಚಲಾವಣೆಗೆ ಅವಕಾಶ


ಸಿಇಎ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಮಾತನಾಡಿ,  ಎಐಸಿಸಿಯಲ್ಲೂ ಪ್ರಮುಖವಾಗಿ ಎಲ್ಲ ಹಿರಿಯ ನಾಯಕರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಬೇರೆ ರಾಜ್ಯದವರಾಗಿದ್ದು, ದೆಹಲಿಯಲ್ಲಿ ನೆಲೆಸಿರುವ ಗುರುತಿನ ಚೀಟಿ ಹೊಂದಿರುವ ಎಲ್ಲರೂ ಎಐಸಿಸಿ ಕಚೇರಿಯಲ್ಲಿ ಮತ ಚಲಾಯಿಸಬಹುದು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Drugs Scam in Bollywood: ಶಾರುಖ್, ಸಲ್ಮಾನ್‌ ಖಾನ್‌ ಡ್ರಗ್ಸ್ ತೆಗೆದುಕೊಳ್ಳುತ್ತಾರೆ! ಬಾಬಾ ರಾಮ್‌ದೇವ ಸ್ಫೋಟಕ ಹೇಳಿಕೆ


ಪ್ರಧಾನ ಕಚೇರಿಯಲ್ಲಿ ಸೋನಿಯಾ ಗಾಂಧಿ ವೋಟಿಂಗ್


ನಿರ್ಗಮಿತ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಮತ ಚಲಾಯಿಸಲಿದ್ದಾರೆ. ಇನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಹ ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಮತ ಚಲಾಯಿಸಲಿದ್ದಾರೆ.


ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಮತದಾನ


ಇನ್ನು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಭಾರತ್ ರಾಹುಲ್ ಗಾಂಧಿ ಹಾಗೂ ಸುಮಾರು 40 ಪಿಸಿಸಿ ಪ್ರತಿನಿಧಿಗಳು ಬಳ್ಳಾರಿಯ ಸಂಗನಕಲ್ಲುನಲ್ಲಿರುವ ಯಾತ್ರೆಯ ಶಿಬಿರದಲ್ಲಿ ಮತದಾನ ಮಾಡಲಿದ್ದಾರೆ.


ಶಶಿ ತರೂರ್ ಮತ್ತು ಖರ್ಗೆ ನಡುವೆ ಪೈಪೋಟಿ


ಶಶಿ ತರೂರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆಯ ಗಾಂಧಿ ಕುಟುಂಬದ ಹಾಗೂ ಕಾಂಗ್ರೆಸ್ ಹಿರಿಯರ ಗುಂಪಿನ ಅಭ್ಯರ್ಥಿಯಾಗಿ ಖರ್ಗೆ ಕಣಕ್ಕಿಳಿದಿದ್ದಾರೆ. ಮತ್ತೊಂದೆಡೆ  ಜಿ-23 ಬಣದ ಭಿನ್ನಮತೀಯ ನಾಯಕರ ಜತೆ ಗುರುತಿಸಿಕೊಂಡಿರುವ ಶಶಿ ತರೂರ್ ಕಣದಲ್ಲಿದ್ದಾರೆ. ಹೀಗಾಗಿ ಇಬ್ಬರ ನಡುವಿನ ಸ್ಪರ್ಧೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.


ಇದನ್ನೂ ಓದಿ: Sri Ramulu Tweet: ಕಾಂಗ್ರೆಸ್ ಸಮಾವೇಶದ ಕಸ ಕ್ಲೀನ್ ಮಾಡಿದ ಶ್ರೀರಾಮುಲು! ಕೈ ನಾಯಕರಿಗೆ ಸಚಿವರು ಕೊಟ್ರು ಟಾಂಗ್


ಖರ್ಗೆ ಜೊತೆ ಯಾವುದೇ ವೈರತ್ವ ಇಲ್ಲ


ಇನ್ನು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಯಾವುದೇ ವೈರತ್ವ ಇಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ. ಖರ್ಗೆ ಅವರನ್ನು ಕಾಂಗ್ರೆಸ್‌ನ 'ಭೀಷ್ಮ ಪಿತಾಮಹ' ಎಂದು ಬಣ್ಣಿಸಿರುವ ತರೂರ್, "ನಾವು ಸಹೋದ್ಯೋಗಿಗಳೇ ವಿನಾ ಎದುರಾಳಿಗಳಲ್ಲ" ಎಂದಿದ್ದಾರೆ. ಆದರೆ ಖರ್ಗೆ ನಿರಂತರತೆಯ ಅಭ್ಯರ್ಥಿ ಎಂದಿರುವ ಅವರು, ಅಧ್ಯಕ್ಷರಾಗಿ ಆಯ್ಕೆಯಾದರೆ ಪಕ್ಷದ ಹೈಕಮಾಂಡ್ ಸಂಸ್ಕೃತಿಯನ್ನು ಬದಲಿಸುವುದಾಗಿ ತರೂರ್ ಶಪಥ ಮಾಡಿದ್ದಾರೆ.

Published by:Annappa Achari
First published: