Sonia Gandhi: ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮಾತೃವಿಯೋಗ, ಪಾವೊಲಾ ಮೈನೋ ನಿಧನ!

ಸೋನಿಯಾ ಗಾಂಧಿ ಅವರ ತಾಯಿ ಪಾವೊಲಾ ಮೈನೋ ಆಗಸ್ಟ್ 27 ರಂದು ನಿಧನರಾಗಿದ್ದಾರೆ ಹಾಗೂ ಅವರ ಅಂತ್ಯಕ್ರಿಯೆ ಮಂಗಳವಾರ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಸೋನಿಯಾ ಗಾಂಧಿ

ಸೋನಿಯಾ ಗಾಂಧಿ

  • Share this:
ಇಟಲಿ(ಆ.31): ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (AICC President Sonia Gandhi) ತಾಯಿ ಪಾವೊಲಾ ಮೈನೋ (Paola Maino) ನಿಧನರಾಗಿದ್ದಾರೆ. ಹೌದು 2022ರ ಆಗಸ್ಟ್​ 27 ಶನಿವಾರದಂದು ಇಟಲಿಯ ಮನೆಯಲ್ಲಿ ಪಾವೊಲಾ ಮೈನೋ ನಿಧನರಾಗಿದ್ದು, ಮಂಗಳವಾರ ಅಂತ್ಯಕ್ರಿಯೆ ನಡೆದಿದೆ. ಇದು ವೈದ್ಯಕೀಯ ತಪಾಸಣೆಗಾಗಿ ತೆರಳಿದ್ದ ಅವರ ವಿದೇಶ ಪ್ರವಾಸದ ಭಾಗವಾಗಿತ್ತು, ಅಲ್ಲಿ ಅವರ ಮಗ ರಾಹುಲ್ ಗಾಂಧಿ ಮತ್ತು ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ತೆರಳಿದ್ದರು.

ಇದನ್ನೂ ಓದಿ: Ghulam Nabi Azad: ಇಂದಿರಾ- ರಾಜೀವ್ ಆಪ್ತರಾಗಿದ್ದ ಆಜಾದ್ ರಾಹುಲ್​ ಗಾಂಧಿಗೆ 'ಅಪರಿಚಿತ' ಆಗಿದ್ದು ಹೇಗೆ?

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತಾಯಿ ಪಾವೊಲಾ ಮೈನೋ ಅವರು ಆಗಸ್ಟ್ 27 ರಂದು ನಿಧನರಾದರು ಮತ್ತು ಅವರ ಅಂತ್ಯಕ್ರಿಯೆ ಮಂಗಳವಾರ ನಡೆದಿದೆ. ಕಳೆದ ವಾರ ಸೋನಿಯಾ ಗಾಂಧಿ ತಮ್ಮ ತಾಯಿಯನ್ನು ಭೇಟಿಯಾಗಲು ತೆರಳಿದ್ದರು. ಇದು ವೈದ್ಯಕೀಯ ತಪಾಸಣೆಗಾಗಿ ತೆರಳಿದ್ದ ಅವರ ವಿದೇಶ ಪ್ರವಾಸದ ಭಾಗವಾಗಿತ್ತು, ಅಲ್ಲಿ ಅವರ ಮಗ ರಾಹುಲ್ ಗಾಂಧಿ ಮತ್ತು ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ತೆರಳಿದ್ದರು.

ಸೋನಿಯಾ ಗಾಂಧಿ ಅವರ ತಾಯಿಯ ಸಾವಿನ ಸುದ್ದಿಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.


ಕಳೆದ ಕೆಲವು ವರ್ಷಗಳಿಂದ ರಾಹುಲ್ ಮತ್ತು ಪ್ರಿಯಾಂಕಾ ತಮ್ಮ ಅಜ್ಜಿಯನ್ನು ಹಲವಾರು ಬಾರಿ ಭೇಟಿ ಮಾಡಿದ್ದಾರೆ. 2020 ರಲ್ಲಿ, ರಾಹುಲ್ ಗಾಂಧಿ ಅವರು ಆಗಾಗ್ಗೆ ವಿದೇಶ ಪ್ರವಾಸಗಳ ಬಗ್ಗೆ ಕೆಲವು ಟೀಕೆಗಳನ್ನು ಎದುರಿಸಿದಾಗ, ಅವರು ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಸಂಬಂಧಿಯ ಭೇಟಿಗೆ ಇಟಲಿಗೆ ವೈಯಕ್ತಿಕ ಭೇಟಿಯಲ್ಲಿದ್ದಾರೆ ಎಂದು ಪಕ್ಷ ಹೇಳಿತ್ತು ಎಂಬುವುದು ಉಲ್ಲೇಖನೀಯ.

ಇದನ್ನೂ ಓದಿ: Ghulam Nabi Azad: ಮೋದಿ ಒರಟಲ್ಲ, ಮಾನವೀಯತೆ ಉಳ್ಳವರು! ಗುಲಾಂ ನಬಿ ಆಜಾದ್‌ರಿಂದ ನಮೋ ಗುಣಗಾನ

ಮೋದಿ ಸಂತಾಪ

ಸೋನಿಯಾ ಗಾಂಧಿಯವರ ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದ ಬೆನ್ನಲ್ಲಿಯೇ, ಕಾಂಗ್ರೆಸ್‌ ಪಕ್ಷದ ನಾಯಕರು ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.


ಸೋನಿಯಾ ಗಾಂಧಿ ಅವರ ತಾಯಿ ನಿಧನಕ್ಕ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖದ ಸಮಯದಲ್ಲಿ ಸೋನಿಯಾ ಕುಟುಂಬದ ಜೊತೆ ನಿಲ್ಲುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.ಸೋನಿಯಾ ಗಾಂಧಿ ಅವರ ತಾಯಿ ನಿಧನಕ್ಕ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖದ ಸಮಯದಲ್ಲಿ ಸೋನಿಯಾ ಕುಟುಂಬದ ಜೊತೆ ನಿಲ್ಲುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Published by:Precilla Olivia Dias
First published: