• Home
  • »
  • News
  • »
  • national-international
  • »
  • Congress President Polls Result: ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ನೂತನ ಅಧ್ಯಕ್ಷ, 7,897 ಮತಗಳೊಂದಿಗೆ ಗೆಲುವು!

Congress President Polls Result: ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ನೂತನ ಅಧ್ಯಕ್ಷ, 7,897 ಮತಗಳೊಂದಿಗೆ ಗೆಲುವು!

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ನೂತನ ಅಧ್ಯಕ್ಷ

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ನೂತನ ಅಧ್ಯಕ್ಷ

Congress President Polls: ನಾಮಪತ್ರ ಸಲ್ಲಿಕೆಗೆ ಒಂದು ದಿನ ಮೊದಲು ಅಖಾಡಕ್ಕಿಳಿದಿದ್ದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರಸ್​ ಅಧ್ಯಕ್ಷೀಯ ಚುನಾವಣೆಯಲ್ಲಿ ಶಶಿ ತರೂರ್ ಅವರನ್ನು ಸೋಲಿಸಿದ್ದಾರೆ

  • News18 Kannada
  • Last Updated :
  • New Delhi, India
  • Share this:

ನವದೆಹಲಿ(ಅ.19): ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ (Congress President Polls) ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್​ ಕಟ್ಟಾಳು ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಪಕ್ಷದ ನೂತನ ಅಧ್ಯಕ್ಷರಾಗಿದ್ದಾರೆ. ಬರೋಬ್ಬರಿ 7,897 ಮತಗಳನ್ನು ಪಡೆದ ಖರ್ಗೆ ಗೆಲುವಿನ ನಗೆ ಬೀರಿದ್ದಾರೆ. ಅತ್ತ ತರೂರ್ (Shashi Tharoor) ಕೇವಲ 1,072 ಮತ ಗಳಿಸಿದ್ದಾರೆ.  ಹೌದು ನಾಮಪತ್ರ ಸಲ್ಲಿಕೆಗೆ ಒಂದು ದಿನ ಮೊದಲು ಅಖಾಡಕ್ಕಿಳಿದಿದ್ದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆಯಲ್ಲಿ ಶಶಿ ತರೂರ್ ಅವರನ್ನು ಸೋಲಿಸಿದ್ದಾರೆ.


24 ವರ್ಷಗಳ ನಂತರ ಕಾಂಗ್ರೆಸ್‌ಗೆ ಮೊದಲ ಗಾಂಧಿಯೇತರ ಕಾಂಗ್ರೆಸ್ ಅಧ್ಯಕ್ಷ


ಸುದೀರ್ಘ ಹೋರಾಟ, ಕ್ಷೋಭೆಗಳ ನಂತರ ಕೊನೆಗೂ ಕಾಂಗ್ರೆಸ್ ಗೆ ಇಂದು ನೂತನ ಅಧ್ಯಕ್ಷರು ಸಿಕ್ಕಿದ್ದಾರೆ. ಸೀತಾರಾಮ್ ಕೇಸರಿಯವರ ಬಳಿಕ 24 ವರ್ಷಗಳ ನಂತರ ಕಾಂಗ್ರೆಸ್‌ಗೆ ಮೊದಲ ಗಾಂಧಿಯೇತರ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಸಿಕ್ಕಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ 80 ವರ್ಷದ ಖರ್ಗೆ ಅವರು ಶಶಿ ತರೂರ್ ಅವರನ್ನು ಭಾರೀ ಅಂತರದಿಂದ ಸೋಲಿಸಿದ್ದಾರೆ. ಚುನಾವಣೆಗೂ ಮುನ್ನವೇ ಖರ್ಗೆ ಸುಲಭವಾಗಿ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ನಂಬಿಕೆ ಇತ್ತು.


ಇದನ್ನೂ ಓದಿ: Mohan Bhagawat: ಮೋಹನ್ ಭಾಗವತ್ ರಾಷ್ಟ್ರಪಿತ ಎಂದಿದ್ದ ಇಮಾಮ್‌ಗೆ ಜೀವ ಬೆದರಿಕೆ!


ಮತದಾನದ ಅಂತರವೇನು?


ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ 7,897 ಮತಗಳನ್ನು ಪಡೆದಿದ್ದಾರೆ. ಅದೇ ಸಮಯದಲ್ಲಿ ಶಶಿ ತರೂರ್ 1072 ಮತಗಳನ್ನು ಪಡೆದರು. ಇದರಲ್ಲಿ 416 ಮತಗಳು ರದ್ದಾಗಿವೆ. ಅಕ್ಟೋಬರ್ 17 ರಂದು ಒಟ್ಟು 9,385 ಮುಖಂಡರು ಮತ ಚಲಾಯಿಸಿದ್ದರು.


ಆರನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ನಡೆದಿತ್ತು ಚುನಾವಣೆ


ಚುನಾವಣೆಯ ಸಮಯದಲ್ಲಿ, 9,900 ಕಾಂಗ್ರೆಸ್ ಪ್ರತಿನಿಧಿಗಳಲ್ಲಿ 9,500 ಜನರು ಮತ ಚಲಾಯಿಸಿದ್ದರು. ಈ ಹಿಂದೆ 1939, 1950, 1977, 1997 ಮತ್ತು 2000 ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗಳು ನಡೆದಿದ್ದವು. 2000 ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು ಜಿತೇಂದ್ರ ಪ್ರಸಾದ್ ಅವರನ್ನು ಸೋಲಿಸಿ ಅಧ್ಯಕ್ಷ ಸ್ಥಾನವನ್ನು ಪಡೆದರು. ಗಾಂಧಿ ಕುಟುಂಬಕ್ಕೆ ಅವರ ನಿಕಟ ಸಾಮೀಪ್ಯ ಮತ್ತು ಹಲವಾರು ಹಿರಿಯ ನಾಯಕರ ಬೆಂಬಲದಿಂದಾಗಿ, ಖರ್ಗೆ ಅವರೇ ಅಧ್ಯಕ್ಷರಾಗುತ್ತಾರೆನ್ನಲಾಗಿತ್ತು. ಈ ದಿನಕ್ಕಾಗಿ ನಾನು ಬಹಳ ದಿನಗಳಿಂದ ಕಾಯುತ್ತಿದ್ದೆ ಎಂದು ಮತದಾನಕ್ಕೂ ಮುನ್ನ ಸೋನಿಯಾ ಗಾಂಧಿ ಹೇಳಿದ್ದರು.


congress presidential election will be held tomorrow and rahul gandhi will vote in bellary
ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ (ಸಂಗ್ರಹ ಚಿತ್ರ)


ಖರ್ಗೆ ಅವರನ್ನು ಅಭಿನಂದಿಸಿದ ತರೂರ್ 


ಖರ್ಗೆಯವರಿಂದ ಸೋಲಿರುವುದನ್ನು ಒಪ್ಪಿಕೊಂಡ ತರೂರ್, ಪಕ್ಷದ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಫಲಿತಾಂಶವನ್ನು ಒಪ್ಪಿಕೊಳ್ಳುತ್ತೇನೆ ಎಂದು ತರೂರ್ ಹೇಳಿದ್ದಾರೆ. ತರೂರ್ ಕೂಡ ಖರ್ಗೆ ಮನೆಗೆ ಆಗಮಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಗಮನಾರ್ಹವೆಂದರೆ, ಮತ ಎಣಿಕೆ ವೇಳೆ ತರೂರ್ ಪಾಳಯದಲ್ಲಿ ವೋಟಿಂಗ್ ರಿಗ್ಗಿಂಗ್ ವಿಚಾರ ಪ್ರಸ್ತಾಪವಾಗಿತ್ತು. ಆದರೆ, ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿತ್ತು.


ಇದನ್ನೂ ಓದಿ:  Mohan Bhagwat: ಮಾಂಸಾಹಾರಿಗಳಿಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?


ಸುದೀರ್ಘ ಹೋರಾಟದ ನಂತರ ಅಧ್ಯಕ್ಷರಾದ  ಖರ್ಗೆ


ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬದ ಮೊದಲ ಆಯ್ಕೆ ಅಶೋಕ್ ಗೆಹ್ಲೋಟ್ ಆಗಿದ್ದರು. ಆದರೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕರ ಬಂಡಾಯ ನಿಲುವಿನ ನಂತರ ಇಡೀ ಆಟವೇ ಬದಲಾಯಿತು. ರಾಜಸ್ಥಾನ ಸಂಚಿಕೆಯ ನಂತರ ಗೆಹ್ಲೋಟ್ ಕ್ಷಮೆಯಾಚಿಸಿದರು, ಆದರೆ ಈ ವಿಶ್ವಾಸಾರ್ಹ ಸಹೋದ್ಯೋಗಿಯ ಮೇಲಿನ ಕಾಂಗ್ರೆಸ್ ಹೈಕಮಾಂಡ್‌ನ ನಂಬಿಕೆ ಅಲುಗಾಡಿತು. ಇದಾದ ಬೆನ್ನಲ್ಲೇ ಕಾಂಗ್ರೆಸ್ ಕಡೆಯಿಂದ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಯಿತು.

Published by:Precilla Olivia Dias
First published: