• Home
  • »
  • News
  • »
  • national-international
  • »
  • Congress President Elections: 9,200 ಪ್ರತಿನಿಧಿಗಳಿಂದ ಶಶಿ ತರೂರ್, ಖರ್ಗೆ ಭವಿಷ್ಯ ನಿರ್ಧಾರ!

Congress President Elections: 9,200 ಪ್ರತಿನಿಧಿಗಳಿಂದ ಶಶಿ ತರೂರ್, ಖರ್ಗೆ ಭವಿಷ್ಯ ನಿರ್ಧಾರ!

ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ

ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ

Congress' Presidential Election 2022: 9,200 ಕಾಂಗ್ರೆಸ್ ಪ್ರತಿನಿಧಿಗಳು ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಈ ಇಬ್ಬರು ಸಂಸದರ ಪೈಕಿ ಪಕ್ಷದ ಉನ್ನತ ಹುದ್ದೆಗೆ ತಮ್ಮ ಆದರ್ಶ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಿದ್ಧರಾಗಿದ್ದಾರೆ. ಸೋಮವಾರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅಕ್ಟೋಬರ್ 19ರಂದು ಫಲಿತಾಂಶ ಪ್ರಕಟವಾಗಲಿದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ನವದೆಹಲಿ(ಅ.17): ಶಶಿ ತರೂರ್ (Shashi Tharoor) ಮತ್ತು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸದ್ಯ ಕಾಂಗ್ರೆಸ್​ ಅಧ್ಯಕ್ಷರಾಗೋ (Congress Presidential Elections) ರೇಸ್​ನಲ್ಲಿ ಮುಂದುವರೆದಿದ್ದಾರೆ. ಇಂದು ಇಬ್ಬರ ನಡುವೆ ಕೈ ಪಕ್ಷದ ಸಾರಥಿಗಾಗಿ ಆಯ್ಕೆ ನಡೆಯಲಿದ್ದು, ಈ ಪ್ರಕ್ರಿಯೆಯಲ್ಲಿ ಕನಿಷ್ಠ 9,200 ಕಾಂಗ್ರೆಸ್ ಪ್ರತಿನಿಧಿಗಳು ಮತ ಚಲಾಯಿಸಲಿದ್ದಾರೆ. ಸೋಮವಾರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅಕ್ಟೋಬರ್ 19ರಂದು ಫಲಿತಾಂಶ ಪ್ರಕಟವಾಗಲಿದೆ. ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಆಯಾ ಮತಗಟ್ಟೆಗಳಲ್ಲಿ ತಾವು ಬೆಂಬಲಿಸುವ ಅಭ್ಯರ್ಥಿಗೆ 'ಟಿಕ್' ಚಿಹ್ನೆಯೊಂದಿಗೆ ಮತ ಚಲಾಯಿಸುತ್ತಾರೆ ಎಂದು ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಹೇಳಿದ್ದಾರೆ. ಸುಗಮ ಮತದಾನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.


ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ನಡೆಯುವುದು ಹೇಗೆ? ಖರ್ಗೆ ಕೈಗೆ ಸಿಗುತ್ತಾ ಚುಕ್ಕಾಣಿ?


ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮತಗಟ್ಟೆ


ಅಕ್ಟೋಬರ್ 18 ರಂದು ದೆಹಲಿಗೆ ಮತಪತ್ರಗಳು ತಲುಪಲಿದ್ದು, ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ ಎಂದು ಅವರು ಹೇಳಿದರು. ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮತಗಟ್ಟೆಯನ್ನೂ ಸ್ಥಾಪಿಸಲಾಗಿದ್ದು, 50ಕ್ಕೂ ಹೆಚ್ಚು ಪ್ರತಿನಿಧಿಗಳು ಮತದಾನ ಮಾಡಲಿದ್ದಾರೆ. ಸಂಪೂರ್ಣ ಮತದಾನ ಪ್ರಕ್ರಿಯೆಯು ನ್ಯಾಯಸಮ್ಮತ ಮತ್ತು ಮುಕ್ತವಾಗಿರುತ್ತದೆ, ಇದರಲ್ಲಿ ಯಾವುದೇ ಸಂದೇಹವಿಲ್ಲ.


20 ವರ್ಷಗಳಿಂದ ಪಕ್ಷದ ಮುಖ್ಯಸ್ಥರಾಗಿದ್ದ ಸೋನಿಯಾ


ಸ್ವಾತಂತ್ರ್ಯಾ ನಂತರ ಗಾಂಧಿಯೇತರ ನಾಯಕರೊಬ್ಬರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದು ಇದೇ ಮೊದಲಲ್ಲ. ಸುಮಾರು 22 ವರ್ಷಗಳ ಹಿಂದೆ, ಜಿತೇಂದ್ರ ಪ್ರಸಾದ್ ಅವರು ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು, ಅದರಲ್ಲಿ ಸೋನಿಯಾ ವಿಜೇತರಾಗಿ ಹೊರಹೊಮ್ಮಿದರು ಮತ್ತು 20 ವರ್ಷಗಳಿಂದ ಪಕ್ಷದ ಮುಖ್ಯಸ್ಥರಾಗಿದ್ದಾರೆ.


2019 ರ ಲೋಕಸಭಾ ಚುನಾವಣೆಯ ನಂತರ ರಾಹುಲ್ ರಾಜೀನಾಮೆ


ಸೋನಿಯಾ ಗಾಂಧಿ ಅವರು 1998 ರಿಂದ 2017 ರವರೆಗೆ ನಿರಂತರವಾಗಿ ಈ ಹುದ್ದೆಯನ್ನು ಅಲಂಕರಿಸಿ, ಪಕ್ಷದ ಅಧ್ಯಕ್ಷರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಈ ನಡುವೆ ಕೆಲ ಕಾಲ ಕಾಂಗ್ರೆಸ್ ಅಧ್ಯಕ್ಷರಾದರು, ಆದರೆ 2019 ರ ಲೋಕಸಭಾ ಚುನಾವಣೆಯ ನಂತರ ಅವರು ರಾಜೀನಾಮೆ ನೀಡಿದರು. ಅಂದಿನಿಂದ ಸೋನಿಯಾ ಗಾಂಧಿ ಪಕ್ಷದ ಹಂಗಾಮಿ ಅಧ್ಯಕ್ಷರಾಗಿದ್ದಾರೆ.


ಗಾಂಧಿ ಕುಟುಂಬದ ಯಾವುದೇ ಸದಸ್ಯರ ಸ್ಪರ್ಧೆ ಇಲ್ಲ


ಈ ಬಾರಿ ಗಾಂಧಿ ಕುಟುಂಬದ ಯಾವುದೇ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿಲ್ಲ. ಕಾಂಗ್ರೆಸ್ ನ ಸುಮಾರು 137 ವರ್ಷಗಳ ಇತಿಹಾಸದಲ್ಲಿ ಇದು ಆರನೇ ಬಾರಿಗೆ ಪಕ್ಷದ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. 2017ರಲ್ಲಿ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.


ಕಾಂಗ್ರೆಸ್ ಅಧ್ಯಕ್ಷೀಯ ಅಭ್ಯರ್ಥಿ ಶಶಿ ತರೂರ್ ಮಾತನಾಡಿ, ನಮ್ಮ ಸಿದ್ಧಾಂತದಲ್ಲಿ ಯಾವುದೇ ಸಮಸ್ಯೆ ಇಲ್ಲ, ಆದರೆ ಪಕ್ಷದ ಕಾರ್ಯ ವಿಧಾನದಲ್ಲಿ ಬದಲಾವಣೆ ತರಲು ನಾನು ಬಯಸುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅನುಭವಿ ನಾಯಕ, ಅವರು ಗೆದ್ದರೆ ನಾವು ಸಹಜವಾಗಿ ಹೊರತಾಗುತ್ತೇವೆ.


ಕೇಂದ್ರ ಚುನಾವಣಾ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದ ಪ್ರತಿನಿಧಿgಳಿಗೆ ವಿಶೇಷ ಸೌಲಭ್ಯ


ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಧಾನ ಕಚೇರಿ, 24 ಅಕ್ಬರ್ ರಸ್ತೆಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿಯೂ ಮತದಾನದ ಸೌಲಭ್ಯವಿರುತ್ತದೆ. ದೆಹಲಿಯಲ್ಲಿ, ತಮ್ಮ ರಾಜ್ಯದ ಬದಲಿಗೆ ದೆಹಲಿಯಲ್ಲಿ ಮತ ಚಲಾಯಿಸಲು ಕೇಂದ್ರ ಚುನಾವಣಾ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದ ಪ್ರತಿನಿಧಿಗಳು ಮತ ಚಲಾಯಿಸಬಹುದು.


ಬಳ್ಳಾರಿಯಲ್ಲೇ ರಾಹುಲ್ ಗಾಂಧಿ ವೋಟಿಂಗ್


ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಕೆಲವು ಹಿರಿಯ ನಾಯಕರು ಕಾಂಗ್ರೆಸ್ ಪ್ರಧಾನ ಕಚೇರಿಯ ಬೂತ್‌ನಲ್ಲಿ ಮತ ಚಲಾಯಿಸಲಿದ್ದಾರೆ. ಭಾರತ್ ಜೋಡಿ ಯಾತ್ರೆಯಲ್ಲಿ ಭಾಗಿಯಾಗಿರುವ ರಾಹುಲ್ ಗಾಂಧಿ ಸೇರಿದಂತೆ ಸುಮಾರು 40 ಪ್ರತಿನಿಧಿಗಳು ಶಿಬಿರದಲ್ಲಿಯೇ ಮತದಾನ ಮಾಡಲಿದ್ದಾರೆ.


ಇದನ್ನೂ ಓದಿ: Congress President: ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಗೆ ಇಂದು ಎಲೆಕ್ಷನ್, ಬಳ್ಳಾರಿಯಲ್ಲೇ ರಾಹುಲ್ ಗಾಂಧಿ ವೋಟಿಂಗ್


ತವರು ರಾಜ್ಯದಲ್ಲೇ ಅಭ್ಯರ್ಥಿಗಳಿಂದ ಮತದಾನ


ಬಳ್ಳಾರಿಯ ಸಂಗನಕಲ್ಲು ಬಡಾವಣೆಯಲ್ಲಿ ಮತಗಟ್ಟೆ ಕೇಂದ್ರ ಸ್ಥಾಪಿಸಲಾಗುತ್ತಿದೆ. ಇಬ್ಬರು ಸ್ಪರ್ಧಿಗಳಾದ ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ತಮ್ಮ ತವರು ರಾಜ್ಯಗಳ ಪ್ರಧಾನ ಕಚೇರಿ ತಿರುವನಂತಪುರ ಮತ್ತು ಬೆಂಗಳೂರಿನಲ್ಲಿ ಮತ ಚಲಾಯಿಸಲಿದ್ದಾರೆ. ಮತದಾನದ ನಂತರ, ಎಲ್ಲಾ ರಾಜ್ಯಗಳ ಮತಪೆಟ್ಟಿಗೆಗಳನ್ನು ದೆಹಲಿಗೆ ತರಲಾಗುವುದು, ಅಕ್ಟೋಬರ್ 19 ರಂದು ಮತ ಎಣಿಕೆ ನಂತರ ಫಲಿತಾಂಶಗಳನ್ನು ಪ್ರಕಟಿಸಲಾಗುವುದು.

Published by:Precilla Olivia Dias
First published: