• Home
  • »
  • News
  • »
  • national-international
  • »
  • Congress President Election: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಗೆ ಕೌಂಟ್​ಡೌನ್​, 24 ವರ್ಷದ ಬಳಿಕ ಗಾಂಧೀಯೇತರ ಸಾರಥಿ!

Congress President Election: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಗೆ ಕೌಂಟ್​ಡೌನ್​, 24 ವರ್ಷದ ಬಳಿಕ ಗಾಂಧೀಯೇತರ ಸಾರಥಿ!

ಖರ್ಗೆ-ತರೂರ್ ನಡುವೆ ಸ್ಪರ್ಧೆ

ಖರ್ಗೆ-ತರೂರ್ ನಡುವೆ ಸ್ಪರ್ಧೆ

AICC President Election: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಬುಧವಾರ ಬೆಳಗ್ಗೆ 10 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ದೇಶದಾದ್ಯಂತ ರಾಜ್ಯ ಕೇಂದ್ರ ಕಚೇರಿಯಿಂದ ಮತ ಪೆಟ್ಟಿಗೆಗಳು ಮತ ಎಣಿಕೆ ಸ್ಥಳ ಅಂದರೆ ಕಾಂಗ್ರೆಸ್ ಕಚೇರಿಗೆ ತಲುಪಿವೆ. ಮಧ್ಯಾಹ್ನ 3 ರಿಂದ 4 ಗಂಟೆಯೊಳಗೆ ಫಲಿತಾಂಶ ಬರುವ ಸಾಧ್ಯತೆ ಇದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ನವದೆಹಲಿ(ಅ.19): ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ (Congress Presidential Election) ಇಂದು ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನ 3 ರಿಂದ 4 ಗಂಟೆಯೊಳಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಬುಧವಾರ ಬೆಳಗ್ಗೆ 10 ಗಂಟೆಗೆ ಮತ ಎಣಿಕೆ ಆರಂಭವಾಗಲಿರುವ ದೇಶದಾದ್ಯಂತ ರಾಜ್ಯ ಕೇಂದ್ರ ಕಚೇರಿಯಿಂದ ಮತಪೆಟ್ಟಿಗೆಗಳು ಮತ ಎಣಿಕೆ ಸ್ಥಳ ಅಂದರೆ ಕಾಂಗ್ರೆಸ್ ಕಚೇರಿಗೆ ತಲುಪಿವೆ. ಈ ಕುರಿತು ಮಾಹಿತಿ ನೀಡಿರುವ ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು, ಈ ಎಲ್ಲ ಮತ ಪೆಟ್ಟಿಗೆಗಳನ್ನು ಕಾಂಗ್ರೆಸ್ (Congress) ಪ್ರಧಾನ ಕಚೇರಿಯೊಳಗೆ ನಿರ್ಮಿಸಲಾಗಿರುವ ಸ್ಟ್ರಾಂಗ್ ರೂಂನಲ್ಲಿ (Strong Room) ಇರಿಸಲಾಗಿದೆ ಎಂದು ತಿಳಿಸಿದ್ದಾರೆ. ಪಕ್ಷದ ಕೇಂದ್ರ ಕಚೇರಿಯಲ್ಲಿಯೇ ಮತ ಎಣಿಕೆ ನಡೆಯಲಿದೆ.


ಇದನ್ನೂ ಓದಿ: Mohan Bhagawat: ಮೋಹನ್ ಭಾಗವತ್ ರಾಷ್ಟ್ರಪಿತ ಎಂದಿದ್ದ ಇಮಾಮ್‌ಗೆ ಜೀವ ಬೆದರಿಕೆ!


ರಡೂ ಕಡೆಯಿಂದ 5-5 ಏಜೆಂಟರು ಎಣಿಕೆಯ ಮೇಲ್ವಿಚಾರಣೆ ಮಾಡುತ್ತಾರೆ


ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಎರಡೂ ಕಡೆಯಿಂದ 5-5 ಏಜೆಂಟರು ಮತ ಎಣಿಕೆಯನ್ನು ಮೇಲ್ವಿಚಾರಣೆ ಮಾಡಲಿದ್ದು, ಎರಡೂ ಕಡೆಯಿಂದ 2 ಏಜೆಂಟರನ್ನು ಮೀಸಲು ಇಡಲಾಗುತ್ತದೆ. ಇವರಲ್ಲದೆ ಉಭಯ ನಾಯಕರ ಬೆಂಬಲಿಗರು ಕೂಡ ಕಾಂಗ್ರೆಸ್ ಕೇಂದ್ರ ಕಚೇರಿ ತಲುಪಲಿದ್ದಾರೆ.


9,500 ಪ್ರತಿನಿಧಿಗಳಿಂದ ಮತದಾನ


ಶೇ. 96ರಷ್ಟು ಮತದಾನವಾಗಿದೆ ಎಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ತಿಳಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಹಲವಾರು ಹಿರಿಯ ನಾಯಕರು ಸೇರಿದಂತೆ ಸುಮಾರು 9,500 ಪ್ರತಿನಿಧಿಗಳು (ಚುನಾವಣಾ ಕಾಲೇಜಿನ ಸದಸ್ಯರು) ಪಕ್ಷದ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಸೋಮವಾರ ಮತ ಚಲಾಯಿಸಿದ್ದರು.


fight between mallikarjuna kharge and shashi tharoor for the post of congress president
ಶಶಿ ತರೂರ್ v/s ಮಲ್ಲಿಕಾರ್ಜುನ್ ಖರ್ಗೆ


ಆರನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ


ಕಾಂಗ್ರೆಸ್ ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಕಾರ, ಅಧ್ಯಕ್ಷ ಸ್ಥಾನಕ್ಕೆ 1939, 1950, 1977, 1997 ಮತ್ತು 2000 ರಲ್ಲಿ ಚುನಾವಣೆಗಳು ನಡೆದಿವೆ. 22 ವರ್ಷಗಳ ಬಳಿಕ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಿಂದ 24 ವರ್ಷಗಳ ನಂತರ ಗಾಂಧಿ ಕುಟುಂಬದ ಹೊರಗಿನ ನಾಯಕರೊಬ್ಬರು ದೇಶದ ಅತ್ಯಂತ ಹಳೆಯ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎಂದು ಅವರು ಹೇಳಿದರು. ಈ ಮೊದಲು ಸೀತಾರಾಮ್ ಕೇಸರಿ ಅವರು ಗಾಂಧಿಯೇತರ ಅಧ್ಯಕ್ಷರಾಗಿದ್ದರು.


ಬದಲಾವಣೆಯನ್ನು ಅಳವಡಿಸಿಕೊಳ್ಳಿ


ಈ ಚುನಾವಣೆಗೆ ಮುಂಚಿತವಾಗಿ, ತರೂರ್ ಭಾನುವಾರ ಮತದಾರರಿಗೆ "ಬದಲಾವಣೆಯನ್ನು ಅಳವಡಿಸಿಕೊಳ್ಳಲು" ಧೈರ್ಯವನ್ನು ತೋರಿಸಲು ಕರೆ ನೀಡಿದ್ದರು, ಅವರು ಯೋಚಿಸುತ್ತಿರುವ ಬದಲಾವಣೆಗಳು ಪಕ್ಷದ "ಮೌಲ್ಯಗಳನ್ನು" ಬದಲಾಯಿಸುವುದಿಲ್ಲ ಆದರೆ ಗುರಿಗಳನ್ನು ಸಾಧಿಸುವ ಉದ್ದೇಶ ಹೊಂದಿವೆ. ವಿಧಾನಗಳಲ್ಲಿ ಬದಲಾವಣೆ ಇರುತ್ತದೆ ಎಂದು ಹೇಳಿದರು.


ಇದನ್ನೂ ಓದಿ:  Mohan Bhagwat: ಮಾಂಸಾಹಾರಿಗಳಿಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?


ಮತ್ತೊಂದೆಡೆ, ತಾವು ಅಧ್ಯಕ್ಷರಾದರೆ ಪಕ್ಷದ ವಿಚಾರದಲ್ಲಿ ಗಾಂಧಿ ಕುಟುಂಬದ ಸಲಹೆ, ಸಹಕಾರ ಪಡೆಯಲು ಹಿಂಜರಿಯುವುದಿಲ್ಲ, ಆ ಕುಟುಂಬ ಸಾಕಷ್ಟು ಹೋರಾಟ ಮಾಡಿದ್ದು, ಪಕ್ಷದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಖರ್ಗೆ ಭಾನುವಾರ ಹೇಳಿದ್ದಾರೆ.

Published by:Precilla Olivia Dias
First published: